Advertisment

ಕನ್ನಡ ಕಿರುತೆರೆಯಲ್ಲಿ ಹೊಸ ಅಲೆ.. ಸಖತ್ ಸೌಂಡ್ ಮಾಡ್ತಿದೆ ಅಣ್ಣಯ್ಯ ಸೀರಿಯಲ್​ ಪ್ರೊಮೋ..!

author-image
Bheemappa
Updated On
ಕನ್ನಡ ಕಿರುತೆರೆಯಲ್ಲಿ ಹೊಸ ಅಲೆ.. ಸಖತ್ ಸೌಂಡ್ ಮಾಡ್ತಿದೆ ಅಣ್ಣಯ್ಯ ಸೀರಿಯಲ್​ ಪ್ರೊಮೋ..!
Advertisment
  • ಧಾರಾವಾಹಿಗಾಗಿ ಬಣ್ಣ ಹಚ್ಚಿರುವ ಕೊಡಗಿನ ಕುವರ ವಿಕಾಸ್​ ಉತ್ತಯ್ಯ
  • ಅಣ್ಣಯ್ಯ ಸೀರಿಯಲ್​ನಲ್ಲಿ ನಾಲ್ವರು ತಂಗಿಯರು ಯಾರು ಯಾರು ಗೊತ್ತಾ?
  • ಹೊಸ ಕಥೆಯೊಂದಿಗೆ, ಹೊಸ ಐಡಿಯಾದೊಂದಿಗೆ ಬರುತ್ತಿರೋ ಸೀರಿಯಲ್

ಹೊಸ ಅಲೆ ಎಬ್ಬಿಸೋಕೆ ಕಿರುತೆರೆಗೆ ಎಂಟ್ರಿ ಕೊಡ್ತಿದ್ದಾರೆ ಅಣ್ಣಯ್ಯ. ಪ್ರೊಮೋಗಳ ಮೂಲಕ ಸಖತ್​ ಸೌಂಡ್ ಮಾಡ್ತಿರೋ ಅಣ್ಣಯ್ಯನ ಮುದ್ದಿನ ತಂಗಿಯರ ಬಗ್ಗೆ ನಿಮಗೆ ತಿಳಿಸಬೇಕು ಅಂತಾ ಅಮೂಲ್ಯವಾದ ಮಾಹಿತಿ​ ಹೊತ್ತು ತಂದಿದ್ದೀವಿ.

Advertisment

ಇದನ್ನೂ ಓದಿ: ನಾನು ಅವಳಲ್ಲ, ಅವನು.. ಮಹಿಳಾ IRS ಅಧಿಕಾರಿ ಗಂಡಾಗಿ ಬದಲಾದ್ರಾ? ಏನಿದು ಅಚ್ಚರಿ!

ಅಣ್ಣಯ್ಯನ ಪಾತ್ರದಲ್ಲಿ ಕೊಡಗಿನ ಕುವರ ವಿಕಾಸ್​ ಉತ್ತಯ್ಯ ಕಾಣಿಸಿಕೊಳ್ತಿದ್ದಾರೆ. ವಿಕಾಸ್​ ಬಗ್ಗೆ ಈಗಾಗ್ಲೇ ಮಾಹಿತಿ ನೀಡಿದ್ದೀವಿ. ಮತ್ತೋಮ್ಮೆ ರೀಕಾಲ್​ ಮಾಡೋದಾದ್ರೇ.. ವಿಕಾಸ್ ರಂಗಭೂಮಿ ಕಲಾವಿದ. ಹಲವು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ವಿಕಾಸ್ ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ​.

ಇದನ್ನೂ ಓದಿ: RCB ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್..? ಚಾಂಪಿಯನ್ ಕೋಚ್​ಗೆ​ ಡಿಮ್ಯಾಂಡಪ್ಪೋ ಡಿಮ್ಯಾಂಡ್!

Advertisment

publive-image

ಅಣ್ಣಯ್ಯ ಧಾರಾವಾಹಿಯ ನಾಲ್ವರು ತಂಗಿಯರ ಬಗ್ಗೆ ಹೇಳುವುದಾದರೆ, ಮೊದಲ ತಂಗಿ ಪಾತ್ರ ಮಾಡ್ತಿರೋ ನಟಿ ನಾಗಶ್ರೀ ಬೆಗಾರ್​ ಇವರು ರಂಗಭೂಮಿ ಕಲಾವಿದೆ. ಭರತನಾಟ್ಯ ಡ್ಯಾನ್ಸರ್​ ಕೂಡ ಹೌದು. ಸಂಗೀತದಲ್ಲೂ ನಾಗಶ್ರೀ ಸೈ ಎನಿಸಿಕೊಂಡಿದ್ದಾರೆ. ಅಂದ್ಹಾಗೆ, ಜಲಪಾತ ಎಂಬ ಸಿನಿಮಾದಲ್ಲಿ ನಾಯಕಿ ಆಗಿ ನಾಗಶ್ರೀ ನಟಿಸಿದ್ರು.

ಇದನ್ನೂ ಓದಿ: ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ.. ಕಿರಾತಕ ಯಾರನ್ನ ಟಾರ್ಗೆಟ್ ಮಾಡ್ತಿದ್ದ?

ಎರಡನೇ ತಂಗಿಯಾಗಿ ಕಾಣಿಸಿಕೊಂಡಿರೋದು ಪ್ರತಿಕ್ಷಾ ಶ್ರೀನಾಥ್​. ಇವ್ರು ಕೂಡ ರಂಗಭೂಮಿ ಕಲಾವಿದೆ ಆಗಿದ್ದು, ವಾಸುಕಿ ವೈಭವ್​ ಅವ್ರ ತಂಡದಲ್ಲಿ ಪ್ರತಿಕ್ಷಾ ಇದ್ರು. ಇನ್ನೂ 3ನೇ ತಂಗಿ ಪಾತ್ರ ಮಾಡ್ತಿರೋ ನಟಿ ರಾಘವಿ. ಅಂತರಪಟ ಜೇನುಗೂಡು, ಮಂಗಳಗೌರಿ ಮದುವೆ ಸೇರಿದಂತೆ ಹಲವು ಧಾರಾವಾಹಿಗಳಿಗೆ ಬಣ್ಣ ಹಚ್ಚಿರೋ ರಾಘವಿ, ಸದ್ಯ ಅಣ್ಣಯ್ಯನ ಮುದ್ದಿನ ತಂಗಿ ಆಗಿದ್ದಾರೆ.

Advertisment

ಕೊನೆ ತಂಗಿ ಪಾತ್ರ ಮಾಡ್ತಿರೋ ನಟಿ ಅಂಕಿತಾ ಗೌಡ. ಕಾಟೇರ, ಕ್ರಾಂತಿ ಸಿನಿಮಾಗಳಲ್ಲಿ ಬಾಲನಟಿ ಆಗಿ ಅಭಿನಯಿಸಿದ ಅಂಕಿತಾ ಸದ್ಯ ಅಣ್ಣಯನಿಗೆ ಸೀರಿಯಲ್​ನಲ್ಲಿ ಬಣ್ಣ ಹಚ್ಚಿದ್ದಾರೆ. ಇದಿಷ್ಟು ಅಣ್ಣಯ್ಯನ ಕುಟುಂಬದ ಡಿಟೈಲ್ಸ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment