/newsfirstlive-kannada/media/post_attachments/wp-content/uploads/2024/08/VINESH-3.jpg)
ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಸದ್ಯ ಹೆಡ್​ಲೈನ್ ಮತ್ತು ಹಾಟ್ ಟಾಪಿಕ್​​ನಲ್ಲಿದ್ದಾರೆ. 2024ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ 50 ಕೆಜಿ ತೂಕದ ವಿಭಾಗದಲ್ಲಿ ಅವರು ಫೈನಲ್​ಗೆ ಪ್ರವೇಶ ಮಾಡಿದ್ದರು. ಅಂತಿಮ ಪಂದ್ಯಕ್ಕೂ ಮುನ್ನ ಫೋಗಟ್ ನಿಗದಿತ ಸಾಮಾನ್ಯ ತೂಕಕ್ಕಿಂತ 100 ಗ್ರಾಂ ಏರಿಕೆ ಆಗಿದ್ದರು. ಈ ಕಾರಣಕ್ಕಾಗಿ ಅವರು ಅನರ್ಹಗೊಂಡರು. ಇದೀಗ ಅವರಿಗೆ ಬೆಳ್ಳಿ ಪದಕ ನೀಡಬೇಕು ಅಂತಾ ಕಾನೂನು ಹೋರಾಟ ನಡೆಯುತ್ತಿದೆ.
ಶ್ರದ್ಧೆ ಮತ್ತು ಶ್ರಮ
ವಿನೇಶ್ ತಮ್ಮ ವೃತ್ತಿ ಜೀವನದಲ್ಲಿ ಬಹಳಷ್ಟು ಸಾಧನೆ ಮಾಡಿದ್ದಾರೆ. ದೇಶಕ್ಕಾಗಿ ಅನೇಕ ಪಂದ್ಯಗಳನ್ನು ಗೆದ್ದಿದ್ದಾರೆ. ವಿನೇಶ್ ತಮ್ಮ ಸಮರ್ಪಣೆ ಮತ್ತು ಕಠಿಣ ಪರಿಶ್ರಮದಿಂದ ದೊಡ್ಡ ಎತ್ತರಕ್ಕೆ ಹೋಗಿದ್ದಾರೆ. ಇನ್ನು ಅವರ ವೈಯಕ್ತಿಕ ಜೀವನದಲ್ಲಿ ಕೆಲವು ಐಷಾರಾಮಿ ವಸ್ತುಗಳೆಂದರೆ ತುಂಬಾ ಇಷ್ಟ. ಇವುಗಳಲ್ಲಿ ಕಾರು ಕೂಡ ಸೇರಿವೆ.
/newsfirstlive-kannada/media/post_attachments/wp-content/uploads/2024/08/VINESH-2.jpg)
ವಿನೇಶ್ ಫೋಗಟ್ ಬಳಿ ಕಾರುಗಳು ಎಷ್ಟಿವೆ?
ಮಾಹಿತಿಗಳ ಪ್ರಕಾರ.. ವಿನೇಶ್ ಫೋಗಟ್ ಎರಡು ಕಾರುಗಳನ್ನು ಹೊಂದಿದ್ದಾರೆ. ಟೊಯೊಟಾ ಫಾರ್ಚುನರ್ (Toyota Fortuner) ಮತ್ತು ಇನ್ನೋವಾ (Innova car) ಕಾರುಗಳನ್ನು ಹೊಂದಿದ್ದಾರೆ. ಟೊಯೊಟಾ ಫಾರ್ಚುನರ್‌ನ ಎಕ್ಸ್ ಶೋ ರೂಂ ಬೆಲೆ 33.43 ಲಕ್ಷದಿಂದ ಪ್ರಾರಂಭವಾಗಿ 51.44 ಲಕ್ಷದವರೆಗೆ ಇದೆ. ಇನ್ನೋವಾ ಬೆಲೆ 19.99 ಲಕ್ಷದಿಂದ 26.55 ಲಕ್ಷ ರೂಪಾಯಿವರೆಗೆ ಇದೆ. ಜೊತೆಗೆ 1.8 ಕೋಟಿ ಬೆಲೆಯ Mercedes GLE ಕಾರು ಇದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಯಾರೂ ನಿರೀಕ್ಷೆ ಮಾಡಿರದ ನಿರ್ಧಾರ ತೆಗೆದುಕೊಂಡ ಸೂರ್ಯ, ಟೀಂ ಇಂಡಿಯಾದ ಸ್ಟಾರ್ಸ್​ಗೆ ಬಿಗ್ ಶಾಕ್..!
/newsfirstlive-kannada/media/post_attachments/wp-content/uploads/2024/08/VINESH.jpg)
ಫೋಗಟ್ ಅವರ ಒಟ್ಟು ಆಸ್ತಿ ಸುಮಾರು 36 ಕೋಟಿ ರೂಪಾಯಿ ಎನ್ನಲಾಗಿದೆ. ಫೋಗಟ್ ಅವರಿಗೆ ಒಟ್ಟು ಮೂರು ಆದಾಯ ಮೂಲಗಳಿವೆ. ಮೊದಲನೇಯದು ತಮ್ಮ ವೃತ್ತಿ ಕುಸ್ತಿ ಮೂಲಕ ಸಂಪಾದಿಸಿದರೆ, ಇನ್ನೊಂದು ಬ್ರಾಂಡ್​ಗಳ ಪ್ರಾಚಾರದ ಮೂಲಕ ಹಣ ಗಳಿಸುತ್ತಾರೆ. ಮೂರನೇಯದು ಅವರಿಗೆ ಬರುವ ಸಂಬಳ. ಕೇಂದ್ರ ಸರ್ಕಾರದ ಯುವ ಜನ ಮತ್ತು ಕ್ರೀಡಾ ಸಚಿವಾಲಯವು ತಿಂಗಳಿಗೆ 50 ಸಾವಿರ ರೂಪಾಯಿ ಸಂಬಳ ನೀಡುತ್ತಿದೆ. ತಿಂಗಳ ಸಂಬಳ 50,000 ರೂಪಾಯಿ ಪಡೆದು, ವರ್ಷಕ್ಕೆ 6 ಲಕ್ಷ ಹಣವನ್ನು ಸ್ಯಾಲರಿ ರೂಪದಲ್ಲಿ ಪಡೆಯುತ್ತಾರೆ.
/newsfirstlive-kannada/media/post_attachments/wp-content/uploads/2024/08/VINESH-1.jpg)
ಹರಿಯಾಣದಲ್ಲಿ ವಿಲ್ಲಾ ಹೊಂದಿದ್ದಾರೆ. ಅದರ ಒಟ್ಟು ಮೌಲ್ಯದ ಬಗ್ಗೆ ಮಾಹಿತಿ ಇಲ್ಲ. Baseline Ventures ಗೆ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ ವಿನೇಶ್ ಫೋಗಟ್. 29 ವರ್ಷದ ಫೋಗಟ್​​ ಅವರು 1994ರಲ್ಲಿ ಹರಿಯಾಣದ ಚರ್ಖಿಯಲ್ಲಿ ಜನಿಸಿದ್ದಾರೆ. ಕಾಮನ್​ವೆಲ್ತ್​​ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್​ ಎರಡರಲ್ಲೂ ಚಿನ್ನದ ಪದಕ ವಿಜೇತರಾಗಿದ್ದಾರೆ.
ಇದನ್ನೂ ಓದಿ:ವಿದೇಶಿ IPL ಆಟಗಾರರ ವಿರುದ್ಧ ರೊಚ್ಚಿಗೆದ್ದ ಅಶ್ವಿನ್.. ದುಬಾರಿ ಆಟಗಾರರ ಅಸಲಿ ತಂತ್ರ ರಿವೀಲ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us