Advertisment

ಮೈದಾನಕ್ಕೆ ನುಗ್ಗಿ ಕೊಹ್ಲಿ ತಬ್ಬಿದ್ದ ಅಭಿಮಾನಿಗೆ ಬಿಸಿಬಿಸಿ ಕಜ್ಜಾಯ.. ನಂತರ ನಡೆದ ಭಯಾನಕ ವಿಡಿಯೋ

author-image
Ganesh
Updated On
VIDEO: ಏಕಾಏಕಿ ಮೈದಾನಕ್ಕೆ ನುಗ್ಗಿದ RCB ಅಭಿಮಾನಿ; ಕೊಹ್ಲಿ ಕಾಲು ಹಿಡಿದು ಹುಚ್ಚಾಟ!
Advertisment
  • ಮಾರ್ಚ್​ 25 ರಂದು ಚಿನ್ನಸ್ವಾಮಿ ಮೈದಾನಕ್ಕೆ ನುಗ್ಗಿ ಅಭಿಮಾನಿ ಹೈಡ್ರಾಮಾ
  • ಪಂಜಾಬ್ ವಿರುದ್ಧ ಪಂದ್ಯದಲ್ಲಿ ಅದ್ಭುತ ಆಟವಾಡಿದ್ದ ವಿರಾಟ್ ಕೊಹ್ಲಿ
  • 49 ಬಾಲ್​​ನಲ್ಲಿ 77 ರನ್​ಗಳನ್ನು ಬಾರಿಸಿ ಮಿಂಚಿದ್ದ ವಿರಾಟ್ ಕೊಹ್ಲಿ

ಮಾರ್ಚ್​ 25 ರಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್​ಸಿಬಿ ಭರ್ಜರಿ ಗೆಲುವು ಸಾಧಿಸಿತು. ಆರ್​ಸಿಬಿ ಗೆಲುವಿಗೆ ಕಿಂಗ್ ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶ. ಇನ್ನು ಕೊಹ್ಲಿ ಬ್ಯಾಟಿಂಗ್ ಮಾಡ್ತಿದ್ದ ವೇಳೆ ಅಭಿಮಾನಿಯೊಬ್ಬ ಭದ್ರತಾ ಸಿಬ್ಬಂದಿಯ ಕಣ್ತಪ್ಪಿಸಿ, ಕೊಹ್ಲಿಯನ್ನು ತಬ್ಬಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.

Advertisment

ಕೊಹ್ಲಿಯನ್ನು ತಬ್ಬಿಕೊಂಡು, ಕಾಲಿಗೆ ನಮಸ್ಕರಿಸಿ ಮೈದಾನದಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿದ್ದ. ಅಭಿಮಾನಿಯ ಹುಚ್ಚಾಟವನ್ನು ನೋಡಿದ ಕೊಹ್ಲಿ ದಿಗ್ಗು ತೋಚದೇ ನಿಂತು ಬಿಟ್ಟಿದ್ದರು. ನಂತರ ಭದ್ರತಾ ಸಿಬ್ಬಂದಿ ಮೈದಾನಕ್ಕೆ ಎಂಟ್ರಿಯಾಗಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಈ ಘಟನೆ ರಾತ್ರಿ 9.15 ರಿಂದ 9.20 ಅವಧಿಯಲ್ಲಿ ನಡೆದಿತ್ತು.

ಇದನ್ನೂ ಓದಿVideo: ಕಿಂಗ್ ಕೊಹ್ಲಿಗೆ ಹಾಡಿನ ಗೌರವ.. ಹೈದ್ರಾಬಾದ್​​ನಲ್ಲಿ ರೋಹಿತ್ ಶರ್ಮಾ ಕ್ರೇಜ್..!

View this post on Instagram

A post shared by Pradeep M (@pradeepm30)

ಇನ್ನು ಭದ್ರತಾ ಸಿಬ್ಬಂದಿ ಆ ಅಭಿಮಾನಿಯನ್ನು ಮೈದಾನದಿಂದ ಹೊರಗೆ ಕರ್ಕೊಂಡು ಬಂದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ವಿಡಿಯೋವನ್ನು ಅಭಿಮಾನಿಗಳು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಕಿಂಗ್ ಕೊಹ್ಲಿಗೆ ಟ್ಯಾಗ್ ಮಾಡಿದ್ದಾರೆ. ಇನ್ನು ಅವತ್ತಿನ ಪಂದ್ಯದಲ್ಲಿ ಕೊಹ್ಲಿ ಕೇವಲ 49 ಬಾಲ್​ಗೆ 77 ರನ್​ಗಳಿಸಿದ್ದರು.

Advertisment

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment