/newsfirstlive-kannada/media/post_attachments/wp-content/uploads/2023/07/Bangalore-Mysore-Highway-1.jpg)
ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಸಂಚಾರ ನಿಯಮ ಉಲ್ಲಂಘನೆ ಹೆಚ್ಚುತ್ತಿದ್ದು, ಒಂದೇ ತಿಂಗಳಲ್ಲಿ 9 ಕೋಟಿ ರೂಪಾಯಿ ದಂಡ ಸಂಗ್ರಹವಾಗಿದೆ. ನಿಯಮ ಮೀರಿದ ಸವಾರರು,ಚಾಲಕರಿಗೆ ಕೋಟಿ ಕೋಟಿ ದಂಡ ಹಾಕಲಾಗಿದೆ.
NH 275 ಹೆದ್ದಾರಿಯಲ್ಲಿ ಅನೇಕ ವಾಹನ ಸವಾರರು ಟ್ರಾಫಿಕ್ ರೂಲ್ಸ್ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಒಂದೇ ತಿಂಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ಇಲಾಖೆ 8,99 ಕೋಟಿ ದಂಡ ವಿಧಿಸಿದೆ.
ಇದನ್ನೂ ಓದಿ: ಬ್ಯಾರಿಕೇಡ್ಗೆ ಗುದ್ದಿ ಸೇತುವೆಯಿಂದ ಕೆಳಗೆ ಬಿದ್ದ ಬೈಕ್ ಸವಾರರು.. ಸ್ಥಳದಲ್ಲೇ ಸಾವು
ಜೂನ್ 1 ರಿಂದ ಜೂ.30ರ ವರೆಗೆ 1,61,491 ಪ್ರಕರಣ ದಾಖಲಾಗಿದೆ. ಐ.ಟಿ.ಎಂ.ಎಸ್ ಕ್ಯಾಮೆರಾದಲ್ಲಿ ನಿಯಮ ಉಲ್ಲಂಘನೆ ದಾಖಲಾಗಿದೆ. ಅದರಲ್ಲಿ ಸೀಟು ಬೆಲ್ಟ್ ಧರಿಸದ ಪ್ರಕರಣಗಳೇ ಹೆಚ್ಚು ಕಾಣಿಸಿಕೊಂಡಿವೆ.
ನಿಯಮ ಉಲ್ಲಂಘನೆ ಮತ್ತು ದಂಡ
ಪಥ ಶಿಸ್ತು ಉಲ್ಲಂಘನೆ ಪ್ರಕರಣ- 12,609
ಟ್ರೀಪಲ್ ರೈಡಿಂಗ್ ಪ್ರಕರಣ- 1087
ಹೆಲ್ಮೆಟ್ ಧರಿಸದೆ ಇರುವುದು- 9079
ಅತೀ ವೇಗ- 7671
ವಿರುದ್ಧ ದಿಕ್ಕಿನಲ್ಲಿ ಸಂಚಾರ- 07
ನೋ ಎಂಟ್ರಿ ಪ್ರಕರಣ- 577
ಇವಿಷ್ಟು ಒಂದೇ ತಿಂಗಳಲ್ಲಿ ದಾಖಲೆಯಾದ ಪ್ರಕರಣಗಳಾಗಿದ್ದು, ಪೊಲೀಸರು ದಂಡ ವಿಧಿಸಿದ್ದಾರೆ. ನಿಯಮ ಉಲ್ಲಂಘನೆ ಸ್ಥಳ, ದಿನಾಂಕ, ಸಮಯ ಎಲ್ಲವನ್ನೂ ವಾಹನ ನೋಂದಣಿಯ ಮೊಬೈಲ್ ಸಂಖ್ಯೆಗೆ ರವಾನಿಸಲಾಗಿದೆ.
ಇದನ್ನೂ ಓದಿ: ನಾಯಿಗೆ ಡಿಕ್ಕಿ ಹೊಡೆದಿದ್ದೀರಿ ಎಂದು ಹಲ್ಲೆ.. ಕಣ್ಣಿಗೆ ಖಾರದ ಪುಡಿ ಎರಚಿ ಲಕ್ಷಾಂತರ ರೂಪಾಯಿ ದರೋಡೆ
119 ಕಿಲೋ ಮೀಟರ್ ಉದ್ದಕ್ಕೂ 60 ಕ್ಯಾಮರಾ ಕಣ್ಗಾವಲಿದ್ದು, ಈ ಬಗ್ಗೆ ನ್ಯೂಸ್ ಫಸ್ಟ್ ಕಳೆದ ತಿಂಗಳು ವಿಸ್ತೃತ ವರದಿ ಭಿತ್ತರಿಸಿತ್ತು. ಆ ಮೂಲಕ ವಾಹನ ಸವಾರರು, ಚಾಲಕರ ಗಮನ ಸೆಳೆದಿತ್ತು. ಆದರೀಗ ವರದಿಯ ಬಳಿಕವೂ ಸವಾರರು ನಿಯಮ ಉಲ್ಲಂಘಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ