newsfirstkannada.com

ರೋಹಿತ್ ಬಳಿ ಕೋಟಿ ಕೋಟಿ ಬೆಲೆ ಬಾಳುವ ವಾಚ್​​ಗಳು.. ಮೊನ್ನೆ ಕಟ್ಟಿದ್ದ ವಾಚ್​ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ..!

Share :

Published May 6, 2024 at 9:02am

  ರೋಹಿತ್​ ಶರ್ಮಾಗೆ ಎಕ್ಸ್​ಪೆನ್ಸೀವ್ ವಾಚ್ ಗೀಳು

  ರೋಹಿತ್ ಶರ್ಮಾ ವಾಚ್​ ಬೆಲೆ ಕೇಳಿ ಫ್ಯಾನ್ಸ್ ದಂಗು

  ಪ್ರೆಸ್​ಮೀಟ್​ನಲ್ಲಿ ಧರಿಸಿದ್ದ ವಾಚ್ ಬೆಲೆ ಎಷ್ಟು..?

ಟಿ20 ವಿಶ್ವಕಪ್​ ತಂಡದ ಪ್ರೆಸ್​ಮೀಟ್​ನಲ್ಲಿ ಭಾಗಿಯಾಗಿದ್ದ ಕ್ಯಾಪ್ಟನ್​ ರೋಹಿತ್, ಟೀಮ್ ಇಂಡಿಯಾ ಆಯ್ಕೆಯ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ರು. ಆ ಉತ್ತರಗಳಿಗಿಂತ ಸದ್ಯ ಎಲ್ಲೆಡೆ ಸೆನ್ಸೇಷನ್​ ಸೃಷ್ಟಿಸಿರೋದು ಮಾತ್ರ ರೋಹಿತ್​ರ ವಾಚ್. ಅಯ್ಯೋ ಆ ವಾಚ್​ನಲ್ಲೇದೆ ವಿಶೇಷ ಅಂತೀರಾ?

ರೋಹಿತ್ ಶರ್ಮಾ. ವಿಶ್ವ ಕ್ರಿಕೆಟ್​ನ ಹಿಟ್​ಮ್ಯಾನ್. ಆನ್​ಫೀಲ್ಡ್​ನಲ್ಲಿ ರನ್ ಸುನಾಮಿ ಸೃಷ್ಟಿಸಿರುವ ರೋಹಿತ್, ಅಸಂಖ್ಯ ದಾಖಲೆಗಳ ಒಡೆಯ. ಈತನ ವಿಧ್ವಂಸಕ ಬ್ಯಾಟಿಂಗ್​​ಗೆ ಲೆಕ್ಕ ಇಲ್ಲದಷ್ಟು ದಾಖಲೆಗಳು ಛಿದ್ರಗೊಂಡಿವೆ. ಆನ್​ಫೀಲ್ಡ್​ನಲ್ಲಿ ಈತನ ಆಟ ಎಷ್ಟು ಇಂಟ್ರೆಸ್ಟಿಂಗ್ ಆಗಿ ಇದೆಯೋ, ರೋಹಿತ್​ ಆಫ್​ ದಿ ಫೀಲ್ಡ್ ಲೈಫ್​ ಅಷ್ಟೇ ಆಸಕ್ತಿಯುತವಾಗಿದೆ.

ಇದನ್ನೂ ಓದಿ:ಅನುಷ್ಕಾ ಶರ್ಮಾಗೆ ಇದೆ ಒಂದು ವಿಚಿತ್ರ ಚಾಳಿ.. ಕಳ್ಳತನ ಮಾಡಿದ ಪ್ರಕರಣ ರಿವೀಲ್..!

ರೋಹಿತ್ ಶರ್ಮಾ ನೋಡಲು ಸಾಕಷ್ಟು ಸಿಂಪಲ್ ಅನಿಸ್ತಾರೆ. ಆದ್ರೆ, ಅವ್ರ ಲೈಫ್​ ಸಿಕ್ಕಾಪಟ್ಟೆ ಅದ್ದೂರಿಯಾಗಿದೆ. ಇದಕ್ಕೆ ಲೆಟೆಸ್ಟ್​ ಎಕ್ಸಾಂಪಲ್, ವಿಶ್ವಕಪ್​ನ ಪ್ರೆಸ್​ಮೀಟ್​ ಮಾಡಿದ ವೇಳೆ ಕ್ಯಾಪ್ಟನ್​ ರೋಹಿತ್​ ಶರ್ಮಾರ ಕೈನಲ್ಲಿದ್ದ ವಾಚ್.

ರೋಹಿತ್​ ಶರ್ಮಾಗೆ ಎಕ್ಸ್​ಪೆನ್ಸೀವ್ ವಾಚ್ ಗೀಳು..!
ಕ್ರಿಕೆಟರ್​​ಗಳ ಜೀವನವೇ ಅದ್ದೂರಿ. ಈ ಐಷಾರಾಮಿ ಜೀವನದಲ್ಲಿ ಕೋಟಿ ಕೋಟಿ ಬೆಲೆ ಬಾಳುವ ವಸ್ತುಗಳದ್ದೇ ಕಾರು ಬಾರು. ಕೆಲವರಿಗೆ ಕಾರ್​ ಕಲೆಕ್ಷನ್, ಬೈಕ್ ಕಲೆಕ್ಷನ್ ಹವ್ಯಾಸ ಇರುತ್ತೆ. ಈ ವಿಚಾರದಲ್ಲಿ ಟೀಮ್ ಇಂಡಿಯಾ ರೋಹಿತ್ ಕೂಡ ಹೊರತಲ್ಲ. ಅದ್ದೂರಿ ಕಾರ್​​ಗಳ ಕಲೆಕ್ಷನ್ ಹೊಂದಿರುವ ರೋಹಿತ್​, ಕೋಟಿ ಕೋಟಿ ಬೆಲೆ ಬಾಳುವ ವಾಚ್​​ಗಳು ಕಲೆಕ್ಷನ್ ಕೂಡ​​ ಹೊಂದಿದ್ದಾರೆ.

ಮೊನ್ನೆ ನಡೆದ ಪ್ರೆಸ್​ಮೀಟ್​ನಲ್ಲಿ ರೋಹಿತ್ ಶರ್ಮಾ ಕೈಯಲ್ಲಿದ್ದ ವಾಚ್​ ಇಂದು ಇಂಟರ್​ನೆಟ್​ನಲ್ಲಿ ಸೆನ್ಸೇಷನ್​ ಸೃಷ್ಟಿಸಿದೆ. ಅಂದು ಹಿಟ್​​ಮ್ಯಾನ್​ ಧರಿಸಿದ್ದ ಕೈಗಡಿಯಾರದ ಬೆಲೆ ಕೇಳಿದ್ರೆ ನೀವು ಶಾಕ್​​ ಆಗೋದು ಗ್ಯಾರಂಟಿ. ಬರೋಬ್ಬರಿ 2.17 ಕೋಟಿ ರೂಪಾಯಿಯ ವಾಚ್​ ಅದು. ಅಂದ್ಹಾಗೆ ಆ ವಾಚ್​ ಪಾಟೆಕ್ ಫಿಲಿಪ್ ಕಂಪನಿಯದ್ದಾಗಿದ್ದು, ನಾಟಿಲಸ್ ಪ್ಲಾಟಿನಮ್ ಮಾಡೆಲ್​ನ ಕೈಗಡಿಯಾರವದು.

ಇದನ್ನೂ ಓದಿ:ಮಧ್ಯರಾತ್ರಿ ಟೋಲ್ ಸಿಬ್ಬಂದಿಯ ಬಟ್ಟೆ ಬಿಚ್ಚಿಸಿ ಹಿಗ್ಗಾಮುಗ್ಗಾ ಹಲ್ಲೆ.. ಬೆಚ್ಚಿಬಿದ್ದ ನೆಲಮಂಗಲ..!

ರೋಹಿತ್ ವಾಚ್ ವಿಶೇಷತೆ

 • 41 ಮಿ.ಮೀಟರ್ ಸುತ್ತಳತೆಯ ಡಯಾ ಮೀಟರ್
 • ಒಟ್ಟಾರೆ ವಾಚ್​ನ ಗಾತ್ರ 8.3 ಮಿಲಿ ಮೀಟರ್
 • ವೈಟ್​ ಗೋಲ್ಡ್​ ಬಳಸಿ ತಯಾರಿಸಿರುವ ವಾಚ್​ನ ಕೇಸ್​​​​​​
 • 2022ರಲ್ಲಿ ಲಾಂಚ್ ಆದಾಗ 58 ಲಕ್ಷದ 21 ಸಾವಿರ ಬೆಲೆ
 • ಸದ್ಯ ಪಾಟೆಕ್ ಫಿಲಿಪ್ ನಾಟಿಲಸ್ ವಾಚ್​ ಬೆಲೆ 2.17 ಕೋಟಿ
 • ನೀರಿನಲ್ಲಿ 120 ಮೀಟರ್​ ಆಳದಲ್ಲಿದ್ರೂ ಇದ್ದರೂ ಹಾನಿ ಆಗಲ್ಲ
 • ಸಂಪೂರ್ಣ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ವಾಚ್
 • ಕೋಟಿ ಕೋಟಿ ಬೆಲೆ ಬಾಳುವ ವಾಚ್ ಕಲೆಕ್ಷನ್​​..!

ಕೇವಲ ಈ ಒಂದು ವಾಚ್​ ಮಾತ್ರವಲ್ಲ.. ರೋಹಿತ್ ಶರ್ಮಾ ಬಳಿ ಹಲವು ಐಷಾರಾಮಿ ವಾಚ್​ ಕಲೆಕ್ಷನ್ ಇದೆ. ರೋಲೆಕ್ಸ್, ಆಡೆಮಾರ್ಸ್ ಪಿಗುಯೆಟ್ ರಾಯಲ್ ಓಕ್, ಜೆರಾಲ್ಡ್ ಚಾರ್ಲ್ಸ್ ಮೆಸ್ಟ್ರೋ 3.0, ಹುಬ್ಲೋಟ್‌ ಸೇರಿದಂತೆ ಇನ್ನಿತರ ಐಷಾರಾಮಿ ವಾಚ್​ಗಳನ್ನ ಹೊಂದಿದ್ದಾರೆ. ಈ ವಾಚ್​ಗಳ ಅಂದಾಜು ಬೆಲೆ ಸರಿ ಸುಮಾರು 30ರಿಂದ 35 ಕೋಟಿ ರೂಪಾಯಿ ಎಂದೇ ಅಂದಾಜಿಸಲಾಗಿದೆ.
ರೋಹಿತ್ ಶರ್ಮಾಗೆ ಮಾತ್ರವೇ ಅಲ್ಲ.. ಟೀಮ್​ ಇಂಡಿಯಾದ ಹಾರ್ದಿಕ್ ಪಾಂಡ್ಯ, ವಿರಾಟ್​ ಕೊಹ್ಲಿಗೂ ಐಷಾರಾಮಿ ವಾಚ್​ಗಳ ವ್ಯಾಮೋಹ ಇದೆ. ಆದ್ರೆ, ಇಷ್ಟು ದುಬಾರಿಯ ವಾಚ್​​ಗಳನ್ನ ಅವರಲ್ಲಿರೋದು ಡೌಟೇ.

ಇದನ್ನೂ ಓದಿ:ರೇವಣ್ಣಗೆ ಇರೋದು ಅದೊಂದೇ ದಾರಿ.. ಅವರ ಮುಂದಿನ ಅಪ್ಷನ್ ಏನು..?

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೋಹಿತ್ ಬಳಿ ಕೋಟಿ ಕೋಟಿ ಬೆಲೆ ಬಾಳುವ ವಾಚ್​​ಗಳು.. ಮೊನ್ನೆ ಕಟ್ಟಿದ್ದ ವಾಚ್​ ಬೆಲೆ ಕೇಳಿದ್ರೆ ಶಾಕ್ ಆಗ್ತೀರಿ..!

https://newsfirstlive.com/wp-content/uploads/2024/05/ROHIT-WATCH-1.jpg

Load More