newsfirstkannada.com

×

VIDEO: ಹಲೋ.. ಹಲೋ.. ಅನುಷ್ಕಾ.. ಮೈದಾನದಿಂದ ಪತ್ನಿಗೆ ವಿಡಿಯೋ ಕರೆ ಮಾಡಿ ಸಂಭ್ರಮಿಸಿದ ಕೊಹ್ಲಿ

Share :

Published March 26, 2024 at 8:17am

Update March 26, 2024 at 8:23am

    ಮೊದಲ ಗೆಲುವಿನ ಸಂತಸದಲ್ಲಿ ಪತ್ನಿ ಅನುಷ್ಕಾಗೆ ವಿಡಿಯೋ ಕರೆ ಮಾಡಿದ ಕೊಹ್ಲಿ

    ಪತ್ನಿ ಅನುಷ್ಕಾ ಶರ್ಮಾಗೆ ಕರೆ ಮಾಡಿದ ವಿರಾಟ್​​ ಕೊಹ್ಲಿ ಏನಂದ್ರು ಗೊತ್ತಾ?

    ವಿಡಿಯೋ ಕರೆಯಲ್ಲಿ ಮಗಳ ಜೊತೆಗೂ ಮಾತನಾಡಿದ ವಿರಾಟ್​ ಕೊಹ್ಲಿ

ಮೊದಲ ಪಂದ್ಯದಲ್ಲಿ ಸೋಲೊಪ್ಪಿಕೊಂಡ ಆರ್​ಸಿಬಿ 2ನೇ ಪಂದ್ಯದಲ್ಲಿ ಅದ್ಭುತ ಜಯ ಸಾಧಿಸಿದೆ. ತವರಿನಲ್ಲೇ 4 ವಿಕೆಟ್​ಗಳ ರೋಚಕ ಜಯಕ್ಕೆ ಸಾಕ್ಷಿಯಾಗಿದೆ. ಈ ಸಂತಸದ ಸಮಯವನ್ನು ಹಂಚಿಕೊಳ್ಳಲು ಕಿಂಗ್​ ಕೊಹ್ಲಿ ಮೈದಾನದಿಂದಲೇ ಅನುಷ್ಕಾಗೆ ವಿಡಿಯೋ ಕರೆ ಮಾಡಿದ್ದಾರೆ. ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಪಂಜಾಬಿಗರ ವಿರುದ್ಧ ವಿರಾಟ್ ನಿನ್ನೆ ಅದ್ಭುತ ಪ್ರದರ್ಶನ ತೋರಿಸಿದ್ದಾರೆ. ಅರ್ಧ ಶತಕ ದಾಟಿ ಶತಕ ದಾರಿ ಹಿಡಿಯಲು ಹೊರಟಿದ್ದರು. ಆದರೆ ಹರ್ಷಲ್​ ಪಟೇಲ್​ ಎಸೆತಕ್ಕೆ ಬ್ಯಾಟ್​ ಬೀಸಲು ಹೋಗಿ ಕ್ಯಾಚ್​ ನೀಡಿ ಔಟ್​ ಆದರು. ಆದರೆ ಅಷ್ಟರಲ್ಲಾಗಲೇ ಕೊಹ್ಲಿ 49 ಎಸೆತಗಳನ್ನು ಎದುರಿಸಿ 11 ​ ​ಬೌಂಡರಿ ಸೇರಿ, 2 ಸಿಕ್ಸ್​ ಬಾರಿಸುವ ಮೂಲಕ 77 ರನ್​ ಚಚ್ಚಿದ್ದರು.

ಕೊಹ್ಲಿ ಔಟ್​​ ಆದ ಬಳಿಕ ದಿನೇಶ್​ ಕಾರ್ತಿಕ್​ ತಂಡವನ್ನು ಜಯದ ಪಥಕ್ಕೆ ಕೊಂಡೊಯ್ದರು. ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ನಾನು ಫಿನಿಷರ್ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಕೊನೆಯ ಎರಡು ಬಾಲಗ್​ನಲ್ಲಿ ಸಿಕ್ಸ್​, ಫೋರ್​ ಬಾಋಇಸುವ ಮೂಲಕ ಆರ್​ಸಿಬಿ ಮೊದಲ ಜಯ ತಂದುಕೊಡಲು ಸಾಕ್ಷಿಯಾದರು.

ಜಯ ಸಿಕ್ಕಂತೆ ಮೈದಾನಕ್ಕಿಳಿದ ಕೊಹ್ಲಿ

ಜಯದ ಸಿಕ್ಕಂತೆ ಮೈದಾನಕ್ಕಿಳಿದ ಕೊಹ್ಲಿ ಸಂತಸದಲ್ಲಿ ತೇಲಾಡಿದ್ದಾರೆ. ಆಟಗಾರರನ್ನು ಅಭಿನಂದಿಸಿದ್ದಾರೆ. ಮೊದಲ ಜಯದ ಜೊತೆಗೆ ಖುಷಿಯಲ್ಲಿದ್ದ ಕೊಹ್ಲಿ ಮೈದಾನದಲ್ಲಿ ನಿಂತುಕೊಂಡು ಪತ್ನಿ ಅನುಷ್ಕಾಗೆ ಕರೆ ವಿಡಿಯೋ ಕರೆ ಮಾಡಿದ್ದಾರೆ.

ಇದನ್ನೂ ಓದಿ: VIDEO: ಏಕಾಏಕಿ ಮೈದಾನಕ್ಕೆ ನುಗ್ಗಿದ RCB ಅಭಿಮಾನಿ; ಕೊಹ್ಲಿ ಕಾಲು ಹಿಡಿದು ಹುಚ್ಚಾಟ!

ಅನುಷ್ಕಾ ಶರ್ಮಾಗೆ ವಿಡಿಯೋ ಕರೆ ಮಾಡಿದ ಕಿಂಗ್​ ಕೊಹ್ಲಿ ಪ್ಲೈನ್​ ಕಿಸ್​ ಕೊಡುವ ದೃಶ್ಯ ಕೂಡ ಅಭಿಮಾನಿಗಳ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೊತೆಗೆ ಮಗಳೊಂದಿಗೆ ಕೊಹ್ಲಿ ವಿಡಿಯೋ ಕರೆಯಲ್ಲಿ ಮಾತನಾಡಿದಂತೆ ಘೋಚರಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಹಲೋ.. ಹಲೋ.. ಅನುಷ್ಕಾ.. ಮೈದಾನದಿಂದ ಪತ್ನಿಗೆ ವಿಡಿಯೋ ಕರೆ ಮಾಡಿ ಸಂಭ್ರಮಿಸಿದ ಕೊಹ್ಲಿ

https://newsfirstlive.com/wp-content/uploads/2024/03/Kohli-5.jpg

Load More