ಕ್ಯಾಪ್ಟನ್ ರೋಹಿತ್ಗೆ ತಲೆನೋವು ಹೆಚ್ಚಿಸಿದೆ ಈ ವಿಚಾರ
ವೆಸ್ಟ್ ಇಂಡೀಸ್ ದಿಗ್ಗಜ ಲಾರಾ ನೀಡಿದ ಸಲಹೆ ಏನು..?
ಜೂನ್ 2 ರಿಂದ ಟಿ-20 ವಿಶ್ವಕಪ್ ಪಂದ್ಯ ಶುರುವಾಗಲಿದೆ
ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾದ ಅಭಿಯಾನ ಆರಂಭಕ್ಕೆ ಒಂದು ತಿಂಗಳ ಬಾಕಿಯಿದೆ. ಟೀಮ್ ಇಂಡಿಯಾದಲ್ಲಿನ ಗೊಂದಲಗಳು ಮಾತ್ರ, ದಿನೇ ದಿನೇ ಹೆಚ್ಚಾಗ್ತಿವೆ. ಅದು ಕೂಡ ವಿರಾಟ್ ಕೊಹ್ಲಿಯ ವಿಚಾರವಾಗಿ.
ಟಿ20 ವಿಶ್ವಕಪ್ ಮಹಾ ಸಮರಕ್ಕೆ ಕೌಂಟ್ಡೌನ್ ಶುರುವಾಗಿದೆ. ಮಹಾ ಸಂಗ್ರಾಮಕ್ಕಾಗಿ ಬಲಿಷ್ಠ ತಂಡಗಳನ್ನೇ ಪ್ರಕಟಿಸಿರುವ 20 ತಂಡಗಳೂ, ಈಗಾಗಲೇ ಚುಟುಕು ಸಮರದ ಅಭ್ಯಾಸದಲ್ಲಿ ನಿರತವಾಗಿವೆ. ಈ ಪೈಕಿ ಟೀಮ್ ಇಂಡಿಯಾ ಕೂಡ ಹೊರತಾಗಿಲ್ಲ. ದಿನದಿಂದ ದಿನಕ್ಕೆ ಗೊಂದಲಗಳು ಮಾತ್ರ ಹೆಚ್ಚಾಗ್ತಿವೆ. ಆದ್ರೀಗ ಟೀಮ್ ಇಂಡಿಯಾದಲ್ಲಿ ಗೊಂದಲಕ್ಕೆ ಕಾರಣವಾಗಿರೋದು ನಂ.3 ಸ್ಲಾಟ್.
ನಂಬರ್.3 ಸ್ಲಾಟ್.. ಇದು ವಿಶ್ವ ಸಾಮ್ರಾಟ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಕ್ರಮಾಂಕ. ಆದ್ರೀಗ ಇದೇ ಬ್ಯಾಟಿಂಗ್ ಕ್ರಮಾಂಕ ಗೊಂದಲದ ಗೂಡಾಗಿದೆ. ಇದಕ್ಕೆಲ್ಲಾ ಕಾರಣ ಟಿ20 ಸ್ಪೆಷಲಿಸ್ಟ್ ಸೂರ್ಯಕುಮಾರ್ ಯಾದವ್.
ಇದನ್ನೂ ಓದಿ:ಜೈಲಿನಿಂದ ಬಂದ ಬೆನ್ನಲ್ಲೇ 10 ಗ್ಯಾರಂಟಿ ಘೋಷಣೆ ಮಾಡಿದ ಕೇಜ್ರಿವಾಲ್.. ಇವೆಲ್ಲ ಉಚಿತ.. ಉಚಿತ..!
3ನೇ ಸ್ಲಾಟ್ ಗೊಂದಲ.. ಈ ಇಬ್ಬರಲ್ಲಿ ಯಾರಿಗೆ ಸ್ಥಾನ..?
ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್.. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಪ್ಲೇಯರ್ಗಳು. ಮ್ಯಾಚ್ ವಿನ್ನರ್ಗಳು. ಆದ್ರೀಗ ಈ ಸ್ಲಾಟ್ನಲ್ಲಿ ಸಕ್ಸಸ್ ಕಂಡಿರುವ ವಿರಾಟ್ ಕೊಹ್ಲಿಯನ್ನೇ ಮುಂದುವರಿಸಬೇಕಾ..? ಇಲ್ಲ ತಂಡದ ದೃಷ್ಟಿಯಿಂದ ಡೆಡ್ಲಿ ಬ್ಯಾಟರ್ ಸೂರ್ಯನಿಗೆ ಬಡ್ತಿ ನೀಡಬೇಕಾ..? ಎಂಬ ಪ್ರಶ್ನೆ ಉದ್ಬವಿಸಿದೆ. ಇದಕ್ಕೆಲ್ಲಾ ಕಾರಣ ಸೂರ್ಯ, ಐಪಿಎಲ್ನಲ್ಲಿ ನೀಡ್ತಿರೋ ಪಾರ್ಫಮೆನ್ಸ್ ಆಗಿದೆ.
ಕ್ಯಾಪ್ಟನ್ ರೋಹಿತ್ ತಲೆನೋವು ಹೆಚ್ಚಿಸಿದ 3ನೇ ಸ್ಲಾಟ್..!
ಐಪಿಎಲ್ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸ್ತಿರುವ ಸೂರ್ಯ, ಪ್ರತಿ ಮ್ಯಾಚ್ನಲ್ಲೂ ಅಸಾಮಾನ್ಯ ಬ್ಯಾಟಿಂಗ್ ನಡೆಸ್ತಿದ್ದಾರೆ. ಎದುರಾಳಿ ತಂಡವನ್ನ ಚಿಂದಿ ಉಡಾಯಿಸ್ತಿದ್ದಾರೆ. ಸೂರ್ಯನ ಆರ್ಭಟಕ್ಕೆ ಎದುರಾಳಿ ಪಡೆಗಳು ಬೆಚ್ಚಿಬಿದ್ದಿವೆ. ಬೌಲರ್ಗಳಂತೂ, ಹೇಗಪ್ಪಾ ಬೌಲಿಂಗ್ ಮಾಡೋದು ಅಂತಾ ತಲೆಕೆಡಿಸಿಕೊಂಡಿದ್ದಾರೆ. ಅದರಲ್ಲೂ ಸನ್ ರೈಸರ್ಸ್ ಎದುರು ಸ್ಪೋಟಕ ಶತಕ ಸಿಡಿಸಿರೋ ಸೂರ್ಯ, 3ನೇ ಕ್ರಮಾಂಕಕ್ಕೆ ಪ್ರಬಲ ಪೈಪೋಟಿಯನ್ನೇ ನೀಡ್ತಿದ್ದಾರೆ. ಆದ್ರೆ, ಇದೇ ಐಪಿಎಲ್ನಲ್ಲಿ ವಿರಾಟ್, ಓಪನರ್ ಆಗಿ ಆಡ್ತಿದ್ದಾರೆ. ಇದು ಸಹಜವಾಗೇ ರೋಹಿತ್ ಶರ್ಮಾರ ತಲೆನೋವು ಹೆಚ್ಚಿಸಿದೆ.
ವಿರಾಟ್ ಕೊಹ್ಲಿ ಕೈ ತಪ್ಪಲಿದ್ಯಾ ನಂ.3 ಸ್ಲಾಟ್..?
ಟೀಮ್ ಇಂಡಿಯಾ ಪರ ವಿರಾಟ್, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ರೆ. ಸೂರ್ಯ 4ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದಾರೆ. ಸಕ್ಸಸ್ ಕೂಡ ಕಂಡಿದ್ದಾರೆ. 2022ರ ಟಿ20 ವಿಶ್ವಕಪ್ ಬಳಿಕ 3ನೇ ಸ್ಲಾಟ್ನಲ್ಲಿ ಬ್ಯಾಟಿಂಗ್ ನಡೆಸಿದ್ದ ಸೂರ್ಯ, ಸಿಂಗಲ್ ಹ್ಯಾಂಡ್ ಆಗಿಯೇ ಮ್ಯಾಚ್ ಗೆಲ್ಲಿಸಿಕೊಡ್ಡಿದ್ದಾರೆ. ಇನ್ಫ್ಯಾಕ್ಟ್. 3ನೇ ಕ್ರಮಾಂಕದಲ್ಲಿ ಆಡಿದ 14 ಇನ್ನಿಂಗ್ಸ್ಗಳಿಂದ 479 ರನ್ ಸಿಡಿಸಿದ್ದಾರೆ. ಈ ಪೈಕಿ 4 ಅರ್ಧಶತಕ, 1 ಶತಕ ದಾಖಲಿಸಿದ್ದಾರೆ. ಹೀಗಾಗಿ ವಿರಾಟ್ ಬದಲಿಯಾಗಿ ಸೂರ್ಯನೇ 3ನೇ ಕ್ರಮಾಂಕದಲ್ಲಿ ಮುಂದುವರಿಯಲಿ ಅನ್ನೋದು ಹಲವರ ಅಭಿಪ್ರಾಯವೂ ಆಗಿದೆ.
ಇದನ್ನೂ ಓದಿ:Heat wave: ರಣ ಬಿಸಿಲಿಗೆ ಯಾರಾದರೂ ಪ್ರಜ್ಞೆತಪ್ಪಿ ಬಿದ್ದರೆ ಯಾವತ್ತೂ ಈ ತಪ್ಪು ಮಾಡಲೇಬೇಡಿ..!
3ನೇ ಸ್ಥಾನದಲ್ಲಿ ಕೊಹ್ಲಿಗಿಂತ ಸೂರ್ಯ ಬೆಸ್ಟ್ ಏಕೆ..?
ಟಿ20 ವಿಶ್ವಕಪ್ನಲ್ಲಿ ಅನುಭವಿ ವಿರಾಟ್ಗಿಂತ ಸೂರ್ಯನೇ 3ನೇ ಸ್ಲಾಟ್ಗೆ ಬೆಸ್ಟ್ ಅನ್ನೋದನ್ನ ಸ್ವತಃ ವಿಂಡೀಸ್ ದಿಗ್ಗಜ ಬ್ರಯಾನ್ ಲಾರಾ ಹೇಳಿದ್ದಾರೆ. ಅಷ್ಟೇ ಅಲ್ಲ.! ಟೀಮ್ ಇಂಡಿಯಾ ಹೆಚ್ಚು ಮ್ಯಾಚ್ಗಳನ್ನ ಗೆಲ್ಲಲು ಸಹಕಾರಿಯಾಗುತ್ತೆ ಅನ್ನೋದನ್ನ ವಿವರಿಸಿದ್ದಾರೆ. ಇದಕ್ಕೆ ಕಾರಣಗಳನ್ನು ನೀಡಿದ್ದಾರೆ.
ಸೂರ್ಯ 3ನೇ ಕ್ರಮಾಂಕಕ್ಕೆ ಏಕೆ..?
ಸೂರ್ಯಕುಮಾರ್ 3ನೇ ಸ್ಲಾಟ್ನಲ್ಲಿ ಬ್ಯಾಟಿಂಗ್ ಮಾಡಬೇಕು. ಯಾಕಂದ್ರೆ, ಸೂರ್ಯ T20 ಮಾದರಿ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿದ್ದಾರೆ. 10ರಿಂದ 15 ಓವರ್ಗಳ ತನಕ ಬ್ಯಾಟಿಂಗ್ ನಡೆಸಿದರೆ, ಪಂದ್ಯ ಏನಾಗುತ್ತೆ ಅನ್ನೋದು ನಿಮಗೂ ತಿಳಿದಿದೆ. ನೀವು ಮೊದಲು ಬ್ಯಾಟಿಂಗ್ ನಡೆಸಿದ್ರೆ, ಸೂರ್ಯ ನಿಮ್ಮನ್ನ ಅಟ್ಯಾಕಿಂಗ್ ಮೂಡ್ನಲ್ಲಿ ಇರಿಸುತ್ತಾರೆ. 2ನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿದ್ರೆ, ಮ್ಯಾಚ್ ಗೆಲ್ಲಿಸುತ್ತಾನೆ. ಹೀಗಾಗಿ 3ನೇ ಕ್ರಮಾಂಕದಲ್ಲಿ ಸೂರ್ಯಗೆ ಬ್ಯಾಟ್ ಮಾಡಲು ಅವಕಾಶ ಮಾಡಿಕೊಡಿ. ಕೊಹ್ಲಿಗೆ 4ನೇ ಕ್ರಮಾಂಕದಲ್ಲಿ ಆಡಲು ಅನುವು ಮಾಡಿಕೊಡಿ. ಟಿ20 ಫಾರ್ಮೆಟ್ನಲ್ಲಿ ಟಾಪ್-3 ಪ್ರಮುಖ ಪಾತ್ರವಹಿಸುತ್ತೆ.
ಬ್ರಿಯನ್ ಲಾರಾ, ವಿಂಡೀಸ್ ದಿಗ್ಗಜ
ಬ್ರಿಯಾನ್ ಲಾರಾ ಹೇಳಿದಂತೆ ಸೂರ್ಯ, ಡೇಂಜರಸ್ ಬ್ಯಾಟರ್.. ಕ್ಷಣಾರ್ಧದಲ್ಲೇ ಪಂದ್ಯಕ್ಕೆ ತಿರುವು ನೀಡ್ತಾರೆ. ಅಷ್ಟೇ ಅಲ್ಲ.! ಟಿ20ಯಲ್ಲಿ ವಿರಾಟ್ ಕೊಹ್ಲಿಗಿಂತ ಬೆಸ್ಟ್ ಪ್ಲೇಯರ್ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಸೂರ್ಯ ಹೆಚ್ಚೆಚ್ಚು ಬಾಲ್ಗಳನ್ನ ಆಡುವುದರಿಂದ ಪಂದ್ಯದ ದಿಕ್ಕೇ ಬದಲಾಗುತ್ತೆ. ಆದ್ರೆ, ಹಲವು ವರ್ಷಗಳಿಂದ 3ನೇ ಸ್ಲಾಟ್ನಲ್ಲಿ ಆಡ್ತಿರುವ ವಿರಾಟ್ ಹಿಂಬಡ್ತಿ ಪಡೆದರೆ, ತಂಡದ ಮೇಲೆ ವ್ಯತಿರಿಕ್ತ ಪರಿಣಾಮವೇ ಬೀಳುತ್ತೆ ಅನ್ನೋದು ಮರೆಯುವಮತಿಲ್ಲ. ಹೀಗಾಗಿ ಈ ವಿಚಾರದಲ್ಲಿ ಟೀಮ್ ಮ್ಯಾನೇಜ್ಮೆಂಟ್ ಎಚ್ಚರಿಕೆಯ ಹೆಜ್ಜೆಯನ್ನೇ ಇಡಬೇಕಿದೆ. ಇಲ್ಲ ಮತ್ತೊಂದು ಸೋಲಿಗೆ ಅಣಿಯಾಗಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್