newsfirstkannada.com

ಆರ್​​​ಸಿಬಿ ನಾಶಕ್ಕೆ ವಿರಾಟ್​​ ಕೊಹ್ಲಿಯೇ ಕಾರಣ; ಎಳೆಎಳೆಯಾಗಿ ಸತ್ಯ ಬಿಚ್ಚಿಟ್ಟ ಸ್ಟಾರ್​​ ಕ್ರಿಕೆಟರ್..​​!

Share :

Published April 3, 2024 at 5:51pm

  ಆರ್​​ಸಿಬಿಗೆ ಮೂರು ಪಂದ್ಯಗಳಲ್ಲಿ ಹೀನಾಯ ಸೋಲು!

  16 ವರ್ಷದಲ್ಲಿ ಒಮ್ಮೆಯೂ ಕಪ್​ ಗೆಲ್ಲದ ಆರ್​​ಸಿಬಿ ಟೀಮ್​​

  ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ಸೋಲಿಗೆ ಕಾರಣವೇನು?

2024ರ ಇಂಡಿಯನ್ ಪ್ರೀಮಿಯರ್ ಲೀಗ್‌ 17ನೇ ಸೀಸನ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೆಟ್ಟ ಆರಂಭ ಪಡೆದುಕೊಂಡಿದೆ. ತಾನು ಆಡಿದ 4 ಪಂದ್ಯಗಳಲ್ಲಿ ಮೂರು ಸೋಲು ಸೋತಿದ್ದು, ಕೇವಲ ಒಂದು ಪಂದ್ಯ ಮಾತ್ರ ಸೋತಿದೆ. 2008 ರಿಂದಲೂ ಇದುವರೆಗೂ ಒಮ್ಮೆಯೂ ಆರ್​​ಸಿಬಿ ಟ್ರೋಫಿ ಗೆದ್ದಿಲ್ಲ. ಈ ಬಗ್ಗೆ ಭಾರತದ ಮಾಜಿ ಆಟಗಾರ ಅಂಬಟಿ ರಾಯುಡು ಕೆಂಡಕಾರಿದ್ದಾರೆ.

ಹಲವು ವರ್ಷಗಳಿಂದ ಆರ್‌ಸಿಬಿ ತಂಡದ ದೊಡ್ಡ ಸಮಸ್ಯೆ ಎಂದರೆ ಆಟಗಾರರಿಗೆ ಬೆಂಬಲ ನೀಡದೆ ಇರುವುದು. ಆರ್‌ಸಿಬಿ ಟೀಮ್​ ಶೇನ್ ವ್ಯಾಟ್ಸನ್, ಚಹಾಲ್, ಮಿಚೆಲ್ ಸ್ಟಾರ್ಕ್ ಮತ್ತು ಶಿವಂ ದುಬೆ ರೀತಿಯ ಆಟಗಾರರನ್ನೇ ಬಿಟ್ಟಿಕೊಟ್ಟಿದ್ದು ಎಂದರು.

ವಿರಾಟ್ ಕೊಹ್ಲಿ ಹಲವು ವರ್ಷಗಳ ಕಾಲ ಆರ್‌ಸಿಬಿ ನಾಯಕರಾಗಿದ್ದರು. ರೀಟೈನ್​ ಮತ್ತು ಹರಾಜು ಪ್ರಕ್ರಿಯೆಯಲ್ಲಿ ಇವರದ್ದೇ ಅಂತಿಮ ನಿರ್ಣಯ ಆಗಿತ್ತು. ಇಷ್ಟಾದ್ರೂ ತಂಡ ಗುಣಮಟ್ಟದ ಬೌಲರ್‌ಗಳನ್ನು ಎಂದಿಗೂ ಖರೀದಿಸಲಿಲ್ಲ. ಈ ಸಮಸ್ಯೆ ಆರ್‌ಸಿಬಿ ತಂಡದ ಮೇಲೆ ಪರಿಣಾಮ ಬೀರುತ್ತಿದೆ. ಬ್ಯಾಟಿಂಗ್ ಕ್ರಮಾಂಕದಲ್ಲೂ ಅದೇ ಕಥೆ. ವಿರಾಟ್ ಕೊಹ್ಲಿ ಔಟಾದ್ರೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಯಾವ ಆಟಗಾರನೂ ಇಲ್ಲ ಎಂದರು.

ಕೊಹ್ಲಿ ಜೊತೆಗಿದ್ದ ಅಗ್ರಮಾನ್ಯ ಆಟಗಾರರಿಗೆ ಬೆಂಬಲ ಸಿಗಲಿಲ್ಲ. ಅದೇ ಆಟಗಾರರು ಇತರ ಫ್ರಾಂಚೈಸಿಗಳನ್ನು ಸೇರಿದ ನಂತರ ಉತ್ತಮ ಪ್ರದರ್ಶನ ನೀಡಿದರು. ಕೊಹ್ಲಿ ಕೂಡ ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಲಿಲ್ಲ. ಕೊಹ್ಲಿ ಆರ್‌ಸಿಬಿಗಾಗಿ 7000 ರನ್ ಗಳಿಸಿದ್ದಾರೆ. ಆದರೆ ಅದೇ ತಂಡಕ್ಕಾಗಿ ಅಗ್ರ ರನ್ ಗಳಿಸಿದವರ ಪಟ್ಟಿಯಲ್ಲಿ ಇರುವ ಇನ್ನೊಬ್ಬ ಭಾರತೀಯ ಬ್ಯಾಟರ್ ಹೆಸರನ್ನು ಹೇಳಿ ನೋಡೋಣ. ಒಬ್ಬರಿಂದ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ ಎಂದರು.

ಇದನ್ನೂ ಓದಿ: ಕರ್ನಾಟಕದ ಆಟಗಾರನಿಗೆ ಅವಮಾನ ಮಾಡಿದ ಆರ್​​ಸಿಬಿ; ಅಸಲಿಗೆ ಆಗಿದ್ದೇನು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​​​ಸಿಬಿ ನಾಶಕ್ಕೆ ವಿರಾಟ್​​ ಕೊಹ್ಲಿಯೇ ಕಾರಣ; ಎಳೆಎಳೆಯಾಗಿ ಸತ್ಯ ಬಿಚ್ಚಿಟ್ಟ ಸ್ಟಾರ್​​ ಕ್ರಿಕೆಟರ್..​​!

https://newsfirstlive.com/wp-content/uploads/2024/03/KOHLI-1.jpg

Load More