newsfirstkannada.com

ವಿರಾಟ್​ ಬಾರಿಸಿದ ಸಿಕ್ಸರ್​​ ಮರೆಯದ ಪಾಕ್ ಪ್ಲೇಯರ್ಸ್​​.. ಯಾವುದು ಆ ಮಿರಾಕಲ್ ಶಾಟ್​!

Share :

Published June 5, 2024 at 1:11pm

Update June 5, 2024 at 2:53pm

    ಈ ಸಲನೂ ಪಾಕ್​​​ಗೆ ಪವರ್ ಫುಲ್ ಪಂಚ್ ನೀಡೋಕೆ ಕೊಹ್ಲಿ ರೆಡಿ

    ಹ್ಯಾರೀಸ್​​ ರೌಫ್​ ಬೌಲಿಂಗ್​ನಲ್ಲಿ ಶತಮಾನದ ಶಾಟ್ ಸಿಡಿಸಿದ್ದ ಕೊಹ್ಲಿ

    ಮತ್ತೊಂದು ಹೈವೋಲ್ಟೇಜ್​ ಪಂದ್ಯಕ್ಕಾಗಿ ಕಾದು ಕುಳಿತಿರುವ ಫ್ಯಾನ್ಸ್​

ಇಂಡೋ ಪಾಕ್​ ಮ್ಯಾಚ್ ಅಂದ್ರೆ, ವಿಶ್ವ ಕ್ರಿಕೆಟ್​ನಲ್ಲಿ ಎಲ್ಲಿಲ್ಲದ ಕ್ರೇಜ್​. ಬದ್ಧವೈರಿಗಳ ಈ ಹೋರಾಟ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಆದ್ರೆ, ಎದುರಾಳಿ ಪಾಕ್​ ತಂಡಕ್ಕೆ ಮಾತ್ರ ಒಂದು ಶಾಟ್ ಇನ್ನು ಕಾಡುತ್ತಿದೆ. ಆ ಶಾಟ್ ಯಾವುದು?.

ಇಂಡೋ -ಪಾಕ್ ಕ್ರಿಕೆಟ್​​ ಫೈಟ್​ ಅಂದ್ರೆ ಮುಗೀತು. ಇಡೀ ವಿಶ್ವ ಕ್ರಿಕೆಟ್​ ಜಗತ್ತೆ ಬದ್ಧವೈರಿಗಳ ಕಾದಾಟ ನೋಡಲು ಕಾದು ಕುಳಿತಿರುತ್ತೆ. ಕಣ್ಣು ರೆಪ್ಪೆ ಹೊಡೆಯದಂತೆ ಪಂದ್ಯವನ್ನ ಆಸ್ವಾಧಿಸ್ತಾರೆ. ಯಾಕಂದ್ರೆ, ಇಂಡೋ- ಪಾಕ್ ನಡುವಿನ ಪಂದ್ಯದ ಗಮ್ಮತ್ತೇ ಆಗಿರುತ್ತೆ. ಇದು ನಿನ್ನೆ, ಮೊನ್ನೆಯದಲ್ಲ, ಇದಕ್ಕಿರೋ ಇತಿಹಾಸ ತುಂಬಾ ದೊಡ್ಡದು. ಆದ್ರೀಗ ಅಂಥದ್ದೇ ಹೈವೋಲ್ಟೇಜ್​​ ಮ್ಯಾಚ್​ಗೆ ದಿನಗಣನೆ ಶುರುವಾಗಿದೆ.

ಇದನ್ನೂ ಓದಿ: ಹೆಂಡತಿ ಸಾವಿನಿಂದ ನೊಂದ ಗಂಡ.. ಮಧ್ಯರಾತ್ರಿ ನೇಣು ಬಿಗಿದುಕೊಂಡು ಸಾವು

ಭಾರತ ಹಾಗೂ ಪಾಕ್ ನಡುವಿನ ಟಿ20 ವಿಶ್ವಕಪ್​ ಸಮರಕ್ಕೆ ಕೌಂಟ್​ಡೌನ್ ಶುರುವಾಗಿದ್ದು, ಪ್ರತಿಷ್ಠಿತ ಪಂದ್ಯಕ್ಕಾಗಿ ಉಭಯ ತಂಡಗಳು ಭಾರೀ ಸ್ಟ್ರಾಟರ್ಜಿ ಗೇಮ್​ ಪ್ಲಾನ್​​​​​​​​​​​​​​ಗಳನ್ನೇ ರೂಪಿಸ್ತಿವೆ. ಗೆದ್ದೇ ಗೆಲ್ಲುವ ಶಪಥ ಮಾಡಿವೆ. ಆದ್ರೆ. ಬದ್ಧವೈರಿ ಪಾಕ್​​ಗೆ ಮಾತ್ರ, ಕಿಂಗ್ ಕೊಹ್ಲಿ ಸಿಡಿಸಿದ್ದ ಆ ಒಂದು ಶಾಟ್​ ಇನ್ನಿಲ್ಲದೆ ಕಾಡುತ್ತಿದೆ.

ಮರೆಯಲಾಗ್ತಿಲ್ಲ 2022 ಟಿ20 ವಿಶ್ವಕಪ್​​​ನ ಡ್ರೀಮ್ ಶಾಟ್​..!

ಕಳೆದ ಟಿ20 ವಿಶ್ವಕಪ್​ ಟೂರ್ನಿಯ ಇಂಡೋ- ಪಾಕ್​​ ಪಂದ್ಯವನ್ನ ಬೇಕಾದ್ರೂ ಮರೀಬೋದು.. ಆದ್ರೆ, ಹ್ಯಾರಿಸ್​​ ರೌಫ್​​ ಬೌಲಿಂಗ್​ನಲ್ಲಿ ಕೊಹ್ಲಿ ಸಿಡಿಸಿದ ಸಿಕ್ಸರ್​​ನ ಮರೆಯೋಕೆ ಸಾಧ್ಯಾನೆ ಇಲ್ಲ. ಯಾಕಂದ್ರೆ, ಈ ಪಂದ್ಯದಲ್ಲಿ ವಿರಾಟ್​ ಕೊಹ್ಲಿ, ಏಕಾಂಗಿ ಹೋರಾಟದ ಪರಿ ಹಂಗಿತ್ತು. 8 ಎಸೆತಕ್ಕೆ 28 ರನ್. ಹೈ ಫ್ರಷರ್ ಗೇಮ್​. ಕ್ವಾಲಿಟಿ ಫೇಸ್ ಬೌಲರ್. 140ರ ವೇಗದ ಬಾಲ್​. ಫುಲ್​ ಲೆನ್ತ್​ ಬಾಲ್. ಕೊಹ್ಲಿಯ ಫೂಟ್​ ಬ್ಯಾಲೆನ್ಸ್ ಕೂಡ ಸರಿ ಇರಲಿಲ್ಲ. ಆದ್ರೆ, ಕೊಹ್ಲಿಯ ಟೈಮಿಂಗ್ ಆ್ಯಂಡ್ ಪವರ್ ಸ್ಟ್ರೋಕ್​​ಗೆ ಹ್ಯಾರಿಸ್ ತಲೆ ಮೇಲಿಂದ ಹಾರಿ ಹೋಗಿದ್ದ ಚೆಂಡು ಬೌಂಡರಿ ಗೆರೆ ದಾಟಿತ್ತು. ಈ ನಂಬಲಾಸಾಧ್ಯವಾಗಿದ್ದ ಆ ಸಿಕ್ಸರ್​, ಟೀಮ್ ಇಂಡಿಯಾವನ್ನ ಗೆಲುವಿನ ಟ್ರ್ಯಾಕ್​​ಗೆ ಮರಳುವಂತೆ ಮಾಡಿತ್ತು.

ಇದನ್ನೂ ಓದಿ: ಫೈರಿ ಬ್ಯಾಟರ್​​ನಿಂದ ತಂಡಕ್ಕೆ ಬಿಗ್​ ಬೂಸ್ಟ್.. ಪ್ಲೇಯಿಂಗ್​- 11ರಲ್ಲಿ ಪಂತ್ ಆಯ್ಕೆಗೆ ಅಡ್ಡಗಾಲು ಹಾಕ್ತಾರಾ ಸಂಜು?

ಬದ್ಧವೈರಿ ಪಾಕ್​​ಗೆ ಕಾಡುತ್ತಿದ್ದೆ ಆ ಶತಮಾನದ ಶಾಟ್​..!

ವಿರಾಟ್​ ಕೊಹ್ಲಿ ಸಿಡಿಸಿದ್ದ ಈ ಗ್ರೇಟೆಸ್ಟ್​ ಶಾಟ್​​ಗೆ 2 ವರ್ಷಗಳೇ ಕಳೆದಿವೆ. ಹಾಗಿದ್ರು, ಆ ಮಿರಾಕಲ್ ಶಾಟ್​​, ಇಂದಿಗೂ ಫ್ಯಾನ್ಸ್​ ಮನದಲ್ಲಿ ಅಚ್ಚಳಿಯದಂತೆಯೇ ಇದೆ. ಇಂಡೋ- ಪಾಕ್ ಮ್ಯಾಚ್ ಎಂದಾಕ್ಷಣ ವಿರಾಟ್, ಸಿಡಿಸಿದ ಈ ಶತಮಾನದ ಶಾಟ್​ ಫ್ಯಾನ್ಸ್​ ಕಣ್ಮುಂದೆ ಬರ್ತಿದೆ. ಪಾಕ್ ತಂಡದ ಬೌಲರ್​​ಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಅಷ್ಟೇ ಅಲ್ಲ. ಸದ್ಯ ರೆಡ್​​ ಹಾಟ್​​​​​ಫಾರ್ಮ್​ನಲ್ಲಿರುವ ವಿರಾಟ್​ ಕೊಹ್ಲಿಯನ್ನ ತಡೆಯೋದು ಹೇಗೆ ಅನ್ನೋ ಟೆನ್ಶನ್ ಶುರುವಾಗಿದೆ. ಪಾಕ್​ ಎದುರಿನ ಪಂದ್ಯವೆಂದ್ರೆ, ಎದೆಯುಬ್ಬಿಸಿ ಬ್ಯಾಟಿಂಗ್ ನಡೆಸೋ ವಿರಾಟ್​​ ಕೊಹ್ಲಿ, ಈ ಸಲನೂ ಪಾಕ್​​​ಗೆ ಪವರ್ ಫುಲ್ ಪಂಚ್ ನೀಡೋಕೆ ರೆಡಿಯಾಗಿರೋದು ಅಂತೂ ಸತ್ಯ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿರಾಟ್​ ಬಾರಿಸಿದ ಸಿಕ್ಸರ್​​ ಮರೆಯದ ಪಾಕ್ ಪ್ಲೇಯರ್ಸ್​​.. ಯಾವುದು ಆ ಮಿರಾಕಲ್ ಶಾಟ್​!

https://newsfirstlive.com/wp-content/uploads/2024/06/VIRAT_KOHLI_PAK.jpg

Load More