ಈಗಾಗಲೇ ಈ ಯುವ ಆಟಗಾರರನ್ನು ಆಡಿಸಿ ಪ್ರಯೋಗ
ಮುಂದಿನ 3 ತಿಂಗಳು ಟೀಮ್ ಇಂಡಿಯಾಗೆ ಬಹಳ ಮುಖ್ಯ
ರನ್ ಮಷಿನ್ ವಿರಾಟ್ ತ್ಯಾಗಮಯಿ ಆಗುತ್ತಿರುವುದು ಏಕೆ..?
ನಂಬರ್- 3 ಸ್ಲಾಟ್.. ಕಿಂಗ್ ಕೊಹ್ಲಿಯ ಫೇವರಿಟ್ ಸ್ಲಾಟ್. ಕ್ರಮಾಂಕ ಮೂರಲ್ಲಿ ರನ್ ಗುಡ್ಡೆ ಹಾಕಿರೋ ಕೊಹ್ಲಿ ಏಷ್ಯಾಕಪ್-ಒನ್ಡೇ ವಿಶ್ವಕಪ್ನಲ್ಲಿ ಸ್ಲಾಟ್ -3 ತ್ಯಾಗ ಮಾಡ್ತಾರಾ? ಕ್ರಿಕೆಟ್ ವಲಯದಲ್ಲಿ ಈ ಬಗ್ಗೆ ಬಿಗ್ ಡಿಬೇಟ್ ನಡೆಯುತ್ತಿದೆ. ಅಷ್ಟಕ್ಕೂ ರನ್ ಮಷಿನ್ ತ್ಯಾಗಮಯಿ ಆಗ್ತಿರೋದಾದ್ರು ಏಕೆ?.
ಮುಂದಿನ 3 ತಿಂಗಳು ಟೀಮ್ ಇಂಡಿಯಾಗೆ ವೆರಿ ಕ್ರೂಷಿಯಲ್. ಆಗಸ್ಟ್-ಸೆಪ್ಟೆಂಬರ್ನಲ್ಲಿ ಏಷ್ಯಾಕಪ್ ನಡೆದ್ರೆ ಅಕ್ಟೋಬರ್-ನವೆಂಬರ್ನಲ್ಲಿ ಏಕದಿನ ವಿಶ್ವಕಪ್ ನಡೆಯಲಿದೆ. ಇದಕ್ಕಾಗಿ ಮೆನ್ ಇನ್ ಬ್ಲೂ ಪಡೆ ಭರ್ಜರಿ ಸಿದ್ಧತೆ ಆರಂಭಿಸಿದೆ. 2 ಬಿಗ್ ಈವೆಂಟ್ಗಳಿಗೆ ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಫಿಟ್ ಆಗದಿದ್ರೆ ಕಿಂಗ್ ಕೊಹ್ಲಿ ತಮ್ಮ ಫೇವರಿಟ್ ಸ್ಲಾಟ್-3 ಅನ್ನ ತ್ಯಾಗ ಮಾಡ್ತಾರಾ ಅನ್ನೋ ಪ್ರಶ್ನೆ ಉದ್ಭವಿಸಿದೆ.
ನಂ.3 ಸ್ಲಾಟ್ ತ್ಯಾಗ ಮಾಡ್ತಾರಾ ಕಿಂಗ್ ಕೊಹ್ಲಿ..?
ಏಷ್ಯಾಕಪ್-ಏಕದಿನ ವಿಶ್ವಕಪ್ ಸನಿಹದಲ್ಲಿ ಕೆ.ಎಲ್ ರಾಹುಲ್ ಹಾಗೂ ಶ್ರೇಯಸ್ ಅಯ್ಯರ್ ಇಂಜುರಿ ಭಾರತಕ್ಕೆ ದೊಡ್ಡ ಸೆಟ್ ಬ್ಯಾಕ್ ಆಗಿದೆ. ಇಬ್ಬರು ಕೀ ಪ್ಲೇಯರ್ಸ್ ಬಿಗ್ ಈವೆಂಟ್ನಲ್ಲಿ ಆಡ್ತಾರಾ ಇಲ್ವೋ ಪ್ರಶ್ನೆ ಕಾಡ್ತಿದೆ. ರಾಹುಲ್ ಹಂಡ್ರೆಡ್ ಪರ್ಸೆಂಟ್ ಫಿಟ್ ಆಗಿದ್ದಾರೆ ಎಂದು ವರದಿಯಾಗಿದೆ. ಆದ್ರೆ ಈ ಬಗ್ಗೆ ಬಿಸಿಸಿಐ ಯಾವುದೇ ಸ್ಪಷ್ಟನೆ ನೀಡಿಲ್ಲ. ಶ್ರೇಯಸ್ ಚೇತರಿಕೆಗೆ ಇನ್ನಷ್ಟು ಸಮಯ ಬೇಕಿದೆ ಎಂದು ಹೇಳಲಾಗ್ತಿದೆ. ಒಂದು ವೇಳೆ ಸ್ಟಾರ್ ಆಟಗಾರರಿಬ್ಬರು ಮಹತ್ವದ ಟೂರ್ನಿಗಳಿಗೆ ಅಲಭ್ಯರಾದ್ರೆ ಕಿಂಗ್ ಕೊಹ್ಲಿಯ ಸ್ಲಾಟ್-3ಗೆ ಕುತ್ತು ಬರಲಿದೆ.
ಇಬ್ಬರು ಫಿಟ್ ಆಗದಿದ್ರೆ ಯಾರು ಬ್ಯಾಕ್ಅಪ್ಸ್..?
ಏಷ್ಯಾಕಪ್-ವಿಶ್ವಕಪ್ಗೂ ರಾಹುಲ್ ಹಾಗೂ ಶ್ರೇಯಸ್ ಫುಲ್ ಫಿಟ್ ಆಗಲಿ ಎಂದು ಇಂಡಿಯನ್ ಟೀಮ್ ಮ್ಯಾನೇಜ್ಮೆಂಟ್ ಪ್ರಾರ್ಥಿಸ್ತಿದೆ. ಹಾಗೊಂದು ವೇಳೆ ಆಗದಿದ್ದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಹೆಡ್ಕೋಚ್ ರಾಹುಲ್ ದ್ರಾವಿಡ್ ಬ್ಯಾಕ್ಅಪ್ ಆಟಗಾರರನ್ನ ರೆಡಿ ಮಾಡಿದ್ದಾರೆ. ವೆಸ್ಟ್ಇಂಡೀಸ್ ಏಕದಿನ ಸರಣಿಯಲ್ಲಿ ಸೂರ್ಯಕುಮಾರ್ ಯಾದವ್ ಹಾಗೂ ಸಂಜು ಸ್ಯಾಮ್ಸನ್ ರನ್ನ ಆಡಿಸಿ ಪ್ರಯೋಗ ಮಾಡಿದ್ದಾರೆ.
ಸ್ಕೈಗೆ ಲೋವರ್ ಆರ್ಡರ್ನಲ್ಲಿ ಆಡಿದ ಅನುಭವಿದೆ. ವಿಂಡೀಸ್ ವಿರುದ್ಧ ಕೊನೆ 2 ಪಂದ್ಯಗಳಲ್ಲಿ ಕ್ರಮಾಂಕ 6 ರಲ್ಲಿ ಆಡಿದ್ರು. ಇನ್ನು ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಸ್ಯಾಮ್ಸನ್ ಒನ್ಡೆ ರೆಕಾರ್ಡ್ ಅದ್ಭುತವಾಗಿದೆ. ನಂ.4 ಅಥವಾ ಅದಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಬ್ಯಾಟ್ ಬೀಸಬಲ್ಲ ಕೆಪಾಸಿಟಿ ಹೊಂದಿದ್ದಾರೆ.
ರಾಹುಲ್-ಶ್ರೇಯಸ್ಗಾಗಿ ತ್ಯಾಗಮಯಿ ಆಗ್ತಾರಾ ವಿರಾಟ್..?
ಒಂದು ವೇಳೆ ರಾಹುಲ್-ಶ್ರೇಯಸ್ ಏಷ್ಯಾಕಪ್ ಟೂರ್ನಿಗೆ ಫಿಟ್ ಆಗದೇ ಹೋದರೆ ಟೀಮ್ ಇಂಡಿಯಾದ ಬ್ಯಾಟಿಂಗ್ ಆರ್ಡರ್ ಕಂಪ್ಲೀಟ್ ಬದಲಾಗಲಿದೆ. ಇಶಾನ್ ಕಿಶನ್ ಆಡಿದ್ರೆ ಕ್ಯಾಪ್ಟನ್ ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಆಗ ಶುಭ್ಮನ್ ಗಿಲ್ 3 ಕ್ರಮಾಂಕದಲ್ಲಿ ಆಡಬೇಕಾಗುತ್ತೆ. ಒಂದು ವೇಳೆ ಮ್ಯಾನೇಜ್ಮೆಂಟ್ ಗಿಲ್ರನ್ನ ಮೂರರಲ್ಲಿ ಆಡಿಸಿದ್ರೆ ಕಿಂಗ್ ಕೊಹ್ಲಿ ಸ್ಲಾಟ್ ಬಿಟ್ಟುಕೊಟ್ಟು ಕೆಳಕ್ರಮಾಂಕದಲ್ಲಿ ಆಡಬೇಕಾಗುತ್ತೆ. ಇದು ಕಷ್ಟವೆನಿಸಿದ್ರೂ ತಂಡಕ್ಕಾಗಿ ಕೊಹ್ಲಿ ಸ್ಲಾಟ್-3 ಅನ್ನ ತ್ಯಾಗ ಮಾಡಲೇಬೇಕಾಗುತ್ತೆ.
ಟೀಮ್ ಇಂಡಿಯಾ ಮುಂದಿರೋ ಬೇರೆ ಆಯ್ಕೆಗಳೇನು..?
ಬದಲಾವಣೆಗೆ ಕೈಹಾಕದೇ ಕೊಹ್ಲಿಯನ್ನ ನಂ.3 ಸ್ಲಾಟ್ನಲ್ಲೇ ಆಡಿಸಿದ್ರೆ ಆಗ ಹಾರ್ದಿಕ್ ಪಾಂಡ್ಯ 4ನೇ ಸ್ಥಾನಕ್ಕೆ ಬಡ್ತಿ ಪಡಿಯಬೇಕು. ವೈಸ್ ಕ್ಯಾಪ್ಟನ್ಗೆ ಐಪಿಎಲ್ ಹಾಗೂ ಭಾರತ ಪರ 4ನೇ ಕ್ರಮಾಂಕದಲ್ಲಿ ಆಡಿದ ಅನುಭವಿದೆ. ರೋಹಿತ್ ಜೊತೆ ಗಿಲ್ ಓಪನ್ ಮಾಡಿದ್ರೆ ಸೂರ್ಯ ಅಥವಾ ಸ್ಯಾಮ್ಸನ್ ಪೈಕಿ ಒಬ್ಬರು ಸ್ಲಾಟ್-6 ರಲ್ಲಿ ಕಣಕ್ಕಿಳಿಬೇಕಾಗುತ್ತೆ.
ರಾಹುಲ್-ಶ್ರೇಯಸ್ ಫಿಟ್ನೆಸ್ ಮೇಲೆ ಕಿಂಗ್ ಕೊಹ್ಲಿಯ ಸ್ಲಾಟ್ ಡಿಸೈಡ್ ಆಗಲಿದೆ. ಮಾಡ್ರನ್ ಕ್ರಿಕೆಟ್ ದೊರೆ ತ್ಯಾಗಮಯಿ ಅನ್ನಿಸಿಕೊಳ್ತರಾ? ಇಲ್ವ ಅನ್ನೋದಕ್ಕೆ ಕೆಲವೇ ದಿನಗಳಲ್ಲಿ ಆನ್ಸರ್ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ