/newsfirstlive-kannada/media/post_attachments/wp-content/uploads/2024/08/RAINA_VIRAT_JADDU.jpg)
ಭಾರತ ತಂಡದ ಆಟಗಾರರು ಬ್ಯಾಟಿಂಗ್, ಬೌಲಿಂಗ್​ನಲ್ಲಿ ಯಶಸ್ಸಿನ ಜೊತೆ ಜೊತೆಗೆ ಮೈದಾನದ ಹೊರಗೂ ತಮ್ಮದೇ ಬ್ಯುಸಿನೆಸ್​ನಲ್ಲೂ ಸಕ್ಸಸ್​ ಆಗಿದ್ದಾರೆ. ದೇಶ, ವಿದೇಶಗಳಲ್ಲಿ ಕ್ರಿಕೆಟ್​ ಟೂರ್ನಿಗೆ ಹೋದಾಗ ಅಲ್ಲಿನ ವಿವಿಧ ಆಹಾರ ಪದ್ಧತಿಗೆ ಮನಸೋತವರು ಇದ್ದಾರೆ. ಕ್ರಿಕೆಟ್​ ಕರಿಯರ್​ ಜೊತೆ ರೆಸ್ಟೋರೆಂಟ್​ ಉದ್ಯಮದಲ್ಲೂ ಟೀಮ್ ಇಂಡಿಯಾದ ಮಾಜಿ, ಈಗಿನ ಆಟಗಾರರು ಯಶಸ್ವಿಯಾಗಿದ್ದಾರೆ. ಸದ್ಯ ಟೀಮ್​ ಇಂಡಿಯಾದಲ್ಲಿ ಯಾರು ಯಾರು ರೆಸ್ಟೋರೆಂಟ್​ ಹೊಂದಿದ್ದಾರೆ ಎನ್ನುವ ಮಾಹಿತಿ ಇಲ್ಲಿದೆ.
ವಿರಾಟ್​ ಕೊಹ್ಲಿಯವರ One8 ಕಮ್ಯೂನ್ ರೆಸ್ಟೋರೆಂಟ್
ಭಾರತದ ಸ್ಟಾರ್ ಪ್ಲೇಯರ್ ವಿರಾಟ್​ ಕೊಹ್ಲಿಯವರು One8 ಕಮ್ಯೂನ್ ಎನ್ನುವ ರೆಸ್ಟೋರೆಂಟ್ ಬ್ಯುಸಿನೆಸ್ ಆರಂಭಿಸಿದ್ದಾರೆ. ಇದರ ಫೇಮಸ್​ ಬ್ರ್ಯಾಂಚ್ ಎಂದರೆ ಮುಂಬೈಯ ಜುಹುನಲ್ಲಿರೋ One8 ಕಮ್ಯೂನ್. ಇದರಲ್ಲಿ ಲಾಭ ಬರುತ್ತಿರುವ ಹಿನ್ನೆಲೆಯಲ್ಲಿ ಕೇವಲ ಮುಂಬೈ ಮಾತ್ರವಲ್ಲ ಬದಲಿಗೆ ಭಾರತದ ನಗರಗಳಾದ ದೆಹಲಿ, ಪುಣೆ, ಕೋಲ್ಕತ್ತಾ, ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಬ್ರ್ಯಾಂಚಸ್ ಅನ್ನು ವಿರಾಟ್​ ಕೊಹ್ಲಿ ಆರಂಭಿಸಿದ್ದಾರೆ.
ಇದನ್ನೂ ಓದಿ:RCBಗೆ ರಿಟೇನ್ ಆಗೋ 6 ಪ್ಲೇಯರ್ಸ್ ಇವರೇನಾ..​ ರೆಡ್ ಆರ್ಮಿಯಲ್ಲಿ ಕೊಹ್ಲಿ, ಮ್ಯಾಕ್ಸಿ ಸ್ಥಾನ ಸೇಫಾ?
ಫ್ಲೈಯಿಂಗ್ ಕ್ಯಾಚ್​ ರೆಸ್ಟೋರೆಂಟ್ ಯಾವ ಪ್ಲೇಯರದ್ದು..?
ಸ್ಟಾರ್ ಕ್ರಿಕಟರ್​ ಗಬ್ಬರ್ ಸಿಂಗ್ ಎಂದೇ ಖ್ಯಾತಿ ಪಡೆದಿರೋ ಭಾರತ ತಂಡದ ಶಿಖರ್ ಧವನ್​ ಅನ್ನು 2023ರಲ್ಲಿ ಫ್ಲೈಯಿಂಗ್ ಕ್ಯಾಚ್​ ರೆಸ್ಟೋರೆಂಟ್ ಆರಂಭಿಸಿದ್ದಾರೆ. ಒಳ್ಳೆಯ ಬ್ಯುಸಿನೆಸ್ ಆಗ್ತಿದೆ. ಕಾರಣವೆಂದರೆ ಪೌಷ್ಠಿಕಾಂಶದ ಆಹಾರ ಇಲ್ಲಿ ಸಿಗುತ್ತದೆ. ಅಲ್ಲದೇ ರುಚಿಕರವಾದ ಭಕ್ಷ್ಯಗಳನ್ನ ಇಲ್ಲಿ ಗ್ರಾಹಕರು ಆಸ್ವಾದಿಸುತ್ತಾರೆ. ದುಬೈ ಮೂಲದ ಗ್ರಾಹಕರಿಗೆ ಇದು ಹೇಳಿ ಮಾಡಿಸಿದ ರೆಸ್ಟೋರೆಂಟ್ ಎಂದು ಹೇಳಲಾಗುತ್ತಿದೆ.
ಜಡ್ಡು ಫುಡ್ ನಿಮಗೆ ಗೊತ್ತಾ..?
ಭಾರತದ ಆಲ್​ರೌಂಡರ್​ ರವೀಂದ್ರ ಜಡೇಜಾ ಅವರು ಜಡ್ಡು ಫುಡ್​ ಫೀಲ್ಡ್​​ ರೆಸ್ಟೋರೆಂಟ್​ ಅನ್ನು ಗುಜರಾತ್​ನ ರಾಜ್​​ಕೋಟ್​ ನಗರದಲ್ಲಿ ಸ್ಥಾಪನೆ ಮಾಡಿದ್ದಾರೆ. 2012ರಲ್ಲಿ ಇದನ್ನು ಆರಂಭಿಸಿದ್ದು ಇಲ್ಲಿಗೆ 12 ವರ್ಷಗಳು ಆಗಿವೆ. ಇದರಲ್ಲಿ ಫೇಮಸ್​ ಆಹಾರಗಳೆಂದರೆ ಮೆಕ್ಸಿಕನ್, ಥಾಯ್, ಚೈನೀಸ್ ಮತ್ತು ಪಂಜಾಬಿ ಪಾಕಪದ್ಧತಿಗೆ ಖ್ಯಾತಿ ಗಳಿಸಿದೆ.
ಇದನ್ನೂ ಓದಿ: ಚಾಮುಂಡಿ ಬೆಟ್ಟದ ಮೇಲಿದೆಯಾ ಸಿದ್ದರಾಮಯ್ಯ ಸರ್ಕಾರದ ಕಣ್ಣು..? ರಿಟ್ ಅರ್ಜಿ ಸಲ್ಲಿಸಿದ ರಾಜಮಾತೆ
ಯುರೋಪ್‌ಗೂ ಭಾರತದ ಆಹಾರದ ರುಚಿ
ಕ್ರಿಕೆಟ್‌ನಿಂದ ನಿವೃತ್ತರಾದ ಬಳಿಕ ಎಡಗೈ ಬ್ಯಾಟ್ಸ್​​ಮನ್ ಸುರೇಶ್ ರೈನಾ, 2023ರಲ್ಲಿ ನೆದರ್‌ಲ್ಯಾಂಡ್‌ನ ರಾಜಧಾನಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ರೆಸ್ಟೋರೆಂಟ್ ಆರಂಭಿಸಿದ್ದಾರೆ. ಇದಕ್ಕೆ ರೈನಾ ಇಂಡಿಯನ್ ರೆಸ್ಟೊರೆಂಟ್ ಎಂದು ನಾಮಕರಣ ಮಾಡಿದ್ದಾರೆ. ಇದರ ಉದ್ಘಾಟನೆ ವೇಳೆ ಭಾರತದ ಆಹಾರ ಶೈಲಿಗಳ ರುಚಿ ಕುರಿತು ಯುರೋಪ್‌ಗೆ ಉಣ ಬಡಿಸಲಾಗುವುದು ಎಂದು ರೈನಾ ಹೇಳಿದ್ದರು.
ಮಾಜಿ ಕ್ರಿಕೆಟರ್​ ಕಪಿಲ್ ದೇವ್
ಕಪಿಲ್ ದೇವ್ ಲೆಜೆಂಡರಿ ಕ್ರಿಕೆಟರ್​​, ಮೊಟ್ಟ ಮೊದಲ ಏಕದಿನ ವಿಶ್ವಕಪ್​ ತಂದು ಕೊಟ್ಟ ಭಾರತ ಮಾಜಿ ಕ್ಯಾಪ್ಟನ್​. ಇವರು ಬಿಹಾರದ ರಾಜಧಾನಿ ಪಾಟ್ನಾ ಸಿಟಿಯಲ್ಲಿ ಕಪಿಲ್​ ದೇವ್​ ಇಲೆವೆನ್ಸ್​ ಎನ್ನುವ ಐಷಾರಾಮಿ ರೆಸ್ಟೋರೆಂಟ್ ಹೊಂದಿದ್ದಾರೆ. ಇದನ್ನು 2008ರಲ್ಲಿ ಆರಂಭಿಸಿದ್ದಾರೆ. ಭಾರತದ ವೈವಿಧ್ಯಮಯ ಆಹಾರ ಪದ್ಧತಿಗೆ ಫೇಮಸ್ ಆಗಿದ್ದು ಈ ಭಾಗದ ಜನರಿಗೆ ನೆಚ್ಚಿನ ತಾಣವಾಗಿದೆ.
ಇದನ್ನೂ ಓದಿ: ಎರಡು ಬೈಕ್​ಗಳ ಮಧ್ಯೆ ಭೀಕರ ಮುಖಾಮುಖಿ ಡಿಕ್ಕಿ.. ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ
ಜಹೀರ್​ ಖಾನ್ ರೆಸ್ಟೋರೆಂಟ್
ಟೀಮ್ ಇಂಡಿಯಾದ ಮಾಜಿ ಫೇಸ್ ಬೌಲರ್​ ಜಹೀರ್​ ಖಾನ್ ಕೂಡ ತಮ್ಮದೇ ಆದ ಜಹೀರ್​ ಖಾನ್ಸ್ ಡೈನ್ ಫೈನ್ ಎಂಬ ಹೈಫೈ ರೆಸ್ಟೋರೆಂಟ್ ಹೊಂದಿದ್ದಾರೆ. ಭವ್ಯವಾದ ವಾತಾವರಣ ಹೊಂದಿದ್ದು ಜೊತೆಗೆ ವಿಧ ವಿಧವಾದ ಕಾಂಟಿನೆಂಟಲ್ ಮತ್ತು ಓರಿಯೆಂಟಲ್ ಆಹಾರ ತಯಾರಿಸುವುದರಿಂದ ಇದು ಸೆಲೆಬ್ರಿಟಿಗಳಿಗೆ ಹಾಟ್‌ಸ್ಪಾಟ್ ಆಗಿದೆ. ​
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ