newsfirstkannada.com

3 ಓವರ್​​ಗೆ 46, 6 ಓವರ್​​ನಷ್ಟಕ್ಕೆ 93 ರನ್..! ಆದರೂ ಆರ್​ಸಿಬಿಗೆ ಬಿಗ್ ಶಾಕ್​ ಕೊಟ್ಟ ಜೋಸುವಾ ಲಿಟ್ಲೆ..!

Share :

Published May 5, 2024 at 10:29am

Update May 5, 2024 at 10:31am

  RCBಗೆ ಹ್ಯಾಟ್ರಿಕ್​ ಗೆಲುವಿನ ಸಿಂಚನ, ಸುಲಭಕ್ಕೆ ತುತ್ತಾದ GT

  4 ವಿಕೆಟ್​ಗಳ ಭರ್ಜರಿ ಜಯ, ಕೊಹ್ಲಿ-ಡುಪ್ಲೆಸಿ ಅಬ್ಬರಕ್ಕೆ GT​ ಥಂಡಾ

  18 ಎಸೆತದಲ್ಲಿ ಡುಪ್ಲೆಸಿ ಅರ್ಧಶತಕ, ಗೆಲುವಿನ ದಡ ಸೇರಿಸಿದ ಡಿಕೆ

ಆರ್​ಸಿಬಿ ಬೌಲಿಂಗ್ ಅಂತೂ ಬೆಂಕಿ. ಅದೇ ಚಿಂದಿ ಪರ್ಫಾಮೆನ್ಸ್​​ ಬ್ಯಾಟ್ಸ್​​​​​ಮನ್​ಗಳಿಂದಲೂ ಮೂಡಿ ಬಂತು. ಎಸ್ಪೆಷಲಿ ಭಲೇ ಜೋಡಿ ಕೊಹ್ಲಿ-ಫಾಫ್​​ ಡುಪ್ಲೆಸಿ ಹೋಮ್​ಗ್ರೌಂಡ್​ನಲ್ಲಿ ಜಬರ್ದಸ್ತ್​ ಇನ್ನಿಂಗ್ಸ್ ಕಟ್ಟಿದ್ರು. ಗುಜರಾತ್ ಬೌಲರ್​ಗಳ ಮಾರಣಹೋಮ ನಡೆಸಿ, ತಂಡಕ್ಕೆ ಬಿಗ್​​​ ವಿಕ್ಟರಿ ತಂದುಕೊಟ್ರು.

ಗೆಲುವಿಗೆ 148 ರನ್​ ಗುರಿ ಬೆನ್ನಟ್ಟಿದ ಆರ್​ಸಿಬಿ ದಂಡಂ ದಶಗುಣಂ ಆಟವಾಡ್ತು. ಜೋಡೆತ್ತು ಕಿಂಗ್ ಕೊಹ್ಲಿ -ಕ್ಯಾಪ್ಟನ್ ಡುಪ್ಲೆಸಿ ನೆಕ್ಸ್ಟ್​ ಲೆವೆನ್​ನಲ್ಲಿ ಬ್ಯಾಟ್​ ಬೀಸಿದ್ರು. ಈ ಸೀಸನ್​​ನಲ್ಲಿ ಇವರಿಂದ ಅಂತಹ ಧಮ್​​ದಾರ್​​​​ ಪರ್ಫಾಮೆನ್ಸ್​​​ ಮೂಡಿ ಬಂದಿರಲೇ ಇಲ್ಲ. ನಿನ್ನೆ ಮಾತ್ರ ಚಿನ್ನಸ್ವಾಮಿ ಮೈದಾನದಲ್ಲಿ ಕೊಹ್ಲಿ-ಡುಪ್ಲೆಸಿಸ್ ಕೂಡಿಕೊಂಡು ಗುಜರಾತ್ ಬೌಲರ್​ಗಳಿಗೆ ನರಕ ದರ್ಶನ ತೋರಿಸಿದ್ರು.

ಇದನ್ನೂ ಓದಿ:ಕೊನೆಗೂ ಹೊಸ ಭರವಸೆ ಕೊಟ್ಟ ಆರ್​ಸಿಬಿ ಬೌಲರ್ಸ್​.. ಬೊಂಬಾಟ್ ಬೌಲಿಂಗ್​ನ ಹೈಲೆಟ್ಸ್..!

ಜೋಡೆತ್ತು ಕೊಹ್ಲಿ-ಡುಪ್ಲೆಸಿಸ್​​​​​​ ಆಟಕ್ಕೆ ಬೆಚ್ಚಿಬಿದ್ದ ಗುಜರಾತ್
ಕಿಂಗ್ ಕೊಹ್ಲಿ-ಡುಪ್ಲೆಸಿಸ್​​ ಆರ್​ಸಿಬಿಗೆ ಬೊಂಬಾಟ್​ ಓಪನಿಂಗ್ ಒದಗಿಸಿದ್ರು. ಗುಜರಾತ್​​​​​ ಬೌಲರ್​ಗಳನ್ನ ಹಣ್ಣುಗಾಯಿ ನೀರುಗಾಯಿ ಮಾಡಿದ ಈ ಜೋಡಿ ಮೊದಲ 3 ಓವರ್​ಗಳಲ್ಲಿ ವಿಸ್ಪೋಟಕ 46 ರನ್​​​​ ಕಲೆಹಾಕ್ತು. ಪವರ್​ ಪ್ಲೇ ಮುಗಿಯುವಷ್ಟರಲ್ಲಿ ತಂಡದ ಮೊತ್ತವನ್ನ 93ಕ್ಕೇರಿಸಿದ್ರು.

ತವರಿನಂಗಳದಲ್ಲಿ ಕ್ಯಾಪ್ಟನ್ ಡುಪ್ಲೆಸಿಸ್ ರಣಾರ್ಭಟ..!
ಮೊದಲ ಎಸೆತದಿಂದಲೇ ಚಾರ್ಜ್​ ಶುರುವಿಟ್ಟುಕೊಂಡ ಡುಪ್ಲೆಸಿಸ್​​ ನಿಜಕ್ಕೂ ವಿಷ್ಣುವಿನ ಉಗ್ರಾವತಾರವನ್ನೇ ತಾಳಿ ಬಿಟ್ಟಿದ್ರು. ಸಿಕ್ಸರ್​​​ ಬೌಂಡ್ರಿಗಳ ಮಳೆಗರೆದ ಡುಪ್ಲೆಸಿಸ್​ ಕೇವಲ 18 ಎಸೆತಗಳಲ್ಲಿ ಹಾಫ್​ಸೆಂಚುರಿ ಪೂರೈಸಿದ್ರು. ಬಳಿಕ ಮತ್ತಷ್ಟು ವೈಲೆಂಟ್​ ಡುಪ್ಲೆಸಿ 64 ರನ್ ಗಳಿಸಿದ್ದಾಗ ವಿಕೆಟ್​ ಒಪ್ಪಿಸಿದ್ರು.

17 ರನ್ ಅಂತರದಲ್ಲಿ 5 ವಿಕೆಟ್​ ಪತನ
93 ರನ್​ಗೆ 1 ವಿಕೆಟ್ ಕಳೆದುಕೊಂಡಿದ್ದ ಆರ್​ಸಿಬಿ ಈಸಿಯಾಗಿ ಪಂದ್ಯ ಗೆಲ್ಲುವ ಲೆಕ್ಕಾಚಾರದಲ್ಲಿತ್ತು. ಆ ಕನಸನ್ನ ಯಂಗ್ ಬೌಲರ್​​ ಜೋಸುವಾ ಲಿಟ್ಲೆ ಭಗ್ನಗೊಳಿಸಿದ್ರು. ಕಳೆದ ಮ್ಯಾಚ್ ವಿನ್ನರ್​​ ವಿಲ್ ಜಾಕ್ಸ್​​​, ರಜತ್ ಪಟೀದಾರ್​​, ಡೇಂಜರಸ್​​ ಗ್ಲೆನ್ ಮ್ಯಾಕ್ಸ್​ವೆಲ್​​​ ಹಾಗೂ ಕ್ಯಾಮರೂನ್ ಗ್ರೀನ್​​ಗೆ ಖೆಡ್ಡಾ ತೋಡಿದ್ರು. ಬರೀ 17 ರನ್ ಅಂತರದಲ್ಲಿ 5 ವಿಕೆಟ್ ಕಳೆದುಕೊಂಡ ಆರ್​ಸಿಬಿ ಪಾಳಯದಲ್ಲಿ ಆತಂಕ ಮನೆಮಾಡಿತ್ತು.

ಇದನ್ನೂ ಓದಿ:ರೇವಣ್ಣ ಅರೆಸ್ಟ್.. ಪ್ರಜ್ವಲ್ ರೇವಣ್ಣ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಪುಟ್ಟರಾಜು..!

DK ಬಾಸ್​​ ರೋರಿಂಗ್​​​​.. ಆರ್​ಸಿಬಿಗೆ ಪ್ರಚಂಡ ಜಯ..!
ಒಂದೆಡೆ ವಿಕೆಟ್​ ಉರುಳುತ್ತಿದ್ರೂ ಗಟ್ಟಿಯಾಗಿ ನೆಲೆಯೂರಿದ್ದ ಕಿಂಗ್ ಕೊಹ್ಲಿ 42 ರನ್ ಗಳಿಸಿ ನೂರ್ ಅಹ್ಮದ್​​​ ಸ್ಪಿನ್ ಬಲೆಗೆ ಬಿದ್ರು. ಇನ್ನೇನು ಆರ್​ಸಿಬಿ ಕಥೆ ಮುಗಿದೆ ಹೋಯ್ತು ಅನ್ನುವಷ್ಟರಲ್ಲಿ ಫಿನಿಶರ್ ದಿನೇಶ್​ ಕಾರ್ತಿಕ್​​ ಸಿಡಿದೆದ್ದರು. 12 ಎಸೆತಗಳಲ್ಲಿ 3 ಬೌಂಡರಿ ಸಹಿತ 21 ರನ್ ಗಳಿಸಿ ಶೈನ್ ಆದ್ರು. ಡಿಕೆ ಹಾಗೂ ಸ್ವಪ್ನಿಲ್​​​ ಸಿಂಗ್ ಅಜೇಯ 15 ರನ್​ಗಳ ನೆರವಿನಿಂದ ಆರ್​ಸಿಬಿ ಇನ್ನೂ 38 ಎಸೆತ ಬಾಕಿ ಇರುವಂತೆಯೇ 4 ವಿಕೆಟ್​ಗಳಿಂದ ಜಯಭೇರಿ ಬಾರಿಸ್ತು. ಹ್ಯಾಟ್ರಿಕ್ ಗೆಲುವು ಸಾಧಿಸಿದ ರೆಡ್​​​​​​ ಆರ್ಮಿ ಪಾಯಿಂಟ್ಸ್ ಟೇಬಲ್​​ನಲ್ಲಿ 7ನೇ ಸ್ಥಾನಕ್ಕೇರಿತು.

ಇದನ್ನೂ ಓದಿ:ಅರೆಸ್ಟ್ ಆಗಲು ಜ್ಯೋತಿಷ್ಯದ ಪ್ರಕಾರವೇ ನಡೆದುಕೊಂಡ್ರಂತೆ ರೇವಣ್ಣ.. ಆ ಮುಕ್ಕಾಲು ಗಂಟೆ ಮಾಡಿದ್ದೇನು ಗೊತ್ತಾ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

3 ಓವರ್​​ಗೆ 46, 6 ಓವರ್​​ನಷ್ಟಕ್ಕೆ 93 ರನ್..! ಆದರೂ ಆರ್​ಸಿಬಿಗೆ ಬಿಗ್ ಶಾಕ್​ ಕೊಟ್ಟ ಜೋಸುವಾ ಲಿಟ್ಲೆ..!

https://newsfirstlive.com/wp-content/uploads/2024/05/RCB-35.jpg

Load More