BMTC ವೋಲ್ವೊ ಬಸ್ಗಳಿಂದ ನಿರೀಕ್ಷಿತ ಆದಾಯ ಬರುತ್ತಿಲ್ಲ
ವೋಲ್ವೋ ಬಸ್ಗಳು ಇತಿಹಾಸ ಪುಟ ಸೇರುವ ದಿನಗಳು ಹತ್ತಿರ
BMTC ಸಂಸ್ಥೆಗೆ ಲಾಭದ ಬದಲು ದಿನದಿಂದ ದಿನಕ್ಕೆ ನಷ್ಟವಾಗ್ತಿದೆ
ಬಿಎಂಟಿಸಿ ಬುದ್ಧಿವಂತ ಸಂಸ್ಥೆಯಾಗ್ತಿದೆ. ನಷ್ಟವಾಗ್ತಿರೋ ಸಂಸ್ಥೆಯನ್ನ ಸರಿದಾರಿಗೆ ತರೋಕೆ ನಿರಂತರವಾಗಿ ಪ್ರಯತ್ನ ಮಾಡ್ತಿದೆ. ಇದರ ಭಾಗವಾಗಿ ವೋಲ್ವೋ ಬಸ್ಗಳಿಗೆ ರೈಟ್ ರೈಟ್ ಅಂದು ಬಿಟ್ಟಿದೆ. ಆದರ ಬದಲಾಗಿ ಬೇರೆನೇ ಪ್ಲಾನ್ ಮಾಡಿದೆ.
ಬಿಎಂಟಿಸಿಯ ವೋಲ್ವೋ ಬಸ್ಗಳು ಇತಿಹಾಸ ಪುಟ ಸೇರುವ ದಿನಗಳು ಹತ್ತಿರ ಬಂದಂತೆ ಕಾಣ್ತಿದೆ. ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ದುಬಾರಿ ವೆಚ್ಚದ ಎಸಿ ಬಸ್ಗಳನ್ನು ಕಾರ್ಯಾಚರಣೆಗೊಳಿಸುತ್ತಿದೆ. ಸದ್ಯ ನಗರದಲ್ಲಿ ಸಂಚರಿಸುತ್ತಿರುವ ವೋಲ್ವೊ ಬಸ್ಗಳಿಂದ ನಿರೀಕ್ಷಿತ ಆದಾಯ ಬರುತ್ತಿಲ್ಲ. ಇದರಿಂದ ಸಂಸ್ಥೆಗೆ ಲಾಭದ ಬದಲು ದಿನದಿಂದ ದಿನಕ್ಕೆ ನಷ್ಟವಾಗ್ತಿದೆ. ಹಾಗಾಗಿ ನಷ್ಟದಿಂದ ಪಾರಾಗಲು ಟ್ರಿಪ್ ಕಡಿತಗೊಳಿಸಿದೆ. ಆದ್ರೀಗ ವೋಲ್ವೋಗೆ ಪರ್ಯಾಯವಾಗಿ ಬಿಎಂಟಿಸಿ ಎಲೆಕ್ಟ್ರಿಕ್ ಎಸಿ ಬಸ್ ಕಾರ್ಯಾಚರಣೆಗೆ ತಯಾರಿ ನಡೆಸ್ತಿದೆ. ಜೊತೆಗೆ ಏರ್ಪೋರ್ಟ್ಗೆ ವೋಲ್ವೋ ಬದಲು ಎಲೆಕ್ಟ್ರಿಕ್ ಎಸಿ ಬಸ್ ಓಡಿಸಲು ಸಿದ್ಧತೆ ನಡೆಯುತ್ತಿದೆ.
ಸಿಲಿಕಾನ್ ಸಿಟಿಯ ಬೇರೆ ಬೇರೆ ಭಾಗದಿಂದ ಏರ್ಪೋರ್ಟ್ಗೆ ಸೇವೆ
2020ರ ಮಾರ್ಚ್ನಲ್ಲಿ ವಜ್ರ ಹಾಗೂ ವಾಯುವಜ್ರ ವೋಲ್ವೋ ಬಸ್ಗಳ ಸಂಖ್ಯೆ 767ರಷ್ಟಿತ್ತು. ಆದರೀಗ 474ಕ್ಕೆ ಇಳಿಕೆ ಆಗಿದೆ. 644 ರಷ್ಟಿದ್ದ ವಜ್ರ ಬಸ್ಗಳ ಸಂಖ್ಯೆ 342ಕ್ಕೆ ಕಡಿತಗೊಂಡಿದೆ. ಜೊತೆಗೆ ವಾಯುವಜ್ರ 132 ಬಸ್ ಗಳಿದ್ದು, ಇವು ಸಿಲಿಕಾನ್ ಸಿಟಿಯ ಬೇರೆ ಬೇರೆ ಭಾಗದಿಂದ ಏರ್ಪೋರ್ಟ್ಗೆ ಸೇವೆ ನೀಡ್ತಿವೆ. ಇದರಿಂದ ದಿನಕ್ಕೆ 14 ಸಾವಿರಕ್ಕೂ ಅಧಿಕ ಪ್ರಯಾಣಿಕರಿಗೆ ಪ್ರಯೋಜನವಾಗ್ತಿದೆ. ಆದರೆ ಬಿಎಂಟಿಸಿಗೆ ನಿರೀಕ್ಷಿಸಿದ ಲಾಭ ಮಾತ್ರ ಬರ್ತಿಲ್ಲ. ಹೀಗಾಗಿ ವೋಲ್ವೋ ಬಸ್ಗಳ ಸಹಾವಾಸವೇ ಬೇಡ ಅಂತ ಇವಿ ಎಸಿ ಬಸ್ಗಳ ಕಾರ್ಯಾಚರಣೆಗೆ ಸಿದ್ಧತೆ ನಡೆಸ್ತಿದೆ.
ಬಿಎಂಟಿಸಿಯಲ್ಲಿ ಈಗಾಗಲೇ 490 ನಾನ್ ಎಸಿ ಇವಿ ಬಸ್ಗಳು ಸಂಚಾರಿಸುತ್ತಿವೆ. ಮುಂದಿನ ದಿನದಲ್ಲಿ ಇನ್ನೂ 821 ಬಸ್ಗಳು ಸಂಸ್ಥೆಗೆ ಸೇರಲಿವೆ. ಆದ್ರೀಗ ಎಲೆಕ್ಟ್ರಿಕ್ ಎಸಿ ಬಸ್ಗಳು ಸೇರ್ಪಡೆಯಾಗಲು ಸಜ್ಜಾಗ್ತಿವೆ. ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ ಮಾದರಿಯಲ್ಲಿ 320 ಲೋ ಫ್ಲೋರ್ ಎಸಿ ಎಲೆಕ್ಟ್ರಿಕ್ ಬಸ್ ಗೆ ಟೆಂಡರ್ ಕರೆದಿರುವ ಬಿಎಂಟಿಸಿ. ₹150 ಕೋಟಿ ಅಂದಾಜು ವೆಚ್ಚ ಆಗಲಿದ್ದು, ಬಸ್ ತಲಾ 12 ಮೀಟರ್ ಉದ್ದ ಇರಲಿವೆ.
ಭಾರತ ಸರ್ಕಾರದ ನೆರವನ್ನು ಪಡೆದುಕೊಂಡು ಎಲೆಕ್ಟ್ರಿಕ್ ಬಸ್ಗಳ ಖರೀದಿಗೆ ಸಚಿವರು, ಕಾರ್ಯದರ್ಶಿಗಳ ಗಮನ ಕೊಡುತ್ತಿದ್ದೇವೆ.
ರಾಮಚಂದ್ರನ್ ಆರ್, ಬಿಎಂಟಸಿ ಎಂಡಿ
ಪ್ರಸ್ತುತ ವೋಲ್ವೋ ಬಸ್ ಏರ್ಪೋರ್ಟ್ಗೆ ಸಂಚರಿಸ್ತಿವೆ. ಇದರಿಂದ ವಾಯುಮಾಲಿನ್ಯ ಹೆಚ್ಚಳವಾಗ್ತಿದೆ. ಜೊತೆಗೆ ನಿರ್ವಹಣೆ ವೆಚ್ಚವೂ ಅಧಿಕವಿದೆ. ಕಿಲೋ ಮೀಟರ್ಗೆ 85 ರೂಪಾಯಿ ವೆಚ್ಚವಾಗ್ತಿದೆ. ಎಲೆಕ್ಟ್ರಿಕ್ ಎಸಿ ಬಸ್ ಗಳಿಂದ 55-60 ರೂಪಾಯಿ ಅಷ್ಟೇ ಖರ್ಚಾಗುತ್ತೆ. ಹೀಗಾಗಿ ಪರಿಸರ ಸ್ನೇಹಿ ಜೊತೆ ಆದಾಯವೂ ಹೆಚ್ಚಳವಾಗುವ ನಿರೀಕ್ಷೆಯಿಂದ ಈ ನಿರ್ಧಾರ ಕೈಗೊಳ್ಳಲಾಗ್ತಿದೆಯಂತೆ. ಈ ಮೂಲಕ ಇನ್ಮುಂದೆ ನಗರದಲ್ಲಿ ಎಸಿ ಬಸ್ಗಳು ಹಂತ ಹಂತವಾಗಿ ತೆರೆಗೆ ಸರಿಯುವ ಮೂಲಕ, ಬಿಎಂಟಿಸಿಯಲ್ಲಿ ವೋಲ್ವೊ ಯುಗ ಅಂತ್ಯದತ್ತ ಸಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ