/newsfirstlive-kannada/media/post_attachments/wp-content/uploads/2024/06/ROHIT_SHARMA-5.jpg)
ಜೂನ್ 29.. 140 ಕೋಟಿ ಭಾರತೀಯರು ಸಂಭ್ರಮಿಸಿದ ಸುದಿನ. ವೀರ ಕಲಿ ರೋಹಿತ್ ಟಿ20 ವಿಶ್ವಕಪ್ ಜಯಿಸಿ 17 ವರ್ಷಗಳ T20 ಟ್ರೋಫಿ ಬರವನ್ನ ನೀಗಿಸಿದ್ರು. ಇಡೀ ದೇಶಕ್ಕೆ ದೇಶವೇ ಸಂಭ್ರಮದಲ್ಲಿ ತೇಲಾಡ್ತಿತ್ತು. ಈ ಖುಷಿ ನಡುವೆ ರೋಹಿತ್, ಟಿ20 ಗುಡ್ಬೈ ಹೇಳಿ ಎಲ್ಲರನ್ನ ಅಚ್ಚರಿಗೆ ತಳ್ಳಿದ್ರು. ಚಾಂಪಿಯನ್ ಕ್ಯಾಪ್ಟನ್ ಏಕಾಏಕಿ ನಿವೃತ್ತಿ ನಿರ್ಧಾರ ಕೈಗೊಂಡಿದ್ದಾದ್ರು ಏಕೆ?.
ಇದನ್ನೂ ಓದಿ:ಭೀಕರ ಪ್ರವಾಹದ ನೀರಿಗೆ ಬಿದ್ದ ಶಾಸಕ.. 14 ಜಿಲ್ಲೆಗಳಲ್ಲಿ ಭರ್ಜರಿ ಮಳೆ ಮುನ್ಸೂಚನೆ; ರೆಡ್ ಅಲರ್ಟ್ ಅನೌನ್ಸ್
ನಾನು ಕರಿಯರ್ ಆರಂಭದಿಂದಲೂ ಟಿ20 ಮಾದರಿಯ ಆಟವನ್ನ ಸಂಭ್ರಮಿಸಿದ್ದೇನೆ. ನಿವೃತ್ತಿ ಹೇಳಲು ಇದಕ್ಕಿಂತ ಉತ್ತಮ ಟೈಮ್ ಬೇಕಿಲ್ಲ. ಪ್ರತಿ ಕ್ಷಣವನ್ನ ಪ್ರೀತಿಸಿದ್ದೇನೆ, ಸಂಭ್ರಮಿಸಿದ್ದೇನೆ. ಇದನ್ನೆ ನಾನು ಬಯಸಿದ್ದೆ, ಕೊನೆಗೆ ಟ್ರೋಫಿ ಗೆದ್ದಿದ್ದೇನೆ.
ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಘೋಷಿಸುವ ಬಗ್ಗೆ ನಾನು ಚಿಂತಿಸಿರಲಿಲ್ಲ. ಆದರೆ ಪರಿಸ್ಥಿತಿ ಹೀಗಿದೆ. ಇದು ಸೂಕ್ತ ಸಂದರ್ಭ ಎಂದು ನಾನು ಭಾವಿಸಿದೆ. ಕಪ್ ಗೆದ್ದು ವಿದಾಯ ಹೇಳುವುದಕ್ಕಿಂತ ಉತ್ತಮವಾದದ್ದು ಏನೂ ಇಲ್ಲ.ರೋಹಿತ್ ಶರ್ಮಾ, ಟೀಮ್ ಇಂಡಿಯಾ ಕ್ಯಾಪ್ಟನ್
ಇದನ್ನೂ ಓದಿ: ರೋಹಿತ್ ಉತ್ತರಾಧಿಕಾರಿ ಪಟ್ಟಕ್ಕಾಗಿ ಟಫ್ ಫೈಟ್.. ಕ್ಯಾಪ್ಟನ್ ರೇಸ್ನಲ್ಲಿ ನಾಲ್ವರು ಪ್ಲೇಯರ್ಸ್!
ಒಂದು ಕಡೆ ಟಿ20 ಫಾಮ್ಯಾಟ್ಗೆ ನಿವೃತ್ತಿ ಕೊಡಲು ಇದಕ್ಕಿಂತ ಉತ್ತಮ ಟೈಮ್ ಬೇಕಿಲ್ಲ ಎಂದು ಹೇಳುವ ರೋಹಿತ್ ಶರ್ಮಾ, ಇನ್ನೊಂದೆಡೆ ವಿಶ್ವಕಪ್ ಗೆದ್ದ ಸ್ವಲ್ಪ ಸಮಯದ ಬಳಿಕ ನಾನು ನಿವೃತ್ತಿ ಬಗ್ಗೆ ಪ್ಲಾನೇ ಮಾಡಿಲಿರಲಿಲ್ಲ ಅಂತಿದ್ದಾರೆ. ಈ ಭಿನ್ನ ಭಿನ್ನ ಹೇಳಿಕೆಗಳನ್ನ ಕೊಟ್ಟಿರೋದು ಒಂದೇ ದಿನ. ರೋಹಿತ್ ಶರ್ಮಾರ ಈ ದ್ವಂದ್ವ ಮಾತಿನ ಮರ್ಮ ಏನು ಅನ್ನೋದು ಕ್ರಿಕೆಟ್ ವಲಯದಲ್ಲಿ ಗಂಭೀರ ಚರ್ಚೆಯನ್ನ ಹುಟ್ಟು ಹಾಕಿದೆ.
ವಿಶ್ವಕಪ್ ಗೆಲ್ಲಿಸಿ ಕೊಟ್ಟು ದಿಢೀರ್ ನಿವೃತ್ತಿ ಘೋಷಿಸಿದ್ದೇಕೆ..?
17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಗೆಲ್ಲಿಸಿ ಕೊಟ್ಟ ರೋಹಿತ್ ಟಿ20 ಕ್ರಿಕೆಟ್ಗೆ ಗುಡ್ಬೈ ಹೇಳಿದ್ದು ಕ್ರಿಕೆಟ್ ಲೋಕವನ್ನ ಅಚ್ಚರಿಗೆ ತಳ್ಳಿದೆ. ಅವರು ಇಷ್ಟು ಬೇಗ ನಿವೃತ್ತಿ ಘೋಷಿಸಬಾರದಿತ್ತು. ಇನ್ನಷ್ಟು ವರ್ಷ ಭಾರತ ಪರ ಆಡಬೇಕಿತ್ತು ಅನ್ನೋದು ಅಭಿಮಾನಿಗಳ ಅಭಿಲಾಷೆ ಆಗಿತ್ತು. ಆದ್ರೆ ಅದ್ಯಾವುದಕ್ಕೆ ತಲೆಕೆಡಿಸಿಕೊಳ್ಳದೇ ರೋಹಿತ್ ಚುಟುಕು ಕ್ರಿಕೆಟ್ನಿಂದ ಹಿಂದೆ ಸರಿದಿದ್ದಾರೆ. ಇದಕ್ಕೆ ಕಾರಣ ಒತ್ತಡ. ಒತ್ತಡದಿಂದಲೇ ಇಂತಹ ನಿರ್ಧಾರ ಕೈಗೊಂಡ್ರಾ ಅನ್ನೋದಕ್ಕೆ ಅವರ ಮಾತುಗಳೇ ಪುಷ್ಠಿ ಕೊಡ್ತಿದೆ.
ಗೌತಿಯ ಆ ಡಿಮ್ಯಾಂಡ್ನಿಂದ ರೋಹಿತ್ ಟಿ20 ಕ್ರಿಕೆಟ್ ತೊರೆದ್ರಾ.?
ರಾಹುಲ್ ದ್ರಾವಿಡ್ ಬಳಿಕ ಗೌತಮ್ ಗಂಭೀರ್ ಟೀಮ್ ಇಂಡಿಯಾ ನೂತನ ಹೆಡ್ಕೋಚ್ ಆಗೋದು ಬಹುತೇಕ ಫೈನಲ್ ಆಗಿದೆ. ಅಧಿಕೃತವಾಗಿ ಅನೌನ್ಸ್ಮೆಂಟ್ ಒಂದೇ ಬಾಕಿ ಇದೆ. ಈ ಮುಂದಿನ ಕೋಚ್ ಗಂಭೀರ್ ಕಾರಣಕ್ಕೆ ರೋಹಿತ್, ಟಿ20 ಕ್ರಿಕೆಟ್ ತೊರೆದ್ರು ಅನ್ನೋ ಟಾಕ್ಸ್ ಕೇಳಿ ಬರ್ತಿದೆ. ಯಾಕಂದ್ರೆ ಗಂಭೀರ್ ಕೋಚ್ ಹುದ್ದೆಗೇರುವ ಮುನ್ನ ಬಿಸಿಸಿಐ ಬಳಿ ಕೆಲ ಡಿಮ್ಯಾಂಡ್ಗಳನ್ನ ಇಟ್ಟಿದ್ರು. ಆ ಡಿಮ್ಯಾಂಡ್ ಪೈಕಿ ಒಂದು ಡಿಮ್ಯಾಂಡ್ ಹಿಟ್ಮ್ಯಾನ್ ಹೊಡಿಬಡಿ ಆಟಕ್ಕೆ ಗುಡ್ಬೈ ಹೇಳುವಂತೆ ಮಾಡಿದೆ.
ಇದನ್ನೂ ಓದಿ: ಡಾಲಿ ಧನಂಜಯ್- ಉಪ್ಪಿ ನಡುವೆ ಬಿಗ್ ವಾರ್.. ಕೆಂಪೇಗೌಡ ಟೈಟಲ್ ಸಿಕ್ಕಿದ್ದು ಯಾರಿಗೆ?
ಸೀನಿಯರ್ಗಳಿಗೆ ಗೇಟ್ಪಾಸ್ ನೀಡಲು ಗಂಭೀರ್ ಡಿಮ್ಯಾಂಡ್..!
ಇನ್ನೇನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾದ ಹೊಸ ಹೆಡ್ಕೋಚ್ ಆಗಿ ಚಾರ್ಜ್ ತೆಗೆದುಕೊಳ್ಳುವ ಗೌತಮ್ ಗಂಭೀರ್, ಹಿರಿಯ ಆಟಗಾರರಿಗೆ ತಂಡದಿಂದ ಗೇಟ್ಪಾಸ್ ನೀಡಲು ಬೇಡಿಕೆ ಇಟ್ಟಿದ್ರು. 2026 ಟಿ20 ವಿಶ್ವಕಪ್ಗೆ ಹೊಸ ತಂಡವನ್ನ ಕಟ್ಟಬೇಕು. ಹಾಗಾಗಿ ಸೀನಿಯರ್ ಆಟಗಾರರನ್ನ ಕೈಬಿಡಬೇಕೆಂಬ ಬೇಡಿಕೆಯನ್ನ ಬಿಸಿಸಿಐ ಮುಂದಿಟ್ಟಿದ್ರು ಎಂದು ವರದಿಯಾಗಿದೆ. ಇದು ಗೊತ್ತಾಗುತ್ತಿದ್ದಂತೆ ಕ್ಯಾಪ್ಟನ್ ರೋಹಿತ್ ಶರ್ಮಾ ಸೇರಿ ಕಿಂಗ್ ಕೊಹ್ಲಿ ಹಾಗೂ ರವೀಂದ್ರ ಜಡೇಜಾ ದಿಢೀರನೆ ಟಿ20 ಕ್ರಿಕೆಟ್ಗೆ ಗುಡ್ಬೈ ಹೇಳಿದ್ದಾರೆ.
ಇದನ್ನೂ ಓದಿ: ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಮಗುವಿನ ಮೃತದೇಹ.. ಬೆಳಗ್ಗೆ ಉಯ್ಯಾಲೆಯಲ್ಲಿ ಪ್ರತ್ಯಕ್ಷ..! ಗಾಬರಿಬಿದ್ದ ಜನ
ಒತ್ತಡವೋ, ಸ್ವಯಂ ನಿರ್ಧಾರವೋ ಗೊತ್ತಿಲ್ಲ. ಆದರೆ ಚಾಂಪಿಯನ್ ಕ್ಯಾಪ್ಟನ್ ರೋಹಿತ್ ಶರ್ಮಾ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾಗಿದೆ. ರೋಹಿತ್ ಇಲ್ಲದೇ ಚುಟುಕು ಕ್ರಿಕೆಟ್ ನೋಡಲು ಬೇಸರ ನಿಜ. ಆದರೆ 17 ವರ್ಷಗಳ ಜರ್ನಿಯಲ್ಲಿ ಕಟ್ಟಿದ ಅದ್ಭುತ ಇನ್ನಿಂಗ್ಸ್ಗಳನ್ನ ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ