Advertisment

‘ವಿರಾಟ್​ ಕೊಹ್ಲಿ ನನ್ನ ಕ್ಯಾಪ್ಟನ್ಸಿಯಲ್ಲಿ ಆಡಿದ್ದರು’- ಮಾಜಿ DCM ತೇಜಸ್ವಿ ಯಾದವ್ ಅಚ್ಚರಿ ಹೇಳಿಕೆ!

author-image
Bheemappa
Updated On
‘ವಿರಾಟ್​ ಕೊಹ್ಲಿ ನನ್ನ ಕ್ಯಾಪ್ಟನ್ಸಿಯಲ್ಲಿ ಆಡಿದ್ದರು’- ಮಾಜಿ DCM ತೇಜಸ್ವಿ ಯಾದವ್ ಅಚ್ಚರಿ ಹೇಳಿಕೆ!
Advertisment
  • ವಿರಾಟ್ ಕೊಹ್ಲಿ ಮಾಜಿ ಸಿಎಂ ಮಗನ ಜೊತೆ ಕ್ರಿಕೆಟ್ ಆಡಿದ್ರಾ?
  • ಇಂಡಿಯಾ ಟೀಮ್​ನಲ್ಲಿ ನನ್ನ ಬ್ಯಾಚ್​ಮೆಂಟ್ಸ್​ ಇನ್ನು ಇದ್ದಾರೆ
  • ಮಾಜಿ DCM ತೇಜಸ್ವಿ ಯಾದವ್ ಕ್ರಿಕೆಟ್ ಬಿಟ್ಟಿರುವುದು ಏಕೆ?

ವಿರಾಟ್ ಕೊಹ್ಲಿ ಜೊತೆ ಕ್ರಿಕೆಟ್ ಆಡಬೇಕು ಎನ್ನುವುದು ಅದೆಷ್ಟೋ ಜನರ ಆಸೆಯಾಗಿರುತ್ತದೆ. ಅವರ ಜೊತೆ ಸೆಲ್ಫಿ ಕ್ಲಿಕ್ ಮಾಡಿಕೊಂಡರೆ ಸಾಕೆಂದು ಎಷ್ಟೋ ಫ್ಯಾನ್ಸ್ ಕಾತುರದಿಂದ ಇದ್ದಾರೆ. ಆದರೆ ಇದೀಗ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಮಗ ಆರ್​​ಜೆಡಿ ನಾಯಕ ತೇಜಸ್ವಿ ಯಾದವ್ ಅಚ್ಚರಿ ಮೂಡುವಂತ ಹೇಳಿಕೆ ನೀಡಿದ್ದಾರೆ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ತೇಜಸ್ವಿ ಯಾದವ್​ರನ್ನ ಟ್ರೋಲ್ ಮಾಡಲಾಗುತ್ತಿದೆ.

Advertisment

ಆರ್​ಜೆಡಿ ನಾಯಕ ತೇಜಸ್ವಿ ಪ್ರಸಾದ್ ಯಾದವ್, ಬಿಹಾರದ ಮಾಜಿ ಡಿಸಿಎಂ. ಇವರು ಯುವಕರಾಗಿದ್ದಾಗ ದೇಶಿಯ ಕ್ರಿಕೆಟರ್ ಕೂಡ ಆಗಿದ್ದರಂತೆ. ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಆಡುವಾಗ ತಮ್ಮ ಕ್ಯಾಪ್ಟನ್ಸಿ ಅಡಿ ವಿರಾಟ್​ ಕೊಹ್ಲಿಯವರು ಆಡುತ್ತಿದ್ದರು. ಕ್ರಿಕೆಟ್​ನಲ್ಲಿರುವಾಗ ಸ್ಟಾರ್ ಕ್ರಿಕೆಟರ್ ಆಗಿದ್ದೆ. ಆದರೆ ಇಂಜುರಿಯಾದ ಬಳಿಕ ಕ್ರಿಕೆಟ್​ನಿಂದ ದೂರು ಉಳಿದೆ. ಆ ಮೇಲೆ ಎಲ್ಲವೂ ಮರೆತು ಹೋಗಿದೆ. ಹೀಗಾಗಿ ಕ್ರಿಕೆಟ್​ನಲ್ಲಿ ಯಶಸ್ವಿಯಾಗಲು ಆಗಲಿಲ್ಲ. ದೇಶಿಯ ಕ್ರಿಕೆಟ್​ನಲ್ಲಿ ನನ್ನ ನಾಯಕತ್ವದಡಿ ವಿರಾಟ್ ಕೊಹ್ಲಿ ಸೇರಿದಂತೆ ಭಾರತದ ಅನೇಕ ಪ್ಲೇಯರ್ಸ್ ಆಡಿದ್ದರು​ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಕೊಹ್ಲಿ ಸೀಕ್ರೆಟ್​ ರಿವೀಲ್ ಮಾಡಿದ ಮಾಜಿ ಕ್ರಿಕೆಟರ್.. ವಿರಾಟ್ ಫ್ಲೈಟ್​​ನಲ್ಲಿ ಏನ್ ಮಾಡ್ತಿದ್ರು?

publive-image

ನಾನೊಬ್ಬ ಕ್ರಿಕೆಟರ್ ಆಗಿದ್ದರೂ ಆ ಬಗ್ಗೆ ಯಾರೂ ಮಾತನಾಡುವುದಿಲ್ಲ. ಕೊಹ್ಲಿ ನನ್ನ ಕ್ಯಾಪ್ಟನ್ಸಿ ಅಡಿ ಆಡಿದ್ದಾರೆ. ಇದರ ಕುರಿತು ಯಾರು ಏನನ್ನು ಹೇಳಲ್ಲ. ವೃತ್ತಿಪರನಾಗಿ ನಾನು ಉತ್ತಮ ಕ್ರಿಕೆಟ್ ಆಗಿದ್ದೆ. ಅನೇಕ ಟೀಂ ಇಂಡಿಯಾ ಆಟಗಾರರು ನನ್ನ ಬ್ಯಾಚ್‌ಮೇಟ್‌ಗಳು. ಸದ್ಯ ಅವರು ಭಾರತ ತಂಡದಲ್ಲಿ ಆಡುತ್ತಿದ್ದಾರೆ. ಇಂಜುರಿ ಕಾರಣ ಕ್ರಿಕೆಟ್ ಆಡಲು ಆಗಲಿಲ್ಲ ಎಂದು ಹೇಳಿದ್ದಾರೆ. ಇನ್ನು ತೇಜಸ್ವಿ ಯಾದವ್ ಹೇಳಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರು ವಿಧ ವಿಧವಾದ ಕಮೆಂಟ್​​ಗಳನ್ನು ಮಾಡುತ್ತಿದ್ದಾರೆ.

Advertisment


">September 14, 2024

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment