newsfirstkannada.com

IPL: ಕೊಹ್ಲಿ, ಜಡೇಜಾ ಮಧ್ಯೆ ಭಾರೀ ಫೈಟ್.. ಯಾವ ವಿಚಾರಕ್ಕೆ ಗೊತ್ತಾ..?

Share :

Published May 6, 2024 at 1:37pm

Update May 8, 2024 at 6:36am

    ಜಡೇಜಾ v/s ಕೊಹ್ಲಿ.. ಯಾವ ವಿಚಾರಕ್ಕೆ ಗೊತ್ತಾ?

    ಐಪಿಎಲ್​ನಲ್ಲಿ ವಿರಾಟ್​ ಕೊಹ್ಲಿನೇ ಕಿಂಗ್​, ಆದರೆ..!

    ಐಪಿಎಲ್​ನಲ್ಲಿ ಜಡೇಜಾ ವರ್ಸಸ್ ಕೊಹ್ಲಿ ದಂಗಲ್

ಐಪಿಎಲ್​ನಲ್ಲಿ ಜಡೇಜಾ ವರ್ಸಸ್ ಕೊಹ್ಲಿ ದಂಗಲ್ ನಡೀತಿದೆ. ಸಿಕ್ರೇಟ್ ಆಗಿಯೇ ನಾನಾ, ನೀನಾ? ಅಂತಾ ಫೈಟ್​ ನಡೆಸ್ತಿದ್ದಾರೆ. ಈ ಕದನ ನಡೀತಾ ಇರೋದು ಬ್ಯಾಟಿಂಗ್ ವಿಚಾರಕ್ಕಲ್ಲ.

ಈ ಬಾರಿಯ ಐಪಿಎಲ್​​ನಲ್ಲಿ ಟೂರ್ನಿಯಲ್ಲಿ ಇಂತದ್ದು ಇಲ್ಲ ಅಂತಿಲ್ಲ. ಅತ್ಯದ್ಭುತ ಬ್ಯಾಟಿಂಗ್​, ಮಿಂಚಿನಂತ ಬೌಲಿಂಗ್​, ಟ್ವಿಸ್ಟ್​ & ಟರ್ನ್ಸ್​.. ರಣ ರೋಚಕ ಅಂತ್ಯಗಳು ಮಿಲಿಯನ್​ ಡಾಲರ್​ ಟೂರ್ನಿಯಲ್ಲಿ ಫ್ಯಾನ್ಸ್​ಗೆ ಸಖತ್​ ಟ್ರೀಟ್​ ಕೊಟ್ಟಿವೆ. ಅದ್ಭುತ ಬ್ಯಾಟಿಂಗ್ ಟೆಕ್ನಿಕ್, ಬೌಲಿಂಗ್​ ವೇರಿಯೇಷನ್ಸ್​ ಜೊತೆ ಬೌಲಿಂಗ್ ಅಂದ್ರೆ, ಹೀಗಿರಬೇಕು ಅನ್ನೋ ಎಕ್ಸಾಂಪಲ್​ ಸೆಟ್​ ಮಾಡಿದೆ. ಆದ್ರೆ, ಕ್ಯಾಚಿಂಗ್ ಮತ್ತು ಫೀಲ್ಡಿಂಗ್ ವಿಷಯಕ್ಕೆ ಬಂದ್ರೆ ಈ ಬಾರಿ ನೆಕ್ಸ್ಟ್ ಲೆವೆಲ್ ಪರ್ಫಾಮೆನ್ಸ್​ ಮೂಡಿಬಂದಿದೆ.

ಇದನ್ನೂ ಓದಿ:11 ವರ್ಷದ ಹುಡುಗನ ಜೊತೆ ಶಿಕ್ಷಕಿ ಅನೈತಿಕ ಸಂಬಂಧ.. ಮುರಿದು ಬಿತ್ತು ಮದುವೆ..!

ಐಪಿಎಲ್​ನಲ್ಲಿ ಹಲ ಅದ್ಭುತ ಕ್ಯಾಚ್​ಗಳು ಪಂದ್ಯದ ಫಲಿತಾಂಶವನ್ನೇ ಬದಲಿಸಿವೆ. ವಾವ್ ಎನಿಸೋ ಸೂಪರ್ ಕ್ಯಾಚ್​ಗಳು ನೋಡುಗರ ಹಾರ್ಟ್​ ಬೀಟ್​​​​​​​​​​​​​​​ ಹೆಚ್ಚಿಸಿದ್ದಿದೆ. ಇದೇ ಕಾರಣಕ್ಕೆ ಹಲ ಆಟಗಾರರು ಸೇಫೆಸ್ಟ್ ಹ್ಯಾಂಡ್ ಅನ್ನೋ ಖ್ಯಾತಿ ಪಡೆದುಕೊಂಡಿದ್ದಾರೆ. ಇದೀಗ ಇವ್ರಲ್ಲಿ ಯಾರು ​​​​​​​​​​​​​​​​​​​​​​​​​​​ಬೆಸ್ಟ್​ ಫೀಲ್ಡರ್ ಎಂಬ ಡಿಬೇಟ್​​ಗೆ ದಾರಿ ಮಾಡಿಕೊಟ್ಟಿದೆ. ಇಲ್ಲಿ ಅಗ್ರಸ್ಥಾನದ ಪೈಪೋಟಿ ನಡೀತಿರೋದು ಜಡೇಜಾ ಹಾಗೂ ವಿರಾಟ್ ನಡುವೆ..

ಜಡೇಜಾ V/S ವಿರಾಟ್.. ಯಾರು ಬೆಸ್ಟ್​ ಫೀಲ್ಡರ್​​​..?
ವಿಶ್ವ ಕ್ರಿಕೆಟ್​ನ ಬೆಸ್ಟ್​ ಫೀಲ್ಡರ್​ ಯಾರು ಅಂದ್ರೆ, ಎಲ್ಲರ ಬಾಯಲ್ಲೂ ಥಟ್​ ಅಂತಾ ರವೀಂದ್ರ ಜಡೇಜಾ ಹೆಸರು ಬರುತ್ತೆ. ಈ ಬಳಿಕವೇ ವಿರಾಟ್​ ಕೊಹ್ಲಿಯ ಹೆಸರು ಹೇಳೋದು. ಆದ್ರೆ, ಗುಜರಾತ್ ಟೈಟನ್ಸ್​ ಎದುರಿನ ಪಂದ್ಯದಲ್ಲಿ ವಿರಾಟ್​​​​​​​​​​​ ಕೊಹ್ಲಿ ಮಾಡಿದ ಒಂದೇ ಒಂದು ರನೌಟ್​, ಇಬ್ಬರಲ್ಲಿ ಯಾರು ಬೆಸ್ಟ್​ ಫೀಲ್ಡರ್​​​​​​ಗಳು ಅನ್ನೋ ಚರ್ಚೆಗೆ ದಾರಿ ಮಾಡಿ ಕೊಟ್ಟಿದೆ.

ವಿರಾಟ್, ಜಡೇಜಾ ಬೆಸ್ಟ್​ ಫೀಲ್ಡರ್​​ ದಂಗಲ್​..!
ಪ್ರಸಕ್ತ ಆವೃತ್ತಿಯಲ್ಲಿ ವಿರಾಟ್​, ರನ್ ಗಳಿಕೆಯಲ್ಲಿ ಮಾತ್ರವೇ ಪೈಪೋಟಿ ನಡೆಸ್ತಿಲ್ಲ. ಫೀಲ್ಡೀಂಗ್​ನಲ್ಲೂ ಜಡೇಜಾ ಜೊತೆ ಹೋರಾಟಕ್ಕೆ ಇಳಿದಿದ್ದಾರೆ. ಪಂದ್ಯ ಪಂದ್ಯಕ್ಕೂ ನಾ ಮುಂದೂ.. ನೀ ಮುಂದು ಎಂಬಂತೆ ಕ್ಯಾಚ್ ಹಿಡಿದು ಸೈ ಎನಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ:ಸ್ಟೇರಿಂಗ್ ಕಟ್​​.. ​ಹಳ್ಳಕ್ಕೆ ಜಾರಿದ 50 ಪ್ರಯಾಣಿಕರಿದ್ದ KSRTC ಬಸ್

ಪ್ರಸಕ್ತ ಸೀಸನ್​ನಲ್ಲಿ ಬೆಸ್ಟ್​ ಫೀಲ್ಡಿಂಗ್​
ಪ್ರಸಕ್ತ ಸೀಸನ್​ನಲ್ಲಿ 11 ಪಂದ್ಯಗಳನ್ನಾಡಿರುವ ಕೊಹ್ಲಿ, 7 ಕ್ಯಾಚ್, 1 ರನೌಟ್ ಸೇರಿದಂತೆ 8 ಬಲಿ ಪಡೆದಿದ್ದಾರೆ. ಇಷ್ಟೇ ಪಂದ್ಯಗಳನ್ನಾಡಿರುವ ಜಡೇಜಾ 8 ಕ್ಯಾಚ್​ ಹಿಡಿದು 8 ಮಂದಿಗೆ ಪೆವಿಲಿಯನ್ ಹಾದಿ ತೋರಿದ್ದಾರೆ. ಪ್ರಸಕ್ತ ಸೀಸನ್​ನಲ್ಲಿ ಉಭಯ ಆಟಗಾರರು, ಫೀಲ್ಡಿಂಗ್ ವಾರ್​​ನಲ್ಲಿ ಸಮಬಲದ ಪೈಪೋಟಿ ನಡೆಸ್ತಿದ್ದಾರೆ. ಆದರೆ ಒಟ್ಟಾರೆ ಐಪಿಎಲ್​ ಕರಿಯರ್​ನ ರೆಕಾರ್ಡ್ಸ್​ ನೋಡಿದ್ರೆ, ಸೂಪರ್ ಮ್ಯಾನ್​ ಜಡೇಜಾರನ್ನೇ ವಿರಾಟ್ ಹಿಂದಿಕ್ಕಿದ್ದಾರೆ. ಬ್ಯಾಟಿಂಗ್​ ಮಾತ್ರವಲ್ಲ.. ಫೀಲ್ಡಿಂಗ್​ನಲ್ಲೂ ನಾನೇ ರಾಜ ಅಂತಿದ್ದಾರೆ.

ಐಪಿಎಲ್​ನಲ್ಲಿ ಕೊಹ್ಲಿ-ಜಡೇಜಾ ಫೀಲ್ಡಿಂಗ್..!
ಐಪಿಎಲ್​ನಲ್ಲಿ ಕೊಹ್ಲಿ ಆಡಿರುವ 248 ಪಂದ್ಯಗಳಲ್ಲಿ 113 ಕ್ಯಾಚ್ ಪಡೆದುಕೊಂಡಿದ್ರೆ, 20 ಬ್ಯಾಟರ್​​ಗಳಿಗೆ ರನೌಟ್​ ಮೂಲಕ ಪೆವಿಲಿಯನ್ ಹಾದಿ ತೋರಿದ್ದಾರೆ. ಪ್ರತಿ ಪಂದ್ಯಕ್ಕೆ 0.46ರ ಕ್ಯಾಚ್ ಸರಾಸರಿ ಹೊಂದಿದ್ದಾರೆ. ಇನ್ನು 237 ಪಂದ್ಯಗಳನ್ನಾಡಿರೋ ಜಡೇಜಾ, ಪ್ರತಿ ಪಂದ್ಯಕ್ಕೆ 0.43ರ ಕ್ಯಾಚ್ ಸರಾಸರಿಯಂತೆ 102 ಕ್ಯಾಚ್​​​​​​​​​​ ಪಡೆದಿದ್ರೆ, 23 ರನೌಟ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಇಂಟರೆಸ್ಟಿಂಗ್ ವಿಚಾರ ಏನಪ್ಪಾ ಅಂದರೆ ಐಪಿಎಲ್​ನ ಬೆಸ್ಟ್​ ಫೀಲ್ಡರ್ ಲಿಸ್ಟ್​ನಲ್ಲಿ ಸೂಪರ್ ಮ್ಯಾನ್ ರವೀಂದ್ರ ಜಡೇಜಾ, 4ನೇ ಸ್ಥಾನದಲ್ಲಿದ್ದಾರೆ. ಆದರೆ ಕೊಹ್ಲಿ ಟಾಪ್​ನಲ್ಲೇ ಉಳಿದಿದ್ದಾರೆ. ಇದರೊಂದಿಗೆ ಐಪಿಎಲ್​ ಲೋಕದ ಸುಲ್ತಾನ ಅನ್ನೋದನ್ನ ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ:ರೋಹಿತ್ ಬಳಿ ಕೋಟಿ ಕೋಟಿ ಬೆಲೆ ಬಾಳುವ ವಾಚ್​​ಗಳು.. ಮೊನ್ನೆ ಕಟ್ಟಿದ್ದ ವಾಚ್​ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

IPL: ಕೊಹ್ಲಿ, ಜಡೇಜಾ ಮಧ್ಯೆ ಭಾರೀ ಫೈಟ್.. ಯಾವ ವಿಚಾರಕ್ಕೆ ಗೊತ್ತಾ..?

https://newsfirstlive.com/wp-content/uploads/2024/05/JADEJA-2.jpg

Load More