ಒತ್ತಡದಿಂದ ನಾಯಕತ್ವಕ್ಕೆ ಫಾಫ್​​ ವಿದಾಯ? ಮತ್ತೆ ಆರ್​​ಸಿಬಿಗೆ ವಿರಾಟ್​ ಕೊಹ್ಲಿ ಕ್ಯಾಪ್ಟನ್​​?

author-image
Ganesh Nachikethu
Updated On
ಮುಂಬೈ ಇಂಡಿಯನ್ಸ್​​, ಚೆನ್ನೈ ತಂಡದಿಂದ ಕೊಹ್ಲಿ ಬಿಗ್​​ ಆಫರ್​​.. ಕೊನೆಗೂ ಬಾಯ್ಬಿಟ್ಟ ವಿರಾಟ್​​
Advertisment
  • 2 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು
  • ಕ್ಯಾಪ್ಟನ್ಸಿ ಒತ್ತಡಕ್ಕೆ ಸಿಲುಕಿ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಬ್ಯಾಟಿಂಗ್​ನಲ್ಲಿ ವೈಫಲ್ಯ..!
  • ಮತ್ತೆ ವಿರಾಟ್​ ಕೊಹ್ಲಿಗೆ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಕ್ಯಾಪ್ಟನ್ಸಿ ಪಟ್ಟ

ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ 17ನೇ ಸೀಸನ್​ ಶುರುವಾಗಿದೆ. ಕಳೆದ ತಿಂಗಳು ಮಾರ್ಚ್​​ 22ನೇ ತಾರೀಕಿನಿಂದಲೇ ಶುರುವಾದ ಈ ಸೀಸನ್​​ನಲ್ಲಿ ಇದುವರೆಗೂ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪಂದ್ಯಗಳು ಆಡಿವೆ. ಈ ಪೈಕಿ ಕೇವಲ ಒಂದು ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಗೆದ್ದಿದ್ದು, ಇನ್ನುಳಿದ ಎರಡು ಮ್ಯಾಚ್​​ಗಳಲ್ಲಿ ಸೋತಿದೆ. ಇದಕ್ಕೆ ಕಾರಣ ಆರ್​​​ಸಿಬಿ ಬ್ಯಾಟಿಂಗ್​​ ಮತ್ತು ಬೌಲಿಂಗ್​ ವೈಫಲ್ಯ. ಅದರಲ್ಲೂ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಅಂತೂ ಮೂರು ಪಂದ್ಯಗಳಲ್ಲೂ ಹೇಳಿಕೊಳ್ಳುವ ಪ್ರದರ್ಶನವೇನು ನೀಡಿಲ್ಲ. ಹಾಗಾಗಿ ನಾಯಕತ್ವದ ಒತ್ತಡಕ್ಕೆ ಸಿಲುಕಿ ಫಾಫ್​ ಡುಪ್ಲೆಸಿಸ್​​ ಬ್ಯಾಟಿಂಗ್​ ವೈಫಲ್ಯ ಅನುಭವಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಇನ್ನು, ಈಗಾಗಲೇ ತನ್ನ ಒತ್ತಡದ ಬಗ್ಗೆ ಆರ್​​ಸಿಬಿ ಕ್ಯಾಪ್ಟನ್​​ ಫಾಫ್​​ ಡುಪ್ಲೆಸಿಸ್​​​​ ಓಪನ್​ ಆಗಿ ಮಾತಾಡಿದ್ದಾರೆ. ಹೀಗಾಗಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಮ್ಯಾನೇಜ್ಮೆಂಟ್​​​ ವಿರಾಟ್​ ಕೊಹ್ಲಿಗೆ ಮತ್ತೆ ಕ್ಯಾಪ್ಟನ್​ ಆಗಿ ಎಂದು ಒತ್ತಡ ಹಾಕುತ್ತಿದೆ ಎಂದು ವರದಿಯಾಗಿದೆ. ಹೀಗಾಗಿ ಮತ್ತೆ ಕೊಹ್ಲಿ ಆರ್​​ಸಿಬಿ ಕ್ಯಾಪ್ಟನ್​ ಆಗ್ತಾರಾ? ಅನ್ನೋ ಚರ್ಚೆ ಶುರುವಾಗಿದೆ.

ಐಪಿಎಲ್ ಪ್ರಾರಂಭವಾದ 2008ರಿಂದಲೂ ಕೊಹ್ಲಿ ಆರ್​ಸಿಬಿ ಜೊತೆ ಇದ್ದಾರೆ. ಅನಿಲ್ ಕುಂಬ್ಳೆ ನಿವೃತ್ತಿ ಹೊಂದಿದ ಬಳಿಕ 2011ರಲ್ಲಿ ವಿರಾಟ್ ಕೊಹ್ಲಿ ಆರ್​ಸಿಬಿ ನಾಯಕರಾದರು. ಆದರೆ, ಒಮ್ಮೆಯೂ ಕೊಹ್ಲಿ ಐಪಿಎಲ್ ಟೂರ್ನಿ ಗೆಲ್ಲಲು ಸಾಧ್ಯವಾಗಿಲ್ಲ.

ವಿರಾಟ್ ಕೊಹ್ಲಿ 2022 ಟಿ20 ತಂಡದ ಕ್ಯಾಪ್ಟನ್ಸಿಯಿಂದ ಕೆಳಗಿಳಿದರು. ಬಳಿಕ ಐಪಿಎಲ್​​ನಲ್ಲೂ ಆರ್​​ಸಿಬಿ ಕ್ಯಾಪ್ಟನ್ಸಿಗೂ ವಿದಾಯ ಹೇಳಿದ್ರು. ಕೆಲ ಮಾಧ್ಯಮ ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಮತ್ತೆ ಆರ್​ಸಿಬಿ ಕ್ಯಾಪ್ಟನ್​ ಆಗೋ ಸಾಧ್ಯತೆ ಇದೆ.

ಇದನ್ನೂ ಓದಿ: ಕ್ಯಾಪ್ಟನ್ಸಿ ಒತ್ತಡಕ್ಕೆ ಸಿಲುಕಿದ್ರಾ ಫಾಫ್​​​​ ಡುಪ್ಲೆಸಿಸ್​? ಆರ್​​ಸಿಬಿ ನಾಯಕ ಬೇಸರ ಹೊರಹಾಕಿದ್ದೇಕೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment