/newsfirstlive-kannada/media/post_attachments/wp-content/uploads/2024/09/kohli-4.jpg)
ಭಾರತ ಮತ್ತು ಬಾಂಗ್ಲಾ ದೇಶದ ವಿರುದ್ಧ ಮೊದಲ ಟೆಸ್ಟ್​ ಪಂದ್ಯ ನಡೆಯಲು 3 ದಿನ ಬಾಕಿ ಇದೆ. ಸದ್ಯ ರೋಹಿತ್​ ಶರ್ಮಾ ನೇತೃತ್ವದ ಟೀಂ ಇಂಡಿಯಾದ ಚೆನ್ನೈನ ಎಂಎಂ ಚಿದಂಬರಂ ಕ್ರೀಡಾಂಗಣದಲ್ಲಿ ಬೀಡುಬಿಟ್ಟಿದ್ದಾರೆ. ಪಂದ್ಯ ಎದುರಿಸಲು ಅಭ್ಯಾಸ ನಡೆಸುತ್ತಿದ್ದಾರೆ.
ಸುಮಾರು ಒಂದು ತಿಂಗಳ ವಿರಾಮದ ಬಳಿಕ ಟೀಂ ಇಂಡಿಯಾ ಆಟಗಾರರು ಮೈದಾನಕ್ಕೆ ಕಾಲಿಟ್ಟಿದ್ದಾರೆ. ನೂತನ ಕೋಚ್​ ಗೌತಮ್​ ಗಂಭೀರ್​ ನೇತೃತ್ವದಲ್ಲಿ ಟೀಂ ಇಂಡಿಯಾ ಬಾಂಗ್ಲಾ ತಂಡವನ್ನು ಎದುರಿಸಲು ಮುಂದಾಗಿದೆ. ಹೀಗೆ ಅಭ್ಯಾಸದ ವೇಳೆ ವಿರಾಟ್​ ಕೊಹ್ಲಿ ಹೊಡೆತಕ್ಕೆ ಗೋಡೆಯೇ ಒಡೆದು ಹೋದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಕೂಡ ವೈರಲ್​ ಆಗುತ್ತಿದೆ. ಕೊಹ್ಲಿ ಬ್ಯಾಟ್​​ ಬೀಸಿದ ರಭಸಕ್ಕೆ ಚೆಂಡು ಡ್ರೆಸ್ಸಿಂಗ್​ ರೂಮ್​​​ ಬಳಿಯ ಗೋಡೆಗೆ ಬಡಿದಿದೆ. ಪರಿಣಾಮ ಗೋಡೆ ಒಡೆದಿದೆ.
ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಬಾಂಗ್ಲಾ ತಂಡ ಬಾಕಿ ಉತ್ಸುಕತೆಯಲ್ಲಿದೆ. ಬಾಂಗ್ಲಾ ತಂಡವನ್ನು ಎದರಿಸಿದ ಬಳಿಕ ಟೀಂ ಇಂಡಿಯಾ ನ್ಯೂಜಿಲೆಂಡ್​ವಿರುದ್ಧ 3 ಟೆಸ್ಟ್​ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧ 5 ಬಾರ್ಡರ್​​​ ಗವಾಸ್ಕರ್​ ಸರಣಿ ಆಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us