/newsfirstlive-kannada/media/post_attachments/wp-content/uploads/2024/04/Virat-RCB.jpg)
ನಿನ್ನೆಯ ದಿನ ಕೋಲ್ಕತ್ತ ವಿರುದ್ಧ ನಡೆದ ಪಂದ್ಯದಲ್ಲಿ ಆರ್​ಸಿಬಿ ಹೀರೋ ವಿರಾಟ್ ಕೊಹ್ಲಿ ಔಟ್ ಎಂದು ಅಪೈರ್​ ನೀಡಿದ ತೀರ್ಪು ಭಾರೀ ಚರ್ಚೆಗೆ ಗ್ರಾಸವಾಗ್ತಿದೆ. ತೀರ್ಪಿನ ಬಳಿಕ ವಿರಾಟ್ ನಡೆದುಕೊಂಡ ರೀತಿಯ ಬಗ್ಗೆಯೂ ಸರಿ, ತಪ್ಪು ವಾದ-ಪ್ರತಿವಾದ ನಡೆಯುತ್ತಿದೆ.
ಈ ಮಧ್ಯೆ ಕೆಲವು ಕ್ರಿಕೆಟ್ ಅಭಿಮಾನಿಗಳು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್​ ಹೆಸರನ್ನು ಎಳೆದು ತಂದು ಕೊಹ್ಲಿಗೆ ಟಾಂಗ್ ನೀಡ್ತಿದ್ದಾರೆ. ನಿಯಮದ ಪ್ರಕಾರ ಸಚಿನ್ ಔಟ್ ಆಗಿರದಿದ್ದರೂ, ಅಂಪೈರ್ ಅವರು ಮಿಸ್ಟೇಕ್ ಮಾಡಿಕೊಂಡು ಔಟ್ ಎಂದು ತೀರ್ಪು ನೀಡಿದ ವಿಡಿಯೋ ಕ್ಲಿಪ್​ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದಾರೆ. 39 ಬಾರಿ ತೆಂಡುಲ್ಕರ್​ ಔಟ್​ ಆಗಿರದಿದ್ದರೂ ಕ್ರೀಸ್ ಬಿಟ್ಟು ಹೋಗಿದ್ದಾರೆ.
ಇದನ್ನೂ ಓದಿ: ಆ 2 ಓವರ್​​ಗಳಲ್ಲಿ ಪಂದ್ಯದ ಗತಿಯೇ ಬದಲಾಯ್ತು.. RCB ವಿರೋಚಿತ ಸೋಲಿಗೆ 5 ಕಾರಣಗಳು..!
ಯಾವುದೇ ವಿಮರ್ಶೆ ಇಲ್ಲ. ಡಿಆರ್​ಎಸ್ ಇಲ್ಲ. ಯಾರನ್ನೂ ದೂಷಿಸಿಲ್ಲ. ಅಂಪೈರ್ ಜೊತೆ ಯಾವತ್ತೂ ವಾದ ಮಾಡಿಲ್ಲ ಎಂದು ಒಬ್ಬರು ಕ್ಯಾಪ್ಷನ್ ಹಾಕಿದ್ದಾರೆ. ಕೇವಲ ಶತಕಗಳು ಅವರನ್ನು ದೇವರನ್ನಾಗಿಸಿಲ್ಲ, ನಡವಳಿಕೆಗಳು ಕೂಡ ದೇವರನ್ನಾಗಿಸಿವೆ. ಸಚಿನ್ ತೆಂಡುಲ್ಕರ್ 99 ರನ್​ಗಳಿಸಿದ್ದಾಗ ಅಂಪೈರ್​, ತಪ್ಪಾಗಿ ತಿಳಿದು ಔಟ್ ಎಂದು ನೀಡಿದರು. ಆದರೆ ತೆಂಡುಲ್ಕರ್​ ಜಗಳ ಆಡಲಿಲ್ಲ. ಅಂಪೈರ್​ ಅವರನ್ನು ನಿಂದಿಸಲಿಲ್ಲ. ಸಣ್ಣ ನಗು ಬೀರಿ, ಕ್ರೀಸ್​ನಿಂದ ಹೊರ ನಡೆದಿದ್ದರು ಎಂದು ಕ್ರಿಕೆಟ್ ತೆಂಡುಲ್ಕರ್ ಎಂಬ ಎಕ್ಸ್ ಖಾತೆಯಲ್ಲಿ ಬರೆಯಲಾಗಿದೆ.
ಇದನ್ನೂ ಓದಿ: ಪಂದ್ಯ ಮುಗಿದ ಮೇಲೂ ಸುಮ್ಮನಾಗದ ಕೊಹ್ಲಿ, ವಿವಾದಾತ್ಮಕ ತೀರ್ಪಿನ ಬಗ್ಗೆ ಅಂಪೈರ್​ ಜೊತೆ ಮತ್ತೆ ಟಾಕ್ ಫೈಟ್..!
Centuries Doesn't Make Him God His Character Does. !
Sachin Tendulkar at 99 WRONGLY Given OUT by umpire.💔
Didn't Shout or abuse, just smiled & walked away. That's @sachin_rt 🙏🏼#SachinTendulkarpic.twitter.com/lBnb5oRZHw— CrickeTendulkar (@CrickeTendulkar) April 21, 2024
ಆಗಿದ್ದೇನು..?
ಕೋಲ್ಕತ್ತಾ ಈಡನ್​ ಗಾರ್ಡೆನ್​​ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಕೆಕೆಆರ್​ ಬರೋಬ್ಬರಿ 223 ರನ್​ ಬಿಗ್​ ಟಾರ್ಗೆಟ್​ ಕೊಟ್ಟಿತ್ತು. ಕೆಕೆಆರ್​ ನೀಡಿದ ಬೃಹತ್​ ಟಾರ್ಗೆಟ್​ ಬೆನ್ನತ್ತಿದ ಆರ್​​​ಸಿಬಿ ಪರ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮತ್ತು ನಾಯಕ ಫಾಫ್​​ ಡುಪ್ಲೆಸಿಸ್​ ಜೋಡಿ ಓಪನಿಂಗ್​ ಮಾಡಿತ್ತು. ಅಗ್ರೆಸ್ಸಿವ್​ ಆಗಿಯೇ ಬ್ಯಾಟಿಂಗ್​ ಶುರು ಮಾಡಿದ ಕೊಹ್ಲಿ ಕೇವಲ 7 ಬಾಲ್​ನಲ್ಲಿ 2 ಸಿಕ್ಸರ್​, 1 ಫೋರ್​ ಸಮೇತ 18 ರನ್​ ಚಚ್ಚಿ ಔಟಾದರು.
39 Times Sachin Tendulkar was given wrongly out 😳
No Review, No DRS 🤐 Sachin never complained 👏 never argued with Umpires#RCBvsKKR#ViratKohli#KKRvRCBpic.twitter.com/Xnnbl7xXt0— Richard Kettleborough (@RichKettle07) April 21, 2024
ಕೊಹ್ಲಿ ಔಟಾದ ದೊಡ್ಡ ಹೈಡ್ರಾಮ ನಡೆದು ಹೋಗಿದೆ. ಹರ್ಷಿತ್​​ ರಾಣಾ ಎಸೆದ ಬಾಲ್​ನಲ್ಲಿ ಕೊಹ್ಲಿ ಕ್ಯಾಚ್​ ಕೊಟ್ಟರು. ಕೊಹ್ಲಿ, ಹರ್ಷಿತ್​ ರಾಣಾ ಎಸೆದದ್ದು ನೋ ಬಾಲ್​ ಎಂದರೂ ಅಂಪೈರ್​ ಕೇಳಲಿಲ್ಲ. ಬದಲಿಗೆ ಔಟ್​ ಎಂದು ತೀರ್ಪು ನೀಡಿದ್ದರು. ಬಳಿಕ ಕೊಹ್ಲಿ ಅಂಪೈರ್​ ಬಳಿಗೆ ಹೋಗಿ ಜಗಳ ಮಾಡಿದ್ದಾರೆ. ಈ ಜಗಳದ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇಷ್ಟೇ ಅಲ್ಲ ಡ್ರೆಸ್ಸಿಂಗ್​ ರೂಮ್​ಗೆ ಹೋಗುವಾಗ ಕೊಹ್ಲಿ ಕಾಲಲ್ಲಿ ಡಸ್ಟ್​ಬಿನ್​ಗೆ ಒದ್ದು ಹೊರಟರು. ಇನ್ನು ನಿನ್ನೆಯ ಪಂದ್ಯದಲ್ಲಿ ಆರ್​ಸಿಬಿ 1 ರನ್​ಗಳ ವಿರೋಚಿತ ಸೋಲನ್ನು ಕಂಡಿತು.
Not everyone is Sachin but at the same time Virat is Virat at the end of the day! How can you compare 2 players with respect to mindset !!?🤷♂️
— Aham Brahmosmi (@kkspeaks) April 22, 2024
I may have watched all those 39 times Live.
— Piyush Chaudhry (@piyushchaudhry) April 22, 2024
aur apna @imVkohli , crease ke bahar reheke full toss ko no ball bolne ke liye hallah kar diya..
— Jaggi Data-AI Security📈🐱💻🐱👤🚀 (@JaggiAiData) April 22, 2024
But we must admire the respect the great man had for the game. Little reaction and no agitation like current players. GOAT for a reason @sachin_rt
— Rohit Gupta (@Rowhitz) April 22, 2024
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್