newsfirstkannada.com

135 ದಿನಗಳ ಬಳಿಕ ಮತ್ತೆ ಆ್ಯಕ್ಟಿವ್ ಆದ ವಿಕ್ರಮ್ ಲ್ಯಾಂಡರ್; ಇಸ್ರೋಗೆ ಮತ್ತೊಂದು ಸಕ್ಸಸ್‌; ಏನದು?

Share :

Published January 19, 2024 at 8:29pm

Update January 19, 2024 at 8:33pm

  2023ರ ಆಗಸ್ಟ್ 23ರಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್

  ಸೆಪ್ಟೆಬರ್‌ 2ರಿಂದ ವಿಕ್ರಮ್ ಲ್ಯಾಂಡರ್‌ನಿದಂ ಯಾವುದೇ ಸಿಗ್ನಲ್‌ ಇಲ್ಲ

  ನಾಸಾ ಆರ್ಬಿಟರ್‌ನಿಂದ ಮತ್ತೆ ಆ್ಯಕ್ಟಿವ್ ಆದ ವಿಕ್ರಮ್ ಲ್ಯಾಂಡರ್!

ಇಡೀ ಜಗತ್ತೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದ ಚಂದ್ರಯಾನ-3 ಮಿಷನ್‌ ಮತ್ತೊಂದು ಯಶಸ್ಸು ಸಾಧಿಸಿದೆ. ಮೊದಲ ಬಾರಿಗೆ ಚಂದ್ರನ ದಕ್ಷಿಣ ದಿಕ್ಕಿನಲ್ಲಿ ಲ್ಯಾಂಡ್ ಆಗಿದ್ದ ವಿಕ್ರಮ್‌ ಲ್ಯಾಂಡರ್ ಮತ್ತೆ ಆ್ಯಕ್ಟಿವ್ ಆಗಿದೆ. ಬರೋಬ್ಬರಿ 135 ದಿನಗಳ ಬಳಿಕ ವಿಕ್ರಮ್‌ ಲ್ಯಾಂಡರ್‌ ಮತ್ತೆ ತನ್ನ ಕಾರ್ಯ ಆರಂಭಿಸಿರೋದನ್ನ ಇಸ್ರೋ ಹಾಗೂ ನಾಸಾ ವಿಜ್ಞಾನಿಗಳು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.

2023ರ ಆಗಸ್ಟ್ 23ರಲ್ಲಿ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿತ್ತು. ಇದಾದ ಮೇಲೆ ವಿಶೇಷ ಫೋಟೋ ಹಾಗೂ ಮಾಹಿತಿಗಳನ್ನು ಇಸ್ರೋಗೆ ರವಾನೆ ಮಾಡಿತ್ತು. 2023ರ ಸೆಪ್ಟೆಂಬರ್ 2ರಂದು ವಿಕ್ರಮ್ ಲ್ಯಾಂಡರ್ ಹಾಗೂ ಪ್ರಜ್ಞಾನ್ ರೋವರ್‌ನಿಂದ ಯಾವುದೇ ಸಿಗ್ನಲ್‌ ಹಾಗೂ ಸಂದೇಶಗಳು ಬಂದಿರಲಿಲ್ಲ. ವಿಕ್ರಮ್‌ ಲ್ಯಾಂಡರ್ ಸಂಪೂರ್ಣ ನಿದ್ರೆಗೆ ಜಾರಿದೆ ಎಂದೇ ಇಸ್ರೋ ಘೋಷಣೆ ಮಾಡಿತ್ತು. ಆದ್ರೆ 135 ದಿನಗಳ ಬಳಿಕ ವಿಕ್ರಮ್ ಲ್ಯಾಂಡರ್ ಮತ್ತೆ ತನ್ನ ಕಾರ್ಯ ಆರಂಭಿಸಿದೆ ಅನ್ನೋದೇ ವಿಶೇಷವಾಗಿದೆ.

ವಿಕ್ರಮ್ ಲ್ಯಾಂಡರ್‌ ಅನ್ನು ‘ತಟ್ಟಿದ’ ನಾಸಾ!
ಚಂದ್ರನ ದಕ್ಷಿಣ ದಿಕ್ಕಿನಲ್ಲಿ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್‌ ಅನ್ನು ನಾಸಾದ ಆರ್ಬಿಟರ್ ಟಚ್ ಮಾಡಿದೆ. ಇದರಿಂದ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲಿಂದ ತನ್ನ ಜಾಗ ಗುರುತಿಸುವಿಕೆಯ ಕಾರ್ಯವನ್ನು ಆರಂಭಿಸಿದೆ ಎಂದು ಇಸ್ರೋ ಹೇಳಿದೆ. ಇಷ್ಟು ದಿನ ಶಿವಶಕ್ತಿ ಪಾಯಿಂಟ್‌ನಲ್ಲಿ ನಿದ್ರಾವಸ್ಥೆಯಲ್ಲಿದ್ದ ವಿಕ್ರಮ್ ಲ್ಯಾಂಡರ್ ಮತ್ತೆ ತನ್ನ ಕಾರ್ಯ ಆರಂಭಿಸಿರುವುದು ಬಹಳ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: ಚಂದ್ರಯಾನ- 4 ಭೂಮಿಗೆ ವಾಪಸ್‌.. ಈ ಬಾರಿ ಮಹತ್ವದ ವಸ್ತುಗಳನ್ನ ಹೊತ್ತು ತರೋದೇ ಮುಖ್ಯ ಗುರಿ; ಇಸ್ರೋ ಪ್ಲಾನ್ ಏನು?

ಅಮೆರಿಕಾ, ರಷ್ಯಾ ಸೇರಿದಂತೆ ವಿಶ್ವದ ಬಲಿಷ್ಠ ದೇಶಗಳ ಕೈಯಲ್ಲೂ ಚಂದ್ರನ ದಕ್ಷಿಣ ದಿಕ್ಕನ್ನು ತಲುಪಲು ಸಾಧ್ಯವಾಗಿರಲಿಲ್ಲ. ಅಂತಹದರಲ್ಲಿ ಭಾರತ ಆ ಸಾಧನೆ ಮಾಡಿದ್ದು ಗಮನಾರ್ಹವಾಗಿತ್ತು. ಇದೀಗ ಚಂದ್ರನ ದಕ್ಷಿಣ ದಿಕ್ಕಿನಲ್ಲಿರುವ ವಿಕ್ರಮ್ ಲ್ಯಾಂಡರ್‌ ಅನ್ನು ಅಮೆರಿಕಾದ ನಾಸಾ ವಿಜ್ಞಾನಿಗಳು ತಲುಪುವ ಪ್ರಯತ್ನ ಮಾಡಿದ್ದಾರೆ. ನಾಸಾ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ.

ನಾಸಾ ಆರ್ಬಿಟರ್‌ನಿಂದ ವಿಕ್ರಮ್ ಲ್ಯಾಂಡರ್ ಮತ್ತೆ ಆ್ಯಕ್ಟಿವ್ ಆಗಿದ್ದು ಮತ್ತೊಂದು ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆ ಇದೆ. NASA ಪ್ರಕಾರ ಈ ಯಶಸ್ವಿ ಪ್ರಯೋಗವು ಚಂದ್ರನ ಮೇಲ್ಮೈಯಲ್ಲಿ ಗುರಿಗಳನ್ನು ನಿಖರವಾಗಿ ಪತ್ತೆ ಹಚ್ಚುವ ಹೊಸ ಶೈಲಿಗೆ ದಾರಿ ಮಾಡಿಕೊಟ್ಟಿದೆ ಎಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

135 ದಿನಗಳ ಬಳಿಕ ಮತ್ತೆ ಆ್ಯಕ್ಟಿವ್ ಆದ ವಿಕ್ರಮ್ ಲ್ಯಾಂಡರ್; ಇಸ್ರೋಗೆ ಮತ್ತೊಂದು ಸಕ್ಸಸ್‌; ಏನದು?

https://newsfirstlive.com/wp-content/uploads/2023/09/Vikaram-Lander.jpg

Load More