INDvsBAN ದೇಶದ ವಿರುದ್ಧ ಮೊದಲ ಟೆಸ್ಟ್ ಪಂದ್ಯ
ಚಿದಂಬರಂ ಕ್ರೀಡಾಂಗಣದಲ್ಲಿ ಬೀಡುಬಿಟ್ಟ ಟೀಂ ಇಂಡಿಯಾ
ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ರೋಹಿತ್ ಪಡೆ ರೆಡಿ
ಭಾರತ ಮತ್ತು ಬಾಂಗ್ಲಾ ದೇಶದ ವಿರುದ್ಧ ಮೊದಲ ಟೆಸ್ಟ್ ಪಂದ್ಯ ನಡೆಯಲು 3 ದಿನ ಬಾಕಿ ಇದೆ. ಸದ್ಯ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾದ ಚೆನ್ನೈನ ಎಂಎಂ ಚಿದಂಬರಂ ಕ್ರೀಡಾಂಗಣದಲ್ಲಿ ಬೀಡುಬಿಟ್ಟಿದ್ದಾರೆ. ಪಂದ್ಯ ಎದುರಿಸಲು ಅಭ್ಯಾಸ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕೊಹ್ಲಿ ಸೀಕ್ರೆಟ್ ರಿವೀಲ್ ಮಾಡಿದ ಮಾಜಿ ಕ್ರಿಕೆಟರ್.. ವಿರಾಟ್ ಫ್ಲೈಟ್ನಲ್ಲಿ ಏನ್ ಮಾಡ್ತಿದ್ರು?
ಸುಮಾರು ಒಂದು ತಿಂಗಳ ವಿರಾಮದ ಬಳಿಕ ಟೀಂ ಇಂಡಿಯಾ ಆಟಗಾರರು ಮೈದಾನಕ್ಕೆ ಕಾಲಿಟ್ಟಿದ್ದಾರೆ. ನೂತನ ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ಟೀಂ ಇಂಡಿಯಾ ಬಾಂಗ್ಲಾ ತಂಡವನ್ನು ಎದುರಿಸಲು ಮುಂದಾಗಿದೆ. ಹೀಗೆ ಅಭ್ಯಾಸದ ವೇಳೆ ವಿರಾಟ್ ಕೊಹ್ಲಿ ಹೊಡೆತಕ್ಕೆ ಗೋಡೆಯೇ ಒಡೆದು ಹೋದ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಕೂಡ ವೈರಲ್ ಆಗುತ್ತಿದೆ. ಕೊಹ್ಲಿ ಬ್ಯಾಟ್ ಬೀಸಿದ ರಭಸಕ್ಕೆ ಚೆಂಡು ಡ್ರೆಸ್ಸಿಂಗ್ ರೂಮ್ ಬಳಿಯ ಗೋಡೆಗೆ ಬಡಿದಿದೆ. ಪರಿಣಾಮ ಗೋಡೆ ಒಡೆದಿದೆ.
ಇದನ್ನೂ ಓದಿ: KL ರಾಹುಲ್, ಪಡಿಕ್ಕಲ್, ಮನೀಶ್ ಅಲ್ಲ; ಆರ್ಸಿಬಿ ತಂಡಕ್ಕೆ ಸ್ಟಾರ್ ಕನ್ನಡಿಗರ ಎಂಟ್ರಿ!
ಪಾಕಿಸ್ತಾನವನ್ನು ಸೋಲಿಸಿದ ಬಳಿಕ ಬಾಂಗ್ಲಾ ತಂಡ ಬಾಕಿ ಉತ್ಸುಕತೆಯಲ್ಲಿದೆ. ಬಾಂಗ್ಲಾ ತಂಡವನ್ನು ಎದರಿಸಿದ ಬಳಿಕ ಟೀಂ ಇಂಡಿಯಾ ನ್ಯೂಜಿಲೆಂಡ್ವಿರುದ್ಧ 3 ಟೆಸ್ಟ್ ಸರಣಿ ಮತ್ತು ಆಸ್ಟ್ರೇಲಿಯಾ ವಿರುದ್ಧ 5 ಬಾರ್ಡರ್ ಗವಾಸ್ಕರ್ ಸರಣಿ ಆಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ