ವಿನಯ್​ ವಿರುದ್ಧ ತಿರುಗಿ ಬಿದ್ದ ಡ್ರೋನ್​​​.. ಸುದೀಪ್​​ ಮುಂದೆ ಸ್ಪರ್ಧಿಗಳ ಅಸಲಿ ಮುಖವಾಡ ಬಯಲು

author-image
Veena Gangani
Updated On
ವಿನಯ್​ ವಿರುದ್ಧ ತಿರುಗಿ ಬಿದ್ದ ಡ್ರೋನ್​​​.. ಸುದೀಪ್​​ ಮುಂದೆ ಸ್ಪರ್ಧಿಗಳ ಅಸಲಿ ಮುಖವಾಡ ಬಯಲು
Advertisment
  • ನೋಡ ನೋಡುತ್ತಿದ್ದಂತೆ ಐದನೇ ವಾರಕ್ಕೆ ಕಾಲಿಡುತ್ತಿದ್ದಾರೆ ಬಿಗ್​ಬಾಸ್​ ಸ್ಪರ್ಧಿಗಳು
  • ಕಳೆದ ವಾರದ ಸೂಪರ್ ಸಂಡೇಯಲ್ಲಿ ಗಾದೆಗಳು ಪಾರ್ಟ್​-1 ಸುರಿಮಳೆಯಾಗಿತ್ತು!
  • ಕಿಚ್ಚ ಸುದೀಪ್​​ ಮುಂದೆಯೇ ಮತ್ತೆ ಬಿಗ್​ಬಾಸ್​ ಸ್ಪರ್ಧಿಗಳ ಅಸಲಿ ಮುಖವಾಡ ಬಯಲು

ನೋಡ ನೋಡುತ್ತಿದ್ದಂತೆ ಬಿಗ್​ಬಾಸ್​ ಸೀಸನ್ 10 ಐದನೇ ವಾರಕ್ಕೆ ಕಾಲಿಡುತ್ತಿದೆ. ಬಿಗ್​ಬಾಸ್​ ನಾಲ್ಕನೇ ಪಂಚಾಯ್ತಿಗೆ ಕಿಚ್ಚ ಸುದೀಪ್‌ ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಬಿಗ್​ಬಾಸ್​​ ಮನೆ ಹೊರಗಡೆ ನೋಡೋದಕ್ಕೆ ಮಾತ್ರ ಅರಮನೆ. ಆದರೆ ಒಳಗಡೆ ಇರೋದಕ್ಕೆ ಅದು ಖಂಡಿತಾ ಸೆರೆಮನೆ. ಎಲ್ಲಾ ರೀತಿಯ ಪರಿಸ್ಥಿತಿಗಳನ್ನು ಎದುರಿಸಿಕೊಂಡು ತೂಗಿಸಿಕೊಂಡು ಮನಸ್ತಾಪಗಳನ್ನ ಬದಿಗಿಟ್ಟು ಆಟ ಆಡೋದೆ ಬಿಗ್​ಬಾಸ್​​ ಮನೆಯ ಆಟ.

publive-image

ಕಲರ್ಸ್ ಕನ್ನಡ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಲೇಟೆಸ್ಟ್ ಪ್ರೋಮೋವೊಂದು ರಿಲೀಸ್​ ಆಗಿದೆ. ರೀಲಿಸ್​ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್​​ ಬಿಗ್​ಬಾಸ್​​ ಮನೆಯಲ್ಲಿದ್ದ 16 ಸ್ಪರ್ಧಿಗಳಿಗೆ ಈ ಗಾದೆಗೆ ಯಾವ ಸ್ಪರ್ಧಿ ವ್ಯಕ್ತಿತ್ವಕ್ಕೆ ತಕ್ಕ ಸೂಟ್​ ಆಗುತ್ತೆ ಎಂದು ಕೇಳುತ್ತಾರೆ. ಇಂದು ‘ಸೂಪರ್ ಸಂಡೇ ವಿತ್ ಸುದೀಪ’ ಎಪಿಸೋಡ್​ನಲ್ಲಿ ಈ ಬಾರಿಯೂ ಕೂಡ ಗಾದೆಗಳ ಸರಮಾಲೆಯಾಗಿದೆ. ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳ ಕೊರಳಿಗೆ ಗಾದೆಯ ಪಟ್ಟಿ ಸುತ್ತಿಕೊಳ್ಳಲಿದೆ. ಕಳೆದ ವಾರದ ಸೂಪರ್ ಸಂಡೇಯಲ್ಲಿ ಗಾದೆಗಳು ಪಾರ್ಟ್​-1 ಮಾಡಲಾಗಿತ್ತು.

ಇದನ್ನು ಓದಿ: ‘ಉತ್ತರನ ಪೌರುಷ’ ತುಕಾಲಿ ಸಂತೋಷ್‌ಗೆ ಡ್ರೋನ್ ಪ್ರತಾಪ್‌ಗೆ ಯಾವ್ದು? ಭೂಮಿಗೆ ಭಾರ ಕೂಳಿಗೆ ದಂಡ ಯಾರು?

publive-image

ಈ ಬಾರಿ ಕೂಡ ಪಾರ್ಟ್​-2 ಮಾಡಿದ್ದಾರೆ ಕಿಚ್ಚ ಸುದೀಪ್​. ಈ ವಾರ ಸ್ವಲ್ಪ ಕ್ಯಾಲುಕುಲೇಷನ್ಸ್ ಉಲ್ಟಾ ಆಗಿದ್ದು, ಈ ಬಾರಿ ಬಿಗ್​ಬಾಸ್​ ಸ್ಪರ್ಧಿಗಳ ನಡುವೆ ಒಂದಷ್ಟು ಜೋರು ಮಾತುಕತೆ ನಡೆದಿದೆ. ವಿನಯ್​ ಗೌಡಗೆ ಡ್ರೋನ್​​ ಪ್ರತಾಪ್ ಕೋಣನ ಮುಂದೆ ಕಿಂದರಿ ಬಾರಿಸಿದ ಹಾಗೇ ಅನ್ನುವ ಗಾದೆಯ ಪಟ್ಟಿಯನ್ನು ಕೊಟ್ಟಿದ್ದಾರೆ. ಇತ್ತ ಮೈಕಲ್ ನಮ್ರತಾಗೆ ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ ಎಂಬ ಗಾದೆ ಪಟ್ಟಿ ನೀಡಿದ್ದಾರೆ. ಇನ್ನೂ ಬರ್ತಾ ಬರ್ತಾ ರಾಯರ ಕುದುರೆ ಕತ್ತೆಯಾಯಿತು ಎಂಬ ಗಾದೆ ಪಟ್ಟಿಯನ್ನು ರಕ್ಷಕ್​ ಪಡೆದುಕೊಂಡಿದ್ದಾರೆ. ಅರ್ಧ ಕಲಿತವನ ಅಬ್ಬರ ಜಾಸ್ತಿ ಎಂಬ ಗಾದೆ ಪಟ್ಟಿಯನ್ನು ಕಾರ್ತಿಕ್​​ ಅವರು ಪಡೆದುಕೊಂಡಿದ್ದಾರೆ. ಬೆಳ್ಳಗಿರೋದೆಲ್ಲ ಹಾಲಲ್ಲ ಎಂಬ ಗಾದೆ ಪಟ್ಟಿಯನ್ನು ತನಿಶಾ ಅವರು ಪಡೆದುಕೊಂಡಿದ್ದಾರೆ. ಒಟ್ಟಿನಲ್ಲಿ ಇವತ್ತಿನ ಎಪಿಸೋಡ್​ನಲ್ಲಿ ಫನ್​ ಜೊತೆ ಸ್ವಲ್ಪ ಬಿಸಿ ಕೂಡ ಮುಟ್ಟಿಸಲಿದ್ದಾರೆ ಕಿಚ್ಚ ಸುದೀಪ್​​.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment