newsfirstkannada.com

ಪಂದ್ಯ ಮುಗಿದ ಮೇಲೂ ಸುಮ್ಮನಾಗದ ಕೊಹ್ಲಿ, ವಿವಾದಾತ್ಮಕ ತೀರ್ಪಿನ ಬಗ್ಗೆ ಅಂಪೈರ್​ ಜೊತೆ ಮತ್ತೆ ಟಾಕ್ ಫೈಟ್..!

Share :

Published April 22, 2024 at 7:50am

    ನಿನ್ನೆಯ ಪಂದ್ಯದಲ್ಲಿ ಆರ್​ಸಿಬಿಗೆ ವಿರೋಚಿತ ಸೋಲು

    ಕೊಹ್ಲಿ ಔಟ್ ಅಲ್ಲದಿದ್ದರೂ ಔಟ್ ಎಂದು ತೀರ್ಪು ಕೊಟ್ಟ ಅಂಪೈರ್

    ಅಂಪೈರ್ ತೀರ್ಪಿನ ಬಗ್ಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ ಕೊಹ್ಲಿ

ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ಸಂಬಂಧಿಸಿದ ಅಂಪೈರ್ ಅವರ ವಿವಾದಾತ್ಮಕ ತೀರ್ಪು ಭಾರೀ ಚರ್ಚೆಗೆ ಕಾರಣವಾಗ್ತಿದೆ. ಮೈದಾನದಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ್ದ ಕಿಂಗ್ ಕೊಹ್ಲಿ, ಪೆವಿಲಿಯನ್​​ಗೆ ಬಂದ ಮೇಲೆಯೂ ಅಂಪೈರ್ ವಿರುದ್ಧ ಕಿಡಿ ಕಾರುತ್ತ ಕೂತಿದ್ದರು. ಇದೀಗ ಪಂದ್ಯ ಮುಗಿದ ಮೇಲೆಯೂ ಕೊಹ್ಲಿ ಅಂಪೈರ್ ಜೊತೆ ಮಾತುಕತೆ ನಡೆಸಿ, ತೀರ್ಪು ಸರಿ ಇಲ್ಲ ಎಂದು ಹೇಳಿದ್ದಾರೆ. ಆ ವಿಡಿಯೋ ಇದಿಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಿನ್ನೆ ಆಗಿದ್ದೇನು..?
ಕೋಲ್ಕತ್ತಾ ಈಡನ್​ ಗಾರ್ಡೆನ್​​ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಕೆಕೆಆರ್​ ಬರೋಬ್ಬರಿ 223 ರನ್​ ಬಿಗ್​ ಟಾರ್ಗೆಟ್​ ಕೊಟ್ಟಿತ್ತು. ಕೆಕೆಆರ್​ ನೀಡಿದ ಬೃಹತ್​ ಟಾರ್ಗೆಟ್​ ಬೆನ್ನತ್ತಿದ ಆರ್​​​ಸಿಬಿ ಪರ ಮಾಜಿ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಮತ್ತು ನಾಯಕ ಫಾಫ್​​ ಡುಪ್ಲೆಸಿಸ್​ ಜೋಡಿ ಓಪನಿಂಗ್​ ಮಾಡಿತ್ತು. ಅಗ್ರೆಸ್ಸಿವ್​ ಆಗಿಯೇ ಬ್ಯಾಟಿಂಗ್​ ಶುರು ಮಾಡಿದ ಕೊಹ್ಲಿ ಕೇವಲ 7 ಬಾಲ್​ನಲ್ಲಿ 2 ಸಿಕ್ಸರ್​, 1 ಫೋರ್​ ಸಮೇತ 18 ರನ್​ ಚಚ್ಚಿ ಔಟಾದರು.

ಇದನ್ನೂ ಓದಿ:ಸೇಡು ತೀರಿಸಿಕೊಂಡ ಗುಜರಾತ್ ಟೈಟಾನ್ಸ್; ಹೀರೋ ಆದ ಸಾಯಿ ಕಿಶೋರ್

ಕೊಹ್ಲಿ ಔಟಾದ ದೊಡ್ಡ ಹೈಡ್ರಾಮ ನಡೆದು ಹೋಗಿದೆ. ಹರ್ಷಿತ್​​ ರಾಣಾ ಎಸೆದ ಬಾಲ್​ನಲ್ಲಿ ಕೊಹ್ಲಿ ಕ್ಯಾಚ್​ ಕೊಟ್ಟರು. ಕೊಹ್ಲಿ, ಹರ್ಷಿತ್​ ರಾಣಾ ಎಸೆದದ್ದು ನೋ ಬಾಲ್​ ಎಂದರೂ ಅಂಪೈರ್​ ಕೇಳಲಿಲ್ಲ. ಬದಲಿಗೆ ಔಟ್​ ಎಂದು ತೀರ್ಪು ನೀಡಿದ್ದರು. ಬಳಿಕ ಕೊಹ್ಲಿ ಅಂಪೈರ್​ ಬಳಿಗೆ ಹೋಗಿ ಜಗಳ ಮಾಡಿದ್ದಾರೆ. ಈ ಜಗಳದ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇಷ್ಟೇ ಅಲ್ಲ ಡ್ರೆಸ್ಸಿಂಗ್​ ರೂಮ್​ಗೆ ಹೋಗುವಾಗ ಕೊಹ್ಲಿ ಕಾಲಲ್ಲಿ ಡಸ್ಟ್​ಬಿನ್​ಗೆ ಒದ್ದು ಹೊರಟರು. ಇನ್ನು ನಿನ್ನೆಯ ಪಂದ್ಯದಲ್ಲಿ ಆರ್​ಸಿಬಿ 1 ರನ್​ಗಳ ವಿರೋಚಿತ ಸೋಲನ್ನು ಕಂಡಿತು.

ಇದನ್ನೂ ಓದಿ:ನೈಸ್ ರಸ್ತೆಯಲ್ಲಿ ಭೀಕರ ಅಪಘಾತ; ಬೆಂಕಿಯ ಕೆನ್ನಾಲಿಗೆಗೆ 14 ವರ್ಷದ ಬಾಲಕಿ ದಾರುಣ ಸಾವು

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಪಂದ್ಯ ಮುಗಿದ ಮೇಲೂ ಸುಮ್ಮನಾಗದ ಕೊಹ್ಲಿ, ವಿವಾದಾತ್ಮಕ ತೀರ್ಪಿನ ಬಗ್ಗೆ ಅಂಪೈರ್​ ಜೊತೆ ಮತ್ತೆ ಟಾಕ್ ಫೈಟ್..!

https://newsfirstlive.com/wp-content/uploads/2024/04/KOHLI-8.jpg

Load More