newsfirstkannada.com

VIDEO: ಸರತಿ ಸಾಲಿನಲ್ಲಿ ನಿಲ್ಲದೇ ಮತದಾನಕ್ಕೆ ಬಂದ MLA.. ಆಂಧ್ರದಲ್ಲಿ ಕಪಾಳಕ್ಕೆ ಬಾರಿಸಿದ ಮತದಾರ

Share :

Published May 13, 2024 at 4:18pm

    ಸರತಿ ಸಾಲಿನಲ್ಲಿ ನಿಲ್ಲದೇ ಮತದಾನಕ್ಕೆ ಮುಂದಾದ YSRC ಶಾಸಕ

    ಮತಗಟ್ಟೆಯಲ್ಲಿದ್ದ ಮತದಾರನಿಗೂ ಶಾಸಕನ ಮಧ್ಯೆ ಜೋರು ವಾಗ್ವಾದ

    ಆಂಧ್ರ ಪ್ರದೇಶದಲ್ಲಿ ಜಗನ್ ಪಕ್ಷದ ಗೂಂಡಾಗಿರಿ ಎಂದ ಟಿಡಿಪಿ ನಾಯಕರು

ಹೈದರಾಬಾದ್: ಇಂದು ದೇಶಾದ್ಯಂತ 4ನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದೆ. ಆಂಧ್ರಪ್ರದೇಶದಲ್ಲಿ ವಿಧಾನಸಭೆ ಜೊತೆಗೆ ಲೋಕಸಭಾ ಚುನಾವಣೆಗೂ ಮತದಾನ ಬಿರುಸಿನಿಂದ ಸಾಗಿದೆ. ನಾಗರಿಕರು, ತೆಲುಗು ಚಿತ್ರರಂಗದ ನಾಯಕ ನಟರು ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಮತದಾನದ ಮಧ್ಯೆ ಸರತಿ ಸಾಲಿನಲ್ಲಿ ನಿಲ್ಲದೇ ಮತದಾನಕ್ಕೆ ಬಂದ ಶಾಸಕನಿಗೆ ಮತದಾರ ಕಪಾಳಕ್ಕೆ ಬಾರಿಸಿದ ಘಟನೆ ನಡೆದಿದೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಮತಗಟ್ಟೆಯಲ್ಲಿ ಈ ಘಟನೆ ನಡೆದಿದೆ. ಸಿಎಂ ಜಗನ್ ಮೋಹನ್ ರೆಡ್ಡಿ ಅವರ YSR ಕಾಂಗ್ರೆಸ್‌ ಪಕ್ಷದ MLA ಶಿವಕುಮಾರ್ ಮತಗಟ್ಟೆಗೆ ಬಂದಿದ್ದಾರೆ. ಮತಗಟ್ಟೆಯಲ್ಲಿ ಉದ್ದುದ್ದ ಕ್ಯೂ ಇದ್ದ ಕಾರಣ ಮುಂದೆ ಹೋಗಲು ಕೇಳಿದ್ದಾರೆ. ಮತಗಟ್ಟೆಯಲ್ಲಿದ್ದ ಮತದಾರನಿಗೂ ಶಾಸಕನ ಮಧ್ಯೆ ವಾಗ್ವಾದವೇ ನಡೆದಿದೆ.

ಇದನ್ನೂ ಓದಿ: BREAKING: ಸಿದ್ದು ಸರ್ಕಾರ ಕೆಡವಲು BJP ಮುಹೂರ್ತ ಇಟ್ಟಿದ್ಯಾ? ಏನಿದು ‘ನಾಥ’ ಆಪರೇಷನ್‌? 

ಮತಗಟ್ಟೆಯಲ್ಲಿ ಗಲಾಟೆ ಮಾಡಿದ YSRC ಪಕ್ಷದ MLA ಶಿವಕುಮಾರ್ ಮತದಾರನ ಮೇಲೆ ಹಲ್ಲೆ ಮಾಡಿದ್ದಾರೆ. ಮತದಾರನೂ ಸಹ ಕೋಪಗೊಂಡು ಶಾಸಕರ ಕಪಾಳಕ್ಕೆ ಬಾರಿಸಿದ್ದಾನೆ. ಕೂಡಲೇ ಇಬ್ಬರ ಮಧ್ಯೆ ಮಾರಾಮಾರಿ ನಡೆದಿದ್ದು, ಶಾಸಕರ ಬೆಂಬಲಿಗರು ಮತದಾರನ ಮೇಲೆ ಹಿಗ್ಗಾಮುಗ್ಗ ಹಲ್ಲೆ ನಡೆಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಎಲೆಕ್ಷನ್ ನಡೆಯುತ್ತಿದ್ದು, YSRC ಪಕ್ಷದ ನಾಯಕ ಮಾಡಿರೋ ಹಲ್ಲೆಯ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಶಾಸಕರು ಹಾಗೂ ಬೆಂಬಲಿಗರು ಹಲ್ಲೆ ಮಾಡಿದ 10 ಸೆಕೆಂಡ್ ವಿಡಿಯೋ ನೋಡಿದ ಪ್ರತಿಪಕ್ಷ ಟಿಡಿಪಿ ನಾಯಕರು ಆಂಧ್ರ ಪ್ರದೇಶದಲ್ಲಿ ಜಗನ್ ಪಕ್ಷದ ಗೂಂಡಾಗಿರಿಗೆ ಇದೇ ಸಾಕ್ಷಿ ಎಂದು ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಎಲ್ಲರೂ ಒಂದೇ. ಮತದಾನ ಪ್ರತಿಯೊಬ್ಬರ ಹಕ್ಕು. ಯಾರೇ ಆಗಲಿ ಮತದಾನಕ್ಕೆ ಸರತಿ ಸಾಲಿನಲ್ಲೇ ಹೋಗಬೇಕು. ವಯಸ್ಸಾದ ವೃದ್ಧರು, ಅಂಗವಿಕಲರಿಗೆ ಮಾತ್ರ ವಿನಾಯಿತಿ ಇದೆ. ಆದರೆ ಶಾಸಕ ಅನ್ನೋ ಗತ್ತಿನಲ್ಲಿ ದಬ್ಬಾಳಕೆ ಮಾಡಿರೋದು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಸರತಿ ಸಾಲಿನಲ್ಲಿ ನಿಲ್ಲದೇ ಮತದಾನಕ್ಕೆ ಬಂದ MLA.. ಆಂಧ್ರದಲ್ಲಿ ಕಪಾಳಕ್ಕೆ ಬಾರಿಸಿದ ಮತದಾರ

https://newsfirstlive.com/wp-content/uploads/2024/05/Andhra-Election-Video.jpg

Load More