newsfirstkannada.com

VIDEO: ಪಂದ್ಯದ ಮಧ್ಯೆಯೇ ಮತ್ತೆ ಜಗಳ.. ಗಂಭೀರ್​​ನಾ ಗುರಾಯಿಸಿದ ವಿರಾಟ್​​ ಕೊಹ್ಲಿ!

Share :

Published March 29, 2024 at 8:09pm

Update March 29, 2024 at 8:10pm

  ಇಂದಿಗೂ ಮುಂದುವರಿದ ಕೊಹ್ಲಿ, ಗಂಭೀರ್​ ಜಗಳ

  ಮತ್ತೆ ವಿರಾಟ್​​ ಕೊಹ್ಲಿ ಕಾಲೆಳೆದ ಗೌತಮ್​ ಗಂಭೀರ್

  ಗೌತಮ್​ ಗಂಭೀರ್​ಗೆ ಗುರಾಯಿಸಿದ ವಿರಾಟ್​ ಕೊಹ್ಲಿ!

ಆರ್‌ಸಿಬಿ ಮಾಜಿ ಕ್ಯಾಪ್ಟನ್​​ ವಿರಾಟ್‌ ಕೊಹ್ಲಿ ಮತ್ತು ಗೌತಮ್‌ ಗಂಭೀರ್‌ ನಡುವಣ ಜಗಳ ಹೊಸದಲ್ಲ. ಐಪಿಎಲ್ 2013 ಟೂರ್ನಿಯಲ್ಲಿ ಗಂಭೀರ್‌ ಕೆಕೆಆರ್‌ ಕ್ಯಾಪ್ಟನ್‌ ಆಗಿದ್ದರು. ಅಂದು ಬೆಂಗಳೂರಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ವಿಕೆಟ್‌ ಪತನವಾದಾಗ ಗಂಭೀರ್‌ ಅತಿಯಾಗಿ ಸಂಭ್ರಮಿಸಿದ್ದರು. ಬಳಿಕ ಕೊಹ್ಲಿ, ಗಂಭೀರ್​ ಮಧ್ಯೆ ಜಗಳ ನಡೆದಿತ್ತು. ಅಂದಿನಿಂದ ಇಂದಿನವರೆಗೂ ಗಂಭೀರ್‌ ಮತ್ತು ಕೊಹ್ಲಿ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ಇದು ಐಪಿಎಲ್‌ 2023 ಟೂರ್ನಿಯಲ್ಲೂ ನಡೆದಿತ್ತು. ಕೊಹ್ಲಿ ಕಾಲ್ಕೆರೆದು ಜಗಳ ಮಾಡಲು ಗೌತಮ್ ಗಂಭೀರ್‌ ಕಾಯುತ್ತಲೇ ಇರುತ್ತಾರೆ.

ಇಂದು ಎಂ.ಎ ಚಿನ್ನಸ್ವಾಮಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಕೋಲ್ಕತ್ತಾ ನೈಟ್​ ರೈಡರ್ಸ್​ ಮಧ್ಯೆ ರೋಚಕ ಪಂದ್ಯ ನಡೆಯುತ್ತಿದೆ. ಟಾಸ್​ ಗೆದ್ದ ಕೆಕೆಆರ್​ ಬೌಲಿಂಗ್​ ಆಯ್ದುಕೊಂಡ ಕಾರಣ ಆರ್​​ಸಿಬಿ ಬ್ಯಾಟಿಂಗ್​​​​ ಮಾಡುತ್ತಿದೆ.

ಇನ್ನು, ಈ ಮಧ್ಯೆ ಟ್ವಿಟರ್​ನಲ್ಲಿ ವಿರಾಟ್​ ಕೊಹ್ಲಿ, ಗೌತಮ್​​ ಗಂಭೀರ್​ ಇಂದಿನ ವಿಡಿಯೋ ಒಂದು ವೈರಲ್​ ಆಗಿದೆ. ಒಂದೇ ಕ್ಯಾಮೆರಾ ಫ್ರೇಮ್​ನಲ್ಲಿ ಒಬ್ಬರಿಗೊಬ್ಬರು ಗುರಾಯಿಸಿಕೊಂಡು ನೋಡಿರೋ ವಿಡಿಯೋ ಇದಾಗಿದೆ. ಮತ್ತೆ ಇಬ್ಬರು ಜಗಳ ಮಾಡಿಕೊಳ್ಳಲು ಮುಂದಾದ್ರಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ಓದಿ: VIDEO: ‘ಒಂದು ಕಪ್​ ಗೆಲ್ಲದಿದ್ರೂ ಎಷ್ಟು​ ಕೊಬ್ಬು​​’- ಮತ್ತೆ ಕೊಹ್ಲಿಯನ್ನು ಕೆಣಕಿದ ಗಂಭೀರ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಪಂದ್ಯದ ಮಧ್ಯೆಯೇ ಮತ್ತೆ ಜಗಳ.. ಗಂಭೀರ್​​ನಾ ಗುರಾಯಿಸಿದ ವಿರಾಟ್​​ ಕೊಹ್ಲಿ!

https://newsfirstlive.com/wp-content/uploads/2024/03/Kohli_Gambhir1.jpg

Load More