2022ರಲ್ಲಿ ಇನ್ಸ್ಟಾಗ್ರಾಮ್ನಿಂದ ಗಳಿಸಿದ ಆದಾಯ ಎಷ್ಟು?
ರೊನಾಲ್ಡೊ-ಮೆಸ್ಸಿಗೆ ಟಕ್ಕರ್ ಕೊಡಲು ಸಜ್ಜಾದ ಕೊಹ್ಲಿ..!
ಕೊಹ್ಲಿ ಬಿಟ್ಟರೆ ಭಾರತದ ಯಾವ ಕ್ರಿಕೆಟರ್ಗೆ ಹೆಚ್ಚು ಹಣ?
ವಿರಾಟ್ ಕೊಹ್ಲಿ ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಹಾಕಿದ್ರೆ ಸಾಕು ಕೋಟಿ ಕೋಟಿ ಹಣ ಜೇಬಿಗಿಳಿಸ್ತಾರೆ. ವರ್ಷ ಕಳೆದಂತೆ ವಿರಾಟ್ ಇನ್ಸ್ಟಾ ಸಂಭಾವನೆ ಏರಿಕೆ ಆಗಿದ್ದು, ಫುಟ್ಬಾಲ್ ದಿಗ್ಗಜರಾದ ರೊನಾಲ್ಡೋ ಹಾಗೂ ಲಿಯೋನೆಲ್ ಮೆಸ್ಸಿಗೆ ಸೆಡ್ಡು ಹೊಡೆಯಲು ವಿರಾಟ್ ಸಜ್ಜಾಗಿದ್ದಾರೆ.
ವಿರಾಟ್ ಕೊಹ್ಲಿ..! ಮಾಡ್ರನ್ ಕ್ರಿಕೆಟ್ ದೊರೆ ಮಾತ್ರವಲ್ಲ. ರಿಚೆಸ್ಟ್ ಅಥ್ಲೀಟ್ ಕೂಡ. ಕಿಂಗ್ ಕೊಹ್ಲಿ ಕ್ರಿಕೆಟ್ನಿಂದ ಎಷ್ಟು ದುಡ್ಡು ಗಳಿಸ್ತಾರೋ, ಅದಕ್ಕಿಂತ ಎರಡು ಪಟ್ಟು ದುಡ್ಡನ್ನು ಆಫ್ ದಿ ಫೀಲ್ಡ್ನಲ್ಲಿ ಗಳಿಸ್ತಾರೆ. ನಿಮಗೆ ಗೊತ್ತಿರ್ಲಿ. ಸೋಷಿಯಲ್ ಮೀಡಿಯಾದಿಂದಲೇ ನೂರಾರು ಕೋಟಿ ರೂಪಾಯಿ ಹಣ ವಿರಾಟ್ ಖಜಾನೆ ಸೇರುತ್ತೆ. ಅದ್ರಲ್ಲೂ ಇನ್ಸ್ಟಾಗ್ರಾಮ್ ಲೋಕಕ್ಕೆ ಕೊಹ್ಲಿ ಅಧಿಪತಿ. ಯಾಕಂದ್ರೆ ಇನ್ಸ್ಟಾದಿಂದ ರನ್ ಮಷೀನ್ ಪಡೆಯುವ ಸಂಭಾವನೆ ಕೇಳಿದ್ರೆ ಎಂತವರು ಬೆರಗಾಗ್ತಾರೆ.
ಇನ್ಸ್ಟಾಗ್ರಾಮ್ ಲೋಕಕ್ಕೆ ಕಿಂಗ್ ಕೊಹ್ಲಿನೇ ಬಾಸ್..!
ವಿರಾಟ್ ಕೊಹ್ಲಿ ಮೇನಿಯಾ ಅಂದ್ರೆ ಸುಮ್ನೇನಾ ಹೇಳಿ? ವಿರಾಟ್ ನಿಜಕ್ಕೂ ದರ್ಬಾರ್ ಕಾ ರಾಜ. ಇನ್ಸ್ಟಾಗ್ರಾಮ್ನಲ್ಲಿ 256 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಅಂದಹಾಗೇ ಕೊಹ್ಲಿ ಇನ್ಸ್ಟಾದಲ್ಲಿ ಒಂದು ಪೋಸ್ಟ್ ಹಾಕಿ ಸುಮ್ಮನೇ ಕೂತರೆ ಸಾಕು ಕೋಟಿ ಕೋಟಿ ಹಣ ಜೇಬಿಗಿಳಿಸಿಕೊಳ್ತಾರೆ. ವಿರಾಟ್ ತಾವು ಹಾಕುವ ಒಂದೇ ಒಂದು ಇನ್ಸ್ಟಾಗ್ರಾಮ್ಗೆ ಪೋಸ್ಟ್ಗೆ ಬರೋಬ್ಬರಿ 11.14 ಕೋಟಿ ಸಂಭಾವನೆ ಪಡೆಯುತ್ತಾರೆ.
ಇದು ನಿಮಗೆ ಕೇಳೋಕೆ ಅಚ್ಚರಿ ಅನ್ನಿಸಬಹುದು. ಆದ್ರೆ ನಿಜ! ಕೊಹ್ಲಿಯ ಇನ್ಸ್ಟಾಗ್ರಾಮ್ ಪೋಸ್ಟ್ ಸಂಭಾವನೆ ವರ್ಷದಿಂದ ವರ್ಷಕ್ಕೆ ಏರಿಕೆ ಆಗುತ್ತಲೇ ಇದೆ. ಕಳೆದ ವರ್ಷ ಒಂದು ಇನ್ಸ್ಟಾ ಪೋಸ್ಟ್ಗೆ 8.9 ಕೋಟಿ ಪಡೆಯುತ್ತಿದ್ದರು. 2023ರಲ್ಲಿ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ ಬೆಲೆ 11.14 ಕೋಟಿ ರೂಪಾಯಿ ಆಗಿದೆ. ಇನ್ನೊಂದು ಇಂಟರೆಸ್ಟಿಂಗ್ ಸಂಗತಿ ಏನಂದ್ರೆ 2022 ರಲ್ಲಿ ಇನ್ಸ್ಟಾಗ್ರಾಮ್ನಿಂದಲೇ ಕೊಹ್ಲಿ 300 ಕೋಟಿ ರೂಪಾಯಿ ಆದಾಯ ಗಳಿಸಿದ್ದಾರೆ.
ರೊನಾಲ್ಡೊ-ಮೆಸ್ಸಿಗೆ ಟಕ್ಕರ್ ಕೊಡಲು ಸಜ್ಜಾದ ಕೊಹ್ಲಿ
ಕ್ರಿಕೆಟ್ ಮಟ್ಟಿಗೆ ಕೊಹ್ಲಿನೇ ಇನ್ಸ್ಟಾಗ್ರಾಂನಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟರ್. ವಿಶ್ವದ ಅಥ್ಲಿಟ್ಸ್ ವಿಚಾರಕ್ಕೆ ಬಂದ್ರೆ ಫುಟ್ಬಾಲ್ ದಿಗ್ಗಜರಾದ ಕ್ರಿಸ್ಟಿಯಾನೋ ರೊನಾಲ್ಡೊ ಹಾಗೂ ಲಿಯೋನೆಲ್ ಮೆಸ್ಸಿ ಟಾಪ್-2 ಸ್ಥಾನದಲ್ಲಿದ್ದಾರೆ.
ಟಾಪ್-3 ಇನ್ಸ್ಟಾಗ್ರಾಂ ಹಣ ಗಳಿಕೆ ಕ್ರೀಡಾಪಟುಗಳು
ಕೊಹ್ಲಿ ಬಿಟ್ರೆ ಧೋನಿಗೇನೆ ಹೆಚ್ಚು ಡಿಮ್ಯಾಂಡ್
ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಎಂ.ಎಸ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ್ರೂ ಹವಾ ಕಮ್ಮಿ ಆಗಿಲ್ಲ. 44.5 ಮಿಲಿಯನ್ ಹೊಂದಿರೋ ಫಾಲೋವರ್ಸ್ ಹೊಂದಿರೋ ಮಾಹಿ ಒಂದು ಇನ್ಸ್ಟಾಗ್ರಾಮ್ ಪೋಸ್ಟ್ನಿಂದ 1 ಕೋಟಿ ರೂಪಾಯಿ ಗಳಿಸುತ್ತಾರೆ. ಇನ್ಸ್ಟಾದಲ್ಲಿ ಕೊಹ್ಲಿ ಬಿಟ್ರೆ ಧೋನಿಗೇನೆ ಹೆಚ್ಚು ಡಿಮ್ಯಾಂಡ್ ಇದೆ.
ರೋಹಿತ್ ಜೇಬಿಗೆ ಸೇರುತ್ತೆ 75 ಲಕ್ಷ ರೂಪಾಯಿ
ಟೀಮ್ ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ಇನ್ಸ್ಟಾಗ್ರಾಮ್ನಲ್ಲಿ ತಕ್ಕ ಮಟ್ಟಿಗೆ ಹವಾ ಹೊಂದಿದ್ದಾರೆ. ಹಿಟ್ಮ್ಯಾನ್ ಇನ್ಸ್ಟಾಗ್ರಾಮ್ನಲ್ಲಿ ಒಂದು ಪೋಸ್ಟ್ ಹಾಕಿದ್ರೆ ಸಾಕು 75 ಲಕ್ಷರ ರೂಪಾಯಿ ಅವರ ಖಜಾನೆ ಸೇರುತ್ತೆ. ಒಟ್ಟಿನಲ್ಲಿ ಕ್ರಿಕೆಟರ್ಸ್ ಏನೇ ಮಾಡಿದ್ರೂ ದುಡ್ಡು ಗಳಿಸ್ತಾರೆ ಅನ್ನೋದಕ್ಕೆ ಇದೇ ಸಾಕ್ಷಿ. ನಾವೆಲ್ಲರೂ ಟೈಮ್ಪಾಸ್ಗೋಸ್ಕರ ಇನ್ಸ್ಟಾಗ್ರಾಮ್ ಬಳಸಿದ್ರೆ ಕ್ರಿಕೆಟರ್ಸ್ ಇನ್ಸ್ಟಾದಲ್ಲಿ ಪೋಸ್ಟ್ ಹಾಕಿನೇ ಕೋಟಿ ಕೋಟಿ ರೂಪಾಯಿ ಜೇಬಿಗಿಳಿಸಿಕೊಳ್ತಾರೆ. ರಿಯಲಿ ಬ್ಯಾಟ್ ಹಿಡಿದು ಅಂಗಳದಲ್ಲಿ ಆರ್ಭಟಿಸುವ ಇವರೆಲ್ಲರೂ ಅದೃಷ್ಟವಂತರೇ ಬಿಡಿ.
ವಿಶೇಷ ವರದಿ: ಮಾಗುಂಡಯ್ಯ ಪಟ್ಟೇದ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್