/newsfirstlive-kannada/media/post_attachments/wp-content/uploads/2024/07/First-Night-Reels.jpg)
ಸಾಮಾಜಿಕ ಜಾಲತಾಣಗಳ ಗೀಳು ಯುವಜನರನ್ನು ಕಾಡುತ್ತಿದೆ. ಅದರಲ್ಲೂ ಕೆಲವರಂತೂ ಊಟ, ನಿದ್ದೆ ಬೇಕಾದರೆ ಬಿಡುವೆವು ಆದರೆ ರೀಲ್ಸ್​, ವ್ಲಾಗ್​ ಮಾತ್ರ ಬಿಡೆವು ಎಂಬವವರು ಇದ್ದಾರೆ. ಆದರೆ ಈ ಮಿತಿ ಮೀರಿದ ವರ್ತನೆಯಿಂದ ಮಾನ, ಮರ್ಯಾದೆ ಕಳೆದುಕೊಳ್ಳುವ ಪ್ರಸಂಗವು ಎದುರಾದದ್ದು ಇದೆ. ಇದೀಗ ಅದಕ್ಕೆ ಉದಾಹರಣೆ ಎಂಬಂತೆ ವ್ಲಾಗರ್​​ ಒಬ್ಬ ತನ್ನ ಫಸ್ಟ್​ ನೈಟ್​ ವಿಡಿಯೋವನ್ನ ಹಂಚಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದೆ. ಸದ್ಯ ನವ ಜೋಡಿಗಳು ಟ್ರೋಲ್​ ಆಗುತ್ತಿದ್ದಾರೆ. ಅನೇಕರು ವಿಡಿಯೋ ಹಂಚಿಕೊಳ್ಳುವ ಮೂಲಕ ದಂಪತಿಗಳಿಗೆ ಸರಿಯಾಗಿ ಕ್ಲಾಸ್​​ ತೆಗೆದುಕೊಂಡಿದ್ದಾರೆ. ಇನ್ನು ಹಲವರು ಕಾಮೆಂಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಅಂದಹಾಗೆಯೇ ವರನು ತನ್ನ ಮದುವೆಯ ಮೊದಲ ರಾತ್ರಿಯ ವಿಡಿಯೋ ಮಾಡಿದ್ದಾನೆ. ವಧುವಿನ ಬಳಿ ನಮ್ಮ ಮದುವೆಯ ರಾತ್ರಿ ಹೇಗಿತ್ತು? ಎಂದು ಪ್ರಶ್ನಿಸುತ್ತಾನೆ. ಅದಕ್ಕೆ ವಧು ನೀನು ಈಗ ಎಲ್ಲಿದ್ದೀಯಾ? ಎಂದು ಕೇಳುತ್ತಾಳೆ. ಬಳಿಕ ವರ ಫಸ್ಟ್​ ನೈಟ್​ಗೆ ಅಲಂಕರಿಸಿದ ಹೂ, ಹಾಸಿಗೆಯನ್ನು ವಿಡಿಯೋದಲ್ಲಿ ತೋರಿಸುತ್ತಾನೆ.
ಇದನ್ನೂ ಓದಿ: ದಿನದಿಂದ ದಿನಕ್ಕೆ ಒಡಲು ತುಂಬಿಸುತ್ತಿದ್ದಾಳೆ ಕಾವೇರಿ.. ಇಂದು ಎಷ್ಟಿದೆ ಗೊತ್ತಾ ನೀರಿನ ಮಟ್ಟ?
ಟ್ವಿಟ್ಟರ್​ ಬಳಕೆದಾರರಾದ ಸನಂದಾ ರಾಯ್​ ಎಂಬವರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋಗೆ ಇದು ಸುಹಾಗ್ರತ್​ ವ್ಲಾಗ್​. ಈ ವ್ಲಾಗರ್​ ಸಂಪೂರ್ಣ ಹುಚ್ಚರಾಗಿದ್ದಾರೆ. ಜೊತೆಗೆ ಬ್ಲರ್​ ಮಾಡಿರುವ ಕ್ಲಿಪ್​​ಗಾಗಿ ನಿರೀಕ್ಷಿಸಿ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ತೀವ್ರ ಹೃದಯಾಘಾತ.. 35 ವರ್ಷದ ವಿರಕ್ತ ಮಠದ ಸ್ವಾಮೀಜಿ ನಿಧನ
ಎಕ್ಸ್​ನಲ್ಲಿ ಈ ವಿಡಿಯೋ ಕಂಡತೆ ಅನೇಕರು ನವ ಜೋಡಿಗಳಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಹಲವಾರು ಮಂದಿ ಇಂಥಾ ಸಾಮಾಜಿಕ ಜಾಲತಾಣದ ಗೀಳಿನ ಬಗ್ಗೆ ಬೇಸರ ಹೊರಹಾಕಿದ್ದಾರೆ.
Suhagraat Vlog ?
These vloggers have gone totally mad.
Wait for the blurred clip ? https://t.co/PMsiC5dS6U
— Sunanda Roy ? (@SaffronSunanda)
Suhagraat Vlog 🥴
These vloggers have gone totally mad.
Wait for the blurred clip 😹 https://t.co/PMsiC5dS6U— Sunanda Roy 👑 (@SaffronSunanda) July 5, 2024
">July 5, 2024
ಇದನ್ನೂ ಓದಿ: VIDEO: ನದಿ ನೀರಿನಲ್ಲಿ ಹುಚ್ಚಾಟ ಮೆರೆದ ಡ್ರೈವರ್​.. ಕಣ್ಣ ಮುಂದೆಯೇ ಕೊಚ್ಚಿ ಹೋಯ್ತು ಲಾರಿ
ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದ ಗೀಳು ಮನೆಯ ಬೆಡ್​ ರೂಂವರೆಗೂ ತಲುಪಿರುವುದು ವಿಪರ್ಯಾಸ. ಅದರಲ್ಲೂ ದೈನಂದಿನ ದಿನಚರಿಯಂತೆ ವ್ಲಾಗ್​ ಮಾಡುತ್ತಾ ಆದಾಯದ ಮೂಲಕ್ಕಾಗಿ ಇಂತಹ ಕಂಟೆಂಟ್​ ಸಿದ್ಧಪಡಿಸುತ್ತಿರುವುದು ಆಘಾತಕಾರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us