/newsfirstlive-kannada/media/post_attachments/wp-content/uploads/2024/06/VIRAT_KOHLI-11.jpg)
ಇಂದು ಗಯಾನಾದಲ್ಲಿ ನಡೆಯಲಿರೋ ಬಹುನಿರೀಕ್ಷಿತ 2024ರ ಟಿ20 ವಿಶ್ವಕಪ್ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್, ಟೀಮ್ ಇಂಡಿಯಾ ಸೆಣಸಲಿವೆ. ಫೈನಲ್ಗೆ ಹೋಗಲು ಇಂದಿನ ಪಂದ್ಯ ಟೀಮ್ ಇಂಡಿಯಾ ಹೇಗಾದ್ರೂ ಗೆಲ್ಲಲೇಬೇಕಿದೆ.
2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸತತ 6 ಗೆಲುವು ಸಾಧಿಸಿದೆ. ಗ್ರೂಮ್ ಸ್ಟೇಜ್ನಲ್ಲಿ ಟೀಮ್ ಇಂಡಿಯಾ 3 ಪಂದ್ಯ ಗೆದ್ದು ಸೂಪರ್ 8ಗೆ ಲಗ್ಗೆ ಇಟ್ಟಿತ್ತು. ನಂತರ ಈ ಸುತ್ತಿನಲ್ಲೂ ಅಫ್ಘಾನ್, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧವೂ ಗೆದ್ದ ಟೀಮ್ ಇಂಡಿಯಾ ಸೆಮಿ ಫೈನಲ್ಗೆ ಎಂಟ್ರಿ ನೀಡಿದೆ. ಈ ಪಂದ್ಯಕ್ಕೂ ಮುನ್ನವೇ ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಬಿಗ್ ಶಾಕ್ ಕೊಟ್ಟಿದ್ದಾರೆ.
ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಕೊಹ್ಲಿ 2024ರ ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನವೇನು ನೀಡಿಲ್ಲ. ಹಾಗಾಗಿ ಸೆಮಿ ಫೈನಲ್ನಲ್ಲಾದ್ರೂ ಕೊಹ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಮಿಂಚಲಿದ್ದಾರೆ ಅನ್ನೋ ನಿರೀಕ್ಷೆ ಅಭಿಮಾನಿಗಳಲ್ಲಿ ಇದೆ. ಇದರ ಮಧ್ಯೆ ಕೊಹ್ಲಿಯ ಕೊನೆ ಟಿ20 ಸೀಸನ್ 2024ರ ವಿಶ್ವಕಪ್ ಟೂರ್ನಿ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿವೆ. ಇಂದು ಟೀಮ್ ಇಂಡಿಯಾ ಸೋತರೆ ಕೊಹ್ಲಿ ಮುಂದೆ ಟೀಮ್ ಇಂಡಿಯಾ ಪರ ಅಂತರಾಷ್ಟ್ರೀಯ ಟಿ20 ಪಂದ್ಯಗಳು ಆಡೋದು ಡೌಟ್ ಎಂದು ತಿಳಿದು ಬಂದಿದೆ. ಇದು ಟೀಮ್ ಇಂಡಿಯಾಗೆ ಬಿಗ್ ಶಾಕಿಂಗ್ ಆಗಿದೆ.
ಇದನ್ನೂ ಓದಿ: ಸೆಮಿಸ್ನಲ್ಲಿ ವಿರಾಟ್ ವೈಲೆಂಟ್.. ನಿರ್ಣಾಯಕ ಪಂದ್ಯದಲ್ಲಿ ಕೈ ಕೊಟ್ಟ ಉದಾಹರಣೆಯೇ ಇಲ್ಲ; ಕಿಂಗ್ ರೆಕಾರ್ಡ್ಸ್ ಏನು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ