newsfirstkannada.com

VIDEO: ಕನ್ನಡಿಗರ ಮನಸು ಗೆದ್ದ ‘ನಾನು ನಂದಿನಿ’ ಖ್ಯಾತಿ ವಿಕಾಸ್ ವಿಕ್ಕಿಪೀಡಿಯ; ಈ ಸಲ ಏನ್ಮಾಡಿದ್ರು?

Share :

Published August 22, 2024 at 4:14pm

    ಇಡೀ ದೇಶಾದ್ಯಂತ ಕೋಲ್ಕತ್ತಾ ವೈದ್ಯೆ ಸಾವಿನ ಕೇಸ್​ನದ್ದೇ ಸದ್ದು!

    ಆರೋಪಿಗಳಿಗೆ ಗಲ್ಲು ಶಿಕ್ಷೆ ಆಗಲೇಬೇಕು ಎಂದು ಬೀದಿಗಿಳಿದ ಜನ

    ಈ ಮಧ್ಯೆ 'ನಾನು ನಂದಿನಿ' ಖ್ಯಾತಿಯ ವಿಕಾಸ್ ವಿಕ್ಕಿಪೀಡಿಯ ರೀಲ್ಸ್​ ವೈರಲ್​​

ಸದ್ಯ ಇಡೀ ದೇಶಾದ್ಯಂತ ಕೋಲ್ಕತ್ತಾ ವೈದ್ಯೆ ಸಾವಿನ ಕೇಸ್​ನದ್ದೇ ಸದ್ದು. ವೈದ್ಯೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದವರಿಗೆ ಕೂಡಲೇ ಶಿಕ್ಷೆ ಆಗಬೇಕು ಎಂದು ದೇಶದ ವಿವಿಧ ಮೂಲೆಗಳಲ್ಲಿ ಜನ ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಇದರ ಮಧ್ಯೆ ‘ನಾನು ನಂದಿನಿ’ ಖ್ಯಾತಿಯ ವಿಕಾಸ್ ವಿಕ್ಕಿಪೀಡಿಯ ಅವರ ಹೊಸ ರೀಲ್ಸ್​ ಒಂದು ವೈರಲ್​ ಆಗಿದೆ.

ಮಹಿಳಾ ವಿರೋಧಿಗಳಿಗೆ ಬುದ್ಧಿ ಹೇಳಿದ ವಿಕಾಸ್​​..!

ಗಂಡು ಮಕ್ಕಳು ಅತ್ಯಾಚಾರ ಎಸಗಲು ಹೆಣ್ಣುಮಕ್ಕಳು ಹಾಕೋ ಬಟ್ಟೆಯೇ ಕಾರಣ. ಹೆಣ್ಣುಮಕ್ಕಳು ಯಾಕೆ 6 ಗಂಟೆ ಒಳಗೆ ಮನೆ ಸೇರಲ್ಲ. 6 ಗಂಟೆ ಮೇಲೆ ಹೆಣ್ಣುಮಕ್ಕಳು ಮನೆ ಸೇರಿದ್ರೆ ಈ ರೀತಿಯ ಘಟನೆಗಳು ನಡೆಯಲ್ಲ ಎಂದು ಎಷ್ಟೋ ಮಂದಿ ಗಂಡಸರು ಮಾತಾಡುತ್ತಾರೆ. ಇಂಥಾ ಗಂಡು ಮಕ್ಕಳಿಗೆ ವಿಕಾಸ್​ ತನ್ನ ರೀಲ್ಸ್​ ಮೂಲಕ ಬುದ್ಧಿ ಹೇಳಿದ್ದಾರೆ.

ವಿಕಾಸ್​ ಹೊಸ ರೀಲ್ಸ್​ನಲ್ಲೇನಿದೆ?

ಮಗ ಹೆಣ್ಣುಮಕ್ಕಳು 6 ಗಂಟೆ ಒಳಗೆ ಮನೆ ಸೇರಬೇಕು. ಇಲ್ಲದೆ ಹೋದರೆ ಈ ರೀತಿಯ ಘಟನೆಗಳು ನಡೆಯುತ್ತವೆ ಎಂದು ಲೈವ್​ ಟಿವಿಗೆ ಬೈಟ್​ ನೀಡಿರುತ್ತಾನೆ. ಇದಕ್ಕೆ ತಾಯಿ ತನ್ನ ಗಂಡನಿಗೆ ಕೂಡಲೇ ಮಗನನ್ನು 6 ಗಂಟೆ ಒಳಗೆ ಮನೆಗೆ ಬರುವಂತೆ ಒತ್ತಾಯ ಮಾಡುತ್ತಾಳೆ. ತಂದೆ ಕೂಡಲೇ ಫೋನ್​ ಮನೆಗೆ ಬೇಗ ಬಾ ಎಂದು ಕರೆಯುತ್ತಾನೆ. ಮಗ ತಂದೆ ಫೋನ್​ ಮಾಡಿದ ಕೂಡಲೇ ಮನೆಗೆ ಬರುತ್ತಾನೆ. ಯಾಕೆ ನನ್ನನ್ನು 6 ಗಂಟೆ ಒಳಗೆ ಮನೆಗೆ ಕರೆಸಿದ್ರಿ ಅನ್ನೋ ಪ್ರಶ್ನೆ ಕೂಡ ಕೇಳುತ್ತಾನೆ. ಇದಕ್ಕೆ ನೀನು 6 ಗಂಟೆ ಒಳಗೆ ಮನೆಗೆ ಬಂದ್ರೆ ಹೆಣ್ಣುಮಕ್ಕಳು ಸೇಫಾಗಿ ಹೊರಗೆ ಓಡಾಡಬಹುದು ಅಲ್ಲಪ್ಪ? ಎಂದು ತಾಯಿ ಬೈಟ್​​ ನೀಡಿದ ಮಗನಿಗೆ ಹೇಳುತ್ತಾರೆ. ಈ ವಿಡಿಯೋ ಹೆಣ್ಣುಮಕ್ಕಳ ಬಗ್ಗೆ ಮಾತಾಡೋ ಗಂಡಸರಿಗೆ ಬುದ್ಧಿ ಹೇಳುವಂತಿದ್ದು, ಭಾರೀ ವೈರಲ್​ ಆಗಿದೆ. ಎಲ್ಲರೂ ‘ನಾನು ನಂದಿನಿ’ ಖ್ಯಾತಿಯ ವಿಕಾಸ್ ವಿಕ್ಕಿಪೀಡಿಯ ಅವರ ಹೊಸ ರೀಲ್ಸ್​ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೇ ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ’ ಎಂಬ ರೀಲ್ಸ್ ಸಖತ್ ಸೌಂಡ್ ಮಾಡಿತ್ತು. ‘ನಾನು ನಂದಿನಿ ಬೆಂಗಳೂರಿಗ್ ಬಂದೀನಿ. ಪಿಜಿಲಿ ಇರ್ತೀನಿ ಐಟಿ ಕೆಲಸ ಮಾಡ್ತೀನಿ. ಊಟ ಸರಿ ಇಲ್ಲ ಅಂದ್ರೂನೂ ತಿಂತೀನಿ. ಬಂದಿದ್ ದುಡ್ ಎಲ್ಲಾ ಮನೇಗ್​ ಕಳಸ್ತೀನಿ. ಬಾರೇ ನಂದಿನಿ ಗೋಬಿ ತಿನ್ನಸ್ತೀನಿ. ಬಾರೇ ನಂದಿನಿ ಬೆಂಗಳೂರ್ ತೋರಸ್ತೀನಿ. ಬಾರೆ ನಂದಿನಿ ಪೇಢಾ ತಿನ್ನಸ್ತೀನಿ. ಬಾರೇ ನಂದಿನಿ ಪಿಚ್ಚರ್ ತೋರಸ್ತೀನಿ ಎನ್ನುವ ವಿಕಿ ಪೀಡಿಯಾ ವಿಕಾಸ್ ಅವರ ರೀಲ್ಸ್ ಗೆ ಜನಾ ಫಿದಾ ಆಗಿದ್ದರು.

ಇದನ್ನೂ ಓದಿ: ಟೀಮ್​ ಇಂಡಿಯಾದ ಯುವ ಬ್ಯಾಟರ್​​ಗೆ ಸುವರ್ಣಾವಕಾಶ! ಸ್ಟಾರ್​ ಆಟಗಾರನಿಗೆ ಕೊಕ್​​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

VIDEO: ಕನ್ನಡಿಗರ ಮನಸು ಗೆದ್ದ ‘ನಾನು ನಂದಿನಿ’ ಖ್ಯಾತಿ ವಿಕಾಸ್ ವಿಕ್ಕಿಪೀಡಿಯ; ಈ ಸಲ ಏನ್ಮಾಡಿದ್ರು?

https://newsfirstlive.com/wp-content/uploads/2024/08/Vikas_Wikkipedia.jpg

Load More