/newsfirstlive-kannada/media/post_attachments/wp-content/uploads/2024/05/GREEN-2.jpg)
ವಿರಾಟ್ ಕೊಹ್ಲಿ ಮೈದಾನದಲ್ಲಿದ್ದಾರೆ ಅಂದರೆ ಅವರೇ ಪ್ರಮುಖ ಅಟ್ರ್ಯಾಕ್ಷನ್. ಅದು ಫೀಲ್ಡಿಂಗ್​ನಲ್ಲಿರಲಿ ಅಥವಾ ಕ್ರೀಸ್​ನಲ್ಲಿರಲಿ! ಅವರ ಅಗ್ರೆಸೀವ್​, ಕೋಪ, ಹೋರಾಟ, ವೀಕ್ಷಕರ ರಂಜಿಸುವ ರೀತಿ ಎಲ್ಲವೂ ಕೂಡ ಮನಸೂರೆಗೊಳಿಸುತ್ತವೆ.
ಆದರೆ ​ಗುಜರಾತ್ ವಿರುದ್ಧ ನಿನ್ನೆ ನಡೆದ ಪಂದ್ಯದಲ್ಲಿ ಕೊಹ್ಲಿಯನ್ನು ಕಮೆರೂನ್ ಗ್ರೀನ್ ಬೀಟ್ ಮಾಡಿದ್ದಾರೆ. ಕೊಹ್ಲಿಗಿಂತ ಹೈಲೈಟ್ಸ್ ಆಗಿದ್ದಾರೆ. ವಿಷಯ ಏನು ಅಂದರೆ, ಮೊದಲು ಬ್ಯಾಟ್ ಮಾಡಿದ್ದ ಗುಜರಾತ್​ ತಂಡ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟ ಎದುರಿಸುತ್ತಿತ್ತು. ಈ ನಡುವೆ ಗುಜರಾತ್ ತಂಡ 12.4ನೇ ಓವರ್​ನಲ್ಲಿ ಕೊಹ್ಲಿ ಅವರು ಶಾರುಖ್ ಖಾನ್ ಅವರನ್ನು ರನ್​ಔಟ್ ಮಾಡಿ ಪೆವಿಲಿಯನ್​ಗೆ ಕಳುಹಿಸಿದರು.
ಇದನ್ನೂ ಓದಿ:ಅಬ್ಬಾಬಬ.. ಎಮ್ಮೆಗೂ ಬಂತು ಕಾಲ..! ಕೊಟ್ಟಿಗೆಯಲ್ಲಿ AC ಕಂಡು ಬೆಚ್ಚಿಬಿದ್ದ ಜನ.. Video
ಶಾರುಖ್ ರನೌಟ್ ಆಗುತ್ತಿದ್ದಂತೆಯೇ ಆರ್​ಸಿಬಿ ಟೀಂ ಸಂಭ್ರಮದಲ್ಲಿ ಮುಳಗಿತ್ತು. ಈ ಸಂದರ್ಭದಲ್ಲಿ ಕಮೆರೂನ್ ಗ್ರೀನ್ ಅವರು ಸಂಭ್ರಮಿಸಿದ ಕ್ಷಣಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕುತ್ತಿಗೆಯನ್ನು ಅಲ್ಲಾಡಿಸುತ್ತ ಗ್ರೀನ್ ಸಂಭ್ರಮಿಸಿದ್ದಾರೆ. ಇದು ಜನರ ಮನಸು ಗೆದ್ದಿದೆ. ಅಂದ್ಹಾಗೆ ನಿನ್ನೆಯ ಪಂದ್ಯದಲ್ಲಿ ಗುಜರಾತ್ ತಂಡವು 148 ರನ್​ಗಳ ಗುರಿಯನ್ನು ನೀಡಿತ್ತು. ಆರ್​ಸಿಬಿ 13.4 ಓವರ್​ನಲ್ಲಿ 6 ವಿಕೆಟ್ ಕಳೆದುಕೊಂಡು 152 ರನ್​ಗಳಿಸಿತು.
I usually like Virat reactions in the ground ..but this time #green won it ..#green ಏನಂತೀರಾ .. pic.twitter.com/m6tmk1TXe7
— ಸುನಿ/SuNi (@SimpleSuni) May 5, 2024
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us