newsfirstkannada.com

ಗುಜರಾತ್​​ ವಿರುದ್ಧ ಗೆದ್ದು ಬೀಗಿದ ಬೆಂಗಳೂರು; ಆರ್​​ಸಿಬಿ ಪ್ಲೇ ಆಫ್​ ಕನಸು ಜೀವಂತ!

Share :

Published May 4, 2024 at 11:05pm

Update May 4, 2024 at 11:07pm

  ಇಂದು ಆರ್​​ಸಿಬಿ, ಗುಜರಾತ್​ ಟೈಟನ್ಸ್​ ಮಧ್ಯೆ ರೋಚಕ ಪಂದ್ಯ

  ಆರ್​​ಸಿಬಿಗೆ 148 ರನ್​ಗಳ ಸಾಧಾರಣ ಗುರಿ ನೀಡಿದ ಗುಜರಾತ್​​

  ಗುಜರಾತ್​ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಬೆಂಗಳೂರು!

ಇಂದು ಎಂ. ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ರೋಚಕ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವು ಗುಜರಾತ್​ ಟೈಟನ್ಸ್​ ವಿರುದ್ಧ ಗೆದ್ದು ಬೀಗಿದೆ.

ಗುಜರಾತ್​ ನೀಡಿದ ಸಾಧಾರಣ ಗುರಿ ಬೆನ್ನತ್ತಿದ ಆರ್​​​ಸಿಬಿ ಪರ ಓಪನರ್​ ಆಗಿ ಬಂದ ಕ್ಯಾಪ್ಟನ್​​​ ಫಾಫ್​ ಡುಪ್ಲೆಸಿಸ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 23 ಬಾಲ್​ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ರು. ಬರೋಬ್ಬರಿ 3 ಸಿಕ್ಸರ್​​, 10 ಫೋರ್​ ಸಮೇತ 64 ರನ್​ ಸಿಡಿಸಿದ್ರು.

ಫಾಫ್​ ಬ್ಯಾಟಿಂಗ್​ ಮಾಡುವಾಗ ಸ್ಟ್ರೈಕ್​ ರೇಟ್​ ಬರೋಬ್ಬರಿ 280 ಇತ್ತು. ಇವರಿಗೆ ಸಾಥ್​ ನೀಡಿದ ವಿರಾಟ್​ ಕೊಹ್ಲಿ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಕೇವಲ 27 ಬಾಲ್​ನಲ್ಲಿ 4 ಸಿಕ್ಸರ್​​, 2 ಫೋರ್​ ಸಮೇತ 42 ರನ್​ ಚಚ್ಚಿದ್ರು. ದಿನೇಶ್​ ಕಾರ್ತಿಕ್​ 12 ಬಾಲ್​ನಲ್ಲಿ 3 ಫೋರ್​ ಸಮೇತ 21 ರನ್​ ಮತ್ತು ಸ್ವಪ್ನಿಲ್​ ಸಿಂಗ್​ 15 ರನ್​ ಗಳಿಸಿದ್ರು. ಆರ್​​ಸಿಬಿ ಕೇವಲ 13.4 ಓವರ್​ನಲ್ಲೇ 6 ವಿಕೆಟ್​ ನಷ್ಟಕ್ಕೆ 152 ರನ್​ ಗಳಿಸಿ ಗೆದ್ದಿದೆ.

ಇನ್ನು, ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಗುಜರಾತ್​ ಟೈಟನ್ಸ್​ ತಂಡವು ಆರ್​​ಸಿಬಿ ಬೌಲರ್​​ಗಳ ದಾಳಿಗೆ ತತ್ತರಿಸಿದೆ. ಆರಂಭದಲ್ಲೇ ಬ್ಯಾಕ್​ ಟು ಬ್ಯಾಕ್​​ 3 ವಿಕೆಟ್​ ಕಳೆದುಕೊಂಡು ಗುಜರಾತ್​ ಟೈಟನ್ಸ್​​​ ಸಂಕಷ್ಟಕ್ಕೆ ಸಿಲುಕಿತ್ತು. ಸಾಹಾ 1, ಗಿಲ್​ 2, ಸಾಯ್​ ಸುದರ್ಶನ್​​ 6 ರನ್​ಗಳಿಗೆ ಔಟಾದ್ರು.

ಬಳಿಕ ಬಂದ ಶಾರುಖ್​ ಖಾನ್​​​ ಕ್ರೀಸ್​ನಲ್ಲೇ ನಿಂತು 1 ಸಿಕ್ಸರ್​​, 5 ಫೋರ್​ ಸಮೇತ 37 ರನ್​ ಸಿಡಿಸಿದ್ರು. ಡೇವಿಡ್​ ಮಿಲ್ಲರ್​ ಕೂಡ ಶಾರುಖ್​ಗೆ ಸಾಥ್​ ನೀಡಿದ್ದು, 20 ಬಾಲ್​ನಲ್ಲಿ 2 ಸಿಕ್ಸರ್​, 3 ಫೋರ್​ನೊಂದಿಗೆ 30 ರನ್​ ಪೇರಿಸಿದ್ರು. ರಾಹುಲ್​ ತೆವಾಟಿಯಾ ಮತ್ತು ರಶೀದ್​ ಖಾನ್​ ಭರ್ಜರಿ ಆಟ ಆಡಿದ್ರು.

ತೆವಾಟಿಯಾ 21 ಬಾಲ್​ನಲ್ಲಿ 1 ಸಿಕ್ಸರ್​​, 5 ಫೋರ್​ ಸಮೇತ 35 ರನ್​​, ರಶೀದ್​ ಖಾನ್​​ 1 ಸಿಕ್ಸ್​​, 2 ಫೋರ್​ನೊಂದಿಗೆ 18 ರನ್​ ಚಚ್ಚಿದ್ರು. ವಿಜಯ್​ ಶಂಕರ್​​ 10 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಗುಜರಾತ್​​ 147 ರನ್​ಗೆ ಆಲೌಟ್​ ಆಗಿತ್ತು. ಆರ್​​ಸಿಬಿ ಪರ ಸಿರಾಜ್​​, ಯಶ್​ ದಯಾಳ್​​, ವೈಶಾಕ್​​ ತಲಾ 2 ವಿಕೆಟ್​ ತೆಗೆದ್ರು. ಕ್ಯಾಮೆರಾನ್​ ಗ್ರೀನ್​ ಮತ್ತು ಕರಣ್​ ಶರ್ಮಾ ತಲಾ 1 ವಿಕೆಟ್​ ತೆಗೆದ್ರು.

ಇದನ್ನೂ ಓದಿ: ಹೈವೋಲ್ಟೇಜ್​ ಪಂದ್ಯದಲ್ಲಿ ಆರ್​​​ಸಿಬಿ ಶಾಕಿಂಗ್​​ ಪ್ರದರ್ಶನ.. ಗುಜರಾತ್​ 147 ರನ್​ಗೆ ಆಲೌಟ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಗುಜರಾತ್​​ ವಿರುದ್ಧ ಗೆದ್ದು ಬೀಗಿದ ಬೆಂಗಳೂರು; ಆರ್​​ಸಿಬಿ ಪ್ಲೇ ಆಫ್​ ಕನಸು ಜೀವಂತ!

https://newsfirstlive.com/wp-content/uploads/2024/05/Faf_Kohli_Batting.jpg

Load More