/newsfirstlive-kannada/media/post_attachments/wp-content/uploads/2024/09/Vinod-Channa-1.jpg)
ಸೆಲೆಬ್ರೆಟಿಗಳು ಅಂದ್ರೆ ಅವರದೇ ಆದ ಒಂದು ಜೀವನ ಪದ್ಧತಿ ಇರುತ್ತದೆ. ಅವರು ಉಳಿದವರಂತೆ ಏನೇನೋ ತಿಂದು, ಏನೇನೋ ಕುಡಿದು ಹೇಗೇಗೋ ಬದುಕೋಕೆ ಆಗಲ್ಲ. ಒಂದು ವೇಳೆ ಹಾಗೆ ಬದುಕಿದ್ದೇ ಆದಲ್ಲಿ ಅವರ ವೃತ್ತಿಜೀವನಕ್ಕೆ ಅದು ಕಂಟಕ ಹೀಗಾಗಿ ಅವರು ತಮ್ಮ ಲೈಫ್​ಸ್ಟೈಲ್​ನ್ನು ಒಂದು ಸರಳರೇಖೆಯಲ್ಲಿಯೇ ನಡೆಸಿಕೊಂಡು ಹೋಗುತ್ತಿರುತ್ತಾರೆ. ಅವರ ಫಿಟ್​ನೆಸ್ ಕಾಯಲು ಅಂತಲೇ ಕೋಚ್​ಗಳು ಇರುತ್ತಾರೆ. ಈ ರೀತಿಯ ಕೋಚ್​ ನೀಡುವಲ್ಲಿ ಭಾರತದಲ್ಲಿ ಅತಿದೊಡ್ಡ ಹೆಸರು ಮಾಡಿದ್ದು ಅಂದ್ರೆ ಅದು ವಿನೋದ್​ ಚನ್ನಾ.
ಇದನ್ನೂ ಓದಿ:108 KG ತೂಕ ಇಳಿಸಿಕೊಂಡಿದ್ದ ಅನಂತ್​​ ಅಂಬಾನಿ; ಮತ್ತೆ ದಪ್ಪ ಆಗಿದ್ದೇಕೆ..?
ಕೆಲವು ವರ್ಷಗಳ ಹಿಂದೆ ಮುಖೇಶ್ ಅಂಬಾನಿಯ ಪುತ್ರ ಅನಂತ್ ಅಂಬಾನಿ ತಮ್ಮ ತೂಕವನ್ನು ಇಳಿಸಿ ಅಪ್ಪಟ ಬಾಲಿವುಡ್​ ನಟನಂತೆ ಕಂಡಿದ್ದು ನಿಮಗೆಲ್ಲಾ ಗೊತ್ತೆ ಇದೆ. 18 ತಿಂಗಳಲ್ಲಿ ಅವರ ತೂಕವನ್ನು 108 ಕೆಜಿಯಷ್ಟು ಇಳಿಸಿದ ಖ್ಯಾತಿ ಇದೇ ವಿನೋದ್ ಚನ್ನಾಗೆ ಸಲ್ಲುತ್ತದೆ. ವಿನೋದ್​ ಚನ್ನಾ ಬಳಿಯೇ ಕೋಚ್​ ಪಡೆದುಕೊಂಡಿದ್ದ ಅನಂತ್ ಅಂಬಾನಿ ಅಂದು ತಮ್ಮ ತೂಕವನ್ನು ಇಳಿಸಿಕೊಂಡು ಹೀರೋ ಲುಕ್​​ಗೆ ಬಂದಿದ್ದರು. ವಿನೋದ ಖನ್ನಾಗೆ ಇರೋದೇ ಇಂತಹ ಕ್ಲೈಂಟ್​ಗಳು. ಇವತ್ತಿಗೂ ಇವರ ಸುತ್ತ ಕೋಟ್ಯಾಧಿಪತಿಗಳ ಕ್ಲೈಂಟ್​ಗಳೇ ಇರೋದು. ಅನಂತ್ ಅಂಬಾನಿಯವರನ್ನ ವಿನೋದ್​ ಚನ್ನಾ ನಿತ್ಯ 21 ಕಿಲೋ ಮೀಟರ್ ವಾಕಿಂಗ್​ ಮಾಡಿಸುತ್ತಿದ್ದರಂತೆ ವಿನೋದ್ ಚನ್ನಾ. ನಿತ್ಯ ಎರಡು ಗಂಟೆಗಳ ಕಾಲ ಯೋಗ ಮಾಡಿಸುತ್ತಿದ್ದರಂತೆ ಈ ಮೂಲಕ ಅನಂತ ಅಂಬಾನಿ ತಮ್ಮ ತೂಕವನ್ನು 108 ಕೆಜಿಯಷ್ಟು ಇಳಿಸಲು ಸಾಧ್ಯವಾಯ್ತು ಅಂತಾರೆ.
ಇದನ್ನೂ ಓದಿ: ಅನಂತ್ ಅಂಬಾನಿ ಕೂದಲು ಉದುರುವುದೇಕೆ? ಮಗನ ಕಾಯಿಲೆ ಬಗ್ಗೆ ನೀತಾ ಅಂಬಾನಿ ಹೇಳಿದ್ದೇನು?
/newsfirstlive-kannada/media/post_attachments/wp-content/uploads/2024/09/Vinod-Channa-2.jpg)
ವಿನೋದ ಚನ್ನಾ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೂ ಕೂಡ ಕೋಚ್ ನೀಡುತ್ತಾರೆ. ನಟ ಜಾನ್ ಅಬ್ರಾಹಂ, ಶಿಲ್ಪಾ ಶೆಟ್ಟಿ, ವಿವೇಕ್ ಒಬರಾಯ್​ ಸೇರಿದಂತೆ ಅನೇಕ ಬಾಲಿವುಡ್ ನಟರಿಗೆ ಫಿಟ್​​ನೆಸ್​ ಟ್ರೇನಿಂಗ್ ಕೊಡುವ ವಿನೋದ್​ ಚನ್ನಾ. ಆರಂಭದಲ್ಲಿ ತಾವು ಫಿಟ್​ನೆಸ್​ ಟ್ರೇನರ್ ಆಗ್ತೀನಿ ಅಂತ ಖುದ್ದು ಅವರೇ ನಂಬಿರಲಿಲ್ಲ. ಒಂದು ಕಾಲದಲ್ಲಿ ಹೊಟ್ಟೆಪಾಡಿಗಾಗಿ ಹೌಸ್​ಕೀಪಿಂಗ್, ಸೆಕ್ಯೂರಿಟಿ ಗಾರ್ಡ್​​ನಂತಹ ಕೆಲಸ ಮಾಡಿಕೊಂಡು ಬದುಕು ನೂಕುತ್ತಿದ್ದ ಚನ್ನಾ, ಈಗ ಕೋಟ್ಯಾಧೀಶರರಿಗೆಲ್ಲಾ ಫಿಟ್​​ನೆಸ್ ತರಬೇತಿ ನೀಡಿ ಕೋಟಿ ಕೋಟಿ ಹಣ ಗಳಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/09/Vinod-Channa.jpg)
ಸದ್ಯ ನೀತಾ ಅಂಬಾನಿ, ಶಿಲ್ಪಾ ಶೆಟ್ಟಿ, ಕುಮಾರ ಮಂಗಲಂ ಬಿರ್ಲಾ, ಅನನ್ಯಾ ಬಿರ್ಲಾ ಸೇರಿದಂತೆ ಹಲವು ಕೋಟ್ಯಾಧಿಪತಿಗಳ ಕುಟುಂಬಗಳ ಸದಸ್ಯರ ಜೊತೆಗೆ ಜಾನ್ ಅಬ್ರಾಹಂ, ಶಿಲ್ಪಾಶೆಟ್ಟಿ, ವಿವೇಕ್ ಒಬರಾಯ್​, ಹರ್ಷವರ್ದನ್ ರಾಣೆಯಂತ ನಟರಿಗೂ ಕೂಡ ವಿನೋದ್ ಚನ್ನಾ ಫಿಟ್​ನೆಸ್​ ತರಬೇತಿ ನೀಡುತ್ತಾರೆ. ಅವರು ಒಂದು ಟ್ರೇನಿಂಗ್ ಸೆಷನ್​ಗೆ 3.5 ಲಕ್ಷ ರೂಪಾಯಿಗಳಿಂದ 5 ಲಕ್ಷ ರೂಪಾಯಿವರೆಗೆ ಚಾರ್ಜ್ ಮಾಡುತ್ತಾರೆ. ಒಟ್ಟು 12 ದಿನಗಳ ಒಟ್ಟು ತರಬೇತಿಯನ್ನು ಒಂದು ಸೆಷನ್ ಎಂದು ಪರಿಗಣಿಸಲಾಗುತ್ತದೆ. ಈ 12 ದಿನಗಳಿಗೆ ವಿನೋದ್ ಚನ್ನಾ ಚಾರ್ಜ್​ ಮಾಡುವುದು 3.5 ಲಕ್ಷದಿಂದ 5 ಲಕ್ಷ ರೂಪಾಯಿಗಳವರೆಗೆ ಎಂದು ಹಲವು ಪತ್ರಿಕೆಗಳು ವರದಿ ಮಾಡಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us