ವಿರಾಟ್ ಕಂಡ ಕನಸನನ್ನ ನನಸಾಗಿಸಿದ ವರ್ತಿಕ್
ನಿನ್ನೆ ಮೊನ್ನೆಯದಲ್ಲ.. ವಿರಾಟ್-ವರ್ತಿಕ್ ಗೆಳೆತನ
1050 ಕೋಟಿ ಆದಾಯದ ಹಿಂದಿದೆ ಈತನ ಶ್ರಮ
ಆನ್ಫೀಲ್ಡ್ ಮಾತ್ರವಲ್ಲ. ಆಫ್ ದ ಫೀಲ್ಡ್ನಲ್ಲೂ ವಿರಾಟ್ ಕೊಹ್ಲಿ ಒಬ್ಬ ಸಕ್ಸಸ್ಫುಲ್ ಪರ್ಸನ್.! ರನ್ಗಳಿಕೆ ಮಾತ್ರವಲ್ಲ. ಹಣಗಳಿಕೆಯಲ್ಲೂ ಮಾಸ್ಟರ್.! ಇಂದು ವಿರಾಟ್ ಕೊಹ್ಲಿ ಒಬ್ಬ ಯಶಸ್ವಿ ಬ್ಯುಸಿನೆಸ್ ಮ್ಯಾನ್ ಆಗಿರೋದ್ರ ಹಿಂದೆ ಒಂದು ಶಕ್ತಿಯಿದೆ. ಆ ಶಕ್ತಿಯೇ ಇಂದು ಕೊಹ್ಲಿಯನ್ನ ಕೋಟಿ ಕುಬೇರನನ್ನಾಗಿಸಿದೆ. ಆ ಶಕ್ತಿ ಯಾವುದು.? ಅನ್ನೋದರ ಇಂಟರೆಸ್ಟಿಂಗ್ ಸುದ್ದಿ ಇಲ್ಲಿದೆ.
ವಿರಾಟ್ ಕೊಹ್ಲಿಯ ಆನ್ಫೀಲ್ಡ್ ಸಕ್ಸಸ್ನ ಬಗ್ಗೆ ಹೇಳೋಕೆ ಹೋದ್ರೆ ಒಂದು ದಿನಾನೂ ಸಾಲಲ್ಲ. ಸಾಲು ಸಾಲು ಶತಕಗಳು, ಅವಿಸ್ಮರಣೀಯ ಇನ್ನಿಂಗ್ಸ್, ಕೆಚ್ಚೆದೆಯ ಹೋರಾಟದ ಕಥೆಗಳು. ಒಂದೊಂದೆ ತೆರೆದುಕೊಳ್ಳುತ್ತೆ. ಕ್ರಿಕೆಟ್ಗೆ ಗುಡ್ ಬೈ ಹೇಳೋಕೆ ಮುನ್ನವೇ ಲೆಜೆಂಡ್ ಸಾಲಿನಲ್ಲಿ ನಿಂತಿರೋದೆ ಕೊಹ್ಲಿಯ ಯಶಸ್ಸಿಗೆ ಹಿಡಿದಿರೋ ಕನ್ನಡಿಯಾಗಿದೆ.
ಆಫ್ ದ ಫೀಲ್ಡ್ನಲ್ಲೂ ಕೊಹ್ಲಿಯದ್ದೇ ದರ್ಬಾರ್.!
ಆನ್ಫೀಲ್ಡ್ನಲ್ಲಿ ತನ್ನ ಆಟದಿಂದ ದಾಖಲೆಗಳನ್ನ ಕಬ್ಜ ಮಾಡಿರುವ ಕೊಹ್ಲಿ, ಆಫ್ ದ ಫೀಲ್ಡ್ನಲ್ಲೂ ಯಶಸ್ಸಿನ ಉತ್ತುಂಗಕ್ಕೇರಿದ್ದಾರೆ. ಒಬ್ಬ ಸಕ್ಸಸ್ಫುಲ್ ಬ್ಯುಸಿನೆಸ್ ಮ್ಯಾನ್ ಆಗಿ ಕೋಟಿ ಕುಬೇರ ಕೊಹ್ಲಿ ಎನಿಸಿಕೊಂಡಿದ್ದಾರೆ. ಬ್ಯುಸಿನೆಸ್ಮನ್ ಕೊಹ್ಲಿಯ ಈ ಯಶಸ್ಸಿನ ಹಿಂದೆ ಒಂದು ಶಕ್ತಿಯಿದೆ. ಆ ಶಕ್ತಿಯೆ ಗೆಳೆತನ.
ಕೋಟಿ ಕೊಹ್ಲಿ ಸಕ್ಸಸ್ ಹಿಂದೆ ಜೀವದ ಗೆಳೆಯ.!
ಹೌದು.. ಎಬಿ ಡಿವಿಲಿಯರ್ಸ್, ಕ್ರಿಸ್ ಗೇಲ್, ಎಮ್.ಎಸ್ ಧೋನಿ ಹೀಗೆ ವಿರಾಟ್ ಕೊಹ್ಲಿಯ ಕ್ರಿಕೆಟ್ ಸರ್ಕಲ್ನ ಗೆಳೆಯರ ಬಳಗದ ಬಗ್ಗೆ ನಿಮಗೆ ಗೊತ್ತಿದೆ. ಆದ್ರೆ, ಇದನ್ನೂ ಮೀರಿಸೋ ಒಬ್ಬ ಗೆಳೆಯ ಆಫ್ ದ ಫೀಲ್ಡ್ನಲ್ಲಿದ್ದಾನೆ. ಕೊಹ್ಲಿಯ ಕನಸನ್ನ ನನಸು ಮಾಡಿದ, ಕೊಹ್ಲಿಯನ್ನ ಕೋಟಿ ಕುಬೇರನನ್ನಾಗಿಸಿದ ಜೀವದ ಗೆಳೆಯನೇ ವರ್ತಿಕ್ ತಿಹಾರ.
View this post on Instagram
1050 ಕೋಟಿ ಆದಾಯದ ಹಿಂದಿದೆ ಈತನ ಶ್ರಮ.!
ವಿರಾಟ್ ಕೊಹ್ಲಿ ಸದಾ ಕಾಲ ಕ್ರಿಕೆಟ್ನಲ್ಲಿ ಬ್ಯುಸಿಯಾಗಿದ್ರೂ, ಬ್ಯುಸಿನೆಸ್ನಲ್ಲಿ ಸಕ್ಸಸ್ ಕಂಡಿದ್ದೇಗೆ ಅನ್ನೋ ಕುತೂಹಲ ನಿಮ್ಮನ್ನ ಕಾಡಿರುತ್ತೆ. ಅದಕ್ಕೆ ಉತ್ತರನೇ ವರ್ತಿಕ್ ತಿಹಾರ. ಕೊಹ್ಲಿಯ ಪ್ರತಿಯೊಂದು ಬ್ಯುಸಿನೆಸ್ ಮತ್ತು ಮಾರ್ಕೆಟಿಂಗ್ ಮಾಡೋ ಮಾಸ್ಟರ್ ಮೈಂಡ್ ವರ್ತಿಕ್. ಈತ ಕೊಡೋ ಮಾರ್ಕೆಟಿಂಗ್ ಐಡಿಯಾಗಳೇ ಇಂದು ಕೊಹ್ಲಿ ಆದಾಯವನ್ನ ದುಪ್ಪಟ್ಟು ಮಾಡಿದೆ ಅಂದ್ರೆ ತಪ್ಪಾಗಲ್ಲ.
ವಿರಾಟ್ ಕಂಡ ಕನಸನನ್ನ ನನಸಾಗಿಸಿದ ವರ್ತಿಕ್.!
ಸದಾ ಕ್ರಿಕೆಟ್ನಲ್ಲಿ ಬ್ಯುಸಿಯಿದ್ರೂ ಹೋಟೆಲ್ ಬ್ಯುಸಿನೆಸ್ ಮಾಡಬೇಕು ಅನ್ನೋದು ಕೊಹ್ಲಿ ಕನಸಾಗಿತ್ತು. ಅದಕ್ಕಾಗಿಯೇ ಶುರು ಮಾಡಿದ್ದು ಒನ್ 8 ಕಮ್ಯೂನ್ ರೆಸ್ಟೊರೆಂಟ್. ಕೊಹ್ಲಿಯ ಕನಸನ್ನ ನನಸು ಮಾಡಲು ಬೆನ್ನಿಗೆ ನಿಂತಿದ್ದು ಜೀವದ ಗೆಳೆಯ ವರ್ತಿಕ್ ತಿಹಾರ. ಆರಂಭದಿಂದ ಈವರೆಗೆ ಆ ಬ್ಯುಸಿನೆಸ್ಗೆ ತನ್ನನ್ನ ತಾನು ತೊಡಗಿಸಿಕೊಂಡ ಕಾರ್ತಿಕ್ ಸಕ್ಸಸ್ನ ಸೂತ್ರದಾರನಾಗಿದ್ದಾರೆ. ಇಂದು ದೆಹಲಿ, ಪುಣೆ, ಬೆಂಗಳೂರು ಎಲ್ಲಾ ಕಡೆ ಒನ್ 8 ಕಮ್ಯೂನ್ ಬ್ರ್ಯಾಂಚ್ ಓಪನ್ ಆಗಿದೆ. 112 ಕೋಟಿ ಬ್ರ್ಯಾಂಡ್ ವ್ಯಾಲ್ಯೂ ಅನ್ನ ಹೊಂದಿದೆ ಅಂದ್ರೆ ಅದರ ಹಿಂದೆ ವರ್ತಿಕ್ ಶ್ರಮ ಅಪಾರ.
View this post on Instagram
ನಿನ್ನೆ ಮೊನ್ನೆಯದಲ್ಲ.. ವಿರಾಟ್-ವರ್ತಿಕ್ ಗೆಳೆತನ.!
ವಿರಾಟ್ ಕೊಹ್ಲಿ – ವರ್ತಿಕ್ ತಿಹಾರ ಅಂಡರ್ 17 ದಿನದಿಂದಲೂ ಗೆಳೆಯರು. ಆಗ ಕ್ರಿಕೆಟರ್ ಆಗಬೇಕು ಅನ್ನೋ ಕನಸು ಇಬ್ಬರಲ್ಲೂ ಇತ್ತು. ಆದ್ರೆ, ಆಗೋ ಅದೃಷ್ಟ ಕೊಹ್ಲಿಗೆ ಮಾತ್ರವಿತ್ತು. ಕೊಹ್ಲಿ ಕ್ರಿಕೆಟ್ನಲ್ಲಿ ಸಕ್ಸಸ್ ಕಂಡುಕೊಂಡರೆ, ವರ್ತಿಕ್ ಆಗಲೇ ಬ್ಯುಸಿನೆಸ್ ಲೋಕಕ್ಕೆ ಕಾಲಿಟ್ರು. ಫೀಲ್ಡ್ ಬೇರೆ ಬೇರೆಯಾದ್ರೂ, ಗೆಳೆತನ ಮಾತ್ರ ದೂರವಾಗಲಿಲ್ಲ. 2017ರಲ್ಲಿ ವಿರಾಟ್ – ಅನುಷ್ಕಾ ವಿವಾಹಕ್ಕೆ ತೆರಳಿದ್ದ ಏಕೈಕ ಕ್ರಿಕೆಟಿಗ ವರ್ತಿಕ್ ತಿಹಾರ.! ಇವರಿಬ್ಬರು ಎಷ್ಟು ಆತ್ಮೀಯರು ಅನ್ನೋದಕ್ಕೆ ಇದೇ ಬೆಸ್ಟ್ ಎಕ್ಸಾಂಪಲ್.
ಇಂದಿನ ಕಾಲದಲ್ಲಿ ಗೆಳೆತನದಲ್ಲಿ ವ್ಯವಹಾರ ಬಂದ್ರೆ ಅದ್ರ ವ್ಯಾಲಿಡಿಟಿ ತುಂಬಾ ಕಡಿಮೆ ಅನ್ನೋ ಮಾತಿದೆ. ಆದ್ರೆ, ವಿರಾಟ್ ಹಾಗೂ ವರ್ತಿಕ್ರ ಗೆಳೆತನ ಇದಕ್ಕೆ ತದ್ವಿರುದ್ಧವಾಗಿದೆ. ಇವರಿಬ್ಬರ ಈ ಗೆಳೆತನ ಮುಂದೆಯೂ ಹೀಗೆ ಇರಲಿ ಅನ್ನೋದೆ ನಮ್ಮ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ