Advertisment

7 ವರ್ಷ ಪ್ರೀತಿಸಿ ಮದುವೆ, ವಿರಾಟ್ ಕೊಹ್ಲಿ -ಅನುಷ್ಕಾ ಪವರ್​​ಫುಲ್​ ಕಪಲ್.. ಇವರ ಬ್ಯುಸಿನೆಸ್ ಗುಟ್ಟು ಏನು?​

author-image
Bheemappa
Updated On
7 ವರ್ಷ ಪ್ರೀತಿಸಿ ಮದುವೆ, ವಿರಾಟ್ ಕೊಹ್ಲಿ -ಅನುಷ್ಕಾ ಪವರ್​​ಫುಲ್​ ಕಪಲ್.. ಇವರ ಬ್ಯುಸಿನೆಸ್ ಗುಟ್ಟು ಏನು?​
Advertisment
  • ಸ್ಟಾರ್ ಸೆಲಬ್ರಿಟಿಗಳಲ್ಲಿ ವಿರುಷ್ಕಾ ದಂಪತಿಯನ್ನ ಮೀರಿಸೋರಿಲ್ಲ
  • ಎಷ್ಟು ಸಾವಿರ ಕೋಟಿ ರೂಪಾಯಿ ಆಸ್ತಿ ಮಾಡಿದ್ದಾರೆ ಈ ಜೋಡಿ
  • ಅನುಷ್ಕಾಗೆ 2 ಮಕ್ಕಳಿದ್ದರೂ ಮಾರ್ಕೆಟಿಂಗ್​ ಕಂಪನಿಗಳಲ್ಲಿ ಕ್ವೀನ್.!

ವಿರಾಟ್ ಕೊಹ್ಲಿ -ಅನುಷ್ಕಾ ಶರ್ಮಾ ಮೋಸ್ಟ್​​ ಪವರ್​​​​​​​ಫುಲ್​ ಕಪಲ್​​​. ನೇಮ್​ ಅಂಡ್ ಫೇಮ್​​ ಅಂತ ಬಂದ್ರೆ ಈ ಸ್ಟಾರ್ಸ್​ ಕಪಲ್​​​​ ಹೆಸರು ಮುಂಚೂಣಿಯಲ್ಲಿರುತ್ತೆ. ಅಷ್ಟಕ್ಕೂ ಕೊಹ್ಲಿ-ಅನುಷ್ಕಾ ಪವರ್​​​​​ಫುಲ್​ ಕಪಲ್​​ ಅಂತ ಕರೆಸಿಕೊಳ್ತಿರೋದ್ಯಾಕೆ?.

Advertisment

ಕೊಹ್ಲಿ-ಅನುಷ್ಕಾ ಅಲ್ಟಿಮೇಟ್​​ ಪವರ್​​ಫುಲ್​ ಕಪಲ್​​​​​..!

ವಿರುಷ್ಕಾ ಅಂದ್ರೆ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ. ಭಾರತದ ಅಲ್ಟಿಮೇಟ್​​​ ಪವರ್​​ ಕಪಲ್​​​. ಪಾಪ್ಯುಲರ್​​ ಸೆಲಬ್ರಿಟಿ ಜೋಡಿ ಕೂಡ ಹೌದು. ವಿರಾಟ್​ ಕ್ರಿಕೆಟ್​ ಲೋಕಕ್ಕೆ ಕಿಂಗ್​​. ಅನುಷ್ಕಾ ಶರ್ಮಾ ಜನಪ್ರಿಯ ನಟಿ. ಇಬ್ಬರೂ 2017 ರಂದು ಸಪ್ತಪದಿ ತುಳಿದು ಬದುಕಿನ ಸಂಗಾತಿಗಳಾದ್ರು. ಇವರ ಅದ್ಧೂರಿ ಲೈಫ್​ಸ್ಟೈಲ್​ ಎಲ್ಲರ ಕಣ್ಣು ಕುಕ್ಕುತ್ತೆ. 1300 ಕೋಟಿ ಗಳಿಕೆ ಹೊಂದಿರೋ ವಿರುಷ್ಕಾ ದಂಪತಿ, ಮೋಸ್ಟ್​ ಪವರ್​​​​​​​ಫುಲ್​ ಕಪಲ್ ಆಗಿ ಗುರುತಿಸಿಕೊಂಡಿದ್ದಾರೆ. ಅದಕ್ಕೆ ಏನು ಕಾರಣ?.

ಇದನ್ನೂ ಓದಿ:ಕಿಂಗ್ ಕೊಹ್ಲಿ ಸೆಂಚುರಿ ಸಿಡಿಸಿ ಎಷ್ಟು ತಿಂಗಳಾಯಿತು.. ಶತಕ ಸಿಡಿಸುವಲ್ಲಿ ವಿರಾಟ್ ಫೇಲ್​; ಯಾಕೆ?

publive-image

ರೀಸನ್​ ನಂ.1- ಸಪೋರ್ಟಿವ್ ಪಾರ್ಟ್ನರ್

7 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾದ ಕೊಹ್ಲಿ ಹಾಗೂ ಅನುಷ್ಕಾ ನಡುವೆ ತುಂಬಾ ಅನ್ಯೋನ್ಯತೆ ಇದೆ. ಇಬ್ಬರೂ ವೃತ್ತಿಯನ್ನ ಪರಸ್ಪರ ಗೌರವಿಸ್ತಾರೆ. ಜೊತೆಗೆ ಬೆಂಬಲಿಸ್ತಾರೆ. ತಮ್ಮ ಬ್ಯುಸಿದ ಕೆಲಸದ ನಡುವೆ ಅನುಷ್ಕಾ ಅಂಗಳಕ್ಕೆ ಪತಿ ಕೊಹ್ಲಿಗೆ ಚಿಯರ್ ಮಾಡ್ತಾರೆ. ಇನ್ನೂ ಕೊಹ್ಲಿನೂ ಅಷ್ಟೇ, ಕ್ರಿಕೆಟ್​ನಿಂದ ಬಿಡುವು ಸಿಕ್ಕಾಗ ಅನುಷ್ಕಾ ನಟನೆಯ ಚಿತ್ರಗಳನ್ನ ನೋಡಿ ಹುರಿದುಂಬಿಸ್ತಾರೆ. ಇದು ಅವರನ್ನ ಪವರ್​​​​​​​​ ಕಪಲ್​ ಆಗಿ ಗುರುತಿಸುವಂತೆ ಮಾಡಿದೆ.

Advertisment

ರೀಸನ್​ ನಂ.2- ವೃತ್ತಿಪರ ಯಶಸ್ಸು

ವೈಯಕ್ತಿಕವಾಗಿ ಕೊಹ್ಲಿ ಹಾಗೂ ಅನುಷ್ಕಾ ತಮ್ಮ ಕ್ಷೇತ್ರಗಳಲ್ಲಿ ದೊಡ್ಡ ಸಕ್ಸಸ್ ಕಂಡಿದ್ದಾರೆ. ಕೊಹ್ಲಿ ಕ್ರಿಕೆಟ್​ನ ಅನಭಿಷಕ್ತ ದೊರೆ. ವಿಶ್ವಕ್ರಿಕೆಟ್​ನ ಐಕಾನ್​​ ಅನ್ನೋ ಹಣೆಪಟ್ಟಿ ಇದೆ. ಇನ್ನೂ ಅನುಷ್ಕಾ ಬಾಲಿವುಡ್​​​​ನ ಛಾಪು ಮೂಡಿಸಿದ್ದಾರೆ. ಇಬ್ಬರಿಗೂ ಹ್ಯೂಜ್ ಫ್ಯಾನ್​ಬೇಸ್ ಇದೆ. ಅಸಂಖ್ಯಾತ ಫಾಲೋವರ್ಸ್​ ಹೊಂದಿದ್ದು ಹೆಚ್ಚು ಪ್ರಭಾವ ಇದೆ. ಇದು ಕೂಡ ಅವರಿಗೆ ಪವರ್​​​​​ಫುಲ್​ ಕಪಲ್​​​​​​​​​ ಅನ್ನೋ ಪಟ್ಟ ತಂದುಕೊಟ್ಟಿದೆ.

ರೀಸನ್​ ನಂ.3- ಬ್ರ್ಯಾಂಡ್​ ಜನಪ್ರೀಯತೆ..!

ಇನ್ನೂ ಬ್ರ್ಯಾಂಡ್​ ಕೂಡ ವಿರುಷ್ಕಾ ದಂಪತಿ ಪವರ್​​​​​​​​​​ಫುಲ್​​​​ ಕಪಲ್ ಆಗುವಂತೆ ಮಾಡಿದೆ. ಕಿಂಗ್ ಕೊಹ್ಲಿಗೆ ಕ್ರಿಕೆಟ್​ನಲ್ಲಿ ಸಾಕಷ್ಟು ವರ್ಚಸ್ಸಿದೆ. ಹೀಗಾಗಿ ಹೆಸರಾಂತ ಎಂಡೋರ್ಸ್​ಮೆಂಟ್​​ ಕೊಹ್ಲಿ ಜೊತೆ ಒಪ್ಪಂದ ಮಾಡಿಕೊಂಡಿವೆ. ಇದರಿಂದ ವಿರಾಟ್ ನೂರಾರು ಕೋಟಿ ರೂಪಾಯಿ ಗಳಿಸ್ತಾರೆ. ಅತ್ತ ಪತ್ನಿ ಅನುಷ್ಕಾ ಶರ್ಮಾ ಕಮ್ಮಿ ಇಲ್ಲ. ಮದುವೆಯಾಗಿ ಎರಡು ಮಕ್ಕಳಾದ್ರು ಮಾರ್ಕೆಂಟಿಂಗ್​ ಕಂಪನಿಗಳ ಫೇವರಿಟ್ ಆಗಿದ್ದಾರೆ. ಇಬ್ಬರ ಬ್ರ್ಯಾಂಡ್ ವ್ಯಾಲ್ಯೂ ಹೆಚ್ಚಳದ ಜೊತೆ ಪಾಪ್ಯುಲಾರಿಟಿ ಕೂಡ ಹೆಚ್ಚಿದೆ.

ರೀಸನ್​ ನಂ.4- ಇಬ್ಬರ ಫಿಟ್ನೆಸ್ ಛಲ..!

ವಿರುಷ್ಕಾ ದಂಪತಿ ಫಿಟ್ನೆಸ್ ಬಗ್ಗೆ ಗಮನ ಕೊಡ್ತಾರೆ. ಪ್ರತಿನಿತ್ಯ ವ್ಯಾಯಾಮ ಹೊರತಪಡಿಸಿ ದೇಹ ಫಿಟ್​ ಆಗಿರಲು ಜಿಮ್​ನಲ್ಲಿ ಬೆವರು ಹರಿಸ್ತಾರೆ. ಆ ಮೂಲಕ ಯಂಗ್​ಸ್ಟರ್ಸ್​ಗೆ ಇಬ್ಬರೂ ರೋಲ್ ಮಾಡೆಲ್ ಆಗಿದ್ದು, ಯುವಜನತೆ ಇವರಂತೆ ನಾನು ಇರಬೇಕೆಂದು ಬಯಸ್ತಾರೆ. ಕೊಹ್ಲಿ-ಅನುಷ್ಕಾರ ಈ ಫಿಟ್ನೆಸ್ ಛಲ ಅವರನ್ನ ಮತ್ತೊಂದು ಲೆವೆಲ್​​ಗೆ ಕೊಂಡೊಯ್ದಿದೆ.

Advertisment

ಇದನ್ನೂ ಓದಿ: ಕೆಎಲ್ ರಾಹುಲ್​ ದಿಟ್ಟ ಹೋರಾಟ.. ತಂಡದ ಮರ್ಯಾದೆಗೆ ಕ್ರೀಸ್​ ಕಚ್ಚಿನಿಂತ ಕನ್ನಡಿಗ..!

publive-image

ರೀಸನ್​ ನಂ.5- ಆ್ಯಕ್ಟಿವ್ ಲೈಫ್​ಸ್ಟೈಲ್​​​​​​..!

ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ವೃತ್ತಿ ವಿಚಾರಕ್ಕೆ ಬಂದ್ರೆ ತುಂಬಾನೇ ಆ್ಯಕ್ಟಿವ್​​. ಅಂತೆನೆ ಆಫ್​ ದಿ ಫೀಲ್ಡ್​ನಲ್ಲಿ ಕೂಡ. ಬ್ಯುಸಿ ಕೆಲಸದ ನಡುವೆ ಪ್ರತಿ ಕ್ಷಣವನ್ನ ಇಬ್ಬರೂ ಎಂಜಾಯ್ ಮಾಡ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಎಂಗೇಜ್​ ಆಗ್ತಾರೆ. ಒಂದಿಲ್ಲೊಂದು ನ್ಯೂಸ್​​​​​​​​ ಅನ್ನ ಅಭಿಮಾನಿಗಳಿಗೆ ಕೊಟ್ಟು, ಅವರು ಎಂಗೇಜ್ ಆಗುವಂತೆ ಮಾಡ್ತಾರೆ. ವಿರುಷ್ಕಾ ದಂಪತಿ ಈ ಆ್ಯಕ್ಟಿವ್​ನೆಸ್ ಪ್ರಬಲಶಾಲಿ ಜೋಡಿಯಾಗಿ ಬೆಳೆಯುವಂತೆ ಮಾಡಿದೆ.

​ಕೊಹ್ಲಿ- ಅನುಷ್ಕಾ ಪವರ್​​ ಕಪಲ್..

ಕೊಹ್ಲಿ ಹಾಗೂ ಅನುಷ್ಕಾ ಭಾರತದ ಅಲ್ಟಿಮೇಟ್​​​ ಪವರ್​​ ಕಪಲ್​​​ ಆಗಿ ಬೆಳೆದಿದ್ದರ ಹಿಂದೆ ಅವರ ಶ್ರಮ ಅಪಾರವಿದೆ. ಪರಸ್ಪರ ಗೌರವ, ಹೊಂದಾಣಿಕೆ ಹಾಗೂ ಸಹಕಾರ ಇದ್ರೆ ಯಾವ ಸೆಲಬ್ರಿಟಿ ಕಪಲ್​​​​ ಕೂಡ ಪವರ್​​​​​ಫುಲ್ ಕಪಲ್ ಆಗಬಹುದು ಅನ್ನೋದಕ್ಕೆ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾನೇ ಸಾಕ್ಷಿ.

Advertisment

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment