/newsfirstlive-kannada/media/post_attachments/wp-content/uploads/2024/07/Kohli_Modi0.jpg)
ಸುಮಾರು 17 ವರ್ಷಗಳ ತಪಸ್ಸಿನ ಬಳಿಕ ಟೀಮ್ ಇಂಡಿಯಾ ಬಹುನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಗೆದ್ದಿದೆ. ಬಳಿಕ ಬಾರ್ಬಡೋಸ್‌ನಿಂದ ನೇರ ದೆಹಲಿಗೆ ಬಂದಿಳಿಸಿದ ಟೀಮ್ ಇಂಡಿಯಾ ಆಟಗಾರರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಟೀಮ್ ಇಂಡಿಯಾ ಆಟಗಾರರು ಮಾತುಕತೆ ನಡೆಸಿದ್ರು.
ಇನ್ನು, ಮಾತುಕತೆ ವೇಳೆ ಕೊಹ್ಲಿ ಅವರು ವಿಶ್ವಕಪ್ ಗೆದ್ದ ಅನುಭವದ ಬಗ್ಗೆ ಮಾತಾಡಿದ್ರು. ನಾನು ಈ ಟೂರ್ನಮೆಂಟ್ನಲ್ಲಿ ಸಾಕಷ್ಟು ಕೊಡುಗೆ ನೀಡಬೇಕು ಎಂದಿದ್ದೆ. ಆದರೆ, ನನಗೆ ನನ್ನಿಂದ ಆಗುವಷ್ಟು ಕೊಡುಗೆ ನೀಡಲು ಸಾಧ್ಯವಾಗಲಿಲ್ಲ. ನಾನು ನಿಮಗೆ ಮತ್ತು ತಂಡಕ್ಕೆ ನ್ಯಾಯ ಒದಗಿಸಲಿಲ್ಲ ಎಂದು ರಾಹುಲ್ ದ್ರಾವಿಡ್ ಅವರಿಗೂ ಹೇಳಿದೆ. ಆಗ ರಾಹುಲ್ ಅವರು ಸಂದರ್ಭ ಬಂದಾಗ ನೀನು ಪ್ರದರ್ಶನ ನೀಡುತ್ತೀಯಾ ಅನ್ನೋ ಭರವಸೆ ಇದೆ ಎಂದರು.
ನಾನು ಮೈದಾನಕ್ಕಿಳಿದಾಗ ನನ್ನ ಮೇಲೆ ಭರವಸೆ ಇರಲಿಲ್ಲ. ಯಾವಾಗ ವಿಕೆಟ್ ಬಿತ್ತೋ ಆಗ ನಾನು ತಂಡಕ್ಕಾಗಿ ಆಡಲೇಬೇಕು ಎಂದು ಭಾವಿಸಿದೆ. ಆ ಸಂದರ್ಭದಲ್ಲಿ ನಾನು ಬಂಧಿಯಾಗಿದ್ದೆ. ಆರಂಭದಲ್ಲೇ 4 ಬಾಲ್ನಲ್ಲಿ 3 ಫೋರ್ಗಳು ಬಂದವು. ನಾನು ಆಡಬೇಕು ಎಂದಾಗ ಆಡಲು ಆಗಲಿಲ್ಲ, ನಾವು ಗೆಲ್ಲಬೇಕು ಅಂತಾ ಇತ್ತೇನೋ ಆಗ ಆಡಿದೆ. ಈ ಗೆಲುವು ನಾನು ಯಾವಾಗಲೂ ಮರೆಯಲು ಸಾಧ್ಯವಿಲ್ಲ ಎಂದರು.
Aapka ahankar upar aa jata hai
To khel aapse dur chala hata hai
- It takes guts to admit such things pic.twitter.com/MV7jfePQf4— Out Of Context Cricket (@GemsOfCricket)
Aapka ahankar upar aa jata hai
To khel aapse dur chala hata hai
- It takes guts to admit such things https://t.co/MV7jfePQf4— Out Of Context Cricket (@GemsOfCricket) July 5, 2024
">July 5, 2024
ಅಹಂಕಾರ ಇರಬಾರದು ಎಂದು ಕೊಹ್ಲಿ
ನಾನು ಏನು ಮಾಡಬೇಕು ಅಂದುಕೊಂಡ್ರೂ ಅದು ಆಗುತ್ತಲೇ ಇರಲಿಲ್ಲ. ಆಗ ನನಗೆ ಅನಿಸಿದ್ದು. ನಾನು ಮಾಡಿಬಿಡ್ತೀನಿ ಅನ್ನೋ ಭಾವನೆ ಇದ್ರೆ ಅಹಂಕಾರ ಬಂದು ಬಿಡುತ್ತೆ. ನಮಗೆ ಅಹಂಕಾರ ಇದ್ರೆ, ನಮ್ಮಿಂದ ಆಟ ಕೂಡ ದೂರ ಆಗಿಬಿಡುತ್ತೆ. ಆಟದ ಸಂದರ್ಭವೇ ಚೇಂಜ್ ಆಗಿ ಹೋಯ್ತು. ಹಾಗಾಗಿ ನಾನು ಅಹಂಕಾರ ಬಿಡಬೇಕಾಯ್ತು. ನನ್ನ ಅಹಂಕಾರ ತೋರಿಸಲು ಜಾಗವೇ ಇರಲಿಲ್ಲ. ತಂಡಕ್ಕಾಗಿ ನನ್ನ ಅಹಂಕಾರವನ್ನು ಹಿಂದೆ ಇಡಬೇಕಾಯ್ತು ಎಂದರು.
ಇದನ್ನೂ ಓದಿ:ವಿಶ್ವಕಪ್ ಗೆದ್ದ ಮೇಲೂ ಭಾರೀ ಅಸಮಾಧಾನ ಹೊರಹಾಕಿದ ವಿರಾಟ್ ಕೊಹ್ಲಿ.. ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ