newsfirstkannada.com

ಇದು ಕೊಹ್ಲಿಯ ಹೊಸ ಅಧ್ಯಾಯ.. ಹೊಸ ಅವತಾರ..! ರನ್​ ಮಷೀನ್​ 3.O ವರ್ಸನ್​!

Share :

Published April 18, 2024 at 1:51pm

    ಕಂಪ್ಲೀಟ್ ಬದಲಾದ ಕೊಹ್ಲಿಯಿಂದ ನಿಬ್ಬೆರಗಾಗಿಸೋ ಆಟ

    ಸ್ಟ್ರೈಕ್​ರೇಟ್​ ಬಗ್ಗೆ ಟೀಕಿಸೋರಿಗೆ ತಕ್ಕ ಆನ್ಸರ್ ಕೊಟ್ಟ ಕಿಂಗ್

    ಪವರ್​​​ಪ್ಲೇ, ಮಿಡಲ್ ಆರ್ಡರ್​ನಲ್ಲಿ​​​​​​​​​​​​ ವಿರಾಟ್ ವಿರಾಟರೂಪ

ಕಿಂಗ್ ಕೊಹ್ಲಿ ಈ ಸೀಸನ್​ ಆರಂಭಕ್ಕೂ ಮುನ್ನ ಇದು ಹೊಸ ಅಧ್ಯಾಯ ಅಂತ ಹೇಳಿದ್ರು. ಅದು ಬರೀ ಮಾತಾಗಿಯೇ ಉಳಿದಿದೆ. ಆರ್​ಸಿಬಿ ಸತತ 5 ಸೋಲುಂಡು ಪ್ರಪಾತಕ್ಕೆ ಜಾರಿದೆ. ಆದರೆ ತಂಡ ಹೊಸ ಅಧ್ಯಾಯ ಆರಂಭಿಸದಿದ್ರೂ ಕಿಂಗ್ ಕೊಹ್ಲಿ ಮಾತ್ರ ಹೊಸ ಅವತಾರವನ್ನ ಎತ್ತಿದ್ದಾರೆ. ನೀವು ಹಿಂದೆಂದೂ ವಿರಾಟ್​ರ ಇಂತಹ ಅವತಾರವನ್ನ ನೋಡಿಯೇ ಇಲ್ಲ.

ಇದು ಕಿಂಗ್ ಕೊಹ್ಲಿಯ ಹೊಸ ಅಧ್ಯಾಯ.. ಹೊಸ ಅವತಾರ..!
ಸಾಮಾನ್ಯ ಆನೆಯನ್ನೆ ನಿಯಂತ್ರಿಸೋದೆ ಕಷ್ಟ. ಅಂತ್ರದಲ್ಲಿ ಮದವೇರಿದ ಮದ್ದಾನೆಯನ್ನ ಕಂಟ್ರೋಲ್ ಮಾಡೋದಂದ್ರೆ ನಿಜಕ್ಕೂ ಕಷ್ಟವೇ ಬಿಡಿ. ಪ್ರಸಕ್ತ ಐಪಿಎಲ್​ನಲ್ಲಿ ಕಿಂಗ್ ಕೊಹ್ಲಿ ಮದವೇರಿ ಮದ್ದಾನೆಯಂತೆ ಹೂಂಕರಿಸುತ್ತಿದ್ದಾರೆ. ಎದುರಾಳಿ ಪಡೆ ವಿರಾಟ್ ವಿರಾಟರೂಪಕ್ಕೆ ಬೆಸ್ತು ಬಿದ್ದಿದೆ. 147ರ ಸ್ಟ್ರೈಕ್​ರೇಟ್​ನಲ್ಲಿ ಬರೋಬ್ಬರಿ 361 ರನ್ ಕೊಳ್ಳೆ ಹೊಡೆದು, ಹಿಂದೆಂದೂ ಕಾಣದ ಹೊಸ ಅವತಾರವನ್ನೇ ಎತ್ತಿದ್ದಾರೆ.
17ನೇ ಐಪಿಎಲ್​ನಲ್ಲಿ ನೀವು ನೋಡ್ತಿರೋದು ನಿಜಕ್ಕೂ ಹೊಸ ಅವತಾರವೇ. ಅದುವೇ 3.0 ವರ್ಸನ್​​​. ಪ್ರಸಕ್ತ ಐಪಿಎಲ್​ನ ಪವರ್​​​ ಪ್ಲೇ, ಮಿಡಲ್ ಆರ್ಡರ್​​​​​​ ಹಾಗೂ ಸ್ಲಾಗ್ ಓವರ್​ಗಳಲ್ಲಿ ಧೂಳೆಬ್ಬಿಸಿದ್ದಾರೆ. ಎಸ್ಪೆಶಲಿ ಅವರ ಸ್ಟ್ರೈಕ್​ರೇಟ್ ಅನ್ನ ಗಣನೀಯ ರೀತಿಯಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಆ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಇದನ್ನೂ ಓದಿ:ಮತ್ತೆ ಪೋಷಕರ ನಿದ್ದೆಗೆಡಿಸಿದ ನೆಸ್ಲೆ ಕಂಪನಿ.. ನಿಮ್ಮ ಮಗುವಿಗೆ Cerelac ನೀಡುವ ಮುನ್ನ ಹುಷಾರ್​..!

ಕಳೆದ 5 ಸೀಸನ್​​​​​, 7-16 ಓವರ್ಸ್​ನಲ್ಲಿ ಕೊಹ್ಲಿ..!
ಸೀಸನ್​ 2020 ರಲ್ಲಿ ಕೊಹ್ಲಿ 110 ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿದ್ದರು. ಮರುವರ್ಷ 108 ಸ್ಟ್ರೈಕ್​ರೇಟ್​ನಲ್ಲಿ ಆಡಿದ್ರು. ಆದರೆ 2022 ರಲ್ಲಿ ಗೇರ್​ ಚೇಂಜ್ ಮಾಡಿದ ವಿರಾಟ್​​​​​ 116 ಸ್ಟ್ರೈಟ್​​​​​​​​​​​​​​ರೇಟ್​ನಲ್ಲಿ ರನ್ ಗಳಿಸಿದ್ರೆ 2023 ರಲ್ಲಿ ಮತ್ತಷ್ಟು ವೈಲೆಂಟ್​​ ಆದ್ರು. 134ರ ಸ್ಟ್ರೈಕ್​ರೇಟ್​ನಲ್ಲಿ ಕೊಳ್ಳೆ ಹೊಡೆದ್ರು. ಇನ್ನೂ ಈ ಬಾರಿಯಂತೂ ಹಿಂದೆಂದೂ ಕಾಣದಷ್ಟು ಅಂದ್ರೆ 138ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ್ದಾರೆ. ಪವರ್​ಪ್ಲೇನಲ್ಲಂತೂ ಕೊಹ್ಲಿ ಗಿಲ್ಲಿದಾಂಡಿ ಆಟವಾಡ್ತಿದ್ದಾರೆ. ಕಾದು ಆಡುವುದನ್ನ ಬಿಟ್ಟು ಅಗ್ರೆಸ್ಸಿವ್ ಅಪ್ರೋಚ್​​​ನಲ್ಲಿ ಬ್ಯಾಟ್ ಬೀಸ್ತಿದ್ದಾರೆ. ಸಿಕ್ಸರ್​​​-ಬೌಂಡ್ರಿ ಮಳೆ ಸುರಿಸಿ ಫ್ಯಾನ್ಸ್​​ಗೆ ಅಸಲಿ ಟ್ರೀಟ್​ ಕೊಡ್ತಿದ್ದಾರೆ.

ಇದನ್ನೂ ಓದಿ:CET Exam: ಇಂದಿನಿಂದ ಸಿಇಟಿ ಪರೀಕ್ಷೆ; ಪರೀಕ್ಷಾರ್ಥಿಗಳಿಗೆ ಡ್ರೆಸ್​ಕೋಡ್, ಮಾರ್ಗಸೂಚಿ..!

ಪವರ್​​ಪ್ಲೇನಲ್ಲಿ ಕಿಂಗ್ ಕೊಹ್ಲಿ ಸಾಧನೆ
2016 ರಲ್ಲಿ ದಾಖಲೆಯ 4 ಶತಕ ಸಿಡಿಸಿದ್ದ ಕೊಹ್ಲಿ ಅದೇ ವರ್ಷ ಪವರ್​​​​ಪ್ಲೇನಲ್ಲಿ 119.55ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್​ ಬೀಸಿದ್ರು. 2023 ರಲ್ಲಿ ಮತ್ತಷ್ಟು ಕೆರಳಿದ ರನ್​ ಮಷೀನ್​ 136.81 ಸ್ಟ್ರೈಕ್​ರೇಟ್​​ ಹೊಂದಿದ್ರೆ ಈ ವರ್ಷ ಬರೋಬ್ಬರಿ 145.61ರ ಸ್ಟ್ರೈಕ್​ರೇಟ್​ನಲ್ಲಿ ರನ್​ ಗುಡ್ಡೆ ಹಾಕ್ತಿದ್ದಾರೆ. ಸ್ಲಾಗ್ ಓವರ್​ಗಳಲ್ಲಿ ವಿರಾಟ್ ಹೆಚ್ಚಾಗಿ​ ಘರ್ಜಿಸಲ್ಲ. ಅವರೂ ಸ್ಟ್ರೈಕ್​​ರೇಟ್​​ ಹೆಚ್ಚಿಸಿಕೊಳ್ಳಬೇಕು ಅನ್ನೋ ವಾದ ಕೇಳಿ ಬಂದಿತ್ತು. ಅದಕ್ಕೀಗ ಫುಲ್​ಸ್ಟಾಪ್ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ:ಟಿ20 ವಿಶ್ವಕಪ್​ಗೆ 20 ಆಟಗಾರರ ಹೆಸರು ಬಹಿರಂಗ; IPLನಲ್ಲಿ ಫೇಲ್​​​​ ಆದವರ ಹೆಸರೂ ಇದೆ..!

ಕಳೆದ 5 ಸೀಸನ್​​​, ಡೆತ್ ಓವರ್ಸ್​ನಲ್ಲಿ ಕೊಹ್ಲಿ
2020 ರಿಂದ ವಿರಾಟ್ ಕೊಹ್ಲಿ ಇಲ್ಲಿತನಕ ಸ್ಲಾಗ್ ಓವರ್​ಗಳಲ್ಲಿ 17 ಬಾರಿ ಕಣಕ್ಕಿಳಿದಿದ್ದಾರೆ. 123 ಬಾಲ್ ಎದುರಿಸಿ 206.50 ಸ್ಟ್ರೈಕ್​ರೇಟ್​ನಲ್ಲಿ ಬರೋಬ್ಬರಿ 254 ರನ್ ಚಚ್ಚಿದ್ದಾರೆ. ಒಟ್ಟಿನಲ್ಲಿ ಹಿಂದಿನ ಸೀಸನ್​ಗಿಂತ ಕಿಂಗ್ ಕೊಹ್ಲಿ ಈ ಬಾರಿ ಸ್ಟ್ರೈಕ್​ರೇಟ್​ ಹೆಚ್ಚಿಸಿಕೊಂಡಿದ್ದಾರೆ. ಮುಂದಿನ ಪಂದ್ಯಗಳಲ್ಲೂ ವಿರಾಟ್​​​​ ಇದೇ ದಮ್ದಾರ್​ ಸ್ಟ್ರೈಕ್​ರೇಟ್​​ನಲ್ಲಿ ಬ್ಯಾಟ್ ಬೀಸಿ ಫ್ಯಾನ್ಸ್ ರಂಜಿಸುವಂತಾಗಲಿ.

ಇದನ್ನೂ ಓದಿ:ಟೀಂ ಇಂಡಿಯಾದಲ್ಲಿ ಹಾರ್ದಿಕ್ ಸ್ಥಾನಕ್ಕೆ ಬಂತು ಕುತ್ತು.. ಈಗ ರೋಹಿತ್ ಅಲ್ಲ, ದುಬೆ ಜೊತೆ ಫೈಟ್..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದು ಕೊಹ್ಲಿಯ ಹೊಸ ಅಧ್ಯಾಯ.. ಹೊಸ ಅವತಾರ..! ರನ್​ ಮಷೀನ್​ 3.O ವರ್ಸನ್​!

https://newsfirstlive.com/wp-content/uploads/2024/04/VIRAT_KOHLI-6-1.jpg

Load More