ಅನುಷ್ಕಾ ಶರ್ಮಾ ಕೊಟ್ಟ ಕಾಟಕ್ಕೆ ವಿರಾಟ್ ಕೊಹ್ಲಿಗೆ ಬೇಸರ.. ಅಸಲಿಗೆ ಏನಾಯಿತು?

author-image
Bheemappa
Updated On
ಅನುಷ್ಕಾ ಶರ್ಮಾ ಕೊಟ್ಟ ಕಾಟಕ್ಕೆ ವಿರಾಟ್ ಕೊಹ್ಲಿಗೆ ಬೇಸರ.. ಅಸಲಿಗೆ ಏನಾಯಿತು?
Advertisment
  • ಇದ್ಯಾವ ರೂಲ್ ಎಂದು ಸಿಟ್ಟಾದ ವಿರಾಟ್​ ಕೊಹ್ಲಿ ಆಮೇಲೆ ಮಾಡಿದ್ದೇನು?
  • ಅನುಷ್ಕಾ ಆರ್ಡರ್​ಗೆ ವಿರಾಟ್​ ಸೈಲೆಂಟ್, ಹೆಂಡತಿ ಹೇಳಿದಂತೆ ನಡೀತು!
  • ಅಲ್ಲೇ ಡ್ರಾ ಅಲ್ಲೇ ಬಹುಮಾನ ಫಿಕ್ಸ್​. ಏಟಿಗೆ ಏಟು. ಮಾತಿಗೆ ತಿರುಗೇಟು

ವಿರಾಟ್ ಕೊಹ್ಲಿ ಈ ಹೆಸರು ಕೇಳಿದ್ರೆ ಸಾಕು.. ಎದುರಾಳಿ ತಂಡಗಳಲ್ಲಿ ನಡುಕ ಶುರುವಾಗುತ್ತೆ. ಈತನ ಬ್ಯಾಟಿಂಗ್ ಪರಾಕ್ರಮಕ್ಕೆ ಬೆಚ್ಚಿ ಬೀಳ್ತಾರೆ. ತನ್ನ ರಣಭಂಯಕರ ಬ್ಯಾಟಿಂಗ್​ನಿಂದ​ ಲೆಕ್ಕ ಇಲ್ಲದಷ್ಟು ಬೌಲರ್​ಗಳಿಗೆ ಕಾಟ ಕೊಟ್ಟಿದ್ದಾರೆ. ಇಂತಾ ಕೊಹ್ಲಿಗೆ ಪತ್ನಿ ಅನುಷ್ಕಾ ಶರ್ಮಾ ಸಖತ್​​​ ಕಾಟ ಕೊಟ್ಟಿದ್ದಾರೆ. ಅನುಷ್ಕಾ ಕೊಟ್ಟ ಕಾಟಕ್ಕೆ ಕಿಂಗ್​ ಕೊಹ್ಲಿ ಬೇಸತ್ತು ಹೋಗಿದ್ದಾರೆ.

ವಿರಾಟ್ ಕೊಹ್ಲಿ ವಿಶ್ವ ಕ್ರಿಕೆಟ್​ನ ರಣ ವಿಕ್ರಮ. ಅಗ್ರೆಸ್ಸಿವ್ ಆಟಕ್ಕೆ ಈತನೇ ಕೇರ್ ಆಫ್ ಅಡ್ರೆಸ್. ವಿರಾಟ್​ ಹೆಸರು ಕೇಳಿದರೆ ಸಾಕು. ಎದುರಾಳಿಗಳ ಎದೆಯಲ್ಲೇ ನಡುಕ ಶುರುವಾಗುತ್ತೆ. ಹೇಗೆಪ್ಪಾ ಕೊಹ್ಲಿನ ಕಟ್ಟಿ ಹಾಕೋದು ಅನ್ನೋ ಆತಂಕ ಇರುತ್ತೆ. ಕೊಹ್ಲಿನ ಕೆಣಕಿದರೆ, ಅಲ್ಲೇ ಡ್ರಾ ಅಲ್ಲೇ ಬಹುಮಾನ ಫಿಕ್ಸ್​. ಏಟಿಗೆ ಏಟು. ಮಾತಿಗೆ ತಿರುಗೇಟು ನೀಡೋದೆ ಕೊಹ್ಲಿ ಜಾಯಮಾನ.

publive-image

ವಿರಾಟ್​ ವೀರಾವೇಶಕ್ಕೆ ಚೆಲ್ಲಾಪಿಲ್ಲಿಯಾದ ಬೌಲರ್​​​ಗಳಿದ್ದಾರೆ. ವಿರಾಟ್​ ಕಾಟಕ್ಕೆ ಕನಸಲ್ಲೂ ಬೆಚ್ಚಿ ಬಿದ್ದಿರುವ ಬೌಲರ್​ಗಳೂ ಇದ್ದಾರೆ. ಹೀಗೆ ಕಾಲ್ಕೆರೆದು ಬಂದವರಿಗೆ ಬುದ್ಧಿ ಕಲಿಸುವ ಕೊಹ್ಲಿ, ಅನುಷ್ಕಾ ಶರ್ಮಾ ಮುಂದೆ ಮಂಡಿಯೂರಿದ್ದಾರೆ.

ಕಿಂಗ್​ ಕೊಹ್ಲಿಗೆ ಕಾಡಿದ ಪತ್ನಿ ಅನುಷ್ಕಾ ಶರ್ಮಾ..!

ಅರೇ ಕಿಂಗ್ ಕೊಹ್ಲಿಯನ್ನ ಕಾಡೋದಾ.. ನೋ ಚಾನ್ಸ್ ಅನ್ನೋದು ಬಹುತೇಕರ ಮಾತು. ಆದ್ರೆ. ಇದು ಪತ್ನಿ ಅನುಷ್ಕಾ ಶರ್ಮಾ ಸುಳ್ಳಾಗಿಸಿದ್ದಾರೆ. ಕೊಹ್ಲಿ ಕಿಂಗ್ ಎನಿಸಿಕೊಂಡ ಆಟದಲ್ಲೇ ವಿರಾಟ್​ ಕೊಹ್ಲಿಯನ್ನ ಎಡೆಬಿಡದೇ ಕಾಡಿದ್ದಾರೆ.

ಅನುಷ್ಕಾ ಗಲ್ಲಿ ಕ್ರಿಕೆಟ್ ರೂಲ್ಸ್​ಗೆ ಕೊಹ್ಲಿ ಥಂಡಾ!

ಪತ್ನಿ ಜೊತೆಗೆ ಕೊಹ್ಲಿ ಗಲ್ಲಿ ಕ್ರಿಕೆಟ್​ ಆಡಿದ್ದಾರೆ. ಆದ್ರೆ, ಆಟ ಆರಂಭಕ್ಕೂ ಮೊದಲೇ ಅನುಷ್ಕಾ ಹೇಳಿದ ರೂಲ್ಸ್​ಗೆ ಕೊಹ್ಲಿ ಬೇಸ್ತು ಬಿದ್ದಿದ್ದಾರೆ. ಮೊದಲು ಬ್ಯಾಟಿಂಗ್ ಮಾಡೊಕೆ ಹೊರಟ ಅನುಷ್ಕಾ, ಫಸ್ಟ್ ಬಾಲ್​ನಲ್ಲೇ ಔಟಾದ್ರು. ಈ ವೇಳೆ ಅನುಷ್ಕಾ ಹೇಳಿದ ಮಾತು ಕೇಳಿದರೆ. ನಿಮಗೆ ನೀವು ಆಡಿದ ಗಲ್ಲಿ ಕ್ರಿಕೆಟ್ ನೆನಪಾಗೋದು ಗ್ಯಾರಂಟಿ.
ಸರಿ ಆಯ್ತು ಅಂತ ಕೊಹ್ಲಿ, ಮತ್ತೊಂದು ಬಾಲ್ ಎಸೆದರು. ಆದರೆ ಫಸ್ಟ್ ಬೌಲ್ ಡ್ರಯಲ್ ಎಂದು ಅನುಷ್ಕಾ ಹೇಳಿದಕ್ಕೆ ವಿರಾಟ್ ಇದು ಮೋಸ ಎಂದರು.

ಇದನ್ನೂ ಓದಿ:RCBಗೆ ಈ ಐವರೇ ರಿಟೈನ್ ಆಗಲು ಮುಖ್ಯ ಕಾರಣ ಏನು.. ಕೊಹ್ಲಿ ಜೊತೆ ಸ್ಥಾನ ಪಡೆದ ಪ್ಲೇಯರ್ಸ್?

publive-image

ಕೊಹ್ಲಿ ಬ್ಯಾಟಿಂಗ್.. ಟೆರೇಸ್ ಮೇಲಕ್ಕೆ ಚೆಂಡು..!

ಕೊನೆಗೂ ಕೊಹ್ಲಿಗೆ ಬ್ಯಾಟಿಂಗ್ ಸಿಗ್ತು. ಮೊದಲ ಎಸೆತವನ್ನೇ ಟೆರೇಸ್ ಮೇಲಕ್ಕೆ ಹೊಡೆದು ಕೊಹ್ಲಿ ನಕ್ಕು ನಲಿದ್ರು ಕೂಡ. ಆದ್ರೆ ಆಮೇಲೆ ಕೊಹ್ಲಿಗೆ ಶಾಕ್ ಕಾದಿತ್ತು. ಬಾಲ್ ಯಾರು ಹೊಡೆದಿದ್ದಾರೋ ಅವರೇ ಹೋಗಿ ಬಾಲ್ ತಗೊಂಡು ಬರಬೇಕು ಎಂದು ರೂಲ್ ಹೇಳುತ್ತಿದ್ದಂತೆ ಕೊಹ್ಲಿ ಬೇಸರದಲ್ಲೇ ಹೋಗಿ ಬಾಲ್ ತಗೊಂಡು ಬಂದು ಆಡಿದರು. ಟೆರೆಸ್​ ಮೇಲೆ ಹತ್ತಿ ಬಾಲ್​ ತೆಗೆದುಕೊಂಡು ಬಂದ ಕೊಹ್ಲಿ ಮತ್ತೊಂದು ಶಾಕ್​​ ಕಾದಿತ್ತು. ಆದ್ರೆ, ಈ ಬಾರಿ ಪತ್ನಿಯ ಕಾಟಕ್ಕೆ ಬೇಸತ್ತ ಕೊಹ್ಲಿ ತಾಳ್ಮೆ ಕಳೆದುಕೊಂಡರು. ಇದೆಲ್ಲ ಸಿರೀಯಸ್ ಅಲ್ಲ.. ಸ್ವೀಟ್​ ಕಪಲ್ಸ್​​ನ ಸ್ವೀಟ್ ಫೈಟ್ ಅಷ್ಟೇ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment