ಫೆಬ್ರವರಿ 15ರಂದು ಗಂಡು ಮಗುವಿಗೆ ಜನ್ಮ ನೀಡಿದ ಅನುಷ್ಕಾ.!
ಗೂಗಲ್ನಲ್ಲಿ ಅಕಾಯ್ ಹೆಸರಿನ ಅರ್ಥದ ಹುಡುಕಾಟ.!
ಇಂಗ್ಲೆಂಡ್ನಲ್ಲಿ 2ನೇ ಮಗುವಿನ ಜನ್ಮ ನೀಡಿದ ಅನುಷ್ಕಾ
ವಿರಾಟ್ ಕೊಹ್ಲಿ ಕ್ರಿಕೆಟ್ನಿಂದ ಹಿಂದೆ ಸರಿದಿದ್ದ ಹಿಂದಿನ ವೈಯಕ್ತಿಕ ಕಾರಣ ಕೊನೆಗೂ ರಿವೀಲ್ ಆಗಿದೆ. ಇಂಗ್ಲೆಂಡ್ ಸರಣಿಯಿಂದ ಕೊಹ್ಲಿ ಹೊರ ಬಂದಾಗಲೇ ಎಲ್ಲರೂ 2ನೇ ಮಗುವಿನ ಬಗ್ಗೆ ಊಹೆ ಮಾಡಿದ್ರು. ಕೊನೆಗೂ ಅದು ನಿಜವಾಗಿದೆ. ಉಹಾಪೋಹಗಳಿಗೆಲ್ಲಾ ಬ್ರೇಕ್ ಬಿದ್ದಿದ್ದು, ಗಂಡು ಮಗುವಿಗೆ ಕೊಹ್ಲಿ ತಂದೆಯಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆಯಾಗಿದ್ದ ವಿಚಾರಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಕೊಹ್ಲಿಗೆ ಏನಾಗಿದೆ.? ಅನುಷ್ಕಾ ಶರ್ಮಾಗೆ ಏನಾಗಿದೆ.? ಕೊಹ್ಲಿ ತಾಯಿಗೆ ಏನೋ ಆಗಿದೆ.? ಹೀಗೆ ಸಾಲು ಸಾಲು ಪ್ರಶ್ನೆಗಳು, ಗೊಂದಲಗಳು ಅಭಿಮಾನಿಗಳು ಹಾಗೂ ಕ್ರಿಕೆಟ್ ವಲಯದಲ್ಲಿದ್ವು. ಕೊನೆಗೂ ಆ ಅಂತೆ ಕಂತೆಗಳಿಗೆಲ್ಲಾ ಬ್ರೇಕ್ ಬಿದ್ದಿದೆ.
ನಿನ್ನೆ ಅಧಿಕೃತವಾಗಿ ವಿಚಾರ ಹಂಚಿಕೊಂಡ ‘ವಿರುಷ್ಕಾ’ ಜೋಡಿ.!
ಇಂಗ್ಲೆಂಡ್ ವಿರುದ್ಧದ ಸರಣಿಯಿಂದ ವೈಯಕ್ತಿಕ ಕಾರಣ ನೀಡಿ ವಿರಾಟ್ ಕೊಹ್ಲಿ ಹಿಂದೆ ಸರಿದ ಬಳಿಕ 2ನೇ ಮಗುವಿನ ಸುದ್ದಿ ಎಲ್ಲೆಡೆ ಹಬ್ಬಿತ್ತು. ಇದೀಗ ಅದೇ ಸುದ್ದಿ ನಿಜವಾಗಿದೆ. ಫೆಬ್ರವರಿ 15ರಂದು ಅನುಷ್ಕಾ ಶರ್ಮಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.
Virat & Anushka blessed with a baby boy! ❤️ pic.twitter.com/OnZwgme9He
— Virat Kohli Fan Club (@TeamVirat) February 20, 2024
‘ನಮಗೆ ಅತೀವ ಸಂತೋಷವಾಗಿದೆ’
ನಮಗೆ ಅತೀವ ಸಂತೋಷವಾಗಿದೆ. ನಮ್ಮ ಹೃದಯ ಅತ್ಯಂತ ಪ್ರೀತಿಯಿಂದ ತುಂಬಿದೆ. ನಿಮ್ಮೊಂದಿಗೆ ಒಂದು ಸಂತೋಷದ ವಿಚಾರವನ್ನ ಹಂಚಿಕೊಳ್ಳಲು ಬಯಸುತ್ತಿದ್ದೇವೆ. ಫೆಬ್ರವರಿ 15ರಂದು ನಾವು ಗಂಡು ಮಗುವನ್ನ ಸ್ವಾಗತಿಸಿದೆವು. ವಮಿಕಾಳ ಸಹೋದರನ ಹೆಸರು ‘ಆಕಾಯ್’. ನಾವು ನಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಯನ್ನ ಬಯಸುತ್ತಿದ್ದೇವೆ.
ಪ್ರೀತಿ ಮತ್ತು ಕೃತಜ್ಙತೆಯಿಂದ
ವಿರಾಟ್ ಮತ್ತು ಅನುಷ್ಕಾ
ಮಗನಿಗೆ ವಿಶಿಷ್ಟ ಹೆಸರಿಟ್ಟ ವಿರಾಟ್ ಕೊಹ್ಲಿ..!
ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ನಿನ್ನೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದೇ ತಡ, ಗೂಗಲ್ನಲ್ಲಿ ಅಕಾಯ್ ಹೆಸರಿನ ಅರ್ಥದ ಹುಡುಕಾಟ ಜೋರಾಗಿ ನಡೀತು. ಈಗಲೂ ಕೂಡ ಅದೇ ಹೆಸರು ಟ್ರೆಂಡಿಂಗ್ನಲ್ಲಿದೆ. ಬಹುತೇಕರು ಕೊಹ್ಲಿ ಹಾಗೂ ಅನುಷ್ಕಾ ಹೆಸರಿನ ಮೊದಲ ಪದ ಸೇರಿಸಿ ನಾಮಕರಣ ಮಾಡಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನು, ಹಲವರು ನಿರ್ವಿಕಾರ ಅಥವಾ ಪೂರ್ಣಚಂದಿರ ಎಂದು ಹೇಳ್ತಿದ್ದಾರೆ.
ಅಂದಹಾಗೆಯೇ ‘ಅಕಾಯ್’ ಎಂಬ ಪದ ‘ಕಾಯಾ’ ಎಂಬ ಹಿಂದಿ ಪದದಿಂದ ಬಂದಿದೆ. ಅಂದರೆ ದೇಹವೆಂದು ಅರ್ಥ. ಅಕೆ ಎಂದರೆ ಅವನ ದೈಹಿಕ ದೇಹಕ್ಕಿಂತ ಹೆಚ್ಚಾಗಿರುವವರು. ಟರ್ಕಿಯ ಭಾಷೆಯಲ್ಲಿ ‘ಅಕೆ’ ಎಂದರೆ ಹೊಡೆಯುವ ಚಂದ್ರ ಎಂದು ಅರ್ಥವಿದೆ.
‘ವಿರುಷ್ಕಾ’ ಪೋಸ್ಟ್ಗೆ ಕೋಟಿಗಟ್ಟಲೇ ಲೈಕ್ಸ್.!
ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಈ ವಿಚಾರವನ್ನ ಹಂಚಿಕೊಂಡಿದ್ದೇ ತಂಡ ಸೆನ್ಸೇಷನ್ ಕ್ರಿಯೇಟ್ ಆಯ್ತು. ಕಮೆಂಟ್ಸ್, ಲೈಕ್ಗಳ ಸುರಿಮಳೆಯೆ ಸುರಿಯಿತು. ಇಬ್ಬರ ಅಕೌಂಟ್ ಸೇರಿ ಈ ಒಂದು ಪೋಸ್ಟ್ಗೆ ಒಂದು ಗಂಟೆಯ ಅವಧಿಯಲ್ಲಿ ಕೋಟಿಗೂ ಅಧಿಕ ಮಂದಿ ಈ ಪೋಸ್ಟ್ನ ಲೈಕ್ ಮಾಡಿದ್ರು. ಕಮೆಂಟ್ಸ್ಗಳ ಸುರಿಮಳೆಯೂ ಸುರಿದಿದೆ.
ಕಳೆದ ಕೆಲ ವಾರಗಳ ಹಿಂದೆಯೇ ವಿರಾಟ್ ಕೊಹ್ಲಿಯ ಆಪ್ತ ಗೆಳೆಯ ಎಬಿ ಡಿವಿಲಿಯರ್ಸ್, ಕೊಹ್ಲಿ 2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದ್ರು. ಕೊನೆಗೂ ಎಬಿಡಿ ಅಂದು ನುಡಿದಿದ್ದ ಭವಿಷ್ಯ ನಿಜವಾಗಿದೆ. ಕೊಹ್ಲಿ- ಅನುಷ್ಕಾ ಜೋಡಿ ಸದ್ಯ ವಿಶೇಷ ಸಂತೋಷದಲ್ಲಿ ತೇಲಾಡ್ತಿದೆ. ಅನುಷ್ಕಾ ಹಾಗೂ ಮಗ ಅಕಾಯ್ ಆರೋಗ್ಯವಾಗಿರಲಿ ಅನ್ನೋದೆ ಕೋಟ್ಯಾಂತರ ಭಾರತೀಯರ ಹಾರೈಕೆಯಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ