ಮಹಾಲಕ್ಷ್ಮೀಯನ್ನ ಕೊಂದ ‘ಆ’ ಸೈಕೋ ಕಿಲ್ಲರ್ ಹಿನ್ನೆಲೆ ಏನು?
ಊರಿಗೆ ಹೋದ ಮಗನನ್ನ ಬಚ್ಚಿಡುವ ಕೆಲಸ ಮಾಡಿದ ತಾಯಿ
ಮಹಾಲಕ್ಷ್ಮಿ ಕೊ*ಲೆ ಆರೋಪಿ ಒಡಿಶಾದಲ್ಲಿ ಸಾವಿಗೆ ಶರಣು
ಬೆಂಗಳೂರು: ಮಹಾಲಕ್ಷ್ಮಿಯನ್ನು ಕೊಂದ ಆ ಸೈಕೋ ಕಿಲ್ಲ*ರ್ ಯಾರು? ಸದ್ಯ ಈ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. 29 ವರ್ಷದ ಮಹಿಳೆಯನ್ನ 59 ತುಂಡುಗಳನ್ನಾಗಿ ಮಾಡಿದ್ದ ಆ ಕೊ*ಲೆಗಾರನ ಶವ ಕೂಡ ಪತ್ತೆಯಾಗಿದೆ. ವಿಪರ್ಯಾಸ ಅಂದ್ರೆ ಪೊಲೀಸರು ಆತನ ಜಾಡು ಹಿಡಿದು ಹೊರಟಿದ್ದಾಗ್ಲೇ ಆತ ತನ್ನ ಬದುಕಿನ ಕ್ಲೈಮ್ಯಾಕ್ಸ್ ತಾನೇ ಬರ್ಕೊಂಡಿದ್ದಾನೆ.
ಇದನ್ನೂ ಓದಿ: ಮಹಾಲಕ್ಷ್ಮಿ ಕೊ*ಲೆಗಾರ ಶವವಾಗಿ ಪತ್ತೆ.. ಪೀಸ್, ಪೀಸ್ ಮಾಡಿದ ‘ಮುಕ್ತಿ’ ಮಾಡಿದ್ದೇನು? ಪಾಪಿ ಅಂತ್ಯ ಹೇಗಾಯ್ತು?
ಮಹಾಲಕ್ಷ್ಮಿಯನ್ನು ಇಷ್ಟು ನಿಷ್ಕರುಣಿಯವಾಗಿ ಕೊಂದ ಆ ಕೊ*ಲೆಗಾರ ಯಾರು? ಆ ಹೆಣ್ಣುಮಗಳ ಮೇಲೆ ಯಾಕಿಷ್ಟು ಆತನಿಗೆ ಕೋಪ ಇತ್ತು? ಆ ಎಲ್ಲಾ ಪ್ರಶ್ನೆಗಳಿಗೆ ಇದೀಗ ಒಂದಷ್ಟು ಉತ್ತರಗಳು ಸಿಕ್ಕಿವೆ.
ಮಹಾಲಕ್ಷ್ಮೀಯನ್ನ ಕೊಂದ ‘ಆ’ ಸೈಕೋ ಕಿಲ್ಲರ್ ಯಾರು?
ಮಹಾಲಕ್ಷ್ಮಿ ಕೊ*ಲೆ ರಹಸ್ಯ ಜಗತ್ತಿಗೆ ಗೊತ್ತಾದಾಗಿನಿಂದ ನಾಲ್ವರ ಮೇಲೆ ಶಂಕೆ ಶುರುವಾಗಿತ್ತು.. ಆ ಶಂಕೆ ಸತ್ಯವಾಗಿದೆ. ಆ ನಾಲ್ವರಲ್ಲೇ ಒಬ್ಬನಾಗಿದ್ದ ಮುಕ್ತಿ ರಂಜನ್ ರಾಯ್ ಎಂಬಾತ ಮಹಾಲಕ್ಷ್ಮೀಯನ್ನ ಕೊಚ್ಚಿ ಕೊ*ಲೆ ಮಾಡಿರೋದು ರಿವೀಲ್ ಆಗಿದೆ.
ಇದನ್ನೂ ಓದಿ: BREAKING: ಮಹಾಲಕ್ಷ್ಮಿ ಪೀಸ್, ಪೀಸ್ ಮಾಡಿದ ಮಹಾ ಪಾಪಿ ಸಾವು; ಅಸಲಿಗೆ ಆಗಿದ್ದೇನು?
ಯಾರು ‘ಈ’ ಮುಕ್ತಿ?
ಅಷ್ಟಕ್ಕೂ ಈ ಮುಕ್ತಿ ರಂಜನ್ ರಾಯ್ ಬೇರೆ ಯಾರು ಅಲ್ಲ. ಮಹಾಲಕ್ಷ್ಮೀ ಕೆಲಸ ಮಾಡ್ತಿದ್ದ ಮಲ್ಲೇಶ್ವರಂ ಫ್ಯಾಶನ್ ಫ್ಯಾಕ್ಟರಿಯ ಟೀಮ್ ಹೆಡ್ ಆಗಿದ್ದ. ತಮ್ಮನ ಜೊತೆಯಲ್ಲಿ ಹೆಬ್ಬಗೋಡಿಯಲ್ಲಿ ವಾಸವಾಗಿದ್ದ. ಇದೇ ವೇಳೆ ಸಹೋದ್ಯೋಗಿ ಮಹಾಲಕ್ಷ್ಮೀ ಜೊತೆ ಪ್ರೀತಿಯಾಗಿದೆ. ಸೆಪ್ಟೆಂಬರ್ 1ರಂದು ಯಥಾ ಪ್ರಕಾರ ಮಹಾಲಕ್ಷ್ಮೀ ಮತ್ತು ಮುಕ್ತಿ ಇಬ್ಬರೂ ಕೆಲಸಕ್ಕೆ ಹಾಜರಾಗಿದ್ದರು. ಸೆಪ್ಟೆಂಬರ್ 2ರಂದು ಮಹಾಲಕ್ಷ್ಮಿ ವೀಕ್ ಆಫ್ ತೆಗೆದುಕೊಂಡಿದ್ದಳು. ಅವತ್ತು ನೆಲಮಂಗಲದ ತಾಯಿ ಮನೆಗೆ ಬರೋದಾಗಿ ಹೇಳಿದ್ಲಂತೆ.. ಆದ್ರೆ, ಅಂದು ಮಹಾಲಕ್ಷ್ಮಿ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ.. ಅಂದೇ ಮುಕ್ತಿ ರಾಯ್ ಮಹಾಲಕ್ಷ್ಮೀಯನ್ನ ಕೊಂ*ದು ಪರಾರಿಯಾಗಿದ್ದ.

ಒಡಿಶಾದಲ್ಲಿ ಆ*ತ್ಮಹತ್ಯೆ ಮಾಡಿಕೊಂಡ ಮುಕ್ತಿ ರಂಜನ್
ಮಹಾಲಕ್ಷ್ಮಿ ಕೊ*ಲೆಯ ಶಂಕಿತ ಆರೋಪಿ ಮುಕ್ತಿ ರಂಜನ್ ದಾಸ್ ಒಡಿಶಾದಲ್ಲಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ. ಕೊ*ಲೆ ಬಳಿಕ ತಲೆಮರೆಸಿಕೊಂಡು ಓಡಾಡ್ತಿದ್ದ ಆರೋಪಿ ಸಾವನ್ನಪ್ಪಿದ್ದಾನೆ. ಪೊಲೀಸರು ಆತನ ಹುಡುಕಾಟದಲ್ಲಿ ಇದ್ದಾಗ್ಲೇ ಆತನ ಸಾವಿನ ಖಚಿತ ಮಾಹಿತಿ ಸಿಕ್ಕಿದೆ.
ಮಹಾಲಕ್ಷ್ಮಿನ ಕೊಲೆ ಮಾಡಿದ ಬಳಿಕ ತನ್ನ ತಮ್ಮನ ಬಳಿ ಮುಕ್ತಿ ಎಲ್ಲಾ ಹೇಳಿಕೊಂಡಿದ್ದ. ನಾನು ತುಂಬಾನೇ ಪ್ರೀತಿಸ್ತಿದೆ. ಆದ್ರೆ ಮಹಾಲಕ್ಷ್ಮಿ ಪ್ರೀತಿಗೆ ಮೋಸ ಮಾಡಿ ಮೂವರೊಂದಿಗೆ ಸಂಪರ್ಕದಲ್ಲಿದ್ಲು. ಹೀಗಾಗಿ ಆಕೆಯ ಕೊಲೆ ಮಾಡಿದೆ. ನಾನು ಊರಿಗೆ ಹೋಗ್ತಿದ್ದೇನೆ ಎಂದಿದ್ದ. ಆದ್ರೆ ಊರಿಗೆ ಹೋದ ಮಗನನ್ನ ಬಚ್ಚಿಡುವ ಕೆಲಸ ಆತನ ತಾಯಿಯಿಂದಲೇ ನಡೆದಿತ್ತು. ಪಶ್ಚಿಮ ಬಂಗಾಳದಲ್ಲಿ ತಲೆ ಮರೆಸಿಕೊಳ್ಳೋಕೆ ತಾಯಿ ವ್ಯವಸ್ಥೆ ಮಾಡಿದ್ಲಂತೆ. ಆದ್ರೆ ಪೊಲೀಸ್ರು ಮುಕ್ತಿ ಸೋದರನ ಮೂಲಕ ಟ್ರ್ಯಾಪ್ ಮಾಡೋ ಕೆಲಸ ಮಾಡ್ತಿದ್ರು. ಹೀಗಾಗಿ ಸಿಕ್ಕಿ ಬೀಳ್ತೇನೆ ಅಂತ ಮತ್ತೆ ಒಡಿಶಾಗೆ ವಾಪಸ್ಸಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗ್ತಿದೆ.
ಈತನ ಸಂಗ ಬೆಳೆಸಿದ ತಪ್ಪಿಗೆ ಮಹಾಲಕ್ಷ್ಮಿ ಪೀಸ್, ಪೀಸ್ ಆಗಿದ್ರೆ ಈಕೆಯನ್ನ ಕೊಂ*ದು ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಆರೋಪಿ ಮುಕ್ತಿ ರಂಜನ್ ದಾಸ್ ತಾನೂ ಸಾವಿನ ಮನೆಯನ್ನ ಸೇರಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ