ಕೊಹ್ಲಿ ಹೊಸ ಅವತಾರಕ್ಕೆ ಫ್ಯಾನ್ಸ್ ಬಹುಪರಾಕ್
ಕೊಹ್ಲಿ ಬ್ಯಾಟಿಂಗ್ ಅಪ್ರೋಚ್ ಕಂಪ್ಲೀಟ್ ಚೇಂಜ್
180 + ಸ್ಟ್ರೈಕ್ರೇಟ್ನಲ್ಲಿ ವಿರಾಟ್ ರನ್ ಭರಾಟೆ
ಸುದೀರ್ಘ ಸಮಯದ ಬಳಿಕ ಕಿಂಗ್ ಕೊಹ್ಲಿ ಟಿ20 ತಂಡಕ್ಕೆ ಮರಳಿದ್ದಾರೆ. ಎಲ್ಲರಂತೆ ಸಾಮಾನ್ಯವಾಗಿ ತಂಡಕ್ಕೆ ಕಮ್ಬ್ಯಾಕ್ ಮಾಡಿಲ್ಲ. ಹೊಸ ಅವತಾರದೊಂದಿಗೆ ಎಂಟ್ರಿಕೊಟ್ಟಿದ್ದಾರೆ. ವಿರಾಟ್ರ ಹೊಸ ಅವತಾರ ಕಂಡು ಫ್ಯಾನ್ಸ್ ಬೆಕ್ಕಸ ಬೆರಗಾಗಿದ್ದಾರೆ.
T20 ವಿಶ್ವಕಪ್ ಮುನ್ನ ಕೊಹ್ಲಿ ಹೊಸ ಅವತಾರ..!
ಟಿ20 ವಿಶ್ವಕಪ್ ಆರಂಭಕ್ಕೆ ಇನ್ನೂ ಜಸ್ಟ್ ಐದು ತಿಂಗಳಷ್ಟೇ ಬಾಕಿ ಇದೆ. ಮಿನಿ ವಿಶ್ವಕಪ್ ಗೆಲ್ಲೋದು ಎಲ್ಲಾ ತಂಡಗಳಿಗೆ ಪ್ರತಿಷ್ಠೆಯ ವಿಚಾರ. ಆಟಗಾರರಿಗೂ ಅಷ್ಟೇ. ಗ್ಲೋಬಲ್ ಇವೆಂಟ್ ಕಿಂಗ್ ಅನ್ನಿಸಿಕೊಳ್ಳಬೇಕು ಅನ್ನೋದು ಪ್ರತಿಯೊಬ್ಬ ಆಟಗಾರನ ಬಿಗ್ ಡ್ರೀಮ್ ಕೂಡ ಆಗಿರುತ್ತೆ. ಅಂತಹದೇ ಮಹಾದಾಸೆ ಹೊಂದಿರೋ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್ ಮುನ್ನ ಹೊಸ ಅವತಾರವೆತ್ತಿದ್ದಾರೆ. ರನ್ ಮಷೀನ್ ಹೊಸ ಅವತಾರ ಕಂಡು ಫ್ಯಾನ್ಸ್ ದಂಗಾಗಿ ಹೋಗಿದ್ದಾರೆ.

ಕಿಂಗ್ ಕೊಹ್ಲಿ 14 ತಿಂಗಳ ಟಿ20 ಕ್ರಿಕೆಟ್ಗೆ ಮರಳಿದ್ದಾರೆ. ಅದು ಹೊಸ ಅವತಾರೊಂದಿಗೆ. ಹಿಂದೆಂದೂ ಕೊಹ್ಲಿಯನ್ನ ಈ ಅವತಾರದಲ್ಲಿ ನೋಡಿಯೇ ಇರ್ಲಿಲ್ಲ. ಅಂತಹದೊಂದು ಹೊಸ ಅವತಾರವನ್ನು ಅಫ್ಘಾನಿಸ್ತಾನ ಎದುರಿನ ಕಮ್ಬ್ಯಾಕ್ ಪಂದ್ಯದಲ್ಲಿ ಎತ್ತಿದ್ರು. ಕೊಹ್ಲಿಯ ಬ್ಯಾಟಿಂಗ್ ಅಪ್ರೋಚ್ ಕಂಡು ಕ್ರಿಕೆಟ್ ಲೋಕವೇ ಆಶ್ಚರ್ಯ ಚಕಿತಗೊಂಡಿತ್ತು.
ಇಂದೋರ್ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ನೋಡಿದವರಿಗೆ ಇದರ ಅನುಭವ ಆಗಿರುತ್ತೆ. 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೊಹ್ಲಿಯ ಬ್ಯಾಟಿಂಗ್ ಅಪ್ರೋಚ್ ಕಂಪ್ಲೀಟ್ ಬದಲಾಗಿತ್ತು. ಆರಂಭದಲ್ಲಿ ಕಾದು ಆಡುವ ಕೊಹ್ಲಿ ಇಂದೋರ್ನಲ್ಲಿ ಮೊದಲ ಎಸೆತದಿಂದಲೇ ಆಕ್ರಮಣಕಾರಿ ಆಟಕ್ಕಿಳಿದ್ರು. ಕಾಯುವಿಕೆಗೆ ಚಾನ್ಸೇ ಕೊಡ್ಲಿಲ್ಲ. 180 ಫ್ಲಸ್ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿ ಟಿ20 ಕ್ರಿಕೆಟ್ನ ಅಸಲಿ ಆಟವಾಡಿದ್ರು.
ಕಮ್ಬ್ಯಾಕ್ ಪಂದ್ಯದಲ್ಲಿ ಕೊಹ್ಲಿ..!
ಇಂದೋರ್ ಪಂದ್ಯದಲ್ಲಿ ಆಕ್ರಮಣಕಾರಿ ಆಟವಾಡಿದ ಕೊಹ್ಲಿ 16 ಎಸೆತಗಳನ್ನು ಎದುರಿಸಿ 29 ರನ್ ಬಾರಿಸಿದರು. 181.25ರ ಬ್ಯಾಟಿಂಗ್ ಸ್ಟ್ರೈಕ್ರೇಟ್ ಎಲ್ಲರನ್ನೂ ದಂಗು ಬಡಿಸಿತ್ತು. 2022ರ ಟಿ20 ವಿಶ್ವಕಪ್ನಲ್ಲಿ ಅತ್ಯದ್ಭುತ ಆಟವಾಡಿದ ಕೊಹ್ಲಿ 296 ರನ್ ಗಳಿಸಿ ಟೂರ್ನಮೆಂಟ್ ಆಫ್ ದಿ ಪ್ಲೇಯರ್ ಅನ್ನಿಸಿಕೊಂಡ್ರು. ಆದರೂ ಟೀಕೆ ತಪ್ಪಲಿಲ್ಲ. 136.40ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ್ದಕ್ಕೆ ಟೀಕಾಕಾರಿಗೆ ಆಹಾರವಾಗಿದ್ರು. ಈಗ ಅಗ್ರೆಸ್ಸಿವ್ ಅಪ್ರೋಚ್ ಮೂಲಕ ಎಲ್ಲರಿಗೂ ಆನ್ಸರ್ ಕೊಟ್ಟಿದ್ದಾರೆ.
ಕಿಂಗ್ ಕೊಹ್ಲಿ ಸ್ಟ್ರೈಕ್ರೇಟ್ ಹೆಚ್ಚಿಸಿಕೊಂಡಿದ್ದೇಕೆ?
ಸುದೀಘ ಸಮಯ ಕೊಹ್ಲಿ ತಂಡಕ್ಕೆ ಕಮ್ಬ್ಯಾಕ್ ಮಾಡಿರೋ ಕೊಹ್ಲಿ ಟಿ20 ವಿಶ್ವಕಪ್ ಮೇಲೆ ಕಣ್ಣಿಟ್ಟಿದ್ದಾರೆ. ಆದರೆ ಸ್ಥಾನ ಖಾತರಿಯಿಲ್ಲ. ಯಾಕಂದ್ರೆ ತಂಡದಲ್ಲಿ ಕಾಂಪಿಟೇಶನ್ ಹೆಚ್ಚಿದೆ. ಯಂಗ್ಸ್ಟರ್ಸ್ ಆಕ್ರಮಣಕಾರಿ ಆಟವಾಡಿ ಮಿಂಚು ಹರಿಸ್ತಿದ್ದಾರೆ. ಯಾವಾಗ ಬೇಕಾದ್ರೂ ಕೊಹ್ಲಿ ಸ್ಥಾನಕ್ಕೆ ಕುತ್ತು ಬರಬಹುದು. ಇದನ್ನರಿತ ವಿರಾಟ್ ಕಂಪ್ಲೀಟ್ ಬ್ಯಾಟಿಂಗ್ ಅಪ್ರೋಚ್ ಬದಲಿಸಿಕೊಂಡಿದ್ದಾರೆ. ಕಿಂಗ್ ಕೊಹ್ಲಿ ಬ್ಯಾಟಿಂಗ್ ಅಪ್ರೋಚ್ ಬದಲಾವಣೆ ತಂಡಕ್ಕೆ ಅಗತ್ಯವಾಗಿತ್ತು. ತಡವಾದ್ರು ವಿರಾಟ್ ಎಚ್ಚೆತ್ತುಕೊಂಡಿದ್ದಾರೆ. ಆಕ್ರಮಣಕಾರಿ ಆಟವನ್ನ ಮುಂದುವರಿಸಿದ್ದೇ ಆದರೆ ತಂಡದ ಡೇಂಜರಸ್ ಆಟಗಾರನಾಗಿ ಹೊರಹೊಮ್ಮುವುದರಲ್ಲಿ ಯಾವುದೇ ಅನುಮಾನವಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್