/newsfirstlive-kannada/media/post_attachments/wp-content/uploads/2025/07/VINAY_RAJKUMAR.jpg)
ಬೆಂಗಳೂರು: ಸ್ಯಾಂಡಲ್ವುಡ್ ನಟಿ ರಮ್ಯಾ ಅವರು ನಟ ದರ್ಶನ್ ಕೇಸಿನ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದಕ್ಕೆ ದರ್ಶನ್ ಅಭಿಮಾನಿಗಳು ಕೆಟ್ಟದಾಗಿ ಕಮೆಂಟ್ ಮಾಡಿದ್ದರು. ಈ ಸಂಬಂಧ ರಮ್ಯಾ ಅವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ರಮ್ಯಾ ಪರವಾಗಿ ನಟ ವಿನಯ್ ರಾಜ್ ಕುಮಾರ್ ಬ್ಯಾಟ್ ಬೀಸಿದ್ದಾರೆ.
ರಮ್ಯಾ ಅವರಿಗೆ ಕೆಟ್ಟದಾಗಿ ನಿಂದಿಸುತ್ತಿರುವ ಸಂಬಂಧ ಮಹಿಳಾ ಆಯೋಗ ಸುಮೊಟೋ ಕೇಸ್ ದಾಖಲಿಸಿಕೊಂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಸುಮೋಟೋ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಮಾನ ಹಾನಿ ಆಗುವಂತಹ ಅವಾಚ್ಯ ಶಬ್ದ ಪ್ರಯೋಗ ಮಾಡಲಾಗಿದೆ. ಹೇಗೆ ಬೇಕೋ ಹಾಗೆ ಕಾಮೆಂಟ್ ಮಾಡೋದನ್ನು ನಿಲ್ಲಿಸಬೇಕು ಎಂದಿದ್ದರು.
ಇದನ್ನೂ ಓದಿ:TCS ಕಂಪನಿಯಿಂದ 12 ಸಾವಿರ ಉದ್ಯೋಗಿಗಳಿಗೆ ಗೇಟ್ ಪಾಸ್.. ಕೆಲಸದಿಂದ ತೆಗೆಯಲು ಕಾರಣ ಏನು ಗೊತ್ತಾ?
ಈ ಎಲ್ಲದರ ಬೆನ್ನಲ್ಲೇ ರಮ್ಯಾ ಪರವಾಗಿ ನಟ ವಿನಯ್ ರಾಜ್ ಕುಮಾರ್ ಇನ್ಸ್ಟಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಇನ್ಸ್ಟಾ ಪೋಸ್ಟ್ನಲ್ಲಿ ರಮ್ಯಾ ಅವರ ಹೆಸರು ಉಲ್ಲೇಖ ಮಾಡದೇ ಮಹಿಳೆಯರನ್ನ ಕೀಳಾಗಿ ಕಾಣುವವರನ್ನ ಮೊದಲೇ ನಾಶ ಮಾಡಬೇಕು ಎಂದಿದ್ದಾರೆ. ವಿನಯ್ ರಾಜ್ಕುಮಾರ್ ಹಾಕಿದ ಪೋಸ್ಟ್ ಈ ರೀತಿ ಇದೆ. ಯಾವುದೇ ರೀತಿಯ ಕಿರುಕುಳದ ವಿರುದ್ಧ ನಿಲ್ಲುವುದು ನಮ್ಮ ಕರ್ತವ್ಯ. ಹೆಣ್ಮಕ್ಕಳನ್ನ ಕೀಳಾಗಿ ಕಾಣೋ ಪ್ರಪಂಚ ಬೆಳವಣಿಗೆಗೂ ಮೊದಲೇ ನಾಶವಾಗಬೇಕು ಎಂದು ಬರೆದುಕೊಂಡಿದ್ದಾರೆ.
ದರ್ಶನ್ ಫ್ಯಾನ್ಸ್ ವಿರುದ್ಧ ಮತ್ತೆ ಸಿಡಿದೆದ್ದ ರಮ್ಯಾ ನ್ಯೂಸ್ಫಸ್ಟ್ ಜೊತೆ ಮಾತನಾಡಿದ್ದರು. ಈ ವೇಳೆ ದರ್ಶನ್ ಫ್ಯಾನ್ಸ್‌ನ ರೇಣುಕಾಸ್ವಾಮಿಗೆ ಹೋಲಿಸಿದ್ದರು. ಅವರ ಫ್ಯಾನ್ಸ್ ಮೆಸೇಜ್‌ಗೂ, ರೇಣುಕಾಸ್ವಾಮಿ ಮೆಸೇಜ್‌ಗೂ ವ್ಯತ್ಯಾಸವಿಲ್ಲ. ಇಂಥವರಿಂದಲೇ ಸಮಾಜ ಹಾಳಾಗುತ್ತಿದೆ. ಹೆಣ್ಮಕ್ಕಳಿಗೆ ಈ ರೀತಿ ಮೆಸೇಜ್ ಮಾಡೋರಿಗೆ ಸೌಜನ್ಯ ಕೇಸ್ನಲ್ಲಿ ನ್ಯಾಯ ಬೇಕು ಅಂತಾರೆ ಎಂಥಾ ಜೋಕ್ ನೋಡ್ರಿ. ಇಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ ಇಲ್ಲ ಎಂದು ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ