newsfirstkannada.com

ಕ್ರಿಕೆಟ್​ ನಿವೃತ್ತಿ ಪ್ಲಾನ್ ತಿಳಿಸಿದ ಕೊಹ್ಲಿ.. ಯಾರ ಕಣ್ಣಿಗೂ ಕಾಣಲ್ಲ ಎಂದಿದ್ದೇಕೆ ಕಿಂಗ್?

Share :

Published May 17, 2024 at 1:51pm

Update May 17, 2024 at 2:10pm

  ಕಿಂಗ್ ಕೊಹ್ಲಿ ನಿವೃತ್ತಿ ಕೊಡೋದ್ಯಾವಾಗ..?

  ನಿವೃತ್ತಿ ಬಗ್ಗೆ ಕೊಹ್ಲಿ ಭಾವುಕ.. ಹೇಳಿದ್ದೇನು..?

  ವಿಷಾದ ಆಗಲು ಯಾರಿಗೂ ಬಿಡಲು ಅಂದಿದ್ದೇಕೆ..?

ಕಿಂಗ್ ಕೊಹ್ಲಿ ಕ್ರಿಕೆಟ್​​ಗೆ ಗುಡ್​ಬೈ ಹೇಳೋದ್ಯಾವಾಗ? ಉತ್ತರ ನಿಗೂಢವಾಗಿದೆ. ಮಿಲಿಯನ್ ಡಾಲರ್​​​ ಪ್ರಶ್ನೆಗೆ ಇದೀಗ ರನ್ ಮಷೀನ್​​ ಉತ್ತರಿಸಿದ್ದಾರೆ. ವಿದಾಯದ ಬಗ್ಗೆ ಭಾವುಕ ಮಾತುಗಳನ್ನಾಡಿದ್ದಾರೆ.

ಕ್ರಿಕೆಟ್ ಸಾಮ್ರಾಜ್ಯವನ್ನ ಕಬ್ಜಾ ಮಾಡಿರೋ ಕಿಂಗ್ ಕೊಹ್ಲಿಗೆ, ಈಗಾಗ್ಲೇ 35 ವರ್ಷವಾಗಿದೆ. ಈ ಸೆಂಚುರಿ ಸಾಮ್ರಾಟ ಯಾವಾಗ ಕ್ರಿಕೆಟ್​ಗೆ ಗುಡ್​ಬೈ ಹೇಳ್ತಾರೆ ಅನ್ನೋದು, ಮಿಲಿಯನ್​ ಡಾಲರ್​​ ಪ್ರಶ್ನೆಯಾಗಿದೆ. ಕ್ರಿಕೆಟ್ ವಲಯದಲ್ಲಿ ಈ ಬಗ್ಗೆ ಆಗಾಗ ಚರ್ಚೆ ನಡೆಯುತ್ತೆ. ಆದರೆ ಕಿಂಗ್ ಕೊಹ್ಲಿ ಮಾತ್ರ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಉತ್ತಮ ಪ್ರದರ್ಶನ ಕಡೆ ಗಮನ ನೀಡಿದ್ರು. ಆದ್ರೀಗ ರನ್ ಮಷೀನ್​ ಫಾರ್​ ದ ಫಸ್ಟ್​​​ ಟೈಮ್​​, ತಮ್ಮ ರಿಟೈರ್​ಮೆಂಟ್​​ ಪ್ಲಾನ್​ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಇದನ್ನೂ ಓದಿ:ಗುಡ್​ ನ್ಯೂಸ್​..! ಕೇವಲ ಮೂರು ದಿನದಲ್ಲಿ 1 ಲಕ್ಷ ಸಿಗಲಿದೆ.. ನಿಯಮ ಬದಲಿಸಿದೆ EPFO

ರಿವೀಲ್​ ಆಯ್ತು ಕಿಂಗ್​ ಕೊಹ್ಲಿ ರಿಟೈರ್​​ಮೆಂಟ್​​ ಪ್ಲಾನ್​​​..!
ಪ್ರತಿಯೊಬ್ಬ ಕ್ರಿಕೆಟಿಗನ ಕರಿಯರ್​ಗೆ, ಕೊನೆ ಅನ್ನೋದು ಇದ್ದೇ ಇರುತ್ತೆ. ಅಂತೆಯೇ ಮಾಡ್ರನ್ ಡೇ ಕ್ರಿಕೆಟ್ ದೊರೆ, ಒಂದು ದಿನ ಆರ್ಭಟವನ್ನ ನಿಲ್ಲಿಸಲೇಬೇಕು. ಅದ್ಯಾವಾಗ ಅನ್ನೋದು ಮಾತ್ರ, ದೊಡ್ಡ ಪ್ರಶ್ನೆಯಾಗಿ ಕಾಡ್ತಿತ್ತು. ಸದ್ಯ ಆ ಎಲ್ಲಾ ಕುತೂಹಲಕ್ಕೆ ವಿರಾಟ್ ತೆರೆ ಎಳೆದಿದ್ದಾರೆ. ಸಿಎಸ್​ಕೆ ಎದುರಿನ ನಿರ್ಣಾಯಕ ಕದನಕ್ಕೂ ಮುನ್ನ, ನಿವೃತ್ತಿ ಪ್ಲಾನ್​ ಬಗ್ಗೆ ಮಾತನಾಡಿದ್ದಾರೆ.

ಒಬ್ಬ ಕ್ರೀಡಾಪಟುವಾಗಿ ತಮ್ಮ-ತಮ್ಮ ವೃತ್ತಿ ಜೀವನವನ್ನು ಮುಗಿಸಲು ಒಂದು ಕೊನೆ ದಿನ ಬರುತ್ತೆ. ಅಚ್ಚರಿ ರೀತಿಯಲ್ಲಿ ನಾನು ನನ್ನ ವೃತ್ತಿ ಜೀವನವನ್ನು ಮುಗಿಸಲು ಸಾಧ್ಯವಿಲ್ಲ. ಹಾಗಾಗಿ ನಿರ್ದಿಷ್ಟ ದಿನದಂದು ನನ್ನ ಕಡೆಯಿಂದ ಎಷ್ಟು ಸಾಧ್ಯವೋ ಅದನ್ನು ಮಾಡುತ್ತೇನೆ. ಏಕೆಂದರೆ ಇದನ್ನು ನಾನು ಶಾಶ್ವತವಾಗಿ ಮುಂದುವರಿಸಲು ಸಾಧ್ಯವಿಲ್ಲ-ವಿರಾಟ್ ಕೊಹ್ಲಿ, ಕ್ರಿಕೆಟಿಗ

‘ಸಾಕು ಅನಿಸಿದ ದಿನವೇ ವಿದಾಯಕ್ಕೆ ಸಿದ್ಧ’..!
ನಿವೃತ್ತಿ ಬಗ್ಗೆ ಮುಂದುವರಿದು ಮಾತನಾಡಿರೋ ಕೊಹ್ಲಿ ಸಾಕು ಅನ್ನಿಸಿದ ದಿನವೇ ಗುಡ್​ಬೈ ಹೇಳ್ತೀನಿ. ಯಾರ ಸಲಹೆ ನನಗೆ ಅಗತ್ಯವಿಲ್ಲ. ಎಲ್ಲಾ ಸಾಧಿಸಿಯೇ ನಿವೃತ್ತಿ ಕೊಡ್ತೀನಿ. ಯಾವುದೇ ಕಾರಣಕ್ಕೂ ವಿದಾಯ ಬಗ್ಗೆ ವಿಷಾದ ಆಗಬಾರದು ಅಂತ ಹೇಳಿದ್ದಾರೆ.

ನಾನು ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ವಿಷಾದ ಆಗಬಾರದು. ಖಂಡಿತ ಹಾಗಾಗಲು ನಾನು ಬಿಡುವುದಿಲ್ಲ ಎಂಬ ವಿಶ್ವಾಸ ನನಗಿದೆ. ಹಾಗಾಗಿ ನಾನು ಕ್ರಿಕೆಟ್‌ ಆಡುವಷ್ಟು ದಿನಗಳ ಕಾಲ ನನ್ನಿಂದ ಸಾಧ್ಯವಾದದನ್ನು ಕೊಡಲು ಬಯಸುತ್ತೇನೆ. ಒಮ್ಮೆ ನಿವೃತ್ತಿ ಕೊಟ್ಟರೆ ಮತ್ತೆ ಯಾರ ಕಣ್ಣಿಗೂ ಕಾಣಲ್ಲ-ವಿರಾಟ್ ಕೊಹ್ಲಿ, ಕ್ರಿಕೆಟಿಗ

ಇದನ್ನೂ ಓದಿ:ವೈದ್ಯರ ಮಹಾ ಯಡವಟ್ಟು.. ಕೈಬೆರಳಿಗೆ ಆಪರೇಷನ್ ಮಾಡಬೇಕಿದ್ದ ಬಾಲಕಿಯ ನಾಲಿಗೆಗೆ ಕತ್ತರಿ..!

ನಿವೃತ್ತಿ ಸದ್ಯಕ್ಕೆ ದೂರ..!
ಸದ್ಯಕ್ಕಂತೂ ಕಿಂಗ್ ಕೊಹ್ಲಿ ಫುಲ್​​ ಫಿಟ್​​ ಅಂಡ್ ಫೈನ್ ಆಗಿದ್ದಾರೆ. 35ನೇ ವಯಸ್ಸಿನಲ್ಲಿ ಯಂಗ್​​ಸ್ಟರ್ಸ್​ ನಾಚುವಂತ ಫಿಟ್ನೆಸ್​​​​ ಹಾಗೂ ಫಾರ್ಮ್​ ಕಾಯ್ದುಕೊಂಡಿದ್ದಾರೆ. ವರ್ಷಗಳೂ ಉರುಳಿದಂತೆ ಕಿಂಗ್ ಕೊಹ್ಲಿ ಆಟದ ವೈಖರಿ ಬದಲಾಗ್ತಿದೆ. ಆಕ್ರಮಣಕಾರಿ ಆಟವಾಡಿ ಫ್ಯಾನ್ಸ್​ನ​​​​​​​​​​​​ ರಂಜಿಸ್ತಿದ್ದಾರೆ. ಸದ್ಯಕ್ಕಿರೋ ಕೊಹ್ಲಿ ಫಿಟ್ನೆಸ್​ ನೋಡಿದ್ರೆ ಅವರಿನ್ನೂ 4 ರಿಂದ ಐದು ವರ್ಷ ಆಡಬಹುದು. ಸದ್ಯಕ್ಕಂತೂ ವಿರಾಟ್ ನಿವೃತ್ತಿ ವಿಚಾರ ದೂರದ ಮಾತಾಗಿದೆ. ಅವರ ಮಾತುಗಳಲ್ಲೆ ಆ ಕಾನ್ಫಿಡೆನ್ಸ್ ಇದೆ. ಆಡಿದಷ್ಟು ವರ್ಷ ಅಭಿಮಾನಿ ದೇವರುಗಳನ್ನು ರಂಜಿಸುವಂತಾಗಲಿ ಎಂಬುವುದು ಎಲ್ಲರ ಆಶಯವಾಗಿದೆ.

ಇದನ್ನೂ ಓದಿ:ಪ್ಲೇ ಆಫ್​ಗೆ ಎಂಟ್ರಿಕೊಟ್ಟ SRH; ಸಿಎಸ್​​ಕೆ ವಿರುದ್ಧ ಭಾರೀ ಅಂತರದಿಂದ ಗೆದ್ದರೆ ಮಾತ್ರ ಆರ್​ಸಿಬಿಗೆ ಚಾನ್ಸ್​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕ್ರಿಕೆಟ್​ ನಿವೃತ್ತಿ ಪ್ಲಾನ್ ತಿಳಿಸಿದ ಕೊಹ್ಲಿ.. ಯಾರ ಕಣ್ಣಿಗೂ ಕಾಣಲ್ಲ ಎಂದಿದ್ದೇಕೆ ಕಿಂಗ್?

https://newsfirstlive.com/wp-content/uploads/2024/05/KOHLI-13.jpg

Load More