newsfirstkannada.com

ಕಿಚ್ಚ ಸುದೀಪ್​ ಮನೆಗೆ ಭೇಟಿ ಕೊಟ್ಟ ಬಿಗ್​ಬಾಸ್​ ಆನೆ; ಏನಿದರ ಸ್ಪೆಷಲ್‌? ವಿನಯ್ ಗೌಡ ಹೇಳಿದ್ದೇನು?

Share :

Published April 21, 2024 at 6:43am

Update April 21, 2024 at 6:29am

  ಬಿಗ್​ಬಾಸ್​ ಮೂಲಕ ಆನೆ ಎಂತಲೇ ಫೇಮಸ್​ ಆಗಿದ್ದರು ನಟ ವಿನಯ್​ ಗೌಡ

  ಬಿಗ್​ಬಾಸ್​​ ಸ್ಪರ್ಧಿಗಳ ಜತೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡ ಕಿಚ್ಚ ಸುದೀಪ್​

  ನಟ ಸುದೀಪ್ ಕುಟುಂಬದ ಜತೆ ಬಿಗ್​ಬಾಸ್​​ ಖ್ಯಾತಿಯ ವಿನಯ್ ಗೌಡ

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟ ಮೇಲೆ ವಿನಯ್ ಗೌಡ ಅವರು ಆನೆ ಎಂತಲೇ ಫೇಮಸ್​ ಆಗಿದ್ದರು. ಅಷ್ಟರ ಮಟ್ಟಿಗೆ ಬಿಗ್​ಬಾಸ್​ ಮನೆಯಲ್ಲಿದ್ದಾಗ ಅಗ್ರೆಸಿವ್​ ಆಗಿ ಟಾಸ್ಕ್​​ಗಳನ್ನು ಆಡುತ್ತಿದ್ದರು.

ಇದನ್ನೂ ಓದಿ: ನೇಹಾ ಬರ್ಬರ ಹತ್ಯೆ; ಶಿವಣ್ಣ ಬೆನ್ನಲ್ಲೇ ಆಕ್ರೋಶ ಹೊರಹಾಕಿದ ನಟ ದರ್ಶನ್​​​!

ಹೀಗಾಗಿ ಬಿಗ್‌ಬಾಸ್ ಮೂಲಕ ವಿನಯ್ ಗೌಡ ಅವರಿಗೆ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಗಿತ್ತು. ಇದೀಗ ಬಿಗ್​ಬಾಸ್​​ ಸೀಸನ್ 10ರ ಸ್ಪರ್ಧಿಗಳ ಜತೆ ನಟ ಸುದೀಪ್ ಅವರು ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ನಟ ಸುದೀಪ್ ಕುಟುಂಬದ ಜತೆ ನಟ ವಿನಯ್ ಅವರು ಔತಣಕೂಟದಲ್ಲಿ ಭಾಗಿಯಾಗಿದ್ದಾರೆ.

View this post on Instagram

A post shared by Vinay Gowda (@vinaygowdaactor)

ಹೌದು, ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆ ವೇದಿಕೆಯಲ್ಲೂ ನಟ ಸುದೀಪ್ ಅವರು ವಿನಯ್ ನಡವಳಿಕೆ ಬಗ್ಗೆ ಕೊಂಡಾಡಿದ್ದರು. ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ನಿಮ್ಮಿಬ್ಬರನ್ನು ಒಟ್ಟಿಗೆ ನೋಡಲು ಬಯಸುತ್ತೇವೆ ಎಂದು ಹೇಳಿಕೊಂಡಿದ್ದರು. ಇದಕ್ಕೂ ಸುದೀಪ್ ಧನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಇದೀಗ ಕಿಚ್ಚ ಸುದೀಪ್​ ನಟ ವಿನಯ್ ಅವರನ್ನು ಮನೆಗೆ ಆಹ್ವಾನಿಸಿ ಒಟ್ಟಿಗೆ ಕಾಲ ಕಳೆದಿದ್ದಾರೆ. ಫೋಟೋವನ್ನು ಶೇರ್​ ಮಾಡಿಕೊಂಡ ವಿನಯ್​ ಗೌಡ ಹಂಬಲ್ ಫ್ಯಾಮಿಲಿ. ಅದ್ಭುತ ಊಟಕ್ಕೆ ಆಹ್ವಾನಿಸಿದಕ್ಕ ಧನ್ಯವಾದ. ಡೆಸರ್ಟ್​ ಅತ್ಯುತ್ತಮವಾಗಿತ್ತು ಎಂದು ಬರೆದುಕೊಂಡಿದ್ದಾರೆ. ಇದೇ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಿಚ್ಚ ಸುದೀಪ್​ ಮನೆಗೆ ಭೇಟಿ ಕೊಟ್ಟ ಬಿಗ್​ಬಾಸ್​ ಆನೆ; ಏನಿದರ ಸ್ಪೆಷಲ್‌? ವಿನಯ್ ಗೌಡ ಹೇಳಿದ್ದೇನು?

https://newsfirstlive.com/wp-content/uploads/2024/04/vinay1.jpg

Load More