/newsfirstlive-kannada/media/post_attachments/wp-content/uploads/2024/07/Kohli-Fire.jpg)
ಬರೋಬ್ಬರಿ 17 ವರ್ಷಗಳ ತಪಸ್ಸಿನ ಬಳಿಕ ಟೀಮ್ ಇಂಡಿಯಾ ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಗೆದ್ದು ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಬಳಿಕ ಬಾರ್ಬಡೋಸ್‌ನಿಂದ ನೇರ ದೆಹಲಿಗೆ ಬಂದಿಳಿಸಿದ ಟೀಮ್ ಇಂಡಿಯಾ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಟೀಮ್ ಇಂಡಿಯಾ ಆಟಗಾರರು ಮಾತುಕತೆ ನಡೆಸಿದ್ರು.
ಇನ್ನು, ಮಾತುಕತೆ ವೇಳೆ ಕೊಹ್ಲಿ ಅವರ ಪ್ರದರ್ಶನದ ಏರಿಳಿತದ ಬಗ್ಗೆ ಪ್ರಧಾನಿ ಮೋದಿ ಪ್ರಶ್ನೆ ಕೇಳಿದ್ರು. ಇದಕ್ಕೆ ಕೊಹ್ಲಿ ರಿಯಾಕ್ಷನ್ ಹೀಗಿತು. ನಮ್ಮನ್ನು ಇಲ್ಲಿಗೆ ಕರೆದಿದ್ದಕ್ಕೆ ನಿಮಗೆ ತುಂಬು ಹೃದಯದ ಧನ್ಯವಾದಗಳು. ಈ ಐತಿಹಾಸಿನ ದಿನ ಯಾವಾಗಲೂ ನನ್ನ ನೆನಪಿನಲ್ಲಿ ಉಳಿಯಲಿದೆ ಎಂದರು.
ನಾನು ಈ ಟೂರ್ನಮೆಂಟ್ನಲ್ಲಿ ಸಾಕಷ್ಟು ಕೊಡುಗೆ ನೀಡಬೇಕು ಎಂದಿದ್ದೆ. ಆದರೆ, ನನಗೆ ನನ್ನಿಂದ ಆಗುವಷ್ಟು ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ನಾನು ನಿಮಗೆ ಮತ್ತು ತಂಡಕ್ಕೆ ನ್ಯಾಯ ಒದಗಿಸಲಿಲ್ಲ ಎಂದು ರಾಹುಲ್ ದ್ರಾವಿಡ್ ಅವರಿಗೂ ಹೇಳಿದೆ. ಆಗ ರಾಹುಲ್ ಅವರು ಸಂದರ್ಭ ಬಂದಾಗ ನೀನು ಪ್ರದರ್ಶನ ನೀಡುತ್ತೀಯಾ ಅನ್ನೋ ಭರವಸೆ ಇದೆ ಎಂದರು.
Surrender is the ultimate instruction of the Bhagavad-gita. ?️
Virat Kohli talking about the D-Day! Best in the world! pic.twitter.com/eMhRxqQiLh
— BALA (@erbmjha)
Surrender is the ultimate instruction of the Bhagavad-gita. 🕉️
Virat Kohli talking about the D-Day! Best in the world! pic.twitter.com/eMhRxqQiLh— BALA (@erbmjha) July 5, 2024
">July 5, 2024
ಮೈದಾನಕ್ಕಿಳಿದಾಗ ನನ್ನ ಮೇಲೆ ನನಗೆ ನಂಬಿಕೆಯೇ ಇರಲಿಲ್ಲ. ಯಾವಾಗ ವಿಕೆಟ್ ಬಿತ್ತೋ ಆಗ ನಾನು ತಂಡಕ್ಕಾಗಿ ಆಡಲೇಬೇಕು ಎಂದು ಭಾವಿಸಿದೆ. ಆ ಸಂದರ್ಭದಲ್ಲಿ ನಾನು ಬಂಧಿಯಾಗಿದ್ದೆ. ಆರಂಭದಲ್ಲೇ 4 ಬಾಲ್ನಲ್ಲಿ 3 ಫೋರ್ಗಳು ಬಂದವು. ನಾನು ಆಡಬೇಕು ಎಂದಾಗ ಆಡಲು ಆಗಲಿಲ್ಲ, ನಾವು ಗೆಲ್ಲಬೇಕು ಅಂತಾ ಇತ್ತೇನೋ ಆಗ ಆಡಿದೆ. ಈ ಗೆಲುವು ನಾನು ಯಾವಾಗಲೂ ಮರೆಯಲು ಸಾಧ್ಯವಿಲ್ಲ ಎಂದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ