Advertisment

ರೈತರ ಭೂಮಿ ಮೇಲೆ ವಕ್ಫ್​ ಕಣ್ಣು ಹಾಕಿತಾ..? ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು?

author-image
Bheemappa
Updated On
ರೈತರ ಭೂಮಿ ಮೇಲೆ ವಕ್ಫ್​ ಕಣ್ಣು ಹಾಕಿತಾ..? ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹ್ಮದ್ ಹೇಳಿದ್ದೇನು?
Advertisment
  • ಅಹೋರಾತ್ರಿ ರಸ್ತೆ ಮೇಲೆ ಅಡುಗೆ ಮಾಡಿ, ಊಟ ಮಾಡಿ ಪ್ರತಿಭಟನೆ
  • ಡಿಸಿ ಕಚೇರಿ ಆವರಣದಲ್ಲಿ ದೀಪ ಬೆಳಗಿಸಿ ಅನ್ನದಾತರು ಹೇಳಿದ್ದೇನು?
  • ನಾನು ಹಿಂದೂಸ್ಥಾನಿ, ಕನ್ನಡಿಗ ಆ ಮೇಲೆ ಮುಸ್ಲಿಂ- ಸಚಿವ ಜಮೀರ್​

ರಾಜ್ಯದಲ್ಲಿ ಉಪಸಮರದ ಮಧ್ಯೆ ವಕ್ಫ್ ಸಂಘರ್ಷ ತಾರತಕ್ಕೇರಿದೆ. ರೈತರ ಭೂಮಿಯನ್ನು ಕಬಳಿಸುತ್ತಿರುವ ಆರೋಪ ಕೇಳಿಬಂದಿದ್ದು ಅನ್ನದಾತರ ಆಕ್ರೋಶಕ್ಕೆ ಕಾರಣವಾಗಿದೆ. ವಿಜಯಪುರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಹೋರಾತ್ರಿ ಕೈಗೊಂಡಿರುವ ರೈತರು ಧರಣಿ ಸತ್ಯಾಗ್ರಹ ನಡೆಸಿದ್ದಾರೆ.

Advertisment

ಬಿಜೆಪಿ ನಾಯಕರ ಜೊತೆ ರೈತ ಮುಖಂಡರ ಸತ್ಯಾಗ್ರಹ. ರಸ್ತೆ ಮೇಲೆ ಅಡುಗೆ ಮಾಡಿ, ಊಟ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ವಿಜಯಪುರದಲ್ಲಿ ರೈತರ ಧರಣಿ ಸತ್ಯಾಗ್ರಹ ನಡೆಸಿದ ಪರಿ ಇದಾಗಿದೆ.

ಇದನ್ನೂ ಓದಿ: ಇದು ಅಂತಿಂಥಾ ವಾಮಾಚಾರ ಅಲ್ಲ, ಕುಟ್ಟಿ ಸೈತಾನ್ ಪೂಜೆ.. ಮಗುವನ್ನೇ ಬ*ಲಿ ಕೊಡಲು ಮುಂದಾಗಿದ್ದ ತಂದೆ 

publive-image

ಡಿಸಿ ಕಚೇರಿ ಎದುರು ಧರಣಿ.. ಕರಾಳ ದೀಪಾವಳಿ!

Advertisment

ವಿಜಯಪುರ ಜಿಲ್ಲೆಯ ರೈತರ ಜಮೀನಿನ ಪಹಣಿಗಳ ಕಾಲಂ ನಂ.11ರಲ್ಲಿ ವಕ್ಫ್​ ಆಸ್ತಿ ಎಂದು ನಮೂದು ಮಾಡಿರೋದನ್ನು ವಿರೋಧಿಸಿ ಅನ್ನದಾತರ ಪಿತ್ತ ನೆತ್ತಿಗೇರಿದೆ. ರೈತ ಮುಖಂಡರ ನೇತೃತ್ವದಲ್ಲಿ ಅಖಾಡಕ್ಕಿಳಿದ ಅನ್ನದಾತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ರಾತ್ರಿ ದೀಪಗಳನ್ನು ಬೆಳಗಿಸುವ ಮೂಲಕ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಗೂ ಬಿಜೆಪಿ ಮುಖಂಡ ಉಮೇಶ್ ಕಾರಜೋಳ ಪ್ರತಿಭಟನೆಗೆ ಸಾಥ್ ನೀಡಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ಬಂದು ಡಿಸಿ ಕಚೇರಿ ಆವರಣದಲ್ಲಿ ಸೇರಿದ ರೈತರು ರಸ್ತೆಯಲ್ಲೇ ದೀಪಗಳನ್ನು ಬೆಳಗಿಸಿದರು. ಇದು ರೈತರ ಪಾಲಿಗೆ ಕರಾಳ ದೀಪಾವಳಿ ಅಂತ ಆಕ್ರೋಶ ವ್ಯಕ್ತಪಡಿಸಿ, ಅಹೋರಾತ್ರಿ ಧರಣಿ ನಡೆಸಿದರು. ರಸ್ತೆ ಮೇಲೆ ಅಡುಗೆ ತಯಾರಿಸಿ ಊಟ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರ ನೀಡಿರುವ ನೋಟಿಸ್ ವಾಪಸ್ ಪಡೀಬೇಕು, ಸರ್ಕಾರ ರೈತರ ವಿರುದ್ಧ ಬರಬಾರದು ಅಂತ ರೈತ ಮುಖಂಡರು ಕಿಡಿಕಾರಿದ್ದಾರೆ.

ನಮ್ಮ ಪಾಲಿಗೆ ದೀಪಾವಳಿ ಹಬ್ಬ ಇಲ್ಲ, ದೀಪಾವಳಿ ಕರಾಳ ದೀಪಾವಳಿ ಆಗಿದೆ. ಇಲ್ಲೇ ದೀಪಗಳನ್ನು ಬೆಳಗಿಸಿ ದೀಪಾವಳಿ ಮಾಡಿದ್ದೇವೆ. ಅಹೋರಾತ್ರಿ ಧರಣಿ ಮಾಡುತ್ತಿದ್ದೇವೆ. ಯಾರು ಹೇಳಿದರು ಈ ಹೋರಾಟ ಹಿಂದಕ್ಕೆ ತೆಗೆದುಕೊಳ್ಳಲ್ಲ. ಸರ್ಕಾರ ತನ್ನ ಮೊಂಡುತನವನ್ನು ಮುಂದುವರೆಸಬಾರದು.

ಅರವಿಂದ್ ಕುಲಕರ್ಣಿ, ರೈತ ನಾಯಕ

ರೈತರಿಗೆ ಕೊಟ್ಟಿರುವ ನೋಟಿಸ್​ ಹಿಂಪಡೆಯುವುದಾಗಿ ಸ್ಪಷ್ಟನೆ

Advertisment

ರೈತರ ಭೂಮಿಯ ಮೇಲೆ ವಕ್ಫ್​ ಕಣ್ಣು ಹಾಕಿದ್ದು, ಕಬಳಿಸಲು ಹುನ್ನಾರ ಮಾಡಿದೆ. ಇದರಲ್ಲಿ ಸರ್ಕಾರದ ಕೈವಾಡ ಇದೆ ಎಂದು ಎಲ್ಲೆಡೆ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ, ಯಾವ ರೈತರನ್ನೂ ಒಕ್ಕಲೆಬ್ಬಿಸಲ್ಲ. ನೋಟಿಸ್​ ಹಿಂಪಡೆಯುತ್ತೇವೆ ಎಂದಿದ್ದರು. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಭೂಬಾಲನ್, 124 ನೋಟಿಸ್ ಕೊಟ್ಟಿದ್ದೇವೆ, ಅದನ್ನ ವಾಪಸ್ ಪಡೆಯುತ್ತೇವೆ. ಹಾಗೂ ಪಹಣಿಯ ಕಾಲಂ ನಂಬರ್ 11ರಲ್ಲಿ ಸೇರ್ಪಡೆಯಾದ ವಕ್ಫ್ ಹೆಸರು ತೆಗೆದ ಪಹಣಿ ಸಿಗಲಿದೆ ಎಂದು ಭರವಸೆ ನೀಡಿದ್ದಾರೆ.

‘ರೈತರನ್ನು ಒಕ್ಕಲೆಬ್ಬಿಸಲ್ಲ’

ಯಾವ ರೈತರನ್ನು ಕೂಡ ಒಕ್ಕಲೆಬ್ಬಿಸಲ್ಲ. ರೈತರಿಗೆ ಒಂದು ವೇಳೆ ನೋಟಿಸ್ ಕೊಟ್ಟಿದ್ದರೇ ವಾಪಸ್ ಪಡೆದುಕೊಳ್ಳುತ್ತೇವೆ.

ಸಿದ್ದರಾಮಯ್ಯ, ಸಿಎಂ

‘ನೋಟಿಸ್​ ವಾಪಸ್ ಪಡೆಯುತ್ತೇವೆ’

ನ್ಯಾಯಾಲಯ ಕೆಲವೊಂದು ಕಾಲಂಗಳಲ್ಲಿ ನೋಟಿಸ್ ಕೊಟ್ಟು ಮೊದಲು ಮಾತನಾಡಬೇಕು ಎಂದು ಹೇಳಿದೆ. ಆ ಒಂದು ವಿಚಾರವನ್ನು ಎಲ್ಲರಿಗೂ ಹೇಳಿದ್ದೇವೆ. ಮಿಸ್​ ಕಮುನಿಕೇಷನ್​ನಿಂದ ಇಂಡಿ ತಹಾಶೀಲ್ದಾರ್ ಅವರು 41 ಆಸ್ತಿಗೆ ಸಂಬಂಧ ಪಟ್ಟಂತೆ ನೋಟಿಸ್ ಕೊಟ್ಟಿದ್ದಾರೆ.

ಭೂಬಾಲನ್, ವಿಜಯಪುರ ಡಿಸಿ

Advertisment

ಇದನ್ನೂ ಓದಿ:ದೀಪಾವಳಿ; 55 ವಿಶೇಷ ರೈಲುಗಳ ಸೇವೆ.. ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯ ಕ್ರಮಗಳೇನು?

publive-image

ಇನ್ನು ಸಚಿವ ಜಮೀರ್​ ಅಹ್ಮದ್​, ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಅಲ್ಲಾ ಭಾರತದವರಾ ಎಂದಿದ್ದ ಪ್ರಹ್ಲಾದ್ ಜೋಶಿಗೆ ಜಮೀರ್​, ಮುಜರಾಯಿ ಬೇರೆಯಲ್ಲ ವಕ್ಫ್​ ಬೇರೆಯಲ್ಲ ಎಂದು ಟಾಂಗ್​ ಕೊಟ್ಟಿದ್ದಾರೆ. ಕಾನೂನು ಬಾಹಿರವಾಗಿ ನೋಟಿಸ್​ ಕೊಟ್ಟಿದ್ದರೆ ಅಂಥವನ್ನು ನಿಲ್ಲಿಸುತ್ತೇವೆ ಎಂದಿದ್ದಾರೆ.

‘ಮುಜರಾಯಿ ಬೇರೆಯಲ್ಲ, ವಕ್ಫ್​ ಬೇರೆಯಲ್ಲ’

Advertisment

ಮುಜರಾಯಿ ಬೇರೆಯಲ್ಲ, ವಕ್ಫ್​ ಬೇರೆಯಲ್ಲ. ನೀವು ದೇವರು ಎಂದು ಹೇಳಿತ್ತೀರಿ, ನಾವು ಅಲ್ಲಾ ಎಂದು ಕರೆಯುತ್ತೇವೆ ಅಷ್ಟೇ. ಅಲ್ಲಾ ಎನ್ನುವುದು ನಮ್ಮ ನಂಬಿಕೆ. ನಾವು ಭಾರತೀಯರು. ಮೊದಲು ಎಲ್ಲ ಸಮಾಜಕ್ಕೆ ನಾವು ಗೌರವ ಕೊಡುವುದು ನಮ್ಮ ಕರ್ತವ್ಯ. ನಾನು ಮುಸ್ಲಿಂ ಆಗಿ ಇರಬಹುದು. ಅದಕ್ಕಿಂತ ಮುಂಚೆ ನಾನು ಒಬ್ಬ ಹಿಂದೂಸ್ಥಾನಿ. ಕನ್ನಡಿಗ ಆಮೇಲೆ ಮುಸ್ಲಿಂ.
ಕಾನೂನು ಬಾಹಿರವಾಗಿ ಏನು ಮಾಡಿಲ್ಲ. ಯತ್ನಾಳ್ ಪ್ರಕಾರ ನಾವು ಯಾರಿಗೂ ಒಂದು ನೋಟಿಸ್ ಕೊಟ್ಟಿಲ್ಲ. ಕೇವಲ 11 ಎಕರೆ ಮಾತ್ರ ನಮ್ಮ ಜಾಗ ಇರುವುದು. 1200 ಎಕರೆ ಅಲ್ಲ. ಕಾನೂನು ಬಾಹಿರವಾಗಿ ಒಂದು ವೇಳೆ ನೋಟಿಸ್ ಕೊಟ್ಟಿದ್ದರೇ ತಕ್ಷಣ ನಿಲ್ಲಿಸುತ್ತೇವೆ.

ಜಮೀರ್ ಅಹ್ಮದ್, ಸಚಿವ

ವಕ್ಫ್ ಆಸ್ತಿ ವಿವಾದ ಆಡಳಿತ-ವಿಪಕ್ಷಗಳ ನಡುವೆ ಮತ್ತೊಂದು ಸಂಘರ್ಷಕ್ಕೆ ನಾಂದಿ ಹಾಡಿದೆ. ರೈತರ ಆಕ್ರೋಶದ ಬೆನ್ನಲ್ಲೆ, ನೋಟಿಸ್​ ಹಿಂಪಡೆಯಲು ಸರ್ಕಾರ ಹೆಜ್ಜೆ ಇಟ್ಟಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment