ವಿರಾಟ್ ಕೊಹ್ಲಿ ಮ್ಯಾರೆಜ್ ಸಿಕ್ರೇಟ್ ರಿವೀಲ್
ಬಾಲ್ಯದಲ್ಲಿ ವಿರಾಟ್ ಕೊಹ್ಲಿಗೆ ಎರಡು ಆಸೆ
ಕೊಟ್ಟ ಮಾತಿನಂತೆ ನಡೆದುಕೊಂಡ ಕಿಂಗ್ ಕೊಹ್ಲಿ
ವಿರಾಟ್ ಕೊಹ್ಲಿ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾರನ್ನ ವಿವಾಹವಾಗಿರೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಕೊಹ್ಲಿ ಮದುವೆಯಾದ್ರೆ ಹಿರೋಯಿನ್ ಅನ್ನೇ ಮದುವೆಯಾಗ್ತೀನಿ ಅಂತಾ ಕ್ರಿಕೆಟ್ ಫೀಲ್ಡ್ಗೆ ಇಳಿಯೋಕೆ ಮುನ್ನವೇ ಕನಸು ಕಂಡಿದ್ರು.
ಟೀಮ್ ಇಂಡಿಯಾ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಜಗತ್ತನ್ನೇ ಗೆದ್ದಿರುವ ವೀರ. ತನ್ನ ಮನಮೋಹಕ ಆಟದಿಂದ ವಿಶ್ವ ಕ್ರಿಕೆಟ್ ಲೋಕದ ಸುಲ್ತಾನನ ಪಟ್ಟಕ್ಕೆ ಹೇಗೆ ಏರಿದ್ದಾರೋ ಹಾಗೆ ತನ್ನ ಮನಮೋಹಕ ಆಟದಿಂದಲೇ ಅಸಂಖ್ಯ ಅಭಿಮಾನಿಗಳ ಮನವನ್ನೂ ಕದ್ದಿದ್ದಾರೆ. ಕೊಹ್ಲಿಯನ್ನು ಇಷ್ಟ ಪಡೋ ಮಹಿಳಾ ಮಣಿಗಳಿಗೆ ಲೆಕ್ಕವೇ ಇಲ್ಲ. ಕೊಹ್ಲಿ ಕ್ಲೀನ್ ಬೋಲ್ಡ್ ಆಗಿದ್ದು ಮಾತ್ರ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಗೆ. ಕೊಹ್ಲಿ ಅನುಷ್ಕಾರನ್ನ ಲವ್ ಮಾಡಿ ಮದುವೆಯಾಗಿ ಈಗ ಮಗುವೂ ಆಗಿದೆ. ಇದೀಗ ಮ್ಯಾರೇಜ್ ಸೀಕ್ರೆಟ್ ರಿವೀಲ್ ಆಗಿದ್ದು, ಚಿಕ್ಕ ವಯಸ್ಸಿನಲ್ಲಿ ಕೊಹ್ಲಿ ಕಂಡಿದ್ದ ಕನಸೊಂದು ಎಲ್ಲರ ಗಮನ ಸೆಳೆದಿದೆ.
ಬಾಲ್ಯದಲ್ಲಿ ವಿರಾಟ್ ಕೊಹ್ಲಿಗೆ 2 ಆಸೆಗಳಿದ್ವಂತೆ. ಒಂದು ದೊಡ್ಡ ಕ್ರಿಕೆಟರ್ ಆಗಬೇಕು ಅನ್ನೋದಾದ್ರೆ, ಇನ್ನೊಂದು ಹೀರೋಯಿನ್ನ ಮದುವೆಯಾಗಬೇಕು ಅನ್ನೋದು ಇನ್ನೊಂದು. ಬಾಲ್ಯದಲ್ಲಿ ಒಂದು ದಿನ ಮದನ್ ಲಾಲ್ ಕ್ರಿಕೆಟ್ ಅಕಾಡೆಮಿಯ ಬಳಿ ಅಭ್ಯಾಸ ನಡೆಸುತ್ತಿದ್ದ ವೇಳೆ, ಯಾವುದೋ ಸಿನಿಮಾದ ಹೀರೋಯಿನ್ನ ದೊಡ್ಡ ಪೋಸ್ಟರ್ ಅಂಟಿಸಿದ್ದರಂತೆ. ಅದನ್ನ ನೋಡಿದ ಕೊಹ್ಲಿ, ಅಲ್ಲಿದ್ದ ಒಬ್ಬರಿಗೆ ನಾನು ಮುಂದೆ ದೊಡ್ಡ ಕ್ರಿಕೆಟರ್ ಆದ ಬಳಿಕ ದೊಡ್ಡ ಹಿರೋಯಿನ್ನ ಮದುವೆಯಾಗ್ತೀನಿ ಅಂದಿದ್ರಂತೆ.
ಅಂದು ಹೇಳಿದ ಮಾತಿನಂತೆ ಕೊಹ್ಲಿ ಇಂದು, ವಿಶ್ವದ ಶ್ರೇಷ್ಠ ಕ್ರಿಕೆಟರ್ ಕೂಡ ಆಗಿದ್ದಾರೆ. ಬಾಲಿವುಡ್ ಬೆಡಗಿ ಅನುಷ್ಕಾರನ್ನ ಮದುವೆಯಾಗಿದ್ದಾರೆ. ಕನಸು ಕಾಣೋದು ಮಾತ್ರವಲ್ಲ. ಹಾರ್ಡ್ವರ್ಕ್, ಡೆಡಿಕೇಶನ್, ಡಿಟರ್ಮಿನೇಶನ್ ಇದ್ರೆ, ಯಾವ ಕನಸನ್ನಾದ್ರೂ ನನಸು ಮಾಡಿಕೊಳ್ಳಬಹುದು ಅನ್ನೋದಕ್ಕೆ ಕೊಹ್ಲಿ ಬೆಸ್ಟ್ ಎಕ್ಸಾಂಪಲ್.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್