3 ಲಕ್ಸುರಿ ಕಾರು.. 2 ಕೋಟಿ ಪ್ಲಾಟ್; ವಿನೇಶ್ ಫೋಗಟ್‌ ಬಳಿ ಇರೋ ಚಿನ್ನ ಎಷ್ಟು? ಸಾಲ ಎಷ್ಟಿದೆ ಗೊತ್ತಾ?

author-image
Bheemappa
Updated On
VineshPhogat: ಅಗ್ನಿ ಪರೀಕ್ಷೆಯಲ್ಲಿ ವಿಜಯ ಪತಾಕೆ.. ಗೆದ್ದು ಬೀಗಿದ ವಿನೇಶ್ ಫೋಗಟ್!
Advertisment
  • ವಿನೇಶ್ ಫೋಗಟ್‌ ವಿರುದ್ಧ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ?
  • ನಾಮಪತ್ರ ಸಲ್ಲಿಸಿ ಆಸ್ತಿ ಘೋಷಿಸಿರುವ ವಿನೇಶ್ ಫೋಗಟ್‌
  • ವಿನೇಶ್ ಫೋಗಟ್‌ ಅವರ ಗಂಡನ ಬಳಿ ಯಾವ ಕಾರು ಇದೆ?

ಪ್ಯಾರಿಸ್ ಒಲಿಂಪಿಕ್ಸ್​​ನ 50 ಕೆ.ಜಿ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಅನರ್ಹಗೊಂಡಿದ್ದ ವಿನೇಶ್ ಫೋಗಟ್ ಅವರ ಜೀವನದಲ್ಲಿ ಮಹತ್ತರ ಬೆಳವಣಿಗೆಗಳು ನಡೆಯುತ್ತಿವೆ. ಒಲಿಂಪಿಕ್ಸ್​​ನಿಂದ ಬಂದ ಬಳಿಕ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅಲ್ಲದೇ ಹರಿಯಾಣ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಭಾರತದ ಮಾಜಿ ಕುಸ್ತಿಪಟು ವಿನೇಶ್‌ ಫೋಗಟ್‌ ತಮ್ಮ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ವಿನೇಶ್ ಫೋಗಟ್​ಗೆ ಗೋಲ್ಡ್​ ಮೆಡಲ್​.. ಸಾವಿರ ಪದಕಗಳಿಗೆ ಇದೊಂದೇ ಸಮವೆಂದ ಕುಸ್ತಿಪಟು, ಭಾವುಕ

publive-image

ವಿನೇಶ್ ಫೋಗಟ್ ಅವರು ಈ ಬಾರಿ ಹರಿಯಾಣ ಚುನಾವಣೆಯಲ್ಲಿ ಜಿಂದ್ ಜಿಲ್ಲೆಯ ಜುಲಾನಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಕಾಂಗ್ರೆಸ್​​ನಿಂದ ವಿನೇಶ್ ಫೋಗಟ್ ಸ್ಪರ್ಧಿಸುತ್ತಿದ್ದರೆ ಅತ್ತ ಬಿಜೆಪಿಯಿಂದ ಕ್ಯಾಪ್ಟನ್‌ ಯೋಗೇಶ್‌ ಬೈರಾಗಿ ಅವರು ಕಣಕ್ಕಿಳಿದಿದ್ದಾರೆ. ಹೀಗಾಗಿ ಜುಲಾನಾ ವಿಧಾನಸಭಾ ಈ ಸಲ ಎಲ್ಲರ ಗಮನ ಸೆಳೆದಿದೆ. ಅಖಾಡದಲ್ಲಿ ಯಾರು ಗೆಲ್ಲುತ್ತಾರೆ ಎಂಬುದು ಕದನ ಕುತೂಹಲ ಮೂಡಿಸಿದೆ. ಚುನಾವಣಾ ನಾಮನಿರ್ದೇಶನ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ಮತ್ತು ಆದಾಯದ ವಿವರಗಳನ್ನ ವಿನೇಶ್ ಫೋಗಟ್ ಪ್ರಕಟ ಮಾಡಿದ್ದಾರೆ.

ಹಲವು ಬಾರಿ ಕಾಮನ್​ವೆಲ್ತ್​ನಲ್ಲಿ ಚಿನ್ನದ ಪದಕ ಗೆದ್ದಿರುವ ಮಾಜಿ ಕುಸ್ತಿಪಟು ವಿನೇಶ್ ಫೋಗಟ್ ಅವರು 3 ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ₹35 ಲಕ್ಷ ಮೌಲ್ಯದ ವೋಲ್ವಾ ಎಕ್ಸ್​ಸಿ-60 ಕಾರು, ₹12 ಲಕ್ಷ ಮೌಲ್ಯದ ಹುಂಡೈ ಕಾರು ಹಾಗೂ 17 ಲಕ್ಷ ರೂಪಾಯಿಯ ಟೊಯೋಟಾ ಕಾರು ಅವರ ಬಳಿ ಇವೆ. 35 ಗ್ರಾಂ ಚಿನ್ನಾಭರಣ ಹೊಂದಿದ್ದು ಅದರ ಮೌಲ್ಯ 2 ಲಕ್ಷದ 24 ಸಾವಿರ ರೂಪಾಯಿ ಆಗಿದೆ. ಇನ್ನೋವಾ ಕಾರು ಖರೀದಿಗಾಗಿ 13 ಲಕ್ಷ ರೂಪಾಯಿ ಸಾಲ ಮಾಡಿದ್ದಾರೆ. ಇದರ ಜೊತೆಗೆ ಅವರ ಗಂಡ ಸೋಮವೀರ್ ರಾಥಿ ಅವರು 19 ಲಕ್ಷ ರೂಪಾಯಿ ಮಹೀಂದ್ರ ಸ್ಕಾರ್ಫಿಯಾ ಕಾರನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕುಸ್ತಿ ಅಖಾಡದಿಂದ ರಾಜಕೀಯಕ್ಕೆ ವಿನೇಶ್ ಫೋಗಟ್.. ಎಲೆಕ್ಷನ್​​ನಲ್ಲಿ ಬಬಿತಾ ಫೋಗಟ್ ವಿರುದ್ಧ ಸೈ ಅಂತಾರಾ?

publive-image

ಕುಸ್ತಿಪಟು ವಿನೇಶ್ ಫೋಗಟ್ ಅವರು ಸೋನಿಪತ್‌ನಲ್ಲಿ ಒಂದು ಪ್ಲಾಟ್ ಹೊಂದಿದ್ದು ಇದರ ಮೌಲ್ಯ 2 ಕೋಟಿ ರೂಪಾಯಿ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಐಟಿ ರಿಟರ್ನ್ ಪ್ರಕಾರ ಅವರ ಆದಾಯ 13,85,000 ರೂ.ಗಳು ಆಗಿದೆ. ಇದರ ಜೊತೆಗೆ ಸದ್ಯ ಫೋಗಟ್ ಅವರ ಬಳಿ 1,95,000 ರೂಪಾಯಿ ನಗದು ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment