Advertisment

ಟಿ20 ವಿಶ್ವಕಪ್​​ ಗೆದ್ದ ಬಳಿಕ ಕೊಹ್ಲಿ ಫುಲ್ ಚೇಂಜ್.. ರನ್ ಮಷಿನ್ ಹಿಂಗ್ಯಾಕೆ ಆದ್ರು ಅಂತಿದ್ದಾರೆ ಫ್ಯಾನ್ಸ್..!

author-image
Ganesh
Updated On
ದೇವರು ದೊಡ್ಡೋನು, ಕೃತಜ್ಞತೆಯಿಂದ ತಲೆ ಬಾಗುತ್ತೇನೆ.. ವಿರಾಟ್​ ಕೊಹ್ಲಿ ಭಾವುಕ ಪೋಸ್ಟ್​
Advertisment
  • ಫೈನಲ್​ ಗೆದ್ದ ಬಳಿಕ ಕೊಹ್ಲಿ ನಡೆ-ನುಡಿ ಬದಲು
  • ಮಾತು ಮಾತಿಗೂ ವಿರಾಟ್ ಕೊಹ್ಲಿ ದೇವರ ಜಪ
  • ಕನಸು ನನಸಾದ ಬಳಿಕ ವಿರಾಟ್​ ಭಾವುಕ

ವಿಶ್ವಕಪ್​ ಗೆದ್ದ ಸಂಭ್ರಮಾಚರಣೆಯಲ್ಲಿ ಎಲ್ಲರ ಗಮನ ಸೆಳೆದಿದ್ದು ವಿರಾಟ್​ ಕೊಹ್ಲಿ. ಸಾಲಿಡ್​ ಆಟವಾಡಿ ಕಪ್​ ಗೆಲುವಿನ ರೂವಾರಿಯಾದ ವಿರಾಟ್​, ದಿಢೀರ್​ ನಿವೃತ್ತಿ ನೀಡಿ ಶಾಕ್​ ಕೊಟ್ರು. ಇದ್ರ ಹೊರತಾಗಿಯೂ ಕೊಹ್ಲಿಯ ನಡೆ-ನುಡಿ ತುಂಬಾ ಡಿಫರೆಂಟ್​ ಆಗಿತ್ತು. ಕಣ್ಣಾಲಿಗಳು ತೇವಗೊಂಡಿದ್ವು.. ಮನಸ್ಸು ಭಾವುಕವಾಗಿತ್ತು. ಮಾತು ಮಾತಿಗೂ ಕೊಹ್ಲಿ ದೇವರ ಜಪ ಮಾಡಿದ್ರು. ಅಗ್ರೆಸ್ಸಿವ್​ ವಿರಾಟ್​ ಬದಲಾಗಿ ಹಂಬಲ್​ ಕೊಹ್ಲಿಯ ದರ್ಶನವಾಯ್ತು.

Advertisment

ವಿಶ್ವಕಪ್​ ಟೂರ್ನಿ ಮುಗಿದು 4 ದಿನಗಳಾಯ್ತು. ಆದ್ರೂ ಭಾರತೀಯ ಕ್ರಿಕೆಟ್​ ಲೋಕದಲ್ಲಿ ರೋಹಿತ್​ ಶರ್ಮಾ ಪಡೆ ಚುಟುಕು ಚಾಂಪಿಯನ್​ ಪಟ್ಟವೇರಿದ ಸಂಭ್ರಮ ನಿಂತಿಲ್ಲ. ಅವಿಸ್ಮರಣೀಯ ಕ್ಷಣವನ್ನು ಇಂದಿಗೂ ಕ್ರಿಕೆಟ್​ ಅಭಿಮಾನಿಗಳು ಅದೇ ಜೋಷ್​ನಲ್ಲಿ ಸೆಲಬ್ರೇಟ್​ ಮಾಡ್ತಿದ್ದಾರೆ.

ಇದನ್ನೂ ಓದಿ:ಮಳೆ, ಮಳೆ.. ಐತಿಹಾಸಿಕ ಪ್ರಸಿದ್ಧ ಕಮಲಶಿಲೆ ದೇಗುಲದಲ್ಲಿ ನೈಸರ್ಗಿಕ ಪುಣ್ಯಸ್ನಾನ.. ಏನಿದರ ವಿಶೇಷತೆ..?

publive-image

ಟಿ20 ವಿಶ್ವಕಪ್​ ಗೆದ್ದ ಖುಷಿಯ ಬೆನ್ನಲ್ಲೇ ಒಂದೆಡೆಯಾದ್ರೆ ಇನ್ನೊಂದೆಡೆ ದಿಗ್ಗಜರ ವಿದಾಯ ಅಭಿಮಾನಿಗಳಿಗೆ ಶಾಕ್​ ಕೊಟ್ಟಿದ್ದು ಸುಳ್ಳಲ್ಲ. ಇದ್ರ ನಡುವೆ ವಿರಾಟ್​​ ಕೊಹ್ಲಿಯ ನಡೆ ನುಡಿ ಎಲ್ಲರ ಗಮನ ಸೆಳೆದಿದ್ದು ಸುಳ್ಳಲ್ಲ. ಅಗ್ರೆಸ್ಸಿವ್​ ಮೂಡ್​ನಲ್ಲೇ ಹೆಚ್ಚು ಕಾಣಿಸಿಕೊಳ್ತಿದ್ದ ಕೊಹ್ಲಿ, ಕಪ್​ ಗೆದ್ದ ಬಳಿಕ ಭಾವುಕರಾಗಿದ್ರು.

Advertisment

ಕನಸು ನನಸಾದ ಬಳಿಕ ವಿರಾಟ್​ ಭಾವುಕ
ಕೊನೆಯ ಪಂದ್ಯದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿ, ಮ್ಯಾನ್​ ಆಫ್​ ದ ಮ್ಯಾಚ್​ ಗೌರವಕ್ಕೆ ಪಾತ್ರರಾದ್ರು. ಆ ಬಳಿಕ ದಿಢೀರ್​ ನಿವೃತ್ತಿ ಘೋಷಿಸಿ ಶಾಕ್​ ಕೊಟ್ರು. ಈ ವೇಳೆ ಕೊಹ್ಲಿಯ ನಡೆ ನುಡಿ ತುಂಬಾ ಡಿಫರೆಂಟ್​ ಆಗಿತ್ತು. ಕೊಹ್ಲಿಯನ್ನ ಬಹುಷಃ ಹಿಂದೆಂದೂ ಹಾಗೇ ಯಾರೂ ನೋಡಿರಲು ಸಾಧ್ಯವಿಲ್ಲ. ಅಗ್ರೆಸ್ಸಿವ್​ ವಿರಾಟ್​ ಹೋಗಿ ಹಂಬಲ್ ಕೊಹ್ಲಿಯ ದರ್ಶನವಾಯ್ತು.

ಪಂದ್ಯ ಗೆದ್ದ ಬಳಿಕ ಆದ ಭಾವನೆಗಳನ್ನು ವಿವರಿಸೋದು ಕಷ್ಟ. ಕಳೆದ ಕೆಲ ಪಂದ್ಯಗಳಿಂದ ನನ್ನಲ್ಲಿ ಆತ್ಮವಿಶ್ವಾಸ ಇರಲಿಲ್ಲ ಅನ್ನೋದು ನಿಮಗೆ ಗೊತ್ತು. ಮೈದಾನಕ್ಕಿಳಿದಾಗ ನಾನು ಉತ್ತಮ ಅನಿಸ್ತಿರಲಿಲ್ಲ. ದೇವರು ನಿಮಗೆ ಆಶೀರ್ವಾದ ಮಾಡಿದ್ರೆ, ನೀವೂ ಊಹೆನೂ ಮಾಡದ ದಾರಿಯಲ್ಲಿ ನಡೆಯಬಹುದು. ನಾನು ನಿಜಕ್ಕೂ ಧನ್ಯನಾಗಿದ್ದೇನೆ ಮತ್ತು ವಿನಮ್ರನಾಗಿದ್ದೇನೆ. ತಲೆಬಾಗುತ್ತೇನೆ. -ವಿರಾಟ್ ಕೊಹ್ಲಿ

ಇದನ್ನೂ ಓದಿ:ಕೊಹ್ಲಿ, ರೋಹಿತ್​, ಜಡೇಜಾ ಆಯ್ತು.. ಮತ್ತೆ ನಾಲ್ವರು ಆಟಗಾರರು ಗುಡ್​ಬೈ ಹೇಳಲು ತಯಾರಿ..!

Advertisment

publive-image

ಮಾತು ಮಾತಿಗೂ ದೇವರ ನೆನೆದ ಕೊಹ್ಲಿ..!
ಈ ಟೂರ್ನಿಯಲ್ಲಿ ಕಳಪೆ ಫಾರ್ಮ್​ ಸುಳಿಗೆ ಸಿಲುಕಿದ್ದ ಕೊಹ್ಲಿ, ಫೈನಲ್​ ಪಂದ್ಯದಲ್ಲಿ ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ್ರು. ಆ ಒಂದು ಇನ್ನಿಂಗ್ಸ್​ ಕಪ್​ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸ್ತು. ದೇವರ ಆಟ ಬಲ್ಲವರಾರೋ ಅನ್ನೋ ಹಾಡಿದ್ಯಲ್ಲ ಪಂದ್ಯದ ಬಳಿಕ ಕೊಹ್ಲಿ ಆಡಿದ ಮಾತುಗಳು ಈ ಹಾಡನ್ನ ನೆನಪಿಸಿದ್ದು ಸುಳ್ಳಲ್ಲ. ಮಾತು ಮಾತಿಗೂ ಕೊಹ್ಲಿ ದೇವರಿಗೆ ಧನ್ಯವಾದ ಸಲ್ಲಿಸಿದ್ರು.

ನಿಜ ಹೇಳಬೇಕಂದ್ರೆ ಇದನ್ನು ನಾನು ಕನಸಿನಲ್ಲೂ ಇದನ್ನ ನಿರೀಕ್ಷಿಸಿರಲಿಲ್ಲ. ಈ ಟೂರ್ನಿಯಲ್ಲಿ ನಾನು ಸಾಗಿ ಬಂದ ರೀತಿಯೂ ಹಾಗಿತ್ತು. ನನಗೆ ಇದೊಂದು ದೊಡ್ಡ ಪಾಠ. ದೊಡ್ಡ ಪಂದ್ಯಗಳಲ್ಲಿ ವಿನಮ್ರನಾಗಿರಬೇಕು. ತಲೆ ತಗ್ಗಿಸಬೇಕು. ನನ್ನ ಅಹಂ ಅನ್ನ ಪಕ್ಕಕ್ಕಿಟ್ಟು, ಹೇಳಬೇಕು. ನಾನು ಏನೂ ಅಲ್ಲ ಅಂತಾ. ಎಲ್ಲವನ್ನೂ ಬಿಟ್ಟಾಗ ಅದ್ಭುತವಾದುದನ್ನು ಸಾಧಿಸಬಹುದು. ತಲೆ ತಗ್ಗಿಸಿ ಸಂದರ್ಭಗಳನ್ನು ಗೌರವಿಸಬೇಕು. ದೇವರು ನನಗೆ ತೋರಿಸಿದ್ದಾರೆ-ವಿರಾಟ್ ಕೊಹ್ಲಿ, ಟೀಂ ಇಂಡಿಯಾ ಆಟಗಾರ

ನನಗಲ್ಲ.. ರೋಹಿತ್​ ಶರ್ಮಾಗೆ ಸಲ್ಲಬೇಕು ಗೌರವ
2011 ಏಕದಿನ ವಿಶ್ವಕಪ್​ ಗೆದ್ದ ಸಂಭ್ರಮಾಚರಣೆಯ ವೇಳೆ ಕೊಹ್ಲಿ ಒಂದು ಮಾತು ಹೇಳಿದ್ರು. ದೇಶದ ಜನರ ನೀರಿಕ್ಷೆಯ ಭಾರವನ್ನ ಇಷ್ಟು ವರ್ಷಗಳ ಕಾಲ ಸಚಿನ್​ ತೆಂಡುಲ್ಕರ್​ ಹೊತ್ತುಕೊಂಡಿದ್ರು. ಅದನ್ನ ಸಾಕಾರಗೊಳಿಸಿದ ಅವರನ್ನು ಎತ್ತಿ ಮೆರೆಸಬೇಕಿದೆ ಎಂದು. ಇದೀಗ ಟಿ20 ವಿಶ್ವಕಪ್ ಗೆದ್ದ ಬಳಿಕ ನಿಮ್ಮನ್ನ ಎತ್ತಿ ಮೆರೆಸಬೇಕಾ ಎಂದು ಕಾಮೆಂಟೇಟರ್​ ಕೇಳಿದ ಪ್ರಶ್ನೆಗೆ ಕೊಹ್ಲಿ, ನನ್ನನ್ನಲ್ಲ.. ರೋಹಿತ್​ ರನ್ನ ಅನ್ನೋ ವಿನ್ರಮ ಉತ್ತರ ನೀಡಿದರು.

Advertisment

ಇದನ್ನೂ ಓದಿ:ದ್ರಾವಿಡ್ ನಿವೃತ್ತಿ, ಗಂಭೀರ್ ಬಗ್ಗೆ ಮಾಹಿತಿ ಇಲ್ಲ.. ಜಿಂಬಾಬ್ವೆ ಪ್ರವಾಸದಲ್ಲಿರುವ ಕೋಚ್ ಯಾರು?

publive-image

ನೋ.. ನನಗೆ ಆ ತರ ಅನ್ನಿಸಲ್ಲ. ಇದೊಂದು ದೀರ್ಘಕಾಲದ ಕಾಯುವಿಕೆ. ಐಸಿಸಿ ಟೂರ್ನಿಯನ್ನ ಗೆಲ್ಲಲು ನಾವು ತುಂಬಾ ವರ್ಷಗಳಿಂದ ಕಾದಿದ್ವಿ. ನಾನು ಒಬ್ಬನೇ ಅಲ್ಲ. ರೋಹಿತ್​ ಶರ್ಮಾ ಕೂಡ 9 T20 ವಿಶ್ವಕಪ್​ ಆಡಿದ್ದಾರೆ. ನನಗಿದು 6ನೇ ಟೂರ್ನಿ. ತಂಡದಲ್ಲಿರೋ ಎಲ್ಲರಿಗಿಂತ ರೋಹಿತ್​ ಇದಕ್ಕೆ ಅರ್ಹರು ಎಂದು ಕೊಹ್ಲಿ ಹೇಳಿದ್ದಾರೆ.

ಸೆಲಬ್ರೇಷನ್​ ವೇಳೆಯೂ ಕೋಚ್​ ದ್ರಾವಿಡ್​ಗೆ ಗೌರವ
ಕಪ್​ ಕೈಗೆ ಸಿಕ್ಕ ಬಳಿಕ ಇಡೀ ತಂಡ ಟ್ರೋಫಿ ಸೆಲೆಬ್ರೇಷನ್​ನಲ್ಲಿ ಆಟಗಾರರು ಮುಳುಗಿದ್ರು. ಈ ಸಂಭ್ರಮದ ನಡುವೆ ಕೋಚ್​ ರಾಹುಲ್​ ದ್ರಾವಿಡ್​ರನ್ನು ಕೊಹ್ಲಿ ಮರೆಯಲಿಲ್ಲ. ಪೋಡಿಯಂಗೆ ದ್ರಾವಿಡ್​ ಎಂಟ್ರಿ ನೀಡ್ತಿದ್ದಂತೆ ತಾವೇ ಕೈಯಾರೆ ಟ್ರೋಫಿಯನ್ನ ತೆಗೆದುಕೊಂಡು ಹೋಗಿ ನೀಡಿದ್ರು. ಆ ಬಳಿಕ ದ್ರಾವಿಡ್​ ಸಂಭ್ರಮಿಸಿದ ಪರಿಯನ್ನು ಯಾರೂ ಮರೆಯೋಕೆ ಸಾಧ್ಯವಿಲ್ಲ ಬಿಡಿ.

Advertisment

ಇದನ್ನೂ ಓದಿ:ವಿಶ್ವಕಪ್​​​ ದೆಹಲಿಗೆ ಬರ್ತಿದ್ದಂತೆ ಮೊದಲ ವಿಡಿಯೋ ಹಂಚಿಕೊಂಡ ಬಿಸಿಸಿಐ.. ಆಟಗಾರರು ಮಾಡಿದ್ದೇನು ಗೊತ್ತಾ..?

publive-image

ವಿಶ್ವಕಪ್​ ಗೆಲುವಿನ ನಂತರದಲ್ಲಿ ಮಾತ್ರವಲ್ಲ. ಕಳೆದ ಕೆಲ ವರ್ಷಗಳಿಂದ ಕೊಹ್ಲಿ ಸಂಪೂರ್ಣ ಬದಲಾಗಿದ್ದಾರೆ. ಆರಂಭಿಕ ದಿನಗಳಲ್ಲಿ ಇದ್ದ ಕೊಹ್ಲಿಗೂ, ಕಳೆಪೆ ಫಾರ್ಮ್​ ಸುಳಿಗೆ ಸಿಲುಕಿ 3 ವರ್ಷಗಳ ಒದ್ದಾಡಿ ಕಮ್​ಬ್ಯಾಕ್​ ಮಾಡಿದ ಬಳಿಕ ಇರೋ ಕೊಹ್ಲಿ ನಿರೀಕ್ಷೆಗೂ ಮೀರಿದ ಬದಲಾವಣೆಯಾಗಿದೆ. ಈ ಬದಲಾವಣೆಯ ರೂವಾರಿ ಪತ್ನಿ ಅನುಷ್ಕಾ ಶರ್ಮಾ. ಅನುಷ್ಕಾರ ಸಲಹೆ-ಸೂಚನೆಗಳು ಕೊಹ್ಲಿಯ ವ್ಯಕ್ತಿತ್ವದಲ್ಲಿ ಹಲವು ಬದಲಾವಣೆ ತಂದಿರೋದನ್ನು ಒಪ್ಪಲೇಬೇಕು.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment