newsfirstkannada.com

ಇದು ಕಿಂಗ್ ಕೊಹ್ಲಿಯ ಏಕಾಂಗಿ ಹೋರಾಟ.. RCB ಆಪದ್ಬಾಂಧವನ ಟಾಪ್ 5 ಇನ್ನಿಂಗ್ಸ್..!

Share :

Published May 11, 2024 at 11:29am

    ಆರ್​ಸಿಬಿಯ ಪಾಲಿನ ಆಪ್ತ ರಕ್ಷಕ ಕಿಂಗ್ ಕೊಹ್ಲಿ

    ಪ್ರಸಕ್ತ ಐಪಿಎಲ್​ನಲ್ಲಿ ವಿರಾಟ್​ ವಿರಾಟ ರೂಪ

    ವಿರಾಟ್​ ಕೊಹ್ಲಿ ಆರ್​ಸಿಬಿಯ ರಿಯಲ್ ಫೈಟರ್

ಈತ ರೆಕಾರ್ಡ್​ ಬ್ರೇಕರ್​.. ಹಿಸ್ಟರಿ ಕ್ರಿಯೇಟರ್​.. ವಿಶ್ವ ಕ್ರಿಕೆಟ್​ನ ರೂಲರ್​.. ಇಷ್ಟೆಲ್ಲಾ ಹೇಳಿದಾಗಲೇ ಗೊತ್ತಿರುತ್ತೆ ಅದು ಒನ್​ ಅಂಡ್ ಒನ್ಲಿ ಕಿಂಗ್​ ಕೊಹ್ಲಿ ಅಂತಾ. ಸದ್ಯ ಐಪಿಎಲ್​​ಗೂ ಬಾಸ್​ ಆಗಿರೋ ಕಿಂಗ್​ ಕೊಹ್ಲಿ, ಆರ್​ಸಿಬಿ ಪಾಲಿನ ಅಪದ್ಭಾಂದವರಾಗಿದ್ದಾರೆ. ಪಂದ್ಯದಲ್ಲಿ ಆರ್​ಸಿಬಿ ಕಥೆ ಮುಗಿದೇ ಬಿಡ್ತು ಎಂದಾಗಲೆಲ್ಲಾ ಏಕಾಂಗಿಯಾಗಿ ಹೋರಾಡ್ತಿದ್ದಾರೆ. ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.

ವಿರಾಟ್​ ಕೊಹ್ಲಿ.. ವಿಶ್ವ ಕ್ರಿಕೆಟ್​ನ ದಾಖಲೆಗಳ ಸರದಾರ.. ಈತನ ಬ್ಯಾಟ್​ನಿಂದ ಸಿಡಿಯೋ ಒಂದೊಂದು ರನ್, ಒಂದೊಂದು ದಾಖಲೆ ಸೃಷ್ಟಿಸುತ್ತೆ. ಲೆಕ್ಕ ಇಲ್ಲದಷ್ಟು ರೆಕಾರ್ಡ್​ ಪೀಸ್ ಪೀಸ್ ಆಗಿವೆ. ವಿಶ್ವ ಕ್ರಿಕೆಟ್​ನಲ್ಲಿ ಹಿಸ್ಟರಿ ಕ್ರಿಯೇಟರ್ ಆಗಿ ಮೆರೆದಾಡುತ್ತಿದ್ದಾರೆ.
ಐಪಿಎಲ್​​ನಲ್ಲೂ ಅರ್ಭಟಿಸಿರುವ ಕೊಹ್ಲಿ, ದಾಖಲೆಗಳ ಮೇಲೆ ದಾಖಲೆ ಬರೆದಿದ್ದಾರೆ. ಈ ಐಪಿಎಲ್​ನಲ್ಲಿ ಗರಿಷ್ಟ ರನ್ ಸ್ಕೋರರ್​ ಆಗಿ ಮೆರೆದಾಡ್ತಿದ್ದಾರೆ. ಫ್ರಾಂಚೈಸಿ ಕ್ರಿಕೆಟ್​ನಲ್ಲಿ ನಾನೇ ಕಿಂಗ್​ ಅನ್ನೋದು ಫ್ರೂವ್ ಮಾಡಿರುವ ವಿರಾಟ್​, ರಾಯಲ್​ ಚಾಲೆಂಜರ್ಸ್​ ಪಾಲಿನ ರಕ್ಷಕರಾಗಿದ್ದಾರೆ. ಪ್ರಸಕ್ತ ಸೀಸನ್​ನ ಈ 5 ಇನ್ನಿಂಗ್ಸ್​ಗಳೇ ಆರ್​ಸಿಬಿಯ ಆಪತ್ಬಾಂದವ ಅನ್ನೋದನ್ನ ಸಾರಿ ಸಾರಿ ಹೇಳ್ತಿವೆ.

ಇದನ್ನೂ ಓದಿ:ಪ್ಲೇ ಆಫ್ ರೇಸ್​ನಲ್ಲಿ 3, 4ನೇ ಸ್ಥಾನಕ್ಕೆ ಭಾರೀ ಪೈಪೋಟಿ.. ಆರ್​​ಸಿಬಿ ಕತೆ ಏನು..?

ಪಂಜಾಬ್ ಎದುರು 92 ರನ್​ಗಳ ಅಮೋಘ ಇನ್ನಿಂಗ್ಸ್​..!
ಧರ್ಮಶಾಲಾದಲ್ಲಿ ನಡೆದ ಪಂಜಾಬ್ ಕಿಂಗ್ಸ್ ಎದುರಿನ ಪಂದ್ಯ. ಈ ಪಂದ್ಯ ಆರ್‌ಸಿಬಿ ಪಾಲಿಗೆ ಕ್ರೂಶಿಯಲ್ ಆಗಿತ್ತು. 43 ರನ್​​​ಗೆ 2 ವಿಕೆಟ್ ಕಳೆದುಕೊಂಡಿದ್ದ ಆರ್​ಸಿಬಿ ಸಂಕಷ್ಟಕ್ಕೆ ಸಿಲುಕಿತ್ತು. ಏಕಾಂಗಿಯಾಗಿ ಹೋರಾಡಿದ ವಿರಾಟ್, ಕೇವಲ 47 ಎಸೆತಗಳಲ್ಲಿ 7 ಬೌಂಡರಿ, 6 ಸಿಕ್ಸರ್‌ ಸಹಿತ 92 ರನ್​ ಚಚ್ಚಿದ್ರು. ಈ ಅದ್ಭುತ ಇನ್ನಿಂಗ್ಸ್​ ಆರ್​ಸಿಬಿ ಗೆಲುವಿಗೆ ಕಾರಣವಾಯ್ತು.

ಗುಜರಾತ್ ಎದುರು ಅಜೇಯ 70 ರನ್​ಗಳ ಆಟ
ಮ್ಯಾಚ್​ ನಂಬರ್ 45. ನಮೋ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವಿಲ್ ಜಾಕ್ಸ್​ ಅಬ್ಬರದ ಶತಕ ಸಿಡಿಸಿದ್ರು ನಿಜ. ಈ ಪಂದ್ಯವನ್ನ ಆರ್​ಸಿಬಿ ಕೈಯಲ್ಲಿರುವಂತೆ ಮೊದಲು ಮಾಡಿದ್ದೇ ವಿರಾಟ್​ ಕೊಹ್ಲಿ. 44 ಎಸೆತಗಳಲ್ಲಿ 6 ಬೌಂಡರಿ, 3 ಸಿಕ್ಸರ್​ ಒಳಗೊಂಡ ಅಜೇಯ 70 ರನ್ ಬಾರಿಸಿದ್ದರು. ವಿಲ್​ ಜಾಕ್ಸ್​ರ ಸ್ಫೋಟಕ ಆಟದ ಮುಂದೆ ವಿರಾಟ್​ ಕ್ಲಾಸಿಕ್ ಆಟ ಮರೆಯಾಯ್ತು.

ಇದನ್ನೂ ಓದಿ:ಅಮ್ಮನಿಗೆ ಗುಂಡು.. ಸುತ್ತಿಗೆಯಿಂದ ಪತ್ನಿಯ ಜೀವ.. 3 ಮಕ್ಕಳನ್ನು ಟೆರಸ್​​ನಿಂದ ಎಸೆದ.. ಐವರ ಬರ್ಬರ ಕೊಲೆ

ರಾಜಸ್ಥಾನದ ಎದುರು ಕಿಂಗ್ ಕೊಹ್ಲಿಯ ಅಜೇಯ ಶತಕ
ರಾಜಸ್ಥಾನ್ ರಾಯಲ್ಸ್ ವರ್ಸಸ್ ರಾಯಲ್ ಚಾಲೆಂಜರ್ಸ್ ನಡುವಿನ ಜೈಪುರ ಪಂದ್ಯ. ಈ ಪಂದ್ಯದಲ್ಲಿ ಆರ್​ಸಿಬಿಗೆ ಆಸರೆಯಾಗಿದ್ದೆ ವಿರಾಟ್ ಕೊಹ್ಲಿ, ಘಟನಾನುಘಟಿ ಬ್ಯಾಟರ್​ಗಳು ಒಂದಂಕಿಗೆ ವಿಕೆಟ್ ಒಪ್ಪಿಸಿದ್ರು. ಏಕಾಂಗಿ ಹೋರಾಟ ನಡೆಸಿದ ವಿರಾಟ್, 72 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್ ಒಳಗೊಂಡ ಅಜೇಯ 113 ರನ್ ಸಿಡಿಸಿದ್ರು.

ಚಿನ್ನಸ್ವಾಮಿಯಲ್ಲಿ ಕೆಕೆಆರ್ ಎದುರು ಕೊಹ್ಲಿ​ ಏಕಾಂಗಿ ಹೋರಾಟ
ಮ್ಯಾಚ್ ನಂಬರ್-10. ಇದು ಬೆಂಗಳೂರಿನಲ್ಲಿ ನಡೆದ 2ನೇ ಪಂದ್ಯ. ವಿವಿಧ ಕಾರಣಗಳಿಗೆ ಹೈವೋಲ್ಟೇಜ್​ ಟಚ್ ಪಡೆದುಕೊಂಡಿತ್ತು. ಆರಂಭಿಕರಾಗಿ ಕಣಕ್ಕಿಳಿದಿದ್ದ ವಿರಾಟ್, ತವರಿನಲ್ಲಿ ಆರ್​ಸಿಬಿಯ ಮಾನ ಕಾಪಾಡಿದ್ರು. ಈ ಪಂದ್ಯದಲ್ಲಿ ಒಬ್ಬೊಂಟಿಯಾಗಿ ಬ್ಯಾಟ್ ಬೀಸಿದ ಕೊಹ್ಲಿ, ಅಜೇಯ 83 ರನ್ ಗಳಿಸಿದ್ರು. ಈ ಅದ್ಭುತ ಇನ್ನಿಂಗ್ಸ್​ ಬಗ್ಗೆ ಕೆಲವರು ಟೀಕಿಸಿದ್ರು. ರಿಯಲ್ ಫೈಟರ್ ಆಗಿ ಹೋರಾಡಿದ ಪರಿ ಫ್ಯಾನ್ಸ್ ಮನ ಗೆದ್ದಿತ್ತು.

ಇದನ್ನೂ ಓದಿ:ಜೆಡಿಎಸ್​ ಜೊತೆಗೆ ಮೈತ್ರಿ ಬೇಕೋ..? ಬೇಡವೋ..? ಕುತೂಹಲ ಮೂಡಿಸಿದ ಬಿಜೆಪಿಯ ಇವತ್ತಿನ ಸಭೆ..!

ಪಂಜಾಬ್​​ ಎದುರು ಜಯದ ಖಾತೆ ತೆರೆಸಿದ್ದೆ ಕೊಹ್ಲಿ
ಪ್ರಸಕ್ತ ಆವೃತ್ತಿಯಲ್ಲಿ ಆರ್​ಸಿಬಿ ಸೋಲಿನೊಂದಿಗೆ ಅಭಿಯಾನ ಆರಂಭಿಸಿತ್ತು. ಸೋಲಿನ ಬಳಿಕ ತವರಿಗೆ ಮರಳಿದ್ದ ಆರ್​ಸಿಬಿಗೆ ಗೆಲುವು ಅನಿವಾರ್ಯವಾಗಿತ್ತು. ಈ ಮ್ಯಾಚ್​ನಲ್ಲಿ ಫಾಫ್, ಗ್ರೀನ್, ಪಟಿದಾರ್, ಮ್ಯಾಕ್ಸ್​ವೆಲ್ ಪೆವಿಲಿಯನ್ ಪರೇಡ್ ನಡೆಸಿದ್ರು. ಕೆಚ್ಚೆದೆಯ ಹೋರಾಟ ಮಾಡಿದ ವಿರಾಟ್, 77 ರನ್ ಸಿಡಿಸಿ ಗೆಲುವಿನ ದಡ ಸೇರಿಸಿದ್ರು. ಫ್ಯಾನ್ಸ್​ಗೆ ಗೆಲುವಿನ ಸಿಹಿ ನೀಡಿದರು. ಪ್ರಸಕ್ತ ಸೀಸನ್​​ನಲ್ಲಿ ಸಾಲಿಡ್ ಫಾರ್ಮ್​ನಲ್ಲಿರವ ವಿರಾಟ್, ಎರಡ್ಮೂರು ಪಂದ್ಯಗಳಲ್ಲಿ ಬಿಟ್ಟರೆ, ಉಳಿದೆಲ್ಲಾ ಪಂದ್ಯಗಳಲ್ಲಿ ಅದ್ಬುತ ಪ್ರದರ್ಶನವನ್ನೇ ನೀಡಿದ್ದಾರೆ. ತಂಡದ ಗೆಲುವಿಗಾಗಿ ಶಕ್ತಿ ಮೀರಿ ಹೋರಾಟ ನಡೆಸಿದ್ದಾರೆ. ಆರ್​​ಸಿಬಿಯ ಆಪತ್ಭಾಂದವನಾಗಿ ನಿಂತಿದ್ದಾರೆ. ಈಗಲೂ ಆರ್​ಸಿಬಿ ಪಾಲಿಗೆ ಪ್ಲೇ ಆಫ್​ ಡೋರ್​ ಓಪನ್​ ಇದೆ ಅಂದ್ರೆ ಅದಕ್ಕೆ ಕಾರಣ ಕೊಹ್ಲಿಯೇ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಇದು ಕಿಂಗ್ ಕೊಹ್ಲಿಯ ಏಕಾಂಗಿ ಹೋರಾಟ.. RCB ಆಪದ್ಬಾಂಧವನ ಟಾಪ್ 5 ಇನ್ನಿಂಗ್ಸ್..!

https://newsfirstlive.com/wp-content/uploads/2024/05/VIRAT_KOHLI-1.jpg

Load More