newsfirstkannada.com

ವಾರೆಗಣ್ಣಿನ ನೋಟ, ಟೈಮ್ ಔಟ್​ ವೇಳೆ ಆಲಿಂಗನ.. ದ್ವೇಷ ಮರೆತ್ರಾ ವಿರಾಟ್ ಹಾಗೂ ಗಂಭೀರ್? ವೈರತ್ವಕ್ಕೆ ಬ್ರೇಕ್ ಬಿತ್ತಾ?

Share :

Published March 31, 2024 at 11:25am

    ಗೌತಮ್ ಗಂಭೀರ್ ವರ್ಸಸ್​ ವಿರಾಟ್​ ಕೊಹ್ಲಿ ನಡುವಿನ ದುಶ್ಮನಿ

    ಅಂದು ಗಂಭೀರ್, ವಿರಾಟ್ ಜೊತೆ ಕಾಲ್ಕೆರೆದು ಜಗಳಕ್ಕೆ ನಿಂತಿದ್ರು

    ಆರ್​ಸಿಬಿ ಗೆಲುವನ್ನ ಕನಸಲ್ಲೂ ಸಹಿಸಲ್ಲ ಗೌತಮ್​ ಗಂಭೀರ್!

ಒಂದೇ ಒಂದು ಆಲಿಂಗನಕ್ಕೆ ದಶಕದ ದುಶ್ಮನಿ ಅಂತ್ಯವಾಯ್ತಾ..? ಆರ್​ಸಿಬಿ ಮೇಲಿನ ದ್ವೇಷ ಗೌತಮ್ ಗಂಭೀರ್​ ಮರೆತ್ರಾ..? ವಿರಾಟ್ ಹಾಗೂ ಗಂಭೀರ್ ವೈರತ್ವಕ್ಕೆ ಬ್ರೇಕ್ ಬಿತ್ತಾ..? ಇಂಥದ್ದೊಂದು ಚರ್ಚೆಗೆ ಕಾರಣವಾಗ್ತಿರೋದು ಗೌತಮ್ ಗಂಭೀರ್ ವರ್ಸಸ್​ ವಿರಾಟ್​ ಕೊಹ್ಲಿ ನಡುವಿನ ದುಶ್ಮನಿ. ಅದ್ಯಾಕೆ ಈ ಸ್ಟೋರಿ ಓದಿ.

ವಿರಾಟ್ ಕೊಹ್ಲಿ & ಗೌತಮ್ ಗಂಭೀರ್. ಅಗ್ರೆಸ್ಸಿವ್ ಅಟಿಟ್ಯೂಟ್​​​​​ ಆಟಗಾರರು. ಯಾವುದೇ ಎಮೋಷನ್ ನನ್ನ ಆನ್​​ಫೀಲ್ಡ್​​ನಲ್ಲೆ ಹೊರ ಹಾಕುವ ಜಾಯಮಾನ ಇವರದ್ದು. ಹೀಗಾಗಿ ಇವರಿಬ್ಬರ ಮುಖಾಮುಖಿಯಾದ್ರೆ, ಅಲ್ಲೊಂದಷ್ಟು ಕಿರಿಕ್, ಒಂದಷ್ಟು ವಾಗ್ವಾದ ಸರ್ವೇ ಸಾಮಾನ್ಯ.ಇದಕ್ಕೆ ಕಾರಣ ದಶಕದ ದುಶ್ಮನಿ!

ದಶಕದ ಹಿಂದೆ ಆನ್​ಫೀಲ್ಡ್​ನಲ್ಲಿ ನಡೆದಿತ್ತು ಬಿಗ್ ಫೈಟ್.!

2013ರ ವರ್ಷ ಕೆಕೆಆರ್ ಕ್ಯಾಪ್ಟನ್ ಆಗಿದ್ದ ಗಂಭೀರ್, RCB ವಿರುದ್ಧದ ಪಂದ್ಯದಲ್ಲಿ ಔಟಾಗಿ ಹೋಗ್ತಿದ್ದ ಕೊಹ್ಲಿಯನ್ನ ಸುಖಾಸುಮ್ಮನೆ ಕೆಣಕಿದ್ರು. ಅತ್ತ ಔಟಾಗಿದ್ದ ಕೋಪದಲ್ಲಿದ್ದ ವಿರಾಟ್​ ವೈಲೆಂಟ್ ಆಗಿದ್ರು. ನೋಡನೋಡ್ತಿದ್ದಂತೆ ಇಬ್ಬರ ಮಧ್ಯೆ ಮಾತಿನ ಚಕಮಕಿ ಏರ್ಪಟ್ಟಿತ್ತು.ಇಲ್ಲಿಂದ ಶುರುವಾಗಿದ್ದ ಈ ದುಶ್ಮನಿಗೆ ಬ್ರೇಕ್ ಮಾತ್ರ ಬಿದ್ದಿರಲಿಲ್ಲ.

2023ರ ಐಪಿಎಲ್​​ನಲ್ಲಿ ರಣಾಂಗಣವಾಗಿತ್ತು ಮೈದಾನ..!

ಕಳೆದ ವರ್ಷ ಲಕ್ನೋ ತಂಡದ ಮೆಂಟರ್​​ ಆಗಿದ್ದ ಗೌತಮ್ ಗಂಭೀರ್, ಅಂದು ಆರ್​ಸಿಬಿ ಗೆಲುವನ್ನ ಸಹಿಸಿರಲಿಲ್ಲ. ಲಕ್ನೋ ಸೋತ ಹತಾಶೆಯಲ್ಲಿದ್ದ ಮೆಂಟರ್​​ ಗಂಭೀರ್, ವಿರಾಟ್ ಜೊತೆ ಕಾಲ್ಕೆರೆದು ಜಗಳಕ್ಕೆ ನಿಂತಿದ್ರು. ಅದು ಯಾವ ಮಟ್ಟಕ್ಕೆಂದ್ರೆ, ನೋಡುಗರಿಗೆ ವಾರ್ ಫೀಲ್ಡ್​ನಂತೆಯೇ ಭಾಸವಾಗಿತ್ತು.

ಫೈರ್​ ಪ್ಲೇ ಅಲ್ಲ.. ಆಸ್ಕರ್ ನೀಡಬೇಕೆಂದ ದಿಗ್ಗಜ!

ಆರ್​ಸಿಬಿ, ಕೆಕೆಆರ್​ ನಡುವಿನ ಪಂದ್ಯಕ್ಕೂ ಮುನ್ನ ವಿರಾಟ್, ಗಂಭೀರ್ ಮುಖಾಮುಖಿ ಕುತೂಹಲ ಕೆರಳಿಸಿತ್ತು. ಅದರಲ್ಲೂ ಅಭ್ಯಾಸದ ವೇಳೆ ಇವರಿಬ್ಬರ ವಾರೆಗಣ್ಣಿನ ನೋಟ ಹೈವೋಲ್ಟೇಜ್ ಟಚ್​ ನೀಡಿತ್ತು. ಆದ್ರೆ, 16ನೇ ಓವರ್​ನ ಟೈಮ್​ ಔಟ್​ ವೇಳೆ ಮೈದಾನಕ್ಕೆ ಎಂಟ್ರಿ ನೀಡಿದ್ದ ಗೌತಮ್ ಗಂಭೀರ್, ಅರ್ಧಶತಕ ಸಿಡಿಸಿದ್ದ ಕೊಹ್ಲಿಗೆ ಅಭಿನಂದಿಸಿದರು.

ಇದು ಫ್ಯಾನ್ಸ್​ಗೆ ಹಬ್ಬದೂಟವನ್ನೇ ನೀಡ್ತು. ಆದ್ರೆ, ದಿಗ್ಗಜರು ಮಾತ್ರ ಕಾಲೆಳೆದ್ರು. ಕಾಮೆಂಟೇಟರ್ ಆಗಿ ಕೆಲಸ ಮಾಡ್ತಿದ್ದ ರವಿ ಶಾಸ್ತ್ರಿ, ಈ ಹಗ್​​ಗೆ ಫೈರ್ ಫ್ಲೇ ಆವಾರ್ಡ್ ನೀಡಬೇಕೆಂದ್ರೆ. ದಿಗ್ಗಜ ಸುನಿಲ್ ಗವಾಸ್ಕರ್, ಫೇರ್​ ಫ್ಲೇ ಮಾತ್ರವಲ್ಲ. ಆಸ್ಕರ್​​ ಕೂಡ ನೀಡಬೇಕು ಎಂದೇ ವ್ಯಾಖ್ಯಾನ ಮಾಡಿದ್ರು. ಇದಕ್ಕೆ ಕಾರಣ ಆರ್​ಸಿಬಿ ಮೇಲೆ ಗೌತಮ್​ ಗಂಭೀರ್​ಗೆ ಇರುವ ದ್ವೇಷ.

ಆರ್​ಸಿಬಿ ಗೆಲುವನ್ನ ಕನಸಲ್ಲು ಸಹಿಸಲ್ಲ ಗಂಭೀರ್!

ಹೌದು.! ಗಂಭೀರ್, ಜಸ್ಟ್​ ವಿರಾಟ್​ ಕೊಹ್ಲಿ ಮೇಲೆ ಮಾತ್ರವೇ ವೈರತ್ವ ಹೊಂದಿಲ್ಲ. ಆರ್​ಸಿಬಿ ತಂಡದ ಗೆಲುವನ್ನು ಸಹಿಸಲ್ಲ. ಅದು ಎಷ್ಟರ ಮಟ್ಟಿಗೆ ಅಂದ್ರೆ, ಕನಸುಲ್ಲೂ ಸಹಿಸದಷ್ಟು.. ಈಗಲೂ ಚಾನ್ಸ್ ಸಿಕ್ಕರೆ, ಆನ್​ಫೀಲ್ಡ್​ಗೆ ಇಳಿದು ಹೋರಾಟ ನಡೆಸುವಷ್ಟು. ಇದನ್ನ ಸ್ವತಃ ಗೌತಮ್ ಗಂಭೀರ್ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕೀಪಿಂಗ್​ನಲ್ಲಿ ಚಮತ್ಕಾರ, ಬ್ಯಾಟಿಂಗ್​ಗೆ ಇಳಿಯದ ಧೋನಿ ಬಗ್ಗೆ ಫ್ಯಾನ್ಸ್​ಗೆ ಬೇಸರ; ಆಸೆ ಈಡೇರಿಸ್ತಾರಾ ಮಾಹಿ?

ಪ್ರತಿ ಬಾರಿಯು ಬಹುಶಃ ಕನಸಿನಲ್ಲಿ ಕೂಡಾ ನಾನು ಸೋಲಿಸಲು ಬಯಸುವ ತಂಡವೆಂದರೆ ಆರ್​ಸಿಬಿ. ತಂಡದ ಮಾಲೀಕರು, ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎ.ಬಿ.ಡಿವಿಲಿಯರ್ಸ್ ನಂತಹ ದಿಗ್ಗಜರನ್ನು ಹೊಂದಿದ್ರು, ಏನನ್ನೂ ಗೆಲ್ಲದಿದ್ದರೂ, ಎಲ್ಲವನ್ನೂ ಗೆದ್ದಂತೆ ವರ್ತಿಸುತ್ತಾರೆ. ಆ ಬಗೆಯ ಪ್ರವೃತ್ತಿ ನಾನು ಒಪ್ಪುವುದಿಲ್ಲ. ಬಹುಶಃ ಆಕ್ರಮಣಕಾರಿ ಬ್ಯಾಟಿಂಗ್ ವಿಭಾಗ ಆರ್​ಸಿಬಿ. ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎ.ಬಿ.ಡಿವಿಲಿಯರ್ಸ್ ಇದಕ್ಕಿಂತ ಉತ್ತಮ ಏನಿದೆ. ನನ್ನ ಐಪಿಎಲ್ ವೃತ್ತಿ ಜೀವನದಲ್ಲಿ ಏನಾದರು ನನಗೆ ಬೇಕಾದರೆ, ನಾನು ಮತ್ತೆ ಆನ್​ಫೀಲ್ಡ್​ಗೆ ಹೋಗಿ ಆರ್‌ಸಿಬಿಯನ್ನ ಸೋಲಿಸಲು ಇಷ್ಟಪಡುತ್ತೇನೆ.
ಗೌತಮ್ ಗಂಭೀರ್, ಕೆಕೆಆರ್ ಮೆಂಟರ್

ಇಂಥಹ ದುಶ್ಮನಿ ಹೊಂದಿದ್ದ ಗೌತಮ್, ಮೊನ್ನೆ ಕೊಹ್ಲಿ ಜೊತೆ ನಡೆದುಕೊಂಡ ರೀತಿ ನಿಜಕ್ಕೂ ಅಚ್ಚರಿ ತರಿಸುವಂತದ್ದೇ ಆಗಿತ್ತು. ಒಟ್ನಲ್ಲಿ.! ದಶಕದ ದುಶ್ಮನಿಗೆ ಒಂದೇ ಒಂದು ಆಲಿಂಗನ ಅಂತ್ಯದ ಸೂಚನೆಯಾ ಅನ್ನೋದಕ್ಕೆ ಕಾಲವೇ ಉತ್ತರಿಸಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಾರೆಗಣ್ಣಿನ ನೋಟ, ಟೈಮ್ ಔಟ್​ ವೇಳೆ ಆಲಿಂಗನ.. ದ್ವೇಷ ಮರೆತ್ರಾ ವಿರಾಟ್ ಹಾಗೂ ಗಂಭೀರ್? ವೈರತ್ವಕ್ಕೆ ಬ್ರೇಕ್ ಬಿತ್ತಾ?

https://newsfirstlive.com/wp-content/uploads/2024/03/Virat-Kohli-Gambhir.jpg

Load More